One N Only Exclusive Cine Portal

ಶುರುವಾಗಲಿದೆಯಾ ರಂಗಾಯಣ ರಘು ರಾಜಕಾರಣ?

ಕರ್ನಾಟಕ ವಿಧಾನಸಭಾ ಚುನಾವಣೆಗೆ ರಾಜಕಾರಣಿಗಳು ಅದು ಹೇಗೆ ತಯಾರಾಗುತ್ತಿದ್ದಾರೋ ಗೊತ್ತಿಲ್ಲ. ಆದರೆ ಚಿತ್ರರಂಗದ ಕೆಲ ಮಂದಿಯಂತೂ ವಿಧಾನಸೌಧಕ್ಕೆ ತೂರಿಕೊಳ್ಳೋ ಉತ್ಸಾಹದಿಂದ ತಯಾರಿ ಆರಂಭಿಸಿದ್ದಾರೆ. ಈಗಾಗಲೇ ಉಪೇಂದ್ರ ಅಧಿಕೃತವಾಗಿ ರಾಜಕೀಯ ಪ್ರವೇಶ ಮಾಡುತ್ತಲೇ ಈ ಕ್ರೇಜ್ ಮತ್ತಷ್ಟು ತೀವ್ರವಾದಂತಿದೆ. ಇದೀಗ ಕನ್ನಡ ಚಿತ್ರರಂಗದಲ್ಲಿ ಪ್ರತಿಭಾವಂತ ನಟರಾಗಿ ಹೆಸರು ಮಾಡಿರೋ ರಂಗಾಯಣ ರಘು ಕೂಡಾ ರಾಜಕಾರಣದ ತಾಲೀಮು ಆರಂಭಿಸಿರೋ ಸುದ್ದಿ ಬಂದಿದೆ!
ರಂಗಾಯಣ ರಘು ಸಿನಿಮಾ ಹೊರತಾಗಿ ಸುದ್ದಿಯಾದವರಲ್ಲ. ಅವರ ರಾಜಕೀಯ ಹಪಾಹಪಿ ಹೊರ ಬಿದ್ದ ಉದಾಹರಣೆಗಳೂ ಇಲ್ಲ. ಆದರೆ ಇದೀಗ ಏಕಾಏಕಿ ರಂಗಾಯಣ ರಾಜಕೀಯ ಪ್ರವೇಶದ ಬಗ್ಗೆ ಗುಲ್ಲೆದ್ದಿದೆ.
ಇಂಥಾದ್ದೊಂದು ಸುದ್ದಿ ಹರಡೋ ಮೂಲಕ ಎಲ್ಲಾದರೂ ಅವಕಾಶ ಗಿಟ್ಟಿಸಿಕೊಳ್ಳೋ ತಂತ್ರಗಾರಿಕೆಯೋ, ಮತ್ತೇನೋ ಗೊತ್ತಿಲ್ಲ. ಆದರೆ ಬೆಂಕಿ ಇಲ್ಲದೆ ಹೊಗೆಯಾಡೋದಿಲ್ಲ ಎಂಬ ಮಾತಿನನ್ವಯ ರಂಗಾಯಣ ರಘು ಅವರ ರಾಜಕೀಯ ಪ್ರವೇಶದ ಸುದ್ದಿಯನ್ನ ತುಸು ಗಂಭೀರವಾಗಿ ಪರಿಗಣಿಸಬಹುದೇನೋ. ಯಾಕೆಂದರೆ ಅವರೀಗಾಗಲೆ ಜೆಡಿಎಸ್ ಪಕ್ಷದಿಂದ ಟಿಕೆಟ್ಟಿಗಾಗಿ ಪ್ರಯತ್ನಿಸುತ್ತಿದ್ದಾರೆಂಬ ಬಗ್ಗೆಯೂ ರೂಮರುಗಳೆದ್ದಿವೆ.
ರಂಗಾಯಣ ರಘು ಈಗಲೂ ಬ್ಯುಸಿ ನಟರಾಗಿ ಮುಂದುವರೆಯುತ್ತಿದ್ದಾರೆ. ಅವರು ಕೇವಲ ಶಾಸಕರಾಗಿ ಗೂಟದ ಕಾರಲ್ಲಿ ಓಡಾಡೋ ಖಯಾಲಿಗಾಗಿ ರಾಜಕೀಯದ ಕನಸು ಕಾಣದೆ, ಒಂದಷ್ಟು ಬದಲಾವಣೆಯ ಕನಸಿನೊಂದಿಗೆ ರಾಜಕೀಯಕ್ಕೆ ಪಾದಾರ್ಪಣೆ ಮಾಡುವಂತಾದರೆ ಅವರಿಗೆ ಖಂಡಿತಾ ಒಳಿತಾಗಲಿ!

Leave a Reply

Your email address will not be published. Required fields are marked *


CAPTCHA Image
Reload Image