One N Only Exclusive Cine Portal

ವೀಕೆಂಡ್’ಗೆ ಬರ‍್ತಾರೆ…

ರಮೇಶ್ ಅರವಿಂದ್ ಸಾರಥ್ಯದಲ್ಲಿ ಕರ್ನಾಟಕದಾದಂತ ಮನೆ ಮಾತಾಗಿದ್ದ ಕಾರ್ಯಕ್ರಮ ‘ವೀಕೆಂಡ್ ವಿತ್ ರಮೇಶ್. ಜೀ ಕನ್ನಡ ವಾಹಿನಿಯಲ್ಲಿ ಎರಡು ಆವೃತ್ತಿಯಲ್ಲಿ ಪ್ರಸಾರಗೊಂಡು ಭಾರೀ ಯಶ ಕಂಡಿದ್ದ ಈ ಕಾರ್ಯಕ್ರಮದ ಸೀಜನ್ 3 ಇದೇ ತಿಂಗಳ 25ರಿಂದ ಆರಂಭವಾಗಲಿದೆ.
ಈ ಸೀಜನ್ ಮೂರರ ಮೊದಲ ಸಂಚಿಕೆಯಲ್ಲಿಯೇ ಬಹುಭಾಷಾ ನಟ ಪ್ರಕಾಶ್ ರೈ ಪಾಲ್ಗೊಳ್ಳಲಿದ್ದಾರೆ. ಅದಾದ ನಂತರ ಎರಡನೇ ಸಂಚಿಕೆಯಲ್ಲಿ ನವರಸನಾಯಕ ಜಗ್ಗೇಶ್ ಹಾಜರಿರಲಿದ್ದಾರೆ.
ಪ್ರಕಾಶ್ ರೈ ಬಣ್ಣದ ಲೋಕದ ಕನಸು ಹೊತ್ತು ಬೆಂಗಳೂರೆಲ್ಲಾ ಅಡ್ಡಾಡಿ, ಇಲ್ಲಿಂದಲೇ ಮುಗಿಲೆತ್ತರಕ್ಕೆ ಬೆಳೆದ ಪ್ರತಿಭೆ. ಆದರೆ ಈ ಬೆಳವಣಿಗೆಯ ಹಿಂದೆ ಕಡು ಕಷ್ಟದ ಹಾದಿಯಿದೆ. ಎಂಥವರ ಕಣ್ಣುಗಳೂ ಹನಿಗೂಡುವಂಥಾ ಕಥೆಗಳಿವೆ. ಇನ್ನು ಜಗ್ಗೇಶ್ ಕೂಡಾ ತೀರಾ ತಳಮಟ್ಟದಿಂದ ಬೆಳೆದು ನಿಂತವರು.
ಕಡು ಕಷ್ಟದಿಂದಲೇ ಮೇಲೆದ್ದು ನಿಂತ ಈ ಇಬ್ಬರು ತಾರೆಯರ ಬದುಕಿನ ವಿವಿಧ ಮಜಲುಗಳು, ಮಗ್ಗುಲುಗಳನ್ನು ತೆರೆದಿಡಲು ಈ ಕಾರ್ಯಕ್ರಮದ ತಂಡ ಶ್ರಮವಹಿಸಿದೆ. ಅದನ್ನು ಕಣ್ತುಂಬಿಕೊಳ್ಳಲು ಕರುನಾಡ ಜನ ಕಾತರರಾಗಿದ್ದಾರೆ.

Leave a Reply

Your email address will not be published. Required fields are marked *


CAPTCHA Image
Reload Image