One N Only Exclusive Cine Portal

ಶಿವಣ್ಣ ಶ್ರೀಮುರಳಿ ಜೋಡಿಯ ಮನಮುಟ್ಟುವ ಮಫ್ತಿ!

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಮತ್ತು ರೋರಿಂಗ್ ಸ್ಟಾರ್ ಶ್ರೀಮುರಳಿ ಕಾಂಬಿನೇಷನ್ ಕಾರಣದಿಂದಲೇ ಕೌತುಕ ಹುಟ್ಟುಹಾಕಿದ್ದ ಚಿತ್ರ ಮಫ್ತಿ. ಇದೀಗ ರಾಜ್ಯಾದಂತ ಅದ್ದೂರಿಯಾಗಿ ಬಿಡುಗಡೆಯಾಗಿರೋ ಈ ಚಿತ್ರ ಜನ ಯಾವ ನಿರೀಕ್ಷೆ ಇಟ್ಟುಕೊಂಡು ಥೇಟರಿನೊಳಗೆ ಹೋಗಿದ್ದರೋ ಅದು ಭರಪೂರವಾಗಿ ಸಿಕ್ಕಿದ ಸಂತೃಪ್ತ ಭಾವ ಹುಟ್ಟಿಸುವಲ್ಲಿ ಗೆದ್ದಿದೆ.
ಒಂದು ಅದ್ಭುತ ಕಥೆ ನಿರ್ದೇಶನದ ಗೊಂದಲಗಳಿಂದ ಗೋಜಲಾಗಿ ರೇಜಿಗೆ ಹುಟ್ಟಿಸಬಹುದು. ಅದೇ ರೀತಿ ಒಂದು ಸಾಮಾನ್ಯ ಕಥೆಯನ್ನು ಚೆಂದದ ನಿರೂಪಣೆ, ಕುಸುರಿಯಂಥಾ ದೃಷ್ಯ ಕಟ್ಟುವಿಕೆಗಳ ಮೂಲಕ ಅದ್ಭುತವಾಗಿಸಬಹುದು. ಮಫ್ತಿ ಖಂಡಿತವಾಗಿಯೂ ಈ ಎರಡನೇ ಕ್ಯಾಟಗರಿಗೆ ಪಕ್ಕಾ ಉದಾಗರಣೆಯಂಥಾ ಚಿತ್ರ!
ಉಗ್ರಂ ಚಿತ್ರದ ರಗಡ್ ಲುಕ್ಕಿನ ಮಾಸ್ ಪಾತ್ರದದ ಮೂಲಕವೇ ಮತ್ತೆ ಎದ್ದು ನಿಂತವರು ಶ್ರೀಮುರಳಿ. ರಥಾವರ ಚಿತ್ರದಲ್ಲಿಯೂ ಅದೇ ಖದರ್ ಮತ್ತೆ ಮುಂದುವರೆದಿತ್ತು. ಆ ನಂತರ ಅವರ ಅಭಿಮಾನಿಗಳು ಅಂಥಾದ್ದೇ ಫೋರ್ಸ್‌ಫುಲ್ ಪಾತ್ರದಲ್ಲಿ ಮುರಳಿಯವರನ್ನು ನೋಡಲು ಬಯಸಿಯದ್ದರಲ್ಲಿ ಅಚ್ಚರಿಯೇನೂ ಇಲ್ಲ. ಇದೀಗ ಮಫ್ತಿ ಚಿತ್ರದಲ್ಲಿಯೂ ಅದೇ ಮುಂದುವರೆದಿದೆ. ಇಡೀ ಚಿತ್ರದ ಪ್ರಮುಖ ಆಕರ್ಷಣೆ ಶಿವರಾಜ್‌ಕುಮಾರ್ ಅವರ ಗ್ಯಾಂಗ್‌ಸ್ಟರ್ ಪಾತ್ರ. ಭೈರತಿ ರಣಗಲ್ ಎಂಬ ಪಾತ್ರವನ್ನು ಶಿವಣ್ಣ ಎಂಥವರನ್ನೂ ಮೋಡಿ ಮಾಡುವಂತೆ ನಟಿಸಿದ್ದಾರೆಂಬುದೇ ಇಡೀ ಚಿತ್ರದ ಹೈಲೈಟ್. ರೋಣಾಪುರ ಎಂಬೊಂದೂರು ಹೊರ ಜಗತ್ತಿನ ಪಾಲಿಗೆ ಹಿಂಸೆ, ಹೊಡೆದಾಟ ಮತ್ತು ಅಶಾಂತಿಯ ಧಾವಾನೆಲವಾಗಿ ಕಾಣಿಸುತ್ತಿರುತ್ತದೆ. ಅದಕ್ಕೆ ಸರ್ಕಾರದ ದೃಷ್ಟಿಯಲ್ಲಿ ಕಾರಣ ಭೈರತಿ ರಣಗಲ್. ಎಂಥಾ ದಾಳಿಗೂ ಬೆಚ್ಚದ ರಣಗಲ್‌ನ ಕೋಟೆಯನ್ನು ಬೇಧಿಸಲು ಯುವ ಪೊಲೀಸ್ ಅಧಿಕಾರಿಯ ಪಾತ್ರದ ಶ್ರೀಮುರಳಿ ಮಫ್ತಿಯಲ್ಲಿ ಎಂಟ್ರಿ ಕೊಟ್ಟು ಆತನ ಪಾಳೆಯವನ್ನೇ ಸೇರಿಕೊಳ್ಳುತ್ತಾರೆ. ಆ ರಣಗಲ್‌ನ ಸಮಾಜಮುಖಿ ಮುಖ ನಾಯಕನ ಗಮನಕ್ಕೆ ಬರುತ್ತದೆ. ಮುಂದಿನದ್ದೆಲ್ಲವನ್ನೂ ಚಿತ್ರ ನೋಡಿ ಅನುಭವಿಸೋದೇ ಉತ್ತಮ!
ನಿರ್ದೇಶಕ ನರ್ತನ್ ಪಾಲಿಗಿದು ಮೊದಲ ಚಿತ್ರ. ಆದರೆ ಸಣ್ಣ ಪುಟ್ಟ ದೋಷಗಳನ್ನೂ ಮರೆ ಮಾಚುವಂಥಾ ಸರಾಗ ಶೈಲಿಯಲ್ಲಿ ಇಡೀ ಚಿತ್ರವನ್ನು ಕಟ್ಟಿ ಕೊಟ್ಟಿದ್ದಾರೆ. ಎಲ್ಲಿಯೂ ಬೋರು ಹೊಡೆಸದಂತೆ ಮಫ್ತಿಯನ್ನು ರೂಪಿಸುವಲ್ಲಿ ಗೆದ್ದಿದ್ದಾರೆ. ಇನ್ನುಳಿದಂತೆ ನಾಯಕಿ ಶಾನ್ವಿ ಶ್ರೀವಾತ್ಸವ್, ಶಿವಣ್ಣನ ತಂಗಿ ಪಾತ್ರ ಮಾಡಿರೋ ಛಾಯಾ ಸಿಂಗ್, ರಾಜಕಾರಣಿಯ ಪಾತ್ರದಲ್ಲಿ ಮಿಂಚಿರೋ ದೇವರಾಜ್, ಪರಿಸರವಾದಿಯಾಗಿ ಕಾಣಿಸಿಕೊಂಡಿರೋ ಪ್ರಕಾಶ್ ಬೆಳವಾಡಿ ಸೇರಿದಂತೆ ಎಲ್ಲ ಕಲಾವಿದರದ್ದೂ ಮಾಗಿದ ನಟನೆ. ಚಿಕ್ಕಣ್ಣ ಮತ್ತು ಸಾಧು ಕೋಕಿಲಾ ಕಾಮಿಡಿ ಟ್ರ್ಯಾಕೂ ಕಥೆಗೆ ಭಂಗ ಮಾಡದಂತೆ ವರ್ಕೌಟ್ ಆಗಿದೆ. ಮೊದಲ ಭಾಗದಲ್ಲಿ ಶ್ರೀ ಮುರಳಿ ಬಿಲ್ಡಪ್ಪು ಜೋರು. ಸೆಖೆಂಡ್ ಹಾಫ್‌ನಲ್ಲಿ ಶಿವಣ್ಣ ರಿಯಲ್ ಹೀರೋ!
ಶ್ರೀಮುರಳಿ ಮಫ್ತಿಯಲ್ಲಿಯೂ ಪಕ್ಕಾ ಮಾಸ್ ಪಾತ್ರದಲ್ಲಿ ಮತ್ತೊಮ್ಮೆ ಅಭಿಮಾನಿಗಳನ್ನು ತಣಿಸಿದ್ದಾರೆ. ಕೇವಲ ಮಾಸ್ ಮಾತ್ರವಲ್ಲದೇ ಎಲ್ಲ ವಿಭಾಗಗಳ ಪ್ರೇಕ್ಷಕರೂ ಒಂದು ಬಾರಿ ನೋಡಲಡ್ಡಿ ಇಲ್ಲದ ಚಿತ್ರ ಮಫ್ತಿ!

  • ಅರುಣೋದಯ

copying or reproducing the above content in any format without approval is criminal offence and will be prosecuted in Bengaluru court © CINIBUZZ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Leave a Reply

Your email address will not be published. Required fields are marked *


CAPTCHA Image
Reload Image