One N Only Exclusive Cine Portal

ಸಂಜನಾ ಕ್ಯಾರವಾನ್ ಕ್ಯಾತೆ!

ಬಿಗ್ ಬಾಸ್ (ಕು)ಖ್ಯಾತಿಯ ಬೂಸಿ ಸಂಜನಾ ಮತ್ತೊಂದು ಕ್ಯಾತೆ ಆರಂಭಿಸಿದ್ದಾಳೆ!
ಸಿನಿಬಜ಼್ ವರದಿಯೊಂದರ ವಿರುದ್ಧ ಬೊಬ್ಬೆಯಿಟ್ಟು ಒಂದಷ್ಟು ನ್ಯೂಸ್ ಚಾನೆಲ್ಲುಗಳ ಮೈಕನ್ನು ಬಾಯಿಗೇ ತುರುಕಿಕೊಂಡು ‘ಅವರನ್ನು ಹೊಡೆಸ್ತೀನಿ, ಬಡೆಸ್ತೀನಿ ಅಂತೆಲ್ಲಾ ಗೂಂಡಾಗಿರಿ ಮಾತಾಡಿ, ಎಗರಾಡಿದ್ದರಲ್ಲಾ ಸಂಜನಾ ಮತ್ತವಳ ತಾಯಿ… ಈಗ ಅದೇ ಅವ್ವ ಮಗಳು ಸಿನಿಮಾ ತಂಡವೊಂದರ ಮೇಲೆ ಗುಟುರು ಹಾಕಿದ್ದಾರೆ.
‘ಉಡುಂಬ ಅನ್ನೋ ಸಿನಿಮಾದಲ್ಲಿ ಸಂಜನಾ ಐಟಂ ಡ್ಯಾನ್ಸೋ ಅದೆಂಥದ್ದೋ ಒಂದು ಮಾಡಿದ್ದಾಳಂತೆ. ಅದರ ಶೂಟಿಂಗಿಗೆಂದು ರಾಮನಗರಕ್ಕೆ ಹೋದಾಗ ಮೇಲಿಂದಿಳಿದು ಬಂದಂತಾಡುವ ಈ ಮಹಾನ್ ನಟಿಗೆ ಕ್ಯಾರವಾನ್ ವ್ಯವಸ್ಥೆ ಮಾಡಿರಲಿಲ್ಲವಂತೆ. ಇದರಿಂದ ಈಕೆಗೆ ಶ್ಯಾನೆ ಪ್ರಾಬ್ಲಮ್ಮಾಗೋಯ್ತಂತೆ. ಕನ್ನಡ ಚಿತ್ರರಂಗದಲ್ಲಿ ಎಲ್ಲ ಮೂಲೆಗಳೂ ಒಂದೇ ಮಟ್ಟದಲ್ಲಿಲ್ಲ. ಇಲ್ಲಿ ಕಷ್ಟಪಟ್ಟು ಸಾಲಸೂಲ ಮಾಡಿ ಸಿನಿಮಾ ಮಾಡೋರೇ ಹೆಚ್ಚು. ಏನೋ ಕನಸಿಟ್ಟುಕೊಂಡು ಸಿನಿಮಾ ಮಾಡೋರು ಇಂಥವರಿಗೆ ಛಾನ್ಸು ಕೊಡೋದೇ ತಪ್ಪಾ? ಸಣ್ಣಪುಟ್ಟ ನಿರ್ಮಾಪಕರ ಬಳಿ ‘ಕ್ಯಾರವಾನ್ ಕೊಟ್ಟಿಲ್ಲ ಅಂತಾ ಕ್ಯಾತೆ ತೆಗೆದರೆ ಅವರಾದರೂ ಏನು ಮಾಡಿಯಾರು?
ಇನ್ನು ಈ ಬಗ್ಗೆ ಸ್ವತಃ ಚೆಡ್ಡಿಚಿಕ್ಕಿ ‘ನನಗೆ ಕ್ಯಾರವಾನ್ ಇಲ್ಲ ಅಂದ್ರೆ ತುಂಬಾ ಕಷ್ಟಾ… ಅಂತಾ ಪತ್ರಕರ್ತರ ಮುಂದೇನೇ ರಾಗ ಎಳೆದರೆ, ಆಕೆಯ ಮಮ್ಮಿ ‘ಅಯ್ಯೋ ಮೀಡಿಯಾದವರ ಮುಂದೆ ಏನ್ ಮಾತಾಡಿದ್ರೂ ಕಷ್ಟ. ಹಾಗೇ ಹೋಗಿಬರೆದುಬಿಡ್ತೀರಾ… ಅಂತಾ ತಾಳ ಬಾರಿಸುತ್ತಿದೆ! ಸುದ್ದಿ ಅನ್ನಿಸಿದ್ದನ್ನು ಬರೆಯೋದು ಬಿಟ್ಟು ನೀವು ಕಕ್ಕಿದ್ದನ್ನ ಸೀಟುತ್ತಾ ಕೂರಬೇಕಾ ಯವ್ವಾ?

Leave a Reply

Your email address will not be published. Required fields are marked *


CAPTCHA Image
Reload Image