One N Only Exclusive Cine Portal

ಸಿನಿಮಾ ಹೆಸರೇ ಇಲ್ಲ!

ಸ್ಯಾಂಡಲ್‌ವುಡ್‌ನಲ್ಲಿ ಸೋಲೋ ಕ್ಯಾರೆಕ್ಟರ್ ಒಳಗೊಂಡಿರುವ ‘ಇಲ್ಲ ಸಿನಿಮಾ ತೆರೆಗೆ ಬರಲು ಸಜ್ಜಾಗುತ್ತಿದೆ.
ಸ್ಯಾಂಡಲ್‌ನಲ್ಲಿ ಹೊಸ ಸಿನಿಮಾವೊಂದು ತಯಾರಾಗುತ್ತಿದೆ. ಈ ಚಿತ್ರದ ಹೆಸರೇ ‘ಇಲ್ಲ! ರಾಜ್ ಪ್ರಭು ರಚಿಸಿ, ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರಕ್ಕೆ ಇವರೇ ನಾಯಕರು. ಈ ಮೂಲಕ ಸ್ಯಾಂಡಲ್‌ವುಡ್‌ಗೆ ಹೊಸಬರಾಗಿ ಎಂಟ್ರಿ ಕೊಡುತ್ತಿದ್ದಾರೆ.
ಹೆಸರೇ ಭಿನ್ನವಾಗಿರುವ ಈ ಚಿತ್ರ ಶಂಕರ್ ಎನ್ ನಿರ್ಮಾಣದಲ್ಲಿ ಮೂಡಿಬರುತ್ತಿದೆ. ಇಡೀ ಸಿನಿಮಾದಲ್ಲಿ ರಾಜ್ ಪ್ರಭು ಒಬ್ಬರೇ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಮನರಂಜನೆ ಹಾಗೂ ಎಮೋಷನಲ್, ಥ್ರಿಲ್ಲರ್ ಹಾಗೂ ಸಸ್ಪೆನ್ಸ್‌ನಿಂದನಿಂದ ಕೂಡಿದೆಯಂತೆ. ಕಾಡು ಹಾಗೂ ನಾಡಿನಲ್ಲಿ ವಾಸ ಮಾಡುವ ಸೈಕೋ ಕ್ಯಾರೆಕ್ಟರ್ ಸುತ್ತ ಈ ಕಥೆಯು ಎಣೆಯಲ್ಪಟ್ಟಿದೆ.
“ಇಂತದ್ದೊಂದು ಪ್ರಯೋಗಾತ್ಮಕ ಸಿನಿಮಾ ಮಾಡಬೇಕೆಂಬುದು ಹಲವು ದಿನದ ಕನಸಾಗಿತ್ತು. ನಾನೇ ರಚಿಸಿದ ಚಿತ್ರಕ್ಕೆ ನಾನೇ ನಾಯಕ. ‘ಇಲ್ಲ ಸಿನಿಮಾದಲ್ಲಿ ಸತೀಶ್ ಎಂಬ ಪಾತ್ರಧಾರಿಯಾಗಿ ೧೩ ಬಗೆಯ ವಿವಿಧ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತೇನೆ. ಪ್ರತಿಯೊಂದು ಲುಕ್‌ನಲ್ಲಿಯೂ ಹೇರ್‌ಸ್ಟೈಲ್ ಪ್ರಮುಖವಾಗಿದೆ ಎಂದು ಹೇಳುತ್ತಾರೆ ನಾಯಕ ರಾಜ್ ಪ್ರಭು.
ಅದಲ್ಲದೇ ಈ ಚಿತ್ರದಲ್ಲಿ ಏನು ಇದೆ ಅಂದುಕೊಳ್ಳುತ್ತಾರೆ ಅದು ಇಲ್ಲ. ಏನು ಇಲ್ಲ ಅಂದುಕೊಳ್ಳುತ್ತಾರೋ ಅದು ಇದೆ. ಆದ್ದರಿಂದ ಈ ಚಿತ್ರಕ್ಕೆ ‘ಇಲ್ಲ ಎಂದು ಹೆಸರಿಟ್ಟಿದ್ದೇವೆ ಎನ್ನುತ್ತಾರೆ ನಿರ್ದೇಶಕ ರಾಜ್‌ಪ್ರಭು.
ಎಲ್ ಎನ್‌ಶಾಸ್ತ್ರಿ ಇಲ್ಲವಾಗುವ ಮುನ್ನ ‘ಇಲ್ಲ ಚಿತ್ರದಲ್ಲಿ ಒಂದು ಹಾಡನ್ನು ಹಾಡಿದ್ದಾರಂತೆ. ‘ಇಲ್ಲ ಬಿಡುಗಡೆಯಾಗಿ ಗೆದ್ದನಂತರ ‘ಇಲ್ಲ-೨ ಮಾಡುವ ಯೋಚನೆಯಲ್ಲಿದ್ದಾರೆ ನಿರ್ದೇಶಕ. ಶಿವಮೊಗ್ಗದ ಕಾಡಿನ ಸುತ್ತಮುತ್ತ ಚಿತ್ರೀಕರಣ ನಡೆದಿದ್ದು, ಚಿತ್ರ ಇನ್ನೇನು ಬಿಡುಗಡೆಯ ಹಂತದಲ್ಲಿದೆ.
ಕೆ.ಎಲ್.ಎನ್.

Leave a Reply

Your email address will not be published. Required fields are marked *


CAPTCHA Image
Reload Image