One N Only Exclusive Cine Portal

ವುಮೆನ್ಸ್ ಡೇ: ಮೋಡಿ ಮಾಡಲಿದೆಯಾ ಬಿಂದಾಸ್ ಹುಡುಗೀರ ಹಾರರ್ ಹವಾ?

ಕನ್ನಡ ಚಿತ್ರರಂಗದ ಪಾಲಿಗೆ ಇದು ಹಾರರ್ ಚಿತ್ರಗಳ ಕಾಲ. ಗುಣಮಟ್ಟದಿಂದ ಕೂಡಿದ ಹಾರರ್ ಚಿತ್ರಗಳನ್ನು ಪ್ರೇಕ್ಷಕರು ಗೆಲ್ಲಿಸಿರೋದರಿಂದ ಆ ಥರದ ಚಿತ್ರಗಳ ಸಂಖ್ಯೆ ಹೆಚ್ಚಾಗಿದೆ. ಅದೇ ಸಾಲಿನಲ್ಲಿ ಮೂಡಿ ಬಂದು ಗೆಲುವಿನ ನಿರೀಕ್ಷೆ ಹುಟ್ಟಿಸಿರೋ ವುಮೆನ್ಸ್ ಡೇ ಚಿತ್ರ ಬಿಡುಗಡೆಯಾಗಲು ಕ್ಷಣಗಣನೆ ಶುರುವಾಗಿದೆ.
ಆರ್. ಜಿ ಗೌಡ ನಿರ್ಮಾಣದ ಈ ಚಿತ್ರ ಹಾಡು ಮತ್ತು ಟ್ರೈಲರ್ ಮೂಲಕವೇ ಹುಟ್ಟು ಹಾಕಿರೋ ಕ್ರೇಜ್ ಸಣ್ಣದೇನಲ್ಲ. ಟ್ರೈಲರ್‌ನ ಮೂಲಕವೇ ಇಡೀ ಚಿತ್ರದ ಖದರ್, ದೃಷ್ಯ ಶ್ರೀಮಂತಿಕೆ, ಮನ ಸೆಳೆಯುವ ನಿಗೂಢಗಳ ಮೂಲಕವೇ ಪ್ರೇಕ್ಷಕರನ್ನು ಸೆಳೆದುಕೊಂಡಿದೆ.
ಅಂದಹಾಗೆ, ಈ ಹಿಂದೆ ರಂಗಿತರಂಗ ಚಿತ್ರದಲ್ಲಿ ಭಿನ್ನವಾದೊಂದು ಪಾತ್ರ ಮಾಡಿದ್ದ ಸಾಯಿಕುಮಾರ್ ಈ ಚಿತ್ರದಲ್ಲಿಯೂ ಅಂಥಾದ್ದೇ ಒಂದು ಕುತೂಹಲಕರ ಪಾತ್ರದಲ್ಲಿ ನಟಿಸಿದ್ದಾರಂತೆ. ಅವರ ಪಾತ್ರವೇ ಇಡೀ ಚಿತ್ರದ ಪ್ರಮುಖ ಆಕರ್ಷಣೆಯಾಗಿಯೂ ಬಿಂಬಿತವಾಗಿದೆ. ಟ್ರೈಲರ್‌ನಲ್ಲಿ ಅನಾವರಣವಾಗಿರೋ ಸಾಯಿಕುಮಾರ್ ಅವರ ಭಿನ್ನ ಗೆಟಪ್ ಅವರ ಪಾತ್ರವೇನಿರಬಹುದೆಂಬ ಕ್ಯೂರಿಯಾಸಿಟಿ ಹುಟ್ಟಿಸಿರೋದಂತೂ ಸತ್ಯ.
ಸಿಟಿಯಲ್ಲೇ ಬೆಳೆದ ಐವರು ಹುಡುಗೀರೇ ಈ ಚಿತ್ರದ ನಾಯಕಿಯರು. ಬಿಂದಾಸ್ ಮನಸ್ಥಿತಿಯ ಸಾಹಸ ಪ್ರವೃತ್ತಿಯ ಅವರಿಗೆಲ್ಲಾ ತಮ್ಮ ಪುನರ್ಜನ್ಮದ ಬಗ್ಗೆ ತಿಳಿದುಕೊಳ್ಳೋ ಹುಚ್ಚು ಹಂಬಲ. ಇದಕ್ಕಾಗಿ ಹೊರಟವರನ್ನು ಎಂತೆಂಥಾ ಸ್ಥಿತಿಗಳು ಕಾಡುತ್ತವೆಂಬುದನ್ನು ಮೈ ಜುಂ ಅನ್ನಿಸುವಂತೆ ಕಟ್ಟಿ ಕೊಟ್ಟಿರೋ ಖುಷಿ ಚಿತ್ರ ತಂಡದ್ದು. ಈ ಐವರು ಬಿಂದಾಸ್ ಹುಡುಗಿಯರ ಪಾತ್ರದಲ್ಲಿ ಸ್ನೇಹಾ ನಾಯರ್, ಸುಹಾನಾ, ಸನಿಹಾ, ಮೋನಿಕಾ ಮತ್ತು ಅಕ್ಷರಾ ಕಾಣಿಸಿಕೊಂಡಿದ್ದಾರೆ.
ಇದುವರೆಗೆ ಸಾಕಷ್ಟು ಸಿನಿಮಾ ನಿರ್ದೆಶನ ಮಾಡಿರೋ ಈಶ್ವರ್ ಬಾಳೇಕುಂದ್ರಿ ಈಶ ಎಂಬ ಹೆಸರಿನಿಂದ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಹರ್ಷ ಸಂಗೀತ ನಿರ್ದೇಶನ ಮಾಡಿರೋ ಮೂರು ಹಾಡುಗಳೂ ಈಗಾಗಲೇ ಜನಪ್ರಿಯತೆ ಪಡೆದುಕೊಂಡಿವೆ. ವುಮೆನ್ಸ್ ಡೇಯ ಅಸಲೀ ಆಟ ನಾಳೆಯಿಂದ ಶುರುವಾಗಲಿದೆ!

Leave a Reply

Your email address will not be published. Required fields are marked *


CAPTCHA Image
Reload Image