One N Only Exclusive Cine Portal

ವಿಧಾನಸೌಧದ ಎದುರು ನಿಂತವರ ಧೈರ್ಯಂ!ಮೊದಲೆಲ್ಲಾ ವಿಧಾನಸೌಧದ ಎದುರು ಸಾಕಷ್ಟು ಸಿನಿಮಾಗಳು ಚಿತ್ರೀಕರಣಗೊಳ್ಳುತ್ತಿದ್ದವು. ಈಗ ಅದು ಸೂಕ್ಷ್ಮ ಪ್ರದೇಶವಾಗಿರುವುದರಿಂದ ಸಿನಿಮಾ ಕೆಲಸಗಳು ನಡೆಯಲು ಸುಲಭಕ್ಕೆ ಅವಕಾಶ ನೀಡುವುದಿಲ್ಲ. ಆದರೆ ಸರ್ಕಾರ ನಡೆಸುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆಯು ಇದೇ ಜಾಗದಲ್ಲಿ ಜರುಗುತ್ತದೆ. ಇಷ್ಟೆಲ್ಲಾ ಕಷ್ಟ ಕಾರ್ಪಣ್ಯಗಳು ಇದ್ದರೂ ಧೈರ್ಯಂ ಚಿತ್ರತಂಡ ಧೈರ್ಯ ಮಾಡಿ ಯಾರೂ ಮಾಡಿರದ ಸಾಹಸಕ್ಕೆ ಮುಂದಾಗಿತ್ತು. ಅದೀಗ ಯಶಸ್ವಿಯಾಗಿ ನೆರವೇರಿದೆ. ಅದು ಧೈರ್ಯಂ ಚಿತ್ರದ ಆಡಿಯೋ ಲೋಕಾರ್ಪಣೆ.
ಬರೀ ವಿಧಾನಸೌಧದ ಎದುರು ಆಡಿಯೋ ಬಿಡುಗಡೆ ಮಾಡಿದ್ದು ಮಾತ್ರವಲ್ಲ, ಅದಕ್ಕೆ ಪೂರಕವಾಗಿ ಮತ್ತಷ್ಟು ವಿಶೇಷತೆಗಳಿದ್ದವು. ನಾಯಕ ಅಜಯ್‌ರಾವ್, ನಾಯಕಿ ಅಧಿತಿ ಪ್ರಭುದೇವ, ನಿರ್ದೇಶಕ ತೇಜಸ್, ಸಂಗೀತ ನಿರ್ದೇಶಕ ಎಮಿಲ್, ನಿರ್ಮಾಪಕ ಡಾ.ರಾಜು ಇವರುಗಳ ಜೊತೆಗೆ ಯೋಧ, ರೈತ, ಶಾಲಾ ಬಾಲಕ ಸರಳ ಕಾರ್ಯಕ್ರಮಕ್ಕೆ ಸಾತ್ ನೀಡಿದ್ದರು. ದೇಶ ಕಾಯುವವನು ಯೋಧ, ದೇಶಕ್ಕೆ ಅನ್ನ ನೀಡುವವನು ರೈತ, ಮುಂದಿನ ಭವಿಷ್ಯವನ್ನು ರೂಪಿಸುವವನು ವಿದ್ಯಾರ್ಥಿ. ಅದಕ್ಕಾಗಿ ಮೂವರನ್ನು ಸೇರಿಸಿಕೊಂಡು ಪೊಲೀಸರ ಸಹಕಾರದೊಂದಿಗೆ ತಂಡವು ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿ ಇತಿಹಾಸ ಪುಟದಲ್ಲಿ ದಾಖಲಾಗುವಂತೆ ಮಾಡಿದೆ.

Leave a Reply

Your email address will not be published. Required fields are marked *


CAPTCHA Image
Reload Image