One N Only Exclusive Cine Portal

ಸ್ಪೈಡರ್‌ಗೆ ಸೆಡ್ಡು ಹೊಡೆದು ಗೆದ್ದ ತಾರಕ್!

ಪರಭಾಷಾ ಚಿತ್ರಗಳ ಹಾವಳಿಯಿಂದ ಕನ್ನಡ ಚಿತ್ರಗಳು ಅಡಿಗಡಿಗೆ ನಾನಾ ಬಾಧೆಗಳನ್ನು ಅನುಭವಿಸುತ್ತಲೇ ಬಂದಿವೆ. ಅದರಲ್ಲಿಯೂ ಪ್ರಿನ್ಸ್ ಮಹೇಶ್ ಬಾವುವಂ
ಥಾ ಹೀರೋಗಳ ಚಿತ್ರ ಬಿಡುಗಡೆಯಾಗುತ್ತದೆ ಎಂದರೆ ಅದರೆದುರು ಕನ್ನಡ ಚಿತ್ರ ಬಿಡುಗಡೆ ಮಾಡಲೂ ಎದೆ ಅದುರುವಂಥಾ ವಾತಾವರಣವಿದೆ. ಆದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ತಾರಕ್ ಮಹೇಶ್ ಬಾಬು ನಟನೆಯ ‘ಸ್ಪೈಡರ್ ಚಿತ್ರಕ್ಕೇ ಸೆಡ್ಡು ಹೊಡೆದು ಗೆದ್ದಿದೆ!
ದರ್ಶನ್ ಅಭಿನಯದ ತಾರಕ್ ಚಿತ್ರ ಭಾರೀ ಮೋಡಿ ಮಾಡಿ ಮುನ್ನುಗ್ಗುತ್ತಿದೆ. ಅತ್ತ ಅಭಿಮಾನಿಗಳಿಗೂ ಮುದ ನೀಡಿ ಇತ್ತ ಫ್ಯಾಮಿಲಿ ಪ್ರೇಕ್ಷಕರನ್ನೂ ಸೆಳೆದುಕೊಂಡಿರೋ ತಾರಕ್ ಹಿಟ್ ಚಿತ್ರವಾಗಿ ದಾಖಲಾಗಿದೆ. ಆದರೆ ಪ್ರಿನ್ಸ್ ಮಹೇಶ್ ಬಾಬು ಸ್ಪೈಡರ್ ಮುಂದೆ ತಾರಕ್ ನಿಲ್ಲೋದು ಕಷ್ಟ ಎಂಬ ವಾತಾವರಣ ಅಕ್ಷರಶಃ ಸುಳ್ಳಾಗಿದೆ. ಇದು ದರ್ಶನ್ ಚಿತ್ರದ ಅಸಲೀ ಖದರ್ ಎಂಬ ಮೆಚ್ಚುಗೆಯ ಮಾತುಗಳೂ ಎಲ್ಲೆಡೆ ಕೇಳಿ ಬರುತ್ತಿದೆ.
ಅಷ್ಟಕ್ಕೂ ಮಹೇಶ್ ಬಾಬು ಅವರಿಗೆ ಕರ್ನಾಟಕದಲ್ಲಿಯೂ ದೊಡ್ಡದೊಂದು ಅಭಿಮಾನಿ ಬಳಗ ಇದೆ. ಈ ಸ್ಪೈಡರ್ ಅಂತೂ ಮಹೇಶ್ ಬಾಬು ವೃತ್ತಿ ಜೀವನದಲ್ಲಿಯೇ ಬಿಗ್ ಬಜೆಟ್ ಚಿತ್ರ. ಅದಕ್ಕೂ ಮೇಲಾಗಿ ಗಜಿನಿ, ಸ್ಟಾಲಿನ್, ತುಪಾಕಿ, ಕತ್ತಿಯಂಥಾ ಸೂಪರ್ ಹಿಟ್ ಚಿತ್ರ ಕೊಟ್ಟ ಮುರುಗದಾಸ್ ನಿರ್ದೇಶನದ ಚಿತ್ರ ಸ್ಪೈಡರ್.
ಇಂಥಾ ಚಿತ್ರದ ಮುಂದೆ ಕಾಲೂರಿ ನಿಂತು ಸೆಡ್ಡು ಹೊಡೆದು ಗೆದ್ದಿರೋದು ತಾರಕ್ ಚಿತ್ರದ ಅಸಲೀ ಹೆಗ್ಗಳಿಕೆ!

 

Leave a Reply

Your email address will not be published. Required fields are marked *


CAPTCHA Image
Reload Image