One N Only Exclusive Cine Portal

ಸಮಂತಾ ಅಪ್‌ಸೆಟ್ ಆಗಲು ಕಾರಣವೇನು?

ಇತ್ತೀಚೆಗಷ್ಟೇ ಮದುವೆಯಾಗಿ ಹಾಯಾಗಿ ಹನಿಮೂನ್ ಮುಗಿಸಿಕೊಂಡು ಬಂದಿರೊ ಸಮಂತಾ ಅಪ್‌ಸೆಟ್ ಮೂಡಿನಲ್ಲಿದ್ದಾಳೆ. ಇದಕ್ಕೆ ಫ್ಯಾಮಿಲಿ ಮ್ಯಾಟರ್ ಕಂಡಿತಾ ಕಾರಣವಲ್ಲ. ಬದಲಾಗಿ ತನ್ನ ಬಗ್ಗೆ ಹರಡಿಕೊಂಡಿರೋ ರೂಮರ್‌ಗಳ ಬಗ್ಗೆ ಸಮಂತಾ ವಿಪರೀತ ತಲೆ ಕೆಡಿಸಿಕೊಂಡಿದ್ದಾಳಂತೆ!
ಸಮಂತಾ ಹನಿಮೂನ್ ಮುಗಿಸಿಕೊಂಡು ಬಂದೇಟಿಗೆ ರೋಹಿತ್ ನಿರ್ದೇಶನದ ಚಿತ್ರದ ಆಡಿಯೋ ಬಿಡುಗಡೆ ಮತ್ತು ಪ್ರಚಾರ ಕಾರ್ಯದಲ್ಲಿ ಸಕ್ರಿಯಳಾಗಿದ್ದಳು. ಈ ಚಿತ್ರದ ಮೂಲಕ ಸಮಂತಾ ಮ್ಯಾನೇಜರ್ ಮಹೇಂದ್ರ ನಿರ್ಮಾಪಕನಾಗಿದ್ದಾನೆ. ಈ ಸಲುಗೆಯಿಂದ, ಆತನಿಗೆ ಸಪೋರ್ಟ್ ಮಾಡೋ ಉದ್ದೇಶದಿಂದ ಸಮಂತಾ ಈ ಚಿತ್ರದ ಪ್ರಮೋಷನ್‌ನಲ್ಲಿ ಭಾಗಿಯಾಗಿದ್ದಳಂತೆ.
ಆದರೆ ಟಾಲಿವುಡ್ ತುಂಬಾ ಈ ಚಿತ್ರವನ್ನು ಸಮಂತಾಳೇ ಹಣ ಹೂಡಿ ನಿರ್ಮಾಣ ಮಾಡಿದ್ದಾಳೆ. ಆಕೆ ತನ್ನ ಮ್ಯಾನೇಜರ್ ಮಹೇಂದ್ರನನ್ನು ಮುಂದೆ ಬಿಟ್ಟು ಚಿತ್ರ ನಿರ್ಮಾಣದ ವ್ಯವಹಾರಕ್ಕೆ ಕೈ ಹಾಕಿದ್ದಾಳೆ ಅಂತೆಲ್ಲ ಸುದ್ದಿ ಹರಡಿಕೊಂಡಿದೆ!
ತನ್ನ ಬಗ್ಗೆ ಸುಖಾಸುಮ್ಮನೆ ಹರಡಿಕೊಂಡಿರೋ ಇಂಥಾ ರೂಮರ್‌ನಿಂದ ಸಮಂತಾ ಯಾಕೋ ವಿಪರೀತ ತಲೆ ಕೆಡಿಸಿಕೊಂಡಿರುವಂತಿದೆ. ಆದ್ದರಿಂದಲೇ ಮಹೇಂದ್ರ ಕೇವಲ ತನ್ನ ಮ್ಯಾನೇಜರ್ ಮಾತ್ರವಲ್ಲ, ಅವರು ತನ್ನ ಮನೆ ಸದಸ್ಯ ಇದ್ದಂತೆ. ಅವರ ಮೊದಲ ನಿರ್ಮಾಣದ ಚಿತ್ರಕ್ಕೆ ಸಪೋರ್ಟ್ ಮಾಡೋದು ತನ್ನ ಕರ್ತವ್ಯ. ಅದಕ್ಕೆ ಹೀಗೆಲ್ಲ ಬಣ್ಣ ಹಚ್ಚಬೇಡಿ ಅಂತ ಮನವಿಯನ್ನೂ ಮಾಡಿಕೊಂಡಿದ್ದಾಳಂತೆ!

 

Leave a Reply

Your email address will not be published. Required fields are marked *


CAPTCHA Image
Reload Image