One N Only Exclusive Cine Portal

ಸಂಜನಾ ಇದೆಲ್ಲಾ ನಿಜಾನಾ?

ಬಿಗ್‌ಬಾಸ್ ಮನೆಗೆ ಹೋಗಿ ಹೊರ ಬಂದಿದ್ದೇ ಮಹಾ ಸಾಧನೆ ಎಂಬಂತೆ ತನ್ನ ಪೀಚು ದೇಹವನ್ನು ಆಕಾಶದಲ್ಲೇ ತೇಲಾಡಿಸುತ್ತಿರುವಾಕೆ ಸಂಜನಾ. ಅಲ್ಲೆಲ್ಲೋ ಒಂದು ಸಿನಿಮಾದಲ್ಲಿ ಚೋಟು ಚೆಡ್ಡಿ ಹಾಕಿಕೊಂಡು ಡ್ಯಾನ್ಸು ಮಾಡಿದ್ದು ಬಿಟ್ಟರೆ ಈಕೆಯ ಕೈಲೊಂದು ಅವಕಾಶವೂ ಇಲ್ಲ. ಆದರೆ ಸದಾ ಸುದ್ದಿಯಲ್ಲಿರಬೇಕೆಂಬೋ ತವಕದಿಂದ ಈಕೆ ವಾಕರಿಕೆ ಹುಟ್ಟಿಸುವಂಥಾದ್ದೊಂದು ಚೀಪ್ ಗಿಮಿಕ್ ಮಾಡಿದ್ದಾಳೆಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ!

ಕೆಲ ದಿನಗಳಿಂದ ಸಾಮಾಜಿಕ ಜಾಲ ತಾಣಗಳಲ್ಲಿ ಸಂಜನಾ ಮತ್ತು ಭುವನ್ ಎಂಗೇಜ್‌ಮೆಂಟಿನ ಇನ್ವಿಟೇಷನ್ ಒಂದು ಓಡಾಡುತ್ತಿದೆ. ಅಂದಹಾಗೆ ಇದು ಓಡಾಡಲು ಶುರುವಿಟ್ಟು ಮೂರ್ನಾಲಕ್ಕು ದಿನಗಳಾಗಿವೆ. ಈಗ ಮತ್ತೊಂದು ಸೀಜನ್ ಬಿಗ್‌ಬಾಸ್ ಶೋ ನೋಡೋದರಲ್ಲಿ ಬ್ಯುಸಿಯಾಗಿರೋ ಮಂದಿ ಸಂಜನಾ ಎಂಗೇಜ್‌ಮೆಂಟ್ ವಿಚಾರದ ಬಗ್ಗೆ ಕ್ಯಾರೇ ಅಂದಿಲ್ಲ.
ಆದರೆ ಈವತ್ತು ಸಂಜನಾ ತಾನೇ ತಾನಾಗಿ ಕೆಲ ಪತ್ರಿಕೆಗಳವರಿಗೆ ಫೋನು ಮಾಡಿ “ತಾನು ಭುವನ್ ಜೊತೆ ಎಂಗೇಜ್‌ಮೆಂಟ್ ಮಾಡಿಕೊಳ್ಳುತ್ತಿಲ್ಲ. ಯಾರೋ ಸುಮ್ಮನೆ ಈ ಸುದ್ದಿ ಹಬ್ಬಿಸಿ ತನಗೆ ಮಾನಸಿಕ ಹಿಂಸೆ ಕೊಡುತ್ತಿದ್ದಾರೆ ಅಂತೆಲ್ಲ ನುಲಿದಿದ್ದಾರೆ. ಆದರೆ ಬಹುತೇಕರಿಗೆ ಈ ಸಂಗತಿ ಗೊತ್ತಾಗಿದ್ದು ಖುದ್ದು ಸಂಜನಾ ಕರೆ ಮಾಡಿದಾಗಲೇ!
ಆದರೆ ಈ ಎಂಗೇಜ್‌ಮೆಂಟ್ ಪುರಾಣದ ಅಸಲೀಯತ್ತೇ ಬೇರೆಯದ್ದಿದೆ. ಒಂದು ಮೂಲದ ಪ್ರಕಾರ ಸಂಜನಾಳೇ ಪ್ರಚಾದ ಆಸೆಗೆ ಬಿದ್ದು ತನ್ನ ಖಾಸಗೀ ವಿಚಾರವನ್ನು ಪಣಕ್ಕಿಟ್ಟಿದ್ದಾಳೆ. ಸಂಜು ಮತ್ತು ನಾನು ಎಂಬ ಧಾರಾವಾಹಿಯ ನಂತರ ಈ ಸಂಜನಾ ಮನೆ ಸೇರಿಕೊಳ್ಳುವಂತಾಗಿದೆ. ಅವಕಾಶ, ಪ್ರಚಾರವಿಲ್ಲದೇ ಕಂಗಾಲಾಗಿದ್ದ ಸಂಜನಾ ಖತಾರ್ನಾಕ್ ಐಡಿಯಾ ಮಾಡಿ ಭುವನ್ ಜೊತೆಗಿನ ಎಂಗೇಜ್‌ಮೆಂಟ್ ಸುದ್ದಿಯನ್ನು ಇನ್ವಿಟೇಷನ್ ಸಮೇತ ತಾನೇ ಸಾಮಾಜಿಕ ಜಾಲ ತಾಣಗಳಲ್ಲಿ ಜಾಹೀರು ಮಾಡಿದ್ದಾಳೆ ಎನ್ನುವ ಅನುಮಾನದ ಮಾತುಗಳು ಕೇಳಿಬರುತ್ತಿವೆ!
ಆದರೆ ಈ ಸುದ್ದಿ ಅದೇನೇ ಹರಿದಾಡಿದರೂ ಮೀಡಿಯಾ ಮಂದಿ ಈ ಬಗ್ಗೆ ಕ್ಯಾರೇ ಅಂದಿರಲಿಲ್ಲ. ಆದರೆ ತಾನೇ ಮೀಡಿಯಾ ಮಂದಿಗೆ ಕರೆ ಮಾಡಿ ಕ್ಲಾರಿಫಿಕೇಷನ್ನು ಕೊಡೋ ನೆಪದಲ್ಲಿ ಈ ವಿಚಾರವನ್ನು ಮತ್ತೆ ರೈಸ್ ಮಾಡೋ ಕೆಲಸಕ್ಕೂ ಸಂಜನಾ ಕೈ ಹಾಕಿದ್ದಾಳೆ. ಕಡೆಗೂ ವಾಹಿನಿಯಲ್ಲಿ ಒಂದರ್ಧ ಘಂಟೆ ಸಂಜನಾ ಪ್ರವರ ಒಪ್ಪಿಸಿ ಬಂದಿದ್ದಾಳೆ. ಆ ಮಟ್ಟಿಗೆ ಆಕೆಯ ಪ್ಲಾನು ಯಶ ಕಂಡಿದೆ.
ನಿಜವಾಗಿಯೂ ಬೇರ‍್ಯಾರೋ ಈ ಸುದ್ದಿಯನ್ನು ಬೇರೆಯವರು ಹರಡಿಸಿದ್ದರೆ ಸಂಜನಾ ಸೈಬರ್ ಕ್ರೈಂಗೆ ದೂರು ಕೊಡಬಹುದಿತ್ತಲ್ಲ? ಇರೋ ವಿಚಾರ ಜಾಹೀರು ಮಾಡಿದಾಕ್ಷಣ ತಲೆ ಬುಡವಿಲ್ಲದೆ ಏನೇನೋ ಒದರಾಡೋ ಈಕೆಯ ಮಹಾ ತಾಯಿ ಕೇಸು ಕೊಡೋ ಮಾತಾಡುತ್ತಾಳೆ. ಚಾನೆಲ್ಲುಗಳಲ್ಲಿ ಕೂತು ಬಾಯಿ ಬಡಕೊಳ್ಳುತ್ತಾಳೆ. ಆಕೆಯಾದರೂ ಸದರಿ ವಿಚಾರವಾಗಿ ಸೈಬರ್ ಕ್ರೈಂಗೆ ದೂರು ಕೊಡಲಿ. ಆಗ ಗಿಮಿಕ್ ಮಾಡಿದವರು ಸಿಕ್ಕಿಬೀಳದಿರಲು ಸಾಧ್ಯವೇ ಇಲ್ಲ!!

Leave a Reply

Your email address will not be published. Required fields are marked *


CAPTCHA Image
Reload Image