One N Only Exclusive Cine Portal

ಸೋಡಾಬುಡ್ಡಿಗಳ ಆಣೆ ಪ್ರಮಾಣ ಫಲಿಸುತ್ತಾ?

ನಮ್ಮ ಸಿನಿಮಾ ಸೂಪರ್ ಹಿಟ್ ಆಗೋದು ಗ್ಯಾರೆಂಟಿ. ರಿಲೀಸಾಗಿ ವಾರದೊಪ್ಪತ್ತಿಗೆ ಸಕ್ಸಸ್ ಮೀಟಲ್ಲಿ ನಿಮ್ಮನ್ನೆಲ್ಲಾ ಮೀಟ್ ಮಾಡ್ತೀವಿ ಅಂತಾ ಅದೆಷ್ಟು ಸಿನಿಮಾಗಳ ನಿರ್ಮಾಪಕ, ನಿರ್ದೇಶಕರು ಪತ್ರಕರ್ತರ ತಲೆ ಮೇಲೆ ಆಣೆ ಮಾಡಿಹೋಗಿದ್ದಾರೋ. ಇಂಥವರಲ್ಲಿ ನುಡಿದಂತೆ ನಡೆದವರು ಬಹಳಾ ವಿರಳ.
ಈಗ ‘ಸೋಡಾಬುಡ್ಡಿ’ ಅನ್ನೋ ಸಿನಿಮಾದವರು ಕೂಡಾ ತಾವು ಗೆಲ್ಲೋದು ಖಚಿತ ಅಂತಾ ರಿಲೀಸಿಗೆ ಮುಂಚೆಯೇ ಅಫಿಡವಿಟ್ಟು ಕೊಟ್ಟಿದ್ದಾರೆ. ಯಾರೂ ಊಹಿಸದಂತಾ, ಎಲ್ಲೂ ಬಂದಿರದ ಕಥೆಯೊಂದನ್ನು ಸಿನಿಮಾ ರೂಪದಲ್ಲಿ ಸಿದ್ದಗೊಳಿಸಿದ್ದಾರಂತೆ.
ಋಷಿ ಅನ್ನೋ ಹುಡುಗ ಹೀರೋ ಆಗಿ ನಟಿಸುತ್ತಿರುವ ಮೊದಲ ಚಿತ್ರವಿದು. ತಮ್ಮ ಮಗನ ಮೇಲಿನ ಮಮಕಾರಕ್ಕೆ ಸ್ವತಃ ಅವರ ತಂದೆಯೇ ಹಣ ಹೂಡಿ ಈ ಚಿತ್ರ ನಿರ್ಮಿಸಿದ್ದಾರೆ.
‘ಸೋಡಾಬುಡ್ಡಿ’ಗಳ ಓವರ್ ಕಾನ್ಫಿಡೆನ್ಸು ರುಜುವಾತಾಗಲು ಇನ್ನೊಂದು ವಾರ ಸಮಯಾವಕಾಶವಿದೆ. ನೋಡೋಣ ಗೆಲ್ಲೋದು ಗ್ಯಾರೆಂಟಿನಾ ಅಂತಾ.. ಹಾಗೊಮ್ಮೆ ಕನ್ನಡದ ಸಿನಿಮಾವೊಂದು ಗೆದ್ದರೆ ನಮಗಿಂತಾ ಖುಷಿ ಪಡೋರುಂಟೇ?

Leave a Reply

Your email address will not be published. Required fields are marked *


CAPTCHA Image
Reload Image