One N Only Exclusive Cine Portal

ಸನ್ನಾಫ್ ಬಂಗಾರ ಬಿರುಗಾಳಿ ಸೃಷ್ಟಿಸುತ್ತಾ?

ಚಿತ್ರೀಕರಣ ಆರಂಭವಾದ ಘಳಿಗೆಯಿಂದಲೂ ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಚಿತ್ರ ಶಿವರಾಜ್ ಕುಮಾರ್ ಅಭಿನಯದ ಬಂಗಾರ ಸನ್ನಾಫ್ ಬಂಗಾರದ ಮನುಷ್ಯ. ಡಾ. ರಾಜಕುಮಾರ್ ಅಭಿನಯಿಸಿದ್ದ ಎವರ್‌ಗ್ರೀನ್ ಚಿತ್ರ ಬಂಗಾರದ ಮನುಷ್ಯ. ಅದೇ ಹೆಸರಿನ ಚಿತ್ರವೊಂದರಲ್ಲಿ ಅವರ ಮಗ ಶಿವಣ್ಣ ನಟಿಸುತ್ತಿದ್ದಾರೆಂದರೆ ಸಹಜವಾಗಿಯೇ ಒಂದು ಕುತೂಹಲ ಇರುತ್ತದೆ.
ಅಂಥಾ ಅಗಾಧ ಕೌತುಕದ ಒಡ್ಡೋಲಗದಲ್ಲಿಯೇ ಈ ಚಿತ್ರ ರಾಜ್ಯಾಧ್ಯಂತ ತೆರೆ ಕಾಣುತ್ತಿದೆ!
ಯೋಗಿ ನಿರ್ದೇಶನದ ಈ ಚಿತ್ರ ಹಲವಾರು ಕಾರಣಗಳಿಂದ ಬಹು ನಿರೀಕ್ಷಿತ ಚಿತ್ರಗಳ ಸಾಲಿಗೆ ಸೇರಿಕೊಂಡಿದೆ. ಅದರಲ್ಲಿ ಈ ಚಿತ್ರ ನಿರ್ಮಾಣ ಮಾಡಿರುವುದು ಜಯಣ್ಣ ಮತ್ತು ಭೋಗೇಂದ್ರ ಎಂಬುದೂ ಒಂದು. ವಿತರಕರಾಗಿ ಜಯಣ್ಣ ಮತ್ತು ಭೋಗೆಂದ್ರ ಈಗಾಗಲೇ ಲಕ್ಕಿ ಜೋಡಿ ಅಂತ ಚಿತ್ರರಂಗದಲ್ಲಿ ಹೆಸರುವಾಸಿಯಾಗಿದ್ದಾರೆ. ಅದು ನಿರ್ಮಾಣ ಕ್ಷೇತ್ರದಲ್ಲಿಯೂ ಈ ಚಿತ್ರದ ಮುಲಕ ನಿಜವಾಗುತ್ತದೆ ಎಂಬ ಮಾತೇ ಎಲ್ಲೆಡೆ ಕೇಲಿ ಬರುತ್ತಿದೆ.
ಈ ಚಿತ್ರ ಖಂಡಿತವಾಗಿಯೂ ಭಿನ್ನ ಬಗೆಯದ್ದೊಂದು ಕಥೆಯನ್ನು ಹೊಂದಿದೆ ಮತ್ತು ಇದರಲ್ಲಿ ಶಿವಣ್ಣ ಈ ಹಿಂದಿಗಿಂತಲೂ ಬೇರೆಯದ್ದೆ ಆದ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆಂಬುದು ಚಿತ್ರ ತಂಡದ ಭರವಸೆ. ಕನ್ನಡ ಚಿತ್ರರಂಗದಲ್ಲಿ ವರ್ಣರಂಜಿತವಾದ ಥರ ಥರದ ಪಾತ್ರಗಳನ್ನು ಮಾಡಿ ಸೈ ಅನ್ನಿಸಿಕೊಂಡಿರುವವರು ಶಿವರಾಜ್ ಕುಮಾರ್. ಅವರು ಈ ಚಿತ್ರದ ಮೂಲಕ ಮತ್ತೊಂದು ಭರ್ಜರಿ ಗೆಲುವು ದಾಖಲಿಸಿಕೊಳ್ಳುವ ಎಲ್ಲ ಲಕ್ಷಣಗಳೂ ಇವೆ!

Leave a Reply

Your email address will not be published. Required fields are marked *


CAPTCHA Image
Reload Image