One N Only Exclusive Cine Portal

ಸ್ಯಾಂಡಲ್’ವುಡ್ ‘ಯುವರಾಜ’ನಿಗೆ ಸ್ಟಾರ್ ನಿರ್ದೇಶಕನ ಆ್ಯಕ್ಷನ್ ಕಟ್

puriಸ್ಯಾಂಡಲ್ ವುಡ್’ನ ಚಿರಯುವಕ ಡಾ| ಶಿವರಾಜ್ ಕುಮಾರ್’ಗೆ ತೆಲುಗಿನ ಸ್ಟಾರ್ ನಿರ್ದೇಶಕ ಪೂರಿ ಜಗನ್ನಾಥ್ ಮತ್ತೆ ಆ್ಯಕ್ಷನ್ ಕಟ್ ಹೇಳಲಿದ್ದಾರಾ…? ಈ ಪ್ರಶ್ನೆಗೆ ಸ್ವಂತಃ ಶಿವಣ್ಣ ಎಸ್ ಅಂದಿದ್ದಾರೆ. ಇನ್ನೂ ಅಧಿಕೃತವಾಗಿ ಪ್ರಕಟಗೊಳ್ಳದಿದ್ದರೂ ಹೊಸ ಚಿತ್ರದ ಬಗ್ಗೆ ಒಂದು ಹಂತದ ಮಾತುಕತೆ ನಡೆದಿದೆ. 2001ರಲ್ಲಿ ತೆರೆಗೆ ಬಂದ ‘ಯುವರಾಜ’ ಚಿತ್ರದಲ್ಲಿ ಟಾಲಿವುಡ್ ಡೈರೆಕ್ಟರ್ ಪೂರಿ ಜಗನ್ನಾಥ್ ಮತ್ತು ಕರುನಾಡ ಚಕ್ರವರ್ತಿ ಶಿವಣ್ಣ ಜೊತೆಯಾಗಿದ್ದರು. ಅಲ್ಲದೆ ಯುವರಾಜ ಚಿತ್ರವು ಬಾಕ್ಸಾಫೀಸ್ನಲ್ಲಿ ಭರ್ಜರಿ ಯಶಸ್ಸು ಸಾಧಿಸಿತ್ತು. ಇದೀಗ ೧೬ವರ್ಷದ ಬಳಿಕ ಶಿವಣ್ಣನೇ ‘ಯುವರಾಜ’ ಚಿತ್ರ ನಿರ್ದೇಶಕನ ಸಿನೆಮಾದಲ್ಲಿ ಕಾಣಿಸಿಕೊಳ್ಳುವ ಕ್ಲೂ ನೀಡಿರುವುದು ಅಭಿಮಾನಿಗಳಲ್ಲಿ ಹೊಸ ಪುಳಕವನ್ನುಂಟು ಮಾಡಿದೆ. ಚಿತ್ರದ ಟೈಟಲ್, ನಿರ್ಮಾಪಕ ಯಾರೆಂಬ ಬಗ್ಗೆ ಸ್ಯಾಂಡಲ್ ವುಡ್ ಕಿಂಗ್ ಎಲ್ಲೂ ಮಾಹಿತಿ ನೀಡದೇ ನಿಗೂಢವಾಗಿರಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಶೀಘ್ರದಲ್ಲೇ ಸ್ಯಾಂಡಲ್ ವುಡ್ ‘ಯುವರಾಜ’ ‘ಕಿಂಗ್’ ಆಗಿ ಮುಹೂರ್ತ ಆಚರಿಸಲಿರುವುದು ಪಕ್ಕಾ ಎನ್ನುತ್ತಿದೆ ಗಾಂಧಿನಗರ ಮೂಲಗಳು.
★ಕಪ್ಪು ಮೂಗುತ್ತಿ

Leave a Reply

Your email address will not be published. Required fields are marked *


CAPTCHA Image
Reload Image