One N Only Exclusive Cine Portal

ಸಿನೆಮಾ ಮಾಡಲು ಸಿನಿ ಸ್ಟೈಲಲ್ಲಿ ಕಿಡ್ನಾಪ್!

Film-03ಬೆಂಗಳೂರಿನಲ್ಲಿ ಇತ್ತೀಚೆಗೆ ಕಿರ್ಲೋಸ್ಕರ್ ಎಲೆಕ್ಟ್ರಿಕ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ವಿನಾಯಕ್ ಬಾಪಟ್ ಪುತ್ರನನ್ನು ಕಿಡ್ನಾಪ್ ಮಾಡಿದ ಸುದ್ದಿ ನೀವು ಓದಿರ್ತೀರಿ. ಈ ಸಿನೆಮಾ ಸ್ಟೈಲಿನ ಅಪಹರಣ ಪ್ರಕರಣವನ್ನು ಬೇದಿಸುವಲ್ಲಿ ಕೊನೆಗೂ ಪೋಲಿಸ್ ಇಲಾಖೆ ಯಶಸ್ವಿಯಾಗಿದೆ. ಆದರೆ ಈ ಪ್ರಕರಣಕ್ಕೂ ಗಾಂದಿನಗರಕ್ಕೂ ಸಿನಿ ಸ್ಟೋರಿಯ ಸಂಬಂಧವಿರುವುದು ಇಂಟ್ರೆಸ್ಟಿಂಕ್ ಸಂಗತಿ. ಥೇಟ್ ಸಿನಿ ಸ್ಟೈಲಿನಲ್ಲಿ ನಡೆದಿದ್ದ ಈ ಕಿಡ್ನಾಪಿಂಗ್ ಕಹಾನಿ ಹಿಂದೆ ಸ್ಯಾಂಡಲ್ ವುಡ್’ನ ಯುವ ಚಿತ್ರತಂಡದ ಕರಿನೆರಳಿದೆ. ಹೌದು..ಈ ಹಿಂದೆ ಕನ್ನಡದಲ್ಲಿ ಚಾಲೆಂಜರ್ ಎಂಬ ಚಿತ್ರ ಸೆಟ್ಟೇರಿದ್ದು ನೆನಪಿದೆಯಾ…ಅದೇ ಚಿತ್ರತಂಡದ ಹೊಸ ಕಹಾನಿ ಉದ್ಯಮಿ ವಿನಾಯಕ್ ಬಾಪಟ್ ಪುತ್ರನ ಅಪಹರಣ. ಚಾಲೆಂಜಾಗಿ ಪ್ರಾರಂಭಿಸಿದ್ದ ಚಾಲೆಂಜ್ ಚಿತ್ರ ಅರ್ಧದಲ್ಲೇ ನಿಂತಾಗ ತೋಚಿದ್ದೇ ಕಿಡ್ನಾಪ್ ಚಾಲೆಂಜ್. ಹೀಗೆ ಪೊಲೀಸರಿಗೆ ಚಾಲೆಂಜ್ ಹಾಕೋಕೆ ಹೋಗಿ ಈಗ ಕಂಬಿ challangersಹಿಂದೆ ಸರಿದಿರುವವರು ಚಾಲೆಂಜ್ ಚಿತ್ರದ ನಾಯಕ ಮುನಿಯಪ್ಪ ಉರುಫ್ ಮುನ್ನಾ ಮತ್ತು ತಂಡ. ಚಾಲೆಂಜರ್ ಮುನ್ನನಿಗೆ ಸಾಥ್ ನೀಡಿದ್ದು ಜಗನ್ನಾಥ,ಹಸನ್ ಡೊಂಗ್ರಿ,ಮನೋಜ್ ಹಾಗೂ ಜಗದೀಶ್. ಎಲ್ಲರೂ ಬಣ್ಣದ ಲೋಕದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾದವರು ಎನ್ನಲಾಗಿದೆ. ಅದರಲ್ಲೂ ಹಸನ್ ಡೋಂಗ್ರಿ ಹೆಸರು ನಟಿ ಶುಭಾ ಪೂಂಜಾ ಆಪ್ತ ಸಹಾಯಕನೆಂಬ ಹಣೆಪಟ್ಟಿ ಪಡೆದುಕೊಂಡಿದೆ. ಚಾಲೆಂಜರ್ ಚಿತ್ರವು ಅರ್ಧಕ್ಕೆ ನಿಂತಿದ್ದ ಕಾರಣ ಸಿನೆಮಾ ಪೂರ್ಣಗೊಳಿಸಲು ಬಂಡವಾಳಕ್ಕಾಗಿ ಕಿಡ್ನಾಪ್ ಮಾಡಲಾಗಿದೆ ಎಂದು ವರದಿಯಾಗಿದೆ. ಉದ್ಯಮಿ ಬಾಪಟ್ ಪುತ್ರ ಇಷಾನ್’ರನ್ನು ಅಪಹರಿಸಿ ೫೦ಲಕ್ಷ ರೂ. ಹಣ ವಸೂಲಿ ಮಾಡಿ ಚಾಲೆಂಜರ್ ಚಿತ್ರವನ್ನು ಪೂರ್ಣಗೊಳಿಸುವುದು ದುಷ್ಕರ್ಮಿಗಳ ಉದ್ದೇಶವಾಗಿತ್ತು ಎನ್ನಲಾಗಿದೆ. ಇದೀಗ ಪ್ರಕರಣವನ್ನು ಯಶಸ್ವಿಯಾಗಿ ಬೇದಿಸಿರುವ ಪೊಲೀಸ್ ಇಲಾಖೆ ಚಾಲೆಂಜರ್ ತಂಡದ ಚಾಲೆಂಜ್’ನ್ನು ಯಶಸ್ವಿಯಾಗಿ ಸ್ವೀಕರಿಸಿ ಆರೋಪಿಗಳನ್ನು ಕಂಬಿ ಎಣಿಸುವಂತೆ ಮಾಡಿದ್ದಾರೆ.
★ಕಪ್ಪು ಮೂಗುತ್ತಿ

Leave a Reply

Your email address will not be published. Required fields are marked *


CAPTCHA Image
Reload Image