One N Only Exclusive Cine Portal

ಸೆಕ್ಸ್ ಸುಳಿಯಲ್ಲಿ ತಮಿಳು ಚಿತ್ರರಂಗ!

ಇಡೀ ತಮಿಳು ಚಿತ್ರರಂಗದಲ್ಲೀಗ ಸಂಚಲನವೆದ್ದಿದೆ. ಬಣ್ಣಲೋಕದಲ್ಲಿ ಥರ ಥರದ ಮೇಕಪ್ಪು ಮಾಡಿಕೊಂಡು ಸಭ್ಯರಂತೆ ಬದುಕುತ್ತಾ ನಾನಾ ಆಟ ಕಟ್ಟುವವರೆದೆಯಲ್ಲಿ ಭಯದ ನಗಾರಿ ಕಬಾರಿಸಲು ಶುರುವಿಟ್ಟಿದೆ. ಇದೆಲ್ಲದಕ್ಕೆ ಕಾರಣವಾಗಿರುವಾಕೆ ತಮಿಳುನಾಡಿನ ಫೇಮಸ್ ಸಿಂಗರ್ ಕಂ ರೇಡಿಯೋ ಜಾಕಿ ಸುಚಿತ್ರಾ ಕಾರ್ತಿಕ್!

ಸುಚಿತ್ರಾ ಒಂದರ ಹಿಂದೊಂದರಂತೆ ತಮಿಳು ಚಿತ್ರರಂಗದ ಸೆಕ್ಸ್ ಸ್ಕ್ಯಾಂಡಲ್‌ಗಳನ್ನು, ಪರ್ಸನಲ್ ಅಫೇರುಗಳನ್ನು ಸಾಕ್ಷಿ ಸಮೇತವಾಗಿ ಜಾಹೀರು ಮಾಡುತ್ತಿದ್ದಾಳೆ. ಇದೀಗ ಕನ್ನಡ ಮೂಲದ ನಟಿ ಸಂಚಿತಾ ಶೆಟ್ಟಿಯ ವಿಡಿಯೋ ಲೀಕ್ ಆಗಿದ್ದರ ಹಿಂದಿರುವವಳೂ ಇದೇ ಸುಚಿತ್ರಾ. `ತಮಿಳು ಚಿತ್ರರಂಗದ ಕಾಮುಕತನವನ್ನು ಬಟಾಬಯಲು ಮಾಡ್ತೀನಿ ಅಂತೊಂದು ಪ್ರತಿಜ್ಞೆ ಮಾಡಿರುವ ಈಕೆಯ ರೀಸೆಂಟ್ ಟಾರ್ಗೆಟ್ ತಮಿಳಿನ ಪ್ರಸಿದ್ಧ ನಟ ಕಂ ರಜನೀಕಾಂತ್ ಅಳೀಮಯ್ಯ ಧನುಷ್!
ಈಕೆ ತನ್ನ ಟ್ವಿಟರ್ ಮೂಲಕ ಧನುಷ್ ಹಾಗೂ ತೆಲುಗು ನಟಿ ತ್ರಿಶಾ ಜೊತೆಗಿರುವ ಖಾಸಗಿಯಾದ ಚಿತ್ರ ವಿಚಿತ್ರ ಭಂಗಿಗಳ ಫೋಟೋವನ್ನು ಜಾಹೀರು ಮಾಡಿದ್ದಾಳೆ. ಪಕ್ಕಾ ಖಾಸಗಿಯಾದ ಈ ಫೋಟೋಗಳೇ ತ್ರಿಶಾ ಮತ್ತು ಧನುಷ್ ನಡುವೆ ಬೇರೆ `ವ್ಯವಹಾರಗಳಿರುವ ಹೊಳಹನ್ನೂ ಬಿಟ್ಟು ಕೊಡುವಂತಿವೆ.
ಇದೆಲ್ಲ ಹಾಗಿರಲಿ. ರೇಡಿಯೋ ಜಾಕಿ ಹಾಗೂ ಸಿಂಗರ್ ಆಗಿ ಒಂದಷ್ಟು ಜನಪ್ರಿಯತೆ ಮತ್ತು ಕೈ ತುಂಬಾ ಕಾಸು ಹೊಂದಿರೋ ಈ ಹೆಣ್ಣುಮಗಳು ಸುಚಿತ್ರಾ ಯಾಕೆ ಹೀಗೆ ತಮಿಳು ಚಿತ್ರ ರಂಗದ ಕಾಮ ಪುರಾಣ ಬಗೆದು ಹೊರ ಹಾಕಲು ನಿಂತಿದ್ದಾಳೆ. ಭಾರೀ ಪ್ರಭಾವ ಹೊಂದಿರೋ ಧನುಷ್‌ನನ್ನ ಆಕೆ ಯಾಕೆ ಟಾರ್ಗೆಟ್ ಮಾಡಿದ್ದಾಳೆ ಎಂಬೆಲ್ಲ ಪ್ರಶ್ನೆಗಳು ಹುಟ್ಟೋದು ಸಹಜವೇ. ಈ ಬಗ್ಗೆ ಕೆದಕಿದರೆ ಕೆಲ ಭಯಾನಕ ಅಂಶಗಳು ಜಾಹೀರಾಗುತ್ತವೆ.
ಸುಚಿತ್ರಾ ಆರಂಭದಿಂದಲೂ ಚಿತ್ರರಂಗದಲ್ಲಿ ಗಾಯಕಿಯಾಗಿ ಗುರುತಿಸಿಕೊಂಡಾಕೆ. ನೋಡಲೂ ಚೆಂದಗಿದ್ದಾಳೆ. ಈಕೆ ತಮಿಳು ಕಿರುತೆರೆ ಮತ್ತು ಚಿತ್ರರಂಗದಲ್ಲಿ ಪ್ರಸಿದ್ಧ ನಟನಾಗಿರುವ ಕಾರ್ತಿಕ್‌ನನ್ನು ಮದುವೆಯಾಗಿದ್ದಾಳೆ. ಈ ಸಂಸಾರವೂ ಚೆಂದಗಿದೆ. ಇಂಥಾ ಹೊತ್ತಲ್ಲಿ ಈಕೆ ಕಾಮುಕರ ಮೇಲೆ ತಿರುಗಿ ಬೀಳಲು ಕಾರಣವಾಗಿರೋದು ಆಕೆಯ ಮೇಲೆ ನಡೆದಿರೋ ರೇಪ್ ಎಂಬ ವಿಚಾರವೀಗ ಎಲ್ಲೆಡೆ ಹರಿದಾಡುತ್ತಿದೆ. ಈಕೆಯ ಮೇಲೆ ರೇಪ್ ಮಾಡಿದವರು ಧನುಷ್ ಮತ್ತು ಆತನ ಗೇಣೇಕ್ಕಾರ, ಖ್ಯಾತ ಯುವ ಸಂಗೀತ ನಿರ್ದೇಶಕ ಅನಿರುದ್ಧ್ ಎಂಬ ರೂಮರುಗಳೂ ಕಾಳ್ಗಿಚ್ಚಿನಂತೆ ಹರಡುತ್ತಿವೆ.
ಹೀಗೆ ತನ್ನ ಮೇಲೆ ರೇಪ್ ನಡೆದಿರೋದರಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ಸುಚಿತ್ರಾ ಇದೀಗ ತಮಿಳು ಚಿತ್ರರಂಗದ ಕಾಮಪುರಾಣ ಜಾಹೀರು ಮಾಡಲು ನಿಂತಿದ್ದಾಳಾ ಅನ್ನೋ ಅನುಮಾನವೂ ಕಾಡುತ್ತಿದೆ.
ಆದರೆ, ಸುಚಿತ್ರಾಳ ಟ್ವಿಟರ್ ಕದನ ತಾರಕಕ್ಕೇರುತ್ತಲೇ ಆಕೆಯ ಪತಿ ಕಂ ನಟ ಕಾರ್ತಿಕ್ ಈ ಬಗ್ಗೆ ಮಾತಾಡಿದ್ದಾರೆ. ತನ್ನ ಹೆಂಡತಿ ಮಾನಸಿಕವಾಗಿ ಡಿಸ್ಟರ್ಬ್ ಆಗಿದ್ದಾಳೆ. ಆಕೆ ಎಮೋಷನಲ್ ಮೂಡಿನಲ್ಲಿದ್ದಾಳೆ. ಈಗ ಆಕೆಯ ಟ್ವಿಟರ್‌ನಿಂದ ಜಾಹೀರಾಗುತ್ತಿರೋ ವಿಚಾರಗಳಿಗೂ ಆಕೆಗೂ ಸಂಬಂಧವಿಲ್ಲ. ತನ್ನ ಮಡದಿಯ ಟ್ವಿಟರ್ ಅಕೌಂಟನ್ನ ಯಾರೋ ಹ್ಯಾಕ್ ಮಾಡಿದ್ದಾರೆ ಅಂತೆಲ್ಲ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.
ಆದರೆ, ಈ ಮೂಲಕ ತಮಿಳು ಚಿತ್ರರಂಗದ ಕಾಮುಕ ಪ್ರವರಗಳು ಒಂದರ ಹಿಂದೊಂದರಂತೆ ಜಾಹೀರಾಗುತ್ತಿವೆ!

Leave a Reply

Your email address will not be published. Required fields are marked *


CAPTCHA Image
Reload Image