One N Only Exclusive Cine Portal

ಸಸ್ಪೆನ್ಸ್ ಥ್ರಿಲ್ಲರ್ ವುಮೆನ್ಸ್ ಡೇ ತೆರೆಗೆ ಬರುತ್ತಿದೆ!

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ವುಮೆನ್ಸ್ ಡೇ ಎಂಬ ಶೀರ್ಷಿಕೆ ಮತ್ತು ಅದಕ್ಕೆ ತಕ್ಕುದಾಗಿ ಐವರು ಹುಡುಗೀರ ಮುಖ್ಯಭೂಮಿಕೆ… ಹಾಗಾದರೆ ಈ ಚಿತ್ರಕ್ಕೂ ವಿಶ್ವ ಮಹಿಳಾ ದಿನಕ್ಕೂ ಏನಾದರೂ ಕನೆಕ್ಷನ್ನಿರಬಹುದಾ ಎಂಬಂಥಾ ಪ್ರಶ್ನೆ. ಇದೆಲ್ಲದರ ಜೊತೆಜೊತೆಗೇ ಬಿಡುಗಡೆಯಾಗಿ ಮನ ಸೆಳೆದ ಹಾಡುಗಳು… ಇಂಥಾ ವಿದ್ಯಮಾನಗಳ ನಡುವೆಯೇ ಪ್ರೇಕ್ಷಕರಲ್ಲೊಂದು ಕೌತುಕ ಹುಟ್ಟು ಹಾಕಿರೋ ಈ ಚಿತ್ರವೀಗ ತೆರೆಗಾಣುವ ಕ್ಷಣಗಳು ಹತ್ತಿರ ಬಂದಿವೆ!
ಆರ್.ಜಿ ಗೌಡ ನಿರ್ಮಾಣದ, ಈಶ ನಿರ್ದೇಶನದ ಈ ಚಿತ್ರದ ಕಥೆಗೂ ಮಹಿಳಾ ದಿನಾಚರಣೆಗೂ ಸಂಬಂಧವಿಲ್ಲ ಅನ್ನುತ್ತಲೇ ಈ ಚಿತ್ರ ರೋಚಕವಾದ ಕಥಾ ಹಂದರ ಹೊಂದಿರೋ ಸುಳಿವನ್ನಷ್ಟೇ ಚಿತ್ರ ತಂಡ ಈ ವರೆಗೂ ಬಿಟ್ಟುಕೊಟ್ಟಿದೆ. ಸನಿಹ, ಸುಹಾನಾ, ಮೋನಿಕಾ, ಅಕ್ಷರ ಮತ್ತು ಸ್ನೇಹಾ ಎಂಬ ಐವರು ಹುಡುಗೀರು ವುಮೆನ್ಸ್ ಡೇ ಚಿತ್ರದ ಕೇಂದ್ರ ಬಿಂದುಗಳು. ಪ್ರಧಾನವಾದ ಪಾತ್ರದಲ್ಲಿ ಡೈಲಾಗ್ ಕಿಂಗ್ ಸಾಯಿ ಕುಮಾರ್ ಅಭಿನಯಿಸಿರೋದು ಮತ್ತೊಂದು ವಿಶೇಷ.
ಈ ಚಿತ್ರದ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿರೋ ಐವರು ಹುಡುಗೀರು ಸಂಭ್ರಮಾಚರಣೆಗೆಂದು ದೂರದ ಕಾಡು ಪ್ರದೇಶವೊಂದಕ್ಕೆ ಹೋದಾಗ ಎದುರಾಗೋ ರೋಚಕ ಘಟನಾವಳಿಗಳು ಚಿತ್ರದ ಪ್ರಮುಖ ಆಕರ್ಷಣೆ. ಅಂದಹಾಗೆ ಈ ಚಿತ್ರದ ಕಥೆ ಪುನರ್ಜನ್ಮದ ಎಳೆಯನ್ನೂ ಹೊಂದಿದೆಯಂತೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅಪ್ಪಟ ಮಲೆನಾಡು ಏರಿಯಾದಲ್ಲೇ ಚಿತ್ರೀಕರಣ ನಡೆದಿರೋದರಿಂದ ಪ್ರೇಕ್ಷಕರ ಕಣ್ಣುಗಳು ತಂಪಾಗೋವಂಥಾ ದೃಷ್ಯಗಳ ಸಾಲೇ ಈ ಚಿತ್ರದಲ್ಲಿವೆಯಂತೆ!
ಅಪ್ಪಟ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಮಾದರಿಯಲ್ಲಿ ಇಡೀ ಚಿತ್ರವನ್ನು ಕಟ್ಟಿಕೊಟ್ಟಿರೋ ಖುಷಿ, ಅದೆಲ್ಲವೂ ಪ್ರೇಕ್ಷಕರನ್ನು ಆವರಿಸಿಕೊಳ್ಳಲಿವೆ ಎಂಬ ಭರವಸೆ ಚಿತ್ರತಂಡದ್ದು. ಅದು ಎಷ್ಟರ ಮಟ್ಟಿಗೆ ನಿಜವಾಗಬಹುದೆಂಬುದಕ್ಕೆ ಇಷ್ಟರಲ್ಲೇ ಉತ್ತರ ಸಿಗಲಿದೆ!

copying or reproducing the above content in any format without approval is criminal offence and will be prosecuted in Bengaluru court © CINIBUZZ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Leave a Reply

Your email address will not be published. Required fields are marked *


CAPTCHA Image
Reload Image