One N Only Exclusive Cine Portal

ಶಿಲ್ಪಾ ಗಣೇಶ್ ಖುಷಿಗೆ ಕಾರಣವೇನು?

ಇತ್ತೀಚೆಗೆ ನಡೆದ ಉತ್ತರಪ್ರದೇಶದ ಚುನಾವಣೆಯಲ್ಲಿ ಬಿಜೆಪಿ ನಲವತ್ತು ಕ್ಷೇತ್ರಗಳಲ್ಲಿ ಗೆದ್ದು ಭಾರೀ ಜಯಭೇರಿ ಭಾರಿಸಿದ್ದು ಮಾತ್ರವಲ್ಲದೆ, ಬರೋಬ್ಬರಿ ಮೂವತ್ತಾರು ಜನ ಮಹಿಳೆಯರು ಶಾಸಕಿಯರಾಗಿ ಆಯ್ಕೆಯಾಗಿದ್ದಾರಲ್ಲಾ? ಇದರಿಂದ ಸಿಕ್ಕಾಪಟ್ಟೆ ಖುಷಿಯಾಗಿರೋರು ಯಾರು ಗೊತ್ತೇ? ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಶಿಲ್ಪಾ ಗಣೇಶ್.
ಸದ್ಯ ಕರ್ನಾಟಕ ಬಿಜೆಪಿ ಪಾಳಯದ ಸಕ್ರಿಯ ಕಾರ್ಯಕರ್ತೆಯಾಗಿರುವ ಶಿಲ್ಪಾ ಗಣೇಶ್ ಉತ್ತರ ಪ್ರದೇಶದಲ್ಲಿ ಗೆದ್ದಿರುವ ಎಲ್ಲ ಮಹಿಳಾ ಶಾಸಕಿಯರಿಗೆ ಶುಭಾಶಯ ಕೋರಿರುವುದು ಮಾತ್ರವಲ್ಲದೆ, ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲೂ ಇದೇ ರೀತಿ ಪವಾಡ ನಡೆಯಲಿ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರ ರಾಜಕಾರಣದಲ್ಲಿ ದಿನೇದಿನೇ ಮಹಿಳಾ ಅಭ್ಯರ್ಥಿಗಳ ವರ್ಚಸ್ಸು ಹೆಚ್ಚುತ್ತಿದೆ. ಇದು ದೇಶದ ಪ್ರಗತಿಗೆ ಪೂರಕವಾದ ಬೆಳವಣಿಗೆ. 2018ರ ರಾಜ್ಯ ಅಸೆಂಬ್ಲಿ ಚುನಾವಣೆಯಲ್ಲಿ ಸ್ತ್ರೀ ಪ್ರಾಬಲ್ಯ ಹೆಚ್ಚಾಗಿ ಪ್ರಜಾಪ್ರಭುತ್ವದಲ್ಲಿ ಹೆಣ್ಣುಮಕ್ಕಳ ಪಾತ್ರ ಹಿರಿದಾಗಲಿ ಎಂದು ಬಿಜೆಪಿ ರಾಜ್ಯ ಮಹಿಳಾ ಸಂಚಾಲಕಿಯಾದ ಶಿಲ್ಪಾ ಗಣೇಶ್ ಎಂದು ಹಾರೈಸಿದ್ದಾರೆ.

Leave a Reply

Your email address will not be published. Required fields are marked *


CAPTCHA Image
Reload Image