One N Only Exclusive Cine Portal

ಲೌಡ್ ಸ್ಪೀಕರ್ ಚಿತ್ರತಂಡದ ವಿನೂತನ ಪ್ರಯೋಗ

ರಾಜ್ ಪ್ರೊಡಕ್ಷನ್ ವೆಂಚರ್‍ಸ್ ಬ್ಯಾನರ್ ಅಡಿಯಲ್ಲಿ, ಶಿವತೇಜಸ್ ನಿರ್ದೇಶನದೊಂದಿಗೆ ಮೂಡಿ ಬರುತ್ತಿರುವ ಲೌಡ್ ಸ್ಪೀಕರ್ ಚಿತ್ರದ ಬಗ್ಗೆ ಪ್ರೇಕ್ಷಕರ ವಲಯದಲ್ಲೊಂದು ಕುತೂಹಲ ಮೆಲ್ಲಗೆ ಗರಿಗೆದರಲಾರಂಭಿಸಿದೆ. ಈ ಹಿಂದೆ ಬಿಡುಗಡೆಗೊಂಡಿದ್ದ ಪೋಸ್ಟರ್ ಜನಮನ ಗೆದ್ದಿತ್ತು. ಇದೀಗ ಮತ್ತೊಂದು ಪೋಸ್ಟರನ್ನು ಜನರ ನಡುವೆಯೇ ಅನಾವರಣಗೊಳಿಸಿ, ಅಲ್ಲಿಯೇ ಪ್ರತಿಕ್ರಿಯೆ ಪಡೆಯುವಂಥಾ ವಿನೂತನ ಪ್ರಯೋಗವೊಂದನ್ನು ಚಿತ್ರತಂಡ ಮಾಡಿದೆ.

ಶಿವತೇಜಸ್ ಧೈರ್ಯಂ ಚಿತ್ರದ ಬೆನ್ನಿಗೇ ಲೌಡ್ ಸ್ಪೀಕರ್ ಚಿತ್ರವನ್ನು ಆರಂಭಿಸಿದ್ದರು. ಆದರೆ ಕೆಲಸ ಕಾರ್ಯಗಳು ಗಟ್ಟಿತನದಿಂದ ಕೂಡಿದ್ದರೆ ಪ್ರಚಾರವೆಂಬುದು ತಂತಾನೇ ಬರುತ್ತದೆ ಅಂತ ನಂಬಿರುವ ಶಿವತೇಜಸ್ ಇತ್ತೀಚೆಗೆ ತಮ್ಮ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ್ದರು. ಧೈರ್ಯಂ ಚಿತ್ರದ ನಾಯಕ ಅಜೇಯ್ ರಾವ್ ಈ ಪೋಸ್ಟರನ್ನು ಬಿಡುಗಡೆ ಮಾಡಿದ್ದರು. ಅದಕ್ಕೆ ಸಿಕ್ಕಪ್ರತಿಕ್ರಿಯೆಗಳಿಂದ ಸ್ಫೂರ್ತಿಗೊಂಡಿರುವ ಚಿತ್ರ ತಂಡ ಇದೀಗ ವಿನೂತನ ಐಡಿಯಾದ ಮೂಲಕ ಎರಡನೇ ಪೋಸ್ಟರ್ ಅನಾವರಣಗೊಳಿಸಿದೆ.

ವಿವಿಧ ವಲಯಗಳ ಜನರ ಮುಂದೆ ಸರ್‌ಪ್ರೈಸ್ ಎಂಬಂತೆ ಪೋಸ್ಟರನ್ನು ಅನಾವರಣಗೊಳಿಸಿ ಆ ಸ್ಪಾಟಿನಲ್ಲಿಯೇ ಪ್ರಾಮಾಣಿಕ ಅಭಿಪ್ರಾಯಗಳನ್ನು ಚಿತ್ರ ತಂಡ ಕಲೆ ಹಾಕಿದೆ. ಈ ಪೋಸ್ಟರ್ ನೋಡಿದ ಎಲ್ಲರೂ ಮೆಚ್ಚಿಕೊಂಡಿರೋದು ವಿಶೇಷ.

ಅಂದಹಾಗೆ ಲೌಡ್ ಸ್ಪೀಕರ್ ಚಿತ್ರದ ವಿಚಾರದಲ್ಲಿ ಅಚ್ಚರಿಯಂಥಾ ವಿಚಾರವೊಂದಿದೆ. ಈ ಹಿಂದೆ ದೈರ್ಯಂ ಚಿತ್ರವನ್ನು ನಿರ್ಮಾಣ ಮಾಡಿದ್ದ ಡಾ.ಕೆ ರಾಜು ಅವರೇ ಲೌಡ್ ಸ್ಪೀಕರ್ ಚಿತ್ರವನ್ನೂ ನಿರ್ಮಾಣ ಮಾಡಿದ್ದಾರೆ. ಆರಂಭಿಕವಾಗಿ ಮಳೆಯಂಥಾ ಭಾವನಾತ್ಮಕ ಚಿತ್ರವನ್ನು ನಿರ್ದೇಶನ ಮಾಡಿದ್ದ ಶಿವ ತೇಜಸ್ ಆ ನಂತರ ಮಾಡಿದ್ದು ಪಕ್ಕಾ ಮಾಸ್ ಸಬ್ಜೆಕ್ಟಿನ `ಧೈರ್ಯಂ; ಚಿತ್ರವನ್ನು. ಅದಾದೇಟಿಗೆ ಮೂರನೇ ಚಿತ್ರವಾದ ಲೌಡ್‌ಸ್ಪೀಕರ್‌ಗೆ ಅವರು ಕಾಮಿಡಿ ಸಬ್ಜೆಕ್ಟನ್ನು ಆರಿಸಿಕೊಂಡಿದ್ದಾರೆ. ಇದಲ್ಲದೇ ಒಂದು ಹೊಸಾ ತಂಡವನ್ನೂ ಈ ಮೂಲಕ ಪರಿಚಯಿಸುತ್ತಿದ್ದಾರೆ. ಹೊಸಬರಾದ ನೀನಾಸಂ ಭಾಸ್ಕರ್, ಅಭಿಷೇಕ್, ಸುಮಂತ್ ಭಟ್, ಕಾರ್ತಿಕ್ ರಾವ್, ಕಾವ್ಯಾ ಶಾ, ಅನುಷಾ, ದಿಶಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

 

Leave a Reply

Your email address will not be published. Required fields are marked *


CAPTCHA Image
Reload Image