One N Only Exclusive Cine Portal

ಸುದೀಪ್ ಹೆಮ್ಮೆಗೆ ಕಾರಣವಾದ ಕನ್ನಡ ಮೀಡಿಯಂ ರಾಜು!

ಒಂದು ಸಿನಿಮಾದ ಭಾಗವಾದದ್ದರ ಬಗ್ಗೆಯೇ ನಟ ನಟಿಯರಿಗೆ ಹೆಮ್ಮೆ ಮೂಡೋದಿದೆಯಲ್ಲಾ? ಅದಕ್ಕಿಂತಾ ಸಾರ್ಥಕತೆ ಬೇರೊಂದಿಲ್ಲ. ಸದ್ಯ ರಾಜ್ಯಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಾ ಗೆಲುವಿನ ನಾಗಾಲೋಟದಲ್ಲಿರುವ ಕನ್ನಡ ಮೀಡಿಯಂ ಚಿತ್ರದ ವಿಚಾರದಲ್ಲಿ ನಿರ್ಮಾಪಕರು, ನಿರ್ದೇಶಕರು ಸೇರಿದಂತೆ ಅದರ ಭಾಗವಾದ ಎಲ್ಲರಲ್ಲೂ ಹೆಮ್ಮೆಯ ಭಾವವಿದೆ.

  

ಇದೀಗ ಈ ಚಿತ್ರದ ಪ್ರಮುಖವಾದೊಂದು ಪಾತ್ರವನ್ನು ನಿರ್ವಹಿಸಿರುವ ಕಿಚ್ಚ ಸುದೀಪ್ ಅವರೂ ಕೂಡಾ ಟ್ವೀಟ್ ಮೂಲಕ ಇಂಥಾದ್ದೊಂದು ಸಾರ್ಥಕ ಭಾವವನ್ನು ಹೊರ ಹಾಕಿದ್ದಾರೆ.

ರಾಜು ಕನ್ನಡ ಮೀಡಿಯಂ ಚಿತ್ರ ಬಿಡುಗಡೆ ಪೂರ್ವದಲ್ಲಿಯೇ ಹುಟ್ಟಿಸಿದ್ದ ಕುತೂಹಲಗಳಲ್ಲಿ ಸುದೀಪ್ ಅವರ ನಟನೆ ಪ್ರಧಾನವಾದದ್ದು. ಸುದೀಪ್ ಈ ಚಿತ್ರದಲ್ಲಿ ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆಂ ಬುದೇ ದೊಡ್ಡ ಸುದ್ದಿಯಾಗಿತ್ತು. ಈಗ ಅವರ ಪಾತ್ರ ಪ್ರೇಕ್ಷಕರ ಮನ ಗೆದ್ದಿದೆ. ಈ ಖುಷಿಯಲ್ಲಿರುವ ಸುದೀಪ್ ತಾವು ಇಂಥಾದ್‌ದೊಂದು ಚೆಂದದ ಚಿತ್ರದ ಭಾಗವಾಗಿರೋದರೆ ಬಗ್ಗೆ ಸಂತಸ ವ್ಯಕ್ತ ಪಡಿಸಿದ್ದಾರೆ.

ರಾಜು ಕನ್ನಡ ಮೀಡಿಯಂ ಚಿತ್ರ ಸುಂದರವಾದ ಆಲೋಚನೆ ಮತ್ತು ಸ್ಫೂರ್ತಿದಾಯಕ ವಿಚಾರಗಳನ್ನು ಒಳಗೊಂಡಿದೆ. ಮನುಷ್ಯನೋರ್ವನ ಸೂಕ್ಷಾತಿಸೂಕ್ಷ್ಮ ವಿಚಾರಗಳ ಬಗ್ಗೆ ಬೆಳಕು ಚೆಲ್ಲುವ ಕಥಾ ಹಂದರ ಹೊಂದಿರುವ ಈ ಚಿತ್ರ ನನಗೂ ಥರ ಥರದ ಆಲೋಚನೆಗಳಿಗೆ ಪ್ರೇರೇಪಣೆ ನೀಡಿದೆ. ಜೀವನ ಅಂದರೇನು ಎಂಬ ಪ್ರಶ್ನೆ ಒಂದಲ್ಲ ಒಂದು ಹಂತದಲ್ಲಿ ಪ್ರತಿಯೊಬ್ಬರನ್ನೂ ಕಾಡುತ್ತದೆ. ಆಯಾ ಕಾಲಘಟ್ಟಕ್ಕೆ ತಕ್ಕಂಥಾ ಉತ್ತರಗಳೂ ಸಿಗುತ್ತವೆ. ಆದರೆ ಅಂತಿಮವೆಂಬಂತೆ ಜೀವನ ಅಂದ್ರೆ ಪ್ರತೀ ಕ್ಷಣವನ್ನೂ ಜೀವಿಸೋದು ಎಂಬ ಸಾಕ್ಷಾತ್ಕಾರವಾಗುತ್ತೆ. ಜೀವನ ಎಂಬುದು ಮೇಲ್ನೋಟಕ್ಕೆ ಸುಲಭ, ಆದರದು ಕ್ಲಿಷ್ಟ… ಇಂಥಾ ಸಂವೇದನಾಶೀಲ ಕಥೆಯನ್ನು ಸಿನಿಮಾ ಮಾಡಲು ಒಪ್ಪಿಕೊಂಡಿರೋ ನಿರ್ಮಾಪಕ ಸುರೇಶ್ ಹಾಗೂ ಅದನ್ನು ಮನಮುಟ್ಟುವಂತೆ ನಿರೂಪಣೆ ಮಾಡಿ ಚೆಂದದ ದೃಷ್ಯಕಾವ್ಯವಾಗಿಸಿರೋ ನಿರ್ದೇಶಕ ನರೇಶ್ ಅಭಿನಂದನಾರ್ಹರು. ನನ್ನನ್ನು ಈ ಚಿತ್ರದ ಭಾಗವಾಗಿಸಿದ ಇವರಿಬ್ಬರಿಗೂ ಅಭಿನಂದನೆಗಳು…

ಇದು ಸುದೀಪ್ ಕನ್ನಡ ಮೀಡಿಯಂ ರಾಜು ಬಗ್ಗೆ ಮಾಡಿರೋ ಟ್ವೀಟ್‌ನ ಒಟ್ಟಾರೆ ಸಾರಾಂಶ. ಈ ಮಾತಿನಂತೆಯೇ ಈ ಚಿತ್ರ ಎಲ್ಲರ ಭಾವಕೋಶವನ್ನು ಥರ ಥರದಲ್ಲಿ ಕೆಣಕಿದೆ. ಆ ಮೂಲಕವೇ ಆವರಿಸಿಕೊಂಡು ಯಶಸ್ವೀ ಪ್ರದರ್ಶನ ಕಾಣುತ್ತಿದೆ.

Leave a Reply

Your email address will not be published. Required fields are marked *


CAPTCHA Image
Reload Image