One N Only Exclusive Cine Portal

ಸುಕುಮಾರ್ ಚಿತ್ರದಲ್ಲಿ ರಾಮ್ ಚರಣ್…

Actor-Ram-Charan-Teja1-forcelebrities.com_ನಾನ್ನ ಕು ಪ್ರೇಮತೋ ನಂತ್ರ ನಿರ್ದೇಶಕ ಸುಕುಮಾರ್ ಮುಂದಿನ ಸಿನಿಮಾ ಯಾರ್ ಜೊತೆ ಗೊತ್ತಾ..?

ಟಾಲಿವುಡ್ ಖ್ಯಾತ ನಿರ್ದೇಶಕ ಸುಕುಮಾರ್,, ವಿಭಿನ್ನ ಸಿನಿಮಾಗಳ ಮೂಲಕ ಗಮನ ಸೆಳೆದ ಕ್ರಿಯೇಟೀವ್ ಡೈರೆಕ್ಟರ್.. ಸುಕುಮಾರ್ ಸಿನಿಮಾ ಬರ್ತಿದೆ ಅಂದ್ರೆ ಅಲ್ಲೊಂದು ಸೆನ್ಸೇಷನಲ್ ನ್ಯೂಸ್ ಹುಟ್ಟಿಕೊಂಡಿರುತ್ತೆ.. ಸದ್ಯ ನಾನ್ನ ಕು ಪ್ರೇಮತೋ ಚಿತ್ರದ ನಂತ್ರ ಸುಕುಮಾರ್ ಸುಕುಮಾರ್ ಮುಂದಿನ ಚಿತ್ರ ಯಾವ್ದು ಅನ್ನೋದ್ರ ಬಗ್ಗೆ ಕ್ಲಾರಿಟಿ ಸಿಕ್ಕಿದೆ.

ಟಿಟೌನ್ನಲ್ಲಿ ಆರ್ಯ, ಆರ್ಯ 2 , ನೇನೊಕ್ಕಡಿನೇ. 100 ಪರ್ಸೆಂಟ್ ಲವ್ ಹೀಗೆ ಸಾಕಷ್ಟು ಸೂಪರ್ ಡೂಪರ್ ಹಿಟ್ ಚಿತ್ರಗಳ ಸಾರಥಿ ಸುಕುಮಾರ್..  ಕಳೆದ ಬಾರಿ ಸುಕುಮಾರ್ ಹಾಗು ಜ್ಯೂನಿಯರ್ ಎನ್.ಟಿ.ಆರ್ ಕಾಂಬಿನೇಷನ್ ನಲ್ಲಿ ಬಂದ ನಾನ್ನ ಕು ಪ್ರೇಮತೋ ಸಿನಿಮಾ ಕಮರ್ಷಿಯಲ್ ಆಗಿ ಗೆಲುವು ಕಾಣುವುದರ ಜೊತೆಗೆ ತಾಂತ್ರಕವಾಗಿಯೂ ಕೂಡ ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು.. ಹಾಗಾಗಿ ಈ ಸ್ಟಾರ್ ನಿರ್ದೇಶಕನ ಸಿನಿಮಾಗಳ ಮೇಲೆ ಎಲ್ಲಿಲ್ಲದ ನಿರೀಕ್ಷೆಗಳು..

ಈ ಚಿತ್ರದ ನಂತ್ರ ಸುಕುಮಾರ್ ಡೈರಕ್ಷನಲ್ ವೆಂಚರ್ ನಲ್ಲಿ ಬರ್ತಿರೋ ಮುಂದಿನ ಪ್ರಾಜೆಕ್ಟ್ ಯಾವ್ದು ಅಂತ ಸಿನಿ ಅಭಿಮಾನಿಗಳು ಎದುರುನೋಡ್ತಿದ್ರು. ಅಲ್ದೆ ಬನ್ನಿಗೆ ಆಕ್ಷನ್ ಕಟ್ ಹೇಳ್ತಾರೆ ಅನ್ನೋ ಟಾಕ್ ಇತ್ತು. ಆದ್ರೀಗ ಖುದ್ದು ಸುಕುಮಾರ್ ತಮ್ಮ ಮುಂದಿನ ಪ್ರಾಜೆಕ್ಟ್ ಮೆಗಾಸ್ಟಾರ್ ರಾಮ್ ಚರಣ್ ತೇಜ ಜೊತೆ ಅನ್ನೋದನ್ನ ಖಚಿತಪಡಿಸಿದ್ದಾರೆ.

ಅಂದಹಾಗೆ ಇದೆ ಮೊದಲ ಬಾರಿಗೆ ಈ ಸ್ಟಾರ್ಟ್ ಜೊತೆಯಾಗಿದ್ದು, ಮತ್ತಷ್ಟು ನಿರೀಕ್ಷೆಗಳು ಗರಿಗೆದರುವಂತೆ ಮಾಡಿವೆ.. ಇದು ಹಳ್ಳಿಸೊಗಡಿನ ಸಿನಿಮಾವಾಗಿದ್ದು, ಟೈಟಲ್ ಇನ್ನಷ್ಟೆ ಫಿಕ್ಸ್ ಆಗ್ಬೇಕಿದೆ.. ಸದ್ಯ ರಾಮ್ ಚರಣ್ ಧೃವ ಚಿತ್ರದಲ್ಲಿ ಬ್ಯೂಸಿಯಾಗಿದ್ದು, ತದನಂತರವಷ್ಟೇ ಈ ಚಿತ್ರ ಸೆಟ್ಟೇರಲಿದೆ ಅನ್ನುತ್ತೆ ಟಾಲಿವುಡ್ ಮೂಲಗಳು..

-ನಕ್ಷತ್ರ

Leave a Reply

Your email address will not be published. Required fields are marked *


CAPTCHA Image
Reload Image