One N Only Exclusive Cine Portal

ಸಮ್ಮರ್ ಹಾಲಿಡೇಸ್ನಲ್ಲಿ ಅರ್ಪಿತಾ!

ಕವಿತಾ ಲಂಕೇಶ್ ನಿರ್ದೇಶನದ ಸಮ್ಮರ್ ಹಾಲಿಡೇಸ್ ಚಿತ್ರದಲ್ಲಿ ಲಂಕೇಶ್ ಅವರ ಮೊಮ್ಮಕ್ಕಳಾದ ಇಶಾ ಮತ್ತು ಸಮರ್‌ಜಿತ್ ನಟಿಸುತ್ತಿರೋ ವಿಚಾರ ಗೊತ್ತಿರೋದೇ. ಇದೀಗ ಈ ಚಿತ್ರದಲ್ಲಿ ಇಂದ್ರಜಿತ್ ಲಂಕೇಶ್ ಅವರ ಮಡದಿ ಅರ್ಪಿತಾ ಕೂಡಾ ಒಂದು ಪಾತ್ರದಲ್ಲಿ ನಟಿಸಿದ್ದಾರೆ.
ಕವಿತಾ ಲಂಕೇಶ್ ಮತ್ತು ಚಿತ್ರ ತಂಡ ಆರಂಭದಲ್ಲಿ ಅರ್ಪಿತಾ ಅವರಿಗೆ ಬಹು ಮುಖ್ಯ ಪಾತ್ರವೊಂದನ್ನು ನೀಡಲು ನಿರ್ಧರಿಸಿದ್ದರಂತೆ. ಆದರೆ ಸಾಫ್ಟ್‌ವೇರ್ ಉದ್ಯೋಗಿಯಾಗಿರೋ ಅರ್ಪಿತಾಗೆ ಸಮಯ ಹೊಂದಿಸೋದು ಕಷ್ಟವಾದೀತೆಂದು ಪತ್ರಕರ್ತೆಯ ಪಾತ್ರ ನಿಕ್ಕಿ ಮಾಡಿದ್ದರಂತೆ.
ಈ ಪಾತ್ರದಲ್ಲಿ ಅರ್ಪಿತಾ ಎಲ್ಲರೂ ಬೆರಗಾಗುವಂತೆ, ಅನುಭವಸ್ಥ ನಟಿಯಂತೆ ನಟಿಸಿದ್ದಾರೆಂಬ ಮೆಚ್ಚುಗೆ ಚಿತ್ರ ತಂಡದ್ದು. ಎಲ್ಲ ದೃಷ್ಯಾವಳಿಗಳನ್ನೂ ಒಂದು ಟೇಕ್ ನಲ್ಲಿಯೇ ಮುಗಿಸಿಕೊಂಡಿರೋ ಅರ್ಪಿತಾರದ್ದಿಲ್ಲಿ ಚಿಕ್ಕದಾದರೂ ಭಾರೀ ಮಹತ್ವ ಇರೋ ಟೀವಿ ಜರ್ನಲಿಸ್ಟ್ ಪಾತ್ರವಂತೆ.

Leave a Reply

Your email address will not be published. Required fields are marked *


CAPTCHA Image
Reload Image