One N Only Exclusive Cine Portal

ಸಂತು ಸ್ಟೋರಿ

ಕೆ. ಮಂಜು ನಿರ್ಮಾಣದಲ್ಲಿ, ಮಹೇಶ್ ರಾವ್ ನಿರ್ದೇಶಿಸುತ್ತಿರುವ, ಯಶ್-ರಾಧಿಕಾ ಪಂಡಿತ್ ನಟನೆಯ ಸಿನಿಮಾಕ್ಕೆ ಕೊನೆಗೂ ಹೆಸರು ಅಂತಿಮವಾಗಿದೆ. ಗಾಂಧಿಕ್ಲಾಸ್ ಅಥವಾ ಮಾಂಜಾ ಅನ್ನೋ ಟೈಟಲ್ ಇಡಬಹುದು ಅಂತಾ ಎಲ್ಲಾ ಕಡೆ ಸುದ್ದಿಯಾಗಿತ್ತು. ಆದರೆ ಕಡೆಗೆ ‘ಸಂತು ಸ್ಟ್ರೈಟ್ ಫಾರ್ವರ್ಡ್’ ಅನ್ನೋ ಶೀರ್ಷಿಕೆ ಅಂತಿಮವಾಗಿದೆ.
ಇಷ್ಟು ದಿನ ರಾಧಿಕಾ ಪಂಡಿತ್ ಹೆಸರಿನಲ್ಲಿ ಯಾರ್ಯಾರೋ ಟ್ವಿಟರ್ ಮತ್ತು ಫೇಸ್ ಬುಕ್ಕುಗಳಲ್ಲಿ ಫೇಕ್ ಐಡಿ ಕ್ರಿಯೇಟ್ ಮಾಡುತ್ತಿದ್ದರು. ಈಗ ಸ್ವತಃ ರಾಧಿಕಾ ಪಂಡಿತ್ ತಮ್ಮದೊಂದು ಅಪಿಷಿಯಲ್ ಟ್ವಿಟರ್ ಖಾತೆ ತೆರೆದಿದ್ದಾರೆ.
ಕನ್ನಡ ಚಿತ್ರರಂಗದ ಕ್ಯೂಟ್ ಜೋಡಿಗಳಲ್ಲಿ ಯಶ್ ಮತ್ತು ರಾಧಿಕಾಗೆ ಮೊದಲ ಸ್ಥಾನ. ಅದಕ್ಕೆ ಸರಿಯಾಗಿ ಈ ಜೋಡಿ ಈವರೆಗೆ ಜೊತೆಯಾಗಿ ನಟಿಸಿರೋ ಮೊಗ್ಗಿನ ಮನಸು, ಡ್ರಾಮಾ, ರಾಮಾಚಾರಿ ಸಿನಿಮಾಗಳು ಕೂಡಾ ಸೂಪರ್ ಹಿಟ್ಟಾಗಿವೆ. ಹೀಗಾಗುತ್ತಲೇ ಯಶ್ ಮತ್ತು ರಾಧಿಕಾ ಲವರ‍್ಸ್ ಅಂತೆ, ಅವ್ರಿಬ್ರೂ ಮದ್ವೆ ಆಗ್ತಾರಂತೆ ಮುಂತಾದ ಸುದ್ದಿಗಳು ಹರಿದಾಡಲಾರಂಭಿಸಿದ್ವು ನೋಡಿ? ಈ ಜೋಡಿಯ ಚಲನವಲನಗಳ ಮೇಲೆ ಲಕ್ಷಾಂತರ ಜೋಡಿ ಕಣ್ಣುಗಳು ನೆಟ್ಟುಬಿಟ್ಟಿವೆ! ಇಂಥಾದ್ದೊಂದು ಕ್ಯೂರಿಯಾಸಿಟಿಗೆ ತುಪ್ಪ ಸುರಿಯುವಂತೆ ಹೈದ್ರಾಬಾದ್‌ನಲ್ಲಿ ನಡೆದ ಐಫಾ ಚಿತ್ರೋತ್ಸವದಲ್ಲಿ ಯಶ್ ರಾಧಿಕಾ ಒಟ್ಟಾಗಿ ಕಾಣಿಸಿಕೊಂಡ ನಂತರ ವಿಚಾರ ಥರ ಥರದ ರೆಕ್ಕೆ ಪುಕ್ಕ ಕಟ್ಟಿಕೊಂಡು ಓಡಾಡಲಾರಂಭಿಸಿದೆ! ಐಫಾ ಚಿತ್ರೋತ್ಸವದಲ್ಲಿ ಯಶ್ ರಾಧಿಕಾ ಪಂಡಿತ್ ಜೋಡಿ ಬಿಂದಾಸಾಗಿ ಕಾಣಿಸಿಕೊಂಡಿದ್ದು ನಿಜ. ಯಾವುದೇ ಮುಚ್ಚುಮರೆಯಿಲ್ಲದೆ ಅತ್ಯಂತ ಸಹಜವಾಗಿ ಈ ಜೋಡಿ ಒಟ್ಟಿಗೇ ಕೂತು ಚಿತ್ರೋತ್ಸವವನ್ನು ಕಣ್ತುಂಬಿಕೊಂಡಿದೆಯಂತೆ. ಇದರಿಂದಾಗಿಯೇ ಯಶ್ ರಾಧಿಕಾ ನಡುವೆ ಅಫೇರ್ ಇದೆ ಎಂಬ ವಿಚಾರ ಮತ್ತೆ ಚಾಲ್ತಿಗೆ ಬಂದಂತಾಗಿತ್ತು.
ಅಷ್ಟಕ್ಕೂ ರಾಧಿಕಾ ಮತ್ತು ಯಶ್ ಬಣ್ಣದ ಲೋಕದ ಕನಸಿಟ್ಟುಕೊಂಡು ಒಟ್ಟೊಟ್ಟಿಗೇ ಆ ಜಗತ್ತಿಗೆ ಅಡಿಯಿರಿಸಿದ್ದವರು. ಸೀರಿಯಲ್ಲುಗಳಲ್ಲಿ ನಟಿಸುತ್ತಿದ್ದ ಕಾಲದಿಂದಲೂ ಇವರಿಬ್ಬರ ನಡುವೆ ಪ್ರಾಂಜರ ಸ್ನೇಹ ಚಾಲ್ತಿಯಲ್ಲಿದೆ. ನಂತರ ಇಬ್ಬರಿಗೂ ಒಟ್ಟೊಟ್ಟಿಗೇ ಗೆಲುವು ಲಭಿಸಿತ್ತು. ಇದೀಗ ರಾಧಿಕಾ ಕನ್ನಡದಲ್ಲಿ ಬಹುಬೇಡಿಕೆಯ ನಟಿ. ಯಶ್ ಯಶದ ನಾಗಾಲೋಟದಲ್ಲಿರುವ ನಟ. ಇಂಥಾ ಗೆಲುವಿನ ಸಂದರ್ಭದಲ್ಲಿಯೂ ಇವರಿಬ್ಬರ ಸ್ನೇಹ ಗಟ್ಟಿಯಾಗೇ ಇದೆ. ಅಂಥಾ ಸ್ನೇಹ ಪ್ರೀತಿಗೆ ತಿರುಗಿಕೊಂಡಿದೆ ಎಂಬುದು ಕೆಲವರ ವಾದ. ಅದು ನಿಜವಾದರೂ ಖುಷಿಯೇ!
ಹೇಗಿದ್ದರೂ ಯಶ್ ಈಗ ‘ಸ್ಟ್ರೈಟ್ ಫಾರ್ವರ್ಡ್’. ಹಾಗೇನಾದರೂ ಈ ಇಬ್ಬರ ನಡುವೆ ಖಾಸಗೀ ಗೆಳೆತನವಿದ್ದರೆ, ಅದನ್ನು ಸ್ವತಃ ಅವರೇ ಹೇಳ್ತಾರೆ ಬಿಡಿ!!

Leave a Reply

Your email address will not be published. Required fields are marked *


CAPTCHA Image
Reload Image