One N Only Exclusive Cine Portal

ಶುಭಾಶಯಗಳು…

ಯಾವುದೇ ಕ್ಷೇತ್ರವಿದ್ದರೂ ಹೊಸತನಕ್ಕೆ ಒಡ್ಡಿಕೊಳ್ಳಲೇಬೇಕು. ಹಾಗಂತ ಹೊಸ ನೀರು ನುಗ್ಗಿದಾಕ್ಷಣ ಹಳತೆಲ್ಲ ಸಾರಿಸಿಕೊಂಡು ಹೋಯ್ತು ಅಂತ ಅರ್ಥವಲ್ಲ. ಯಾರ್ಯಾರು ಅಲ್ಲಿ ಬೆವರು ಸುರಿಸಿ ಸಾಧನೆ ಮಾಡಿದ್ದರೋ ಅವರೆಲ್ಲರೂ ಅಜರಾಮರರು. ಕನ್ನಡ ಚಿತ್ರ ರಂಗದ ಹಿನ್ನೆಲೆಯಲ್ಲಿ ನೋಡಿದರೆ ಗೈರು ಹಾಜರಿಯಲ್ಲೂ ಪೀಳಿಗೆಯಾಚೆಗೆ ಪ್ರಭಾವಿಸಬಲ್ಲ ಅನೇಕ ನಾಯಕ ನಾಯಕಿಯರಿದ್ದಾರೆ. ಆದರೀಗ ಅವರೆಲ್ಲರ ನೆರಳಿನಲ್ಲಿಯೇ ಹೊಸಾ ಜಮಾನವೊಂದು ಅವತರಿಸಿದೆ. ಹತ್ತಾರು ಹೊಸಾ ಮುಖಗಳು ಹೀರೋಗಿರಿಯ ಕಿರೀಟವನ್ನ ಮುಡಿಗೇರಿಸಿಕೊಂಡಿದ್ದಾರೆ.
ಹಾಗೆ ಈ ದಶಕದ ಆಸುಪಾಸಿನಲ್ಲಿ ಕನ್ನಡ ಚಿತ್ರರಂಗವನ್ನ ತಮ್ಮದೇ ಆದ ರೀತಿಯಲ್ಲಿ ಪ್ರಭಾವಿಸಿದ ಸ್ಟಾರ್ ಗಳು ಡಾ. ರಾಜ್ ಎಂಬ ಮೇರು ಶಿಖರದ ೮೮ನೇ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ್ದಾರೆ. ಛಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಫೇಸ್ ಬುಕ್ ಪುಟದಲ್ಲಿ “ಇಂದು ರಸಿಕರ ರಾಜ, ಅಣ್ಣಾವ್ರು, ಡಾ. ರಾಜ್ ಕುಮಾರ್ ಅವರ ಹುಟ್ಟು ಹಬ್ಬ. ಅವರು ಎಲ್ಲ ಪೀಳಿಗೆಯ ಹೀರೋಗಳಿಗೆ ರೋಲ್ ಮಾಡೆಲ್” ಎಂದು ಹೇಳಿ ಡಾ. ರಾಜ್ ಕೈ ಎತ್ತಿ ನಮಸ್ಕರಿಸುತ್ತಿರುವ ಫೋಟೋ ಹಾಕಿದ್ದಾರೆ. ಯಾವುದೇ ಒಂದು ವಿಚಾರಕ್ಕೆ ತಕ್ಷಣ ಸ್ಪಂದಿಸುವ, ನಮ್ಮ ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಅಣ್ಣಾವ್ರ ಭಾವಚಿತ್ರದ ಫೋಟೋವನ್ನು “ವಿನ್ಯಾಸ ಮಾಡಿಸಿ, ನಮ್ಮಣ್ಣ, ಕನ್ನಡದ ಮುತ್ತುರಾಜ ರಾಜಣ್ಣನವರ ನೆನಪಿನಲ್ಲಿ…” ಎಂಬ ಗ್ರೀಟಿಂಗ್ ಟ್ಯಾಗ್ ಮಾಡಿದ್ದಾರೆ. “ಕಲಾ ಶಾರದೆಯ ಆರಾಧಕ.. ಅಭಿಮಾನಿಗಳ ಆರಾಧ್ಯದೈವ… ಡಾ. ರಾಜ್ ಕುಮಾರ್ ಜಯಂತಿಯ ಹಾರ್ದಿಕ ಶುಭಾಷಯಗಳು” ಎಂದು ಯಶ್ ತಮ್ಮ ಅಫಿಷಿಯಲ್ ಫೇಸ್ ಬುಕ್ ಖಾತೆಯಲ್ಲಿ ಬರೆದಿದ್ದಾರೆ. ಟ್ವಿಟರ್ ಖಾತೆಯಲ್ಲಿ ಸದಾ ಆಕ್ಟಿವ್ ಆಗಿರುವ ನವರಸನಾಯಕ ಜಗ್ಗೇಶ್ ‘ಕನ್ನಡದ ತೇರು ಎಳೆದ ಮೊದಲಿಗರ ಹುಟ್ಟು ಹಬ್ಬಕ್ಕೆ ಶುಭಾಶಯಗಳು. ೨೦೧೪ರಲ್ಲಿ ಇದೇ ದಿನ ನನ್ನ ಮಗ ಗುರು ಮದುವೆಯಾಗಿದ್ದ. ನಾನು ಇಂದು ಮೈಸೂರಿನಲ್ಲಿ ಮದುವೆ ಛತ್ರದ ಆರಂಭ ಪೂಜೆ ಮಾಡಿದ್ದೇನೆ’ ಎಂದು ಟ್ವೀಟ್ ಮಾಡಿದ್ದಾರೆ. ಇನ್ನು ಗೋಲ್ಡನ್ ಸ್ಟಾ ಗಣೇಶ್ ಕೂಡಾ ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ “ಹ್ಯಾಪಿ ಬರ್ತ್ ಡೇ ರಾಜಣ್ಣ. ಕನ್ನಡ ನಾಡಿನ ಹೆಮ್ಮೆಯ ಪುತ್ರ ರಾಜಣ್ಣ, ರಿಯಲ್ ರೋಲ್ ಮಾಡೆಲ್, ದೇವತಾ ಮನುಷ್ಯ” ಎಂಬ ಸಾಲನ್ನು ಬರೆದು ಡಾ. ರಾಜ್ ಅವರನ್ನು ಕೊಂಡಾಡಿದ್ದಾರೆ.
ಹೀಗೆ ಸ್ಯಾಂಡಲ್ ವುಡ್ ನ ಟಾಪ್ ಸ್ಟಾರ್ ಗಳು ಮಣ್ಣಿನ ಮಗನ ಹುಟ್ಟುಹಬ್ಬಕ್ಕೆ ತಮ್ಮದೇ ಶೈಲಿಯಲ್ಲಿ ಶುಭ ಕೋರಿದ್ದಾರೆ.

Leave a Reply

Your email address will not be published. Required fields are marked *


CAPTCHA Image
Reload Image