One N Only Exclusive Cine Portal

ಸಿಂಪಲ್ ಸುನಿ-ಗಣೇಶ್ ಚಮಕ್ ಶುರು!

ಸಿಂಪಲ್ ಸುನಿ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಕಾಂಬಿನೇಷನ್ನಿನ ಮೊದಲ ಚಿತ್ರ ಚಮಕ್. ಒಂದಷ್ಟು ಕಾಲದಿಂದ ಸುದ್ದಿಯಾಗಿ, ಈಗೊಂದಷ್ಟು ದಿನಗಳ ಹಿಂದೆ ಘೋಷಣೆಯಾಗಿದ್ದ ಈ ಚಿತ್ರದ ಚಿತ್ರೀಕರಣಕ್ಕೀಗ ವಿದ್ಯುಕ್ತ ಚಾಲನೆ ಸಿಕ್ಕಿದೆ.
ಈ ಚಿತ್ರದ ಕೆಲ ಫೋಟೋಗಳೂ ಜಾಹೀರಾಗಿವೆ. ಅದರಲ್ಲಿ ಗಣೇಶ್ ಮದುಮಗನ ಗೆಟಪ್ಪಿನಲ್ಲಿ ಭಿನ್ನವಾದ ಲುಕ್ಕೊಂದರಲ್ಲಿ ಕಾಣಿಸಿಕೊಂಡಿದ್ದಾರೆ.
ಕ್ರಿಸ್ಟೆಲ್ ಪಾರ್ಕ್ ಸಿನೆಮಾಸ್ ಲಾಂಛನದಲ್ಲಿ ಟಿ ಆರ್ ಚಂದ್ರಶೇಖರ್ ನಿರ್ಮಾಣ ಮಾಡುತ್ತಿರುವ ಚಿತ್ರ ಚಮಕ್. ಇದಕ್ಕೆ ಅರ್ಜುನ್ ಜನ್ಯಾ ಸಂಗೀತ ಮತ್ತು ಸಂತೋಶ್ ರೈ ಪಾತಾಜೆ ಛಾಯಾಗ್ರಹಣ ಇರಲಿದೆ.
ಈಗಾಗಲೇ ಕ್ರಿಯಾಶೀಲ ನಿರ್ದೇಶಕರಾಗಿ ಗುರುತಿಸಿಕೊಂಡಿರೋ ಸಿಂಪಲ್ ಸುನಿ ಗಣೇಶ್ ಜೊತೆ ಸೇರಿ ಮಾಡುತ್ತಿರೋ ಮೊದಲ ಸಿನಿಮಾವಿದು. ಒಂದು ಚೆಂದದ ಕಥೆ, ಸಾಕಷ್ಟು ಪೂರ್ವತಯಾರಿಯೊಂದಿಗೆ ಫೀಲ್ಡಿಗಿಳಿದಿರೋ ಸುನಿ ಈ ಚಿತ್ರದ ಮೂಲಕ ಮತ್ತೊಮ್ಮೆ ಚಮಕ್ ತೋರಿಸಲು ಅಣಿಯಾಗಿದ್ದಾರೆ!

Leave a Reply

Your email address will not be published. Required fields are marked *


CAPTCHA Image
Reload Image