One N Only Exclusive Cine Portal

ಶಶಾಂಕ್ ಸಿನಿಮಾಸ್ ಶುರು!

ಮೊಗ್ಗಿನ ಮನಸು ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಜನಪ್ರಿಯರಾಗಿರುವವರು ಶಶಾಂಕ್. ಆ ನಂತರವೂ ಸಾಲು ಸಾಲಾಗಿ ಹಿಟ್ ಚಿತ್ರಗಳನ್ನು ಕೊಡುವ ಮೂಲಕ ಯಶಸ್ವೀ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಶಶಾಂಕ್ ಇದೀಗ ಮಾದರಿ ಸಾಹಸವೊಂದಕ್ಕೆ ಚಾಲನೆ ನೀಡಿದ್ದಾರೆ.

ಹೊಸಾ ಪ್ರತಿಭೆಗಳಿಗೆ ಅವಲಾಶ ನೀಡಿ ಪ್ರೋತ್ಸಾಹಿಸೋ ಉದ್ದೇಶದಿಂದ ಶಶಾಂಕ್ ಅವರು ‘ಶಶಾಂಕ್ ಸಿನಿಮಾಸ್ ಎಂಬ ನಿರ್ಮಾಣ ಸಂಸ್ಥೆಗೆ ಜೀವ ನೀಡಿದ್ದಾರೆ. ಈ ಸಮಸ್ಥೆಯ ಕಚೇರಿ ಮಹಾಲಕ್ಷ್ಮಿ ಬಡಾವಣೆಯಲ್ಲಿ ಕಾರ್ಯಾರಂಭ ಮಾಡಿದೆ. ಇತ್ತೀಚೆಗೆ ನಾದಬ್ರಹ್ಮ ಹಂಸಲೇಖ ಈ ಸಂಸ್ಥೆಯನ್ನು ಉದ್ಘಾಟನೆ ಮಾಡಿ ತಮ್ಮ ಶಿಷ್ಯ ಶಶಾಂಕ್ ಅವರ ಕೆಲಸಕ್ಕೆ ಹುರುಪು ತುಂಬಿ ಶುಭ ಹಾರೈಸಿದ್ದಾರೆ.
ಬಣ್ಣದ ಲೋಕದ ಬಗ್ಗೆ ಪ್ರಾಮಾಣಿಕ ಕನಸು ಹೊಂದಿರೋ ಹೊಸಾ ಪ್ರತಿಭೆಗಳಿಗೆ ಅವಕಾಶ ಮಾಡಿ ಕೊಡುವುದು ಶಶಾಂಕ್ ಸಿನಿಮಾಸ್ ನಿರ್ಮಾಣ ಸಂಸ್ಥೆಯ ಉದ್ದೇಶ. ಇಂಥಾ ಚಿತ್ರಗಳನ್ನು ಇನ್ನು ಮುಂದೆ ಈ ಸಂಸ್ಥೆಯೇ ನಿರ್ಮಾಣ ಮಾಡಲಿದೆಯಂತೆ.
ಈ ಸಂಸ್ಥೆಯ ಅಡಿಯಲ್ಲಿ ಮೊದಲನೆಯದಾಗಿ ಅಜೇಯ್ ರಾವ್ ನಾಯಕನಾಗಿರೋ ತಾಯಿಗೆ ತಕ್ಕ ಮಗ ಎಂಬ ಚಿತ್ರ ನಿರ್ಮಾಣವಾಗಲಿದೆ. ಇನ್ನುಳಿದಂತೆ ಆಪರೇಷನ್ ಆಲಮೇಲಮ್ಮ ಖ್ಯಾತಿಯ ರಿಷಿ ಅಭಿನಯದ ಚಿತ್ರ ಕೂಡಾ ತಯಾರಾಗಲಿದೆ. ಈ ಎರಡೂ ಚಿತ್ರಗಳನ್ನು ಹೊಸಬರೇ ನಿರ್ದೇಶನ ಮಾಡಲಿದ್ದಾರಂತೆ.
ಈ ಹಿಂದೆ ಕ್ರೇಜಿ ಬಾಯ್ ಚಿತ್ರದ ಮೂಲಕ ಗಮನ ಸೆಳೆದಿದ್ದ ದಿಲೀಪ್ ಪ್ರಕಾಶ್ ಅಭಿನಯದ ಒಂದು ಚಿತ್ರವೂ ಈ ಸಂಸ್ಥೆಯ ಮೂಲಕವೇ ನಿರ್ಮಾಣವಾಗಲಿದೆ. ಆದರೆ ಈ ಚಿತ್ರವನ್ನು ಸ್ವತಃ ಶಶಾಂಕ್ ಅವರೇ ನಿರ್ದೇಶನ ಮಾಡಲಿದ್ದಾರಂತೆ. ಇಂಥಾ ಸದುದ್ದೇಶ ಹೊಂದಿರೋ ಈ ನಿರ್ಮಾಣ ಸಂಸ್ಥೆಯನ್ನು ಹಂಸಲೇಖ ಅವರು ಉದ್ಘಾಟನೆ ಮಾಡಿದ ಸಡಂದರ್ಭದಲ್ಲಿ ಅಜೇಯ್ ರಾವ್, ರಿಷಿ, ದಿಲೀಪ್, ನಿರ್ಮಾಪಕರಾದ ಉದಯ್ ಮೆಹ್ತಾ, ಜಿ ಗಂಗಾಧರ್ ಮೊದಲಾದವರು ಉಪಸ್ಥಿತರಿದ್ದು ಶಶಾಂಕ್ ಅವರ ಸಾಹಸಕ್ಕೆ ಶುಭ ಹಾರೈಸಿದರು.

 

Leave a Reply

Your email address will not be published. Required fields are marked *


CAPTCHA Image
Reload Image