One N Only Exclusive Cine Portal

ಸಮಯದ ಹಿಂದೆ ಸವಾರಿ…

ಕನ್ನಡದಲ್ಲಿ ಕಾಂದಂಬರಿ ಆಧಾರಿತ ಚಿತ್ರಗಳೇ ಅಪರೂಪವಾಗುತ್ತಿದೆ ಅಂತೊಂದು ಕೊರಗು ಸದಭಿರುಚಿಯ ಪ್ರೇಕ್ಷಕರನ್ನು ಬಾಧಿಸುತ್ತಲೇ ಇದೆ. ಹೀಗಿರುವಾಗಲೇ ರಂಗಭೂಮಿಯಲ್ಲಿ ಕ್ರಿಯಾಶೀಲ ನಟ, ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಜನಪದ ಗಾಯಕ, ನಟ ಗುರುರಾಜ ಹೊಸಕೋಟೆ ಅವರ ಪುತ್ರ ರಾಜಗುರು ಹೊಸಾ ಪ್ರಯತ್ನವೊಂದಕ್ಕೆ ಕೈ ಹಾಕಿದ್ದಾರೆ!

ಖ್ಯಾತ ಸಾಹಿತಿ ಜೋಗಿಯವರ `ನದಿಯ ನೆನಪಿನ ಹಂಗು’ ಕಾದಂಬರಿಯನ್ನು ರಾಜಗುರು ಚಿತ್ರವಾಗಿಸಿದ್ದಾರೆ. `ಸಮಯದ ಹಿಂದೆ ಸವಾರಿ’ ಎಂಬ ಈ ಚಿತ್ರದ ಟ್ರೈಲರ್ ಕೂಡಾ ಇದೀಗ ಬಿಡುಗಡೆಯಾಗಿದೆ. ದಕ್ಷಿಣಕನ್ನಡ ಜಿಲ್ಲೆಯ ಜನಜೀವನ, ಸಾಮಾಜಿಕ, ಸಾಂಸ್ಕೃತಿಕ ಬದುಕಿನ ಘಮ ಹೊಂದಿರುವ ಈ ಟ್ರೈಲರ್ ಈಗಾಗಲೇ ಕುತೂಹಲ ಕೆರಳಿಸುವಲ್ಲಿ ಯಶ ಕಂಡಿದೆ.
ಈಗಾಗಲೇ ಪ್ರತಿಭಾವಂತ ಯುವ ಪಡೆಯ ಸಶಕ್ತವಾದೊಂದು ರಂಗತಂಡ ಕಟ್ಟಿಕೊಂಡು ನಾಟಕ ಪ್ರದರ್ಶನಗಳನ್ನು ನೀಡುತ್ತಾ ಬ್ಯುಸಿಯಾಗಿರುವವರು ರಾಜಗುರು. ಇಲ್ಲೂ ಕೂಡಾ ಸವಾಲಿನ ಪ್ರಯೋಗಗಳನ್ನು ನಡೆಸುತ್ತಾ ಜೈಸಿಕೊಂಡಿರುವ ರಾಜಗುರು ಒಂದೇ ನಾಟಕವನ್ನು ಒಂದೇ ದಿನದಲ್ಲಿ ನಾನಾ ಭಾಗಗಳಲ್ಲಿ ಪ್ರದರ್ಶನ ನೀಡಿಯೂ ಸೈ ಅನ್ನಿಸಿಕೊಂಡಿದ್ದಾರೆ. ಇವರ ಗರಡಿಯಲ್ಲಿ ಪಳಗಿದ ಪ್ರತಿಭೆಗಳೇ ಸಿನಿಮಾ ಧಾರಾವಾಹಿಗಳಲ್ಲಿಯೂ ಮಿಂಚುತ್ತಿದ್ದಾರೆ.
ಇಂಥಾ ರಾಜಗುರು ಅವರ ಮೊದಲ ಪ್ರಯತ್ನ `ಸಮಯದ ಹಿಂದೆ ಸವಾರಿ’ ಚಿತ್ರ. ಟ್ರೈಲರ್ ಇದೀಗ ಚಿತ್ರದ ಬಗ್ಗೆ ಒಂದು ಅಸೀಮ ಕುತೂಹಲ ಹುಟ್ಟು ಹಾಕುವಲ್ಲಿ ಯಶ ಕಂಡಿದೆ. ರಂಗಭೂಮಿ ಪ್ರತಿಭೆಗಳೇ ಸೇರಿ ಮಾಡಿರೋ ಈ ಚಿತ್ರವೂ ಯಶ ಕಾಣುತ್ತದೆ ಎಂಬ ಮಾತು ಪ್ರೇಕ್ಷಕರ ವಲಯದಲ್ಲಿಯೇ ಕೇಳಿ ಬರುತ್ತಿದೆ.

Leave a Reply

Your email address will not be published. Required fields are marked *


CAPTCHA Image
Reload Image