Connect with us

ಪೆಟ್ಟಿ ಅಂಗಡಿ

ಹಣಕ್ಕಾಗಿ ಪ್ರೀತಿಸೋ ನಾಟಕವಾಡಿದಳಾ ಮಿಂಚುಳ್ಳಿ ಪ್ರಿಯಾಂಕಾ ಚಿಂಚೋಳ್ಳಿ?

Published

on

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಅದ್ದೂರಿ ಮೇಕಿಂಗ್‌ನಿಂದ ಸದ್ದು ಮಾಡಿದ್ದ ಧಾರಾವಾಹಿ ಹರ ಹರ ಮಹಾದೇವ. ಈ ಸೀರಿಯಲ್ಲಿನಲ್ಲಿ ಪಾರ್ವತಿಯಾಗಿ ಮಿಂಚಿದ್ದ ಪ್ರಿಯಾಂಕಾ ಚಿಂಚೋಳ್ಳಿ ಎಂಬ ಮಿಂಚುಳ್ಳಿ ಇದೀಗ ಯುವಕನೊಬ್ಬನಿಗೆ ಪ್ರೀತಿಯ ಹೆಸರಲ್ಲಿ ಮೋಸ ಮಾಡಿದ ಆರೋಪ ಹೊತ್ತು ಸುದ್ದಿಯಲ್ಲಿದ್ದಾಳೆ. ವರ್ಷದಿಂದೀಚೆಗೆ ಜೆಪಿ ನಗರದ ಹುಡುಗನನ್ನು ಪ್ರೀತಿಸುವ ನಾಟಕವಾಡಿ ಸರಿಯಾಗಿಯೇ ಫಾಯಿದೆ ಗಿಟ್ಟಿಸಿಕೊಂಡು ಮತ್ತೊಂದೆಡೆ ಮತ್ತೋರ್ವ ಸೀರಿಯಲ್ ನಟನ ಜೊತೆ ಚಕ್ಕಂದವಾಡುತ್ತಾ ಮಹಾ ಮೋಸ ಮಾಡಿದ ಆರೋಪ ಈ ಸೀರಿಯಲ್ ಪಾರ್ವತಿ ಹೆಗಲೇರಿಕೊಂಡಿದೆ. ಕಳೆದ ನಾಲ್ಕೈದು ದಿನಗಳಿಂದ ಈಕೆಯ ವಿರುದ್ದ ಹುಡುಗನೊಬ್ಬ ಮಾತಾಡಿರುವ ವಿಡಿಯೋ ವೈರಲ್ ಆಗುತ್ತಿದೆ.

ಪಾರ್ವತಿ ಖ್ಯಾತಿಯ ಪ್ರಿಯಾಂಕ ಚಿಂಚೋಳ್ಳಿ ಬಗ್ಗೆ ಪ್ರೀತಿಸಿ ಕೈಯೆತ್ತಿದ ಆರೋಪ ಮಾಡಿರುವಾತ ಬೆಂಗಳೂರಿನ ಜೆ.ಪಿ ನಗರದ ಸಾಯಿರಾಂ. ಈತ ಮೂಲತಃ ಹಣದ ಕುಳ. ಮೊಳಕಾಲ್ಮೂರು ಶಾಸಕ ಶ್ರೀರಾಮುಲು ಬೆಂಬಲಿಗನಂತೆ. ಇಂಥಾ ಸಾಯಿರಾಂ ಇದೀಗ ವೀಡಿಯೋ ಮೂಲಕ ನಟಿ ಪ್ರಿಯಾಂಕಾ ವಿರುದ್ಧ ಘನ ಗಂಭೀರವಾದ ಆರೋಪ ಮಾಡಿದ್ದಾನೆ!

ಸಾಯಿರಾಂ ಪ್ರಕಾರವಾಗಿ ನೋಡ ಹೋದರೆ ಇದು ಒಂದು ವರ್ಷದ ಪ್ರೀತಿ. ಈಗ್ಗೆ ವರ್ಷದ ಹಿಂದೆ ಸಾಯಿರಾಂನನ್ನು ಪರಿಚಯ ಮಾಡಿಕೊಂಡಿದ್ದ ಪ್ರಿಯಾಂಕಾ ಪ್ರೀತಿಯ ನಾಟಕ ಶುರುವಿಟ್ಟುಕೊಂಡಿದ್ದಳು. ಆದರೆ ಸಾಯಿರಾಂ ಮಾತ್ರ ಅದನ್ನು ಸೀರಿಯಸ್ಸಾಗಿಯೇ ನಂಬಿ ಬಿಟ್ಟಿದ್ದ. ಒಂದು ಸಣ್ಣ ಸುಳಿವನ್ನೂ ಕೊಡದಂತೆ ಈ ಪ್ರೀತಿಯ ಆಟ ವನ್ನು ಚಾಲ್ತಿಯಲ್ಲಿಟ್ಟಿದ್ದಳು. ಬರ ಬರುತ್ತಾ ಈ ಪ್ರೀತಿಯಲ್ಲಿ ಸಂಪೂರ್ಣವಾಗಿ ಮುಳುಗಿ ಹೋಗಿದ್ದ ಸಾಯಿರಾಂ ಕೂಡಾ ಪ್ರಿಯಾಂಕಾಗಾಗಿ ಧಾರಾಳವಾಗಿಯೇ ಖರ್ಚು ಮಾಡಿದ್ದ.

ಇಂಥಾ ವರ್ಷದ ಪ್ರೀತಿ ಕ್ಲೈಮ್ಯಾಕ್ಸ್ ಹಂತ ತಲುಪಿಕೊಂಡಿದ್ದ ವಾರದ ಹಿಂದೆ ನಡೆದಿದ್ದ ಗೋವಾ ಟ್ರಿಪ್ಪಿನಲ್ಲಿ. ಆ ಹೊತ್ತಿಗೆಲ್ಲಾ ಸಾಯಿರಾಂನನ್ನು ಪ್ರಿಯಾಂಕಾ ತನ್ನ ತಾಯಿಗೂ ಪರಿಚಯ ಮಾಡಿಸಿದ್ದಳು. ನೀನೇ ನನ್ನ ಅಳೀಮಯ್ಯ ಅಂತಲೂ ಪ್ರಿಯಾಂಕಾ ತಾಯಿಯ ಕಡೆಯಿಂದಲೇ ಗ್ರೀನ್ ಸಿಗ್ನಲ್ ಬಂದಿತ್ತು. ಅದೇ ಆವೇಗದಲ್ಲಿ ಸಾಯಿರಾಂ ಮೊಣಕೈನ ಉದ್ದಕ್ಕೆ ಪ್ರಿಯಾಂಕಾ ಹೆಸರಿನ ಟ್ಯಾಟೂ ಹಾಕಿಸಿಕೊಂಡಿದ್ದ. ಇದಾದ ನಂತರ ಇಬ್ಬರೂ ಸೇರಿ ಗೋವಾಗೆ ಟ್ರಿಪ್ ಕೂಡಾ ಹೋಗಿ ಬಂದಿದ್ದರು. ಆದರೆ ಇದಾಗಿ ವಾರ ಕಳೆಯುವಷ್ಟರಲ್ಲಿ ಮಿಂಚುಳ್ಳಿ ಪ್ರಿಯಾಂಕಾ ಸಾಯಿರಾಂ ಬೆಚ್ಚಿ ಬೀಳುವಂತೆ ವರಸೆ ಬದಲಾಯಿಸಿದ್ದಾಳೆ.

ಗೋವಾ ಟ್ರಿಪ್ಪಿಂದ ವಾಪಾಸಾದ ನಂತರ ಏಕಾಏಕಿ ಸಾಯಿರಾಂನ ಕರೆಯನ್ನೂ ಅವಾಯ್ಡ್ ಮಾಡಲಾರಂಭಿಸಿದ್ದ ಪ್ರಿಯಾಂಕಾ ಪೂರ್ತಿಯಾಗಿ ಉಲ್ಟಾ ಹೊಡೆದಿದ್ದಾಳೆ. ತಾನು ಫೇಮಸ್ ಸೀರಿಯಲ್ ನಟಿ. ಸೆಲೆಬ್ರಿಟಿ. ಆದರೆ ನೀನು ಕಾಮನ್‌ಮ್ಯಾನ್. ನಿನ್ನನ್ನು ಮದುವೆಯಾಗಲು ಸಾಧ್ಯವೇ ಇಲ್ಲ ಅಂದಿದ್ದಾಳೆ. ಇದರಿಂದ ಗಾಬರಿಯಾದ ಸಾಯಿರಾಂ ಮತ್ತಷ್ಟು ದುಂಬಾಲು ಬಿದ್ದಾಗ ನೀನ್ಯಾರೆಂದು ಗೊತ್ತೇ ಇಲ್ಲ ಅಂತ ಕಡ್ಡಿ ಮುರಿದಂತೆ ಹೇಳಿದ್ದಾಳೆ. ನಂತರ ಸಾಯಿರಾಂ ತನ್ನ ಭಾವೀ ಅತ್ಚತೆಯನ್ನು ಸಂಪರ್ಕಿಸಿದಾಗ ಅತ್ತಲಿಂದಲೂ ಮಳ್ಳ ಉತ್ತರವೇ ಎದುರಾದಾಗ ಈ ಹುಡುಗನಿಗೆ ವರ್ಷದಿಂದೀಚೆಗೆ ನಿರಂತರವಾಗಿ ಪಿಗ್ಗಿ ಬಿದ್ದ ವಾಸ್ತವದ ಅರಿವಾಗಿದೆ!

ಅಂದಹಾಗೆ ಈ ಪ್ರಿಯಾಂಕಾ ಚಿಂಚೋಳ್ಳಿ ಹಣವಂತ ಯುವಕರನ್ನು ಬುಟ್ಟಿಗೆ ಹಾಕಿಕೊಂಡು ವಯ್ಯಾರದಿಂದಲೇ ಪ್ರೀತಿಯ ಹೆಸರಲ್ಲಿ ಕಾಸು ಕೀಳುತ್ತಾಳೆಂಬ ಆರೋಪವನ್ನೂ ಕೂಡಾ ಸಾಯಿರಾಂ ಮಾಡಿದ್ದಾನೆ. ಇದು ಅದೆಷ್ಟು ನಿಜವೋ ಗೊತ್ತಿಲ್ಲ ಆದರೆ ಗುಲ್ಬರ್ಗಾದ ಹುಡುಗಿ ಪ್ರಿಯಂಕಾ ವಿರುದ್ಧ ಇಂಥಾ ರೂಮರುಗಳು ಹುಟ್ಟಿಕೊಂಡಿರೋದಂತೂ ನಿಜ. ಇದೆಲ್ಲ ಹಾಳು ಬೀಳಲಿ. ಹೀಗೆ ಸಾಯಿರಾಂಗೆ ಪ್ರಿಯಾಂಕಾ ಏಕಾಏಕಿ ತಿರುಮಂತ್ರ ಹಾಡಲು ಕಾರಣವೇನು ಅಂತ ನೋಡ ಹೋದರೆ ಆಕೆಯ ಎರಡು ದೋಣಿಯ ಪಯಣ ಮತ್ತು ಮತ್ತೊಂದು ಪೊಗದಸ್ತಾದ ಪ್ರೇಮ ಪ್ರಸಂಗ ಜಾಹೀರಾಗುತ್ತದೆ. ಅಲ್ಲಿ ಮತ್ತೋರ್ವ ಆಸಾಮಿಯೂ ಕಾಣಿಸಿಕೊಳ್ಳುತ್ತಾನೆ. ಆತ ಕಿರುತೆರೆ ನಟ ಶಿಶಿರ್ ಶಾಸ್ತ್ರಿ!

ಕಲರ್ಸ್ ಕನ್ನಡ ವಾಹಿನಿಯಲ್ಲಿ ವರ್ಷಾಂತರಗಳ ಕಾಲ ರೋದನೆಯಂತೆ ಪ್ರಸಾರವಾಗುತ್ತಿರೋ ಕುಲವಧು ಧಾರಾವಾಹಿಯ ಮೂಲಕ ಕಿರುತೆರೆ ಪ್ರೇಕ್ಷಕರ ನಡುವೆ ವೇದ್ ಅಂತಲೇ ಪರಿಚಿತನಾಗಿರುವಾತ ಶಿಶಿರ್ ಶಾಸ್ತ್ರಿ. ಇಂಥಾ ವೇದ್ ಒಂದು ಮೂಲದ ಪ್ರಕಾರ ವರ್ಷದಿಂದೀಚೆಗೆ ಪ್ರಿಯಾಂಕಾಳ ಸಂಪರ್ಕದಲ್ಲಿದ್ದಾನೆ. ಒಂದು ರೇಂಜಿಗೆ ಸೀರಿಯಸ್ಸಾಗಿಯೇ ಇವರಿಬ್ಬರ ನಡುವೆ ಪ್ರೇಮ ವ್ಯವಹಾರ ನಡೆಯುತ್ತಿದೆ. ಇವರಿಬ್ಬರ ನಡುವೆ ನಡೆದಿರೋ ಹಸಿಬಿಸಿ ಚಾಟಿಂಗ್ ವಿವರಗಳೇ ಎಲ್ಲವನ್ನೂ ಏಳುತ್ತವೆ. ಮದುವೆ ಮಗು ಮುಂತಾದ ಚರ್ಚೆಗಳೂ ಕೂಡಾ ಶಿಶಿರ್ ಮತ್ತು ಪ್ರಿಯಾಂಕಾ ನಡುವೆ ನಡೆದಿದೆ. ಹಾಗಾದರೆ ಪ್ರಿಯಾಂಕಾ ಶಿಶಿರ್ ಎಂಬ ಸ್ಫುರದ್ರೂಪಿಯ ಜೊತೆ ಪ್ರೀತಿಯಲ್ಲಿ ಬಿದ್ದಿರುವಾಗಲೇ ಸಾಯಿರಾಂ ಎಂಬ ಶ್ರೀರಾಮುಲನ ಭಂಟನನ್ನೇಕೆ ಪ್ರೀತಿಸೋ ನಾಟಕವಾಡಿದಳು ಂತೊಂದು ಪ್ರಶ್ನೆ ಉದ್ಭವಿಸೋದು ಸಹಜ.

ಇದಕ್ಕೆ ಉತ್ತರ ಹುಡುಕುತ್ತಾ ಹೋದರೆ ಹಣ ಪೀಕುವ ಉದ್ದೇಶವಲ್ಲದೆ ಬೇರೇನೂ ಕಾಣಿಸುವುದಿಲ್ಲ. ಅಷ್ಟಕ್ಕೂ ಪ್ರಿಯಾಂಕಾ ಚಿಂಚೊಳ್ಳಿಯದ್ದು ಆರ್ಥಿಕವಾಗಿ ಸರಿಕಟ್ಟಾಗಿರುವ ಕುಟುಂಬವೇನೂ ಅಲ್ಲ. ಆಕೆಗೆ ಬಡತನದ ಗಾಢವಾದ ಪರಿಚಯವಿದೆ. ಈಕೆ ಹುಟ್ಟಿದ್ದು ಬೆಳೆದಿದ್ದೆಲ್ಲವೂ ಗುಲ್ಬರ್ಗಾದಲ್ಲಿಯೇ. ಕಾಲೇಜು ದಿನಗಳಿಂದಲೇ ಬಣ್ಣದ ಲೋಕದ ಹುಚ್ಚು ಹತ್ತಿಸಿಕೊಂಡಿದ್ದ ಪ್ರಿಯಾಂಕಾ ಆ ದಿನಗಳಲ್ಲಿಯೇ ಅಮೋಘ ಎಂಬ ಸ್ಥಳೀಯ ವಾಹಿನಿಯೊಂದರಲ್ಲಿ ನಿರೂಪಕಿಯಾಗಿ ಕೆಲಸ ಮಾಡಲಾರಂಭಿಸಿದ್ದಳು. ಆ ಕಾರ್ಯಕ್ರಮದಿಂದಲೇ ಸ್ಥಳೀಯವಾಗಿ ಒಂದಷ್ಟು ಹೆಸರನ್ನೂ ಮಾಡಿಕೊಂಡಿದ್ದಳು. ಹಾಗೆ ಒಂದಷ್ಟು ಆತ್ಮವಿಶ್ವಾಸ ತುಂಬಿಕೊಂಡ ಪ್ರಿಯಾಂಕಾ ಬಂದಿಳಿದದ್ದು ಬೆಂಗಳೂರಿಗೆ.

೨೦೧೩ರಲ್ಲಿ ವಿವೆಲ್ ಮಿಸ್ ಸೌತ್ ಕರ್ನಾಟಕ ಮತ್ತು ೨೦೧೪ರಲ್ಲಿ ಮಿಸ್ ಕರ್ನಾಟಕ ಕಿರೀಟವನ್ನೂ ಕೂಡಾ ಪ್ರಿಯಾಂಕಾ ಮುಡಿಗೇರಿಸಿಕೊಂಡಿದ್ದಳು. ಆ ನಂತರ ಬಿಲ್‌ಗೇಟ್ಸ್, ಗಿರಿಗಿಟ್ಲೆ ಮುಂತಾದ ಒಂದೆರಡು ಚಿತ್ರಗಳಲ್ಲಿ ಅವಕಾಶವನ್ನೂ ಗಿಟ್ಟಿಸಿಕೊಂಡಿದ್ದಳು. ಇಂಥಾ ಪ್ರಿಯಾಂಕಾಗೆ ದೊಡ್ಡ ಅದೃಷ್ಟವಾಗಿ ಒಲಿದು ಬಂದಿದ್ದದ್ದು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿದ್ದ ಹರ ಹರ ಮಹಾದೇವ ಸೀರಿಯಲ್ಲಿನ ಪಾರ್ವತಿಯ ಪಾತ್ರ. ಕನ್ನಡದ ಕಿರುತೆರೆಯ ಮಟ್ಟಿಗೆ ಅದ್ದೂರಿ ಮೇಕಿಂಗ್‌ನಿಂದ ಜನಮನ ಗೆದ್ದಿದ್ದ ಈ ಧಾರಾವಾಹಿಯ ಪಾರ್ವತಿಯಾಗಿ ಪ್ರಿಯಾಂಕಾ ಮನೆ ಮಾತಾಗಿದ್ದಳು.

ಆದರೆ ಸೀರಿಯಲ್ಲಿಯ ಪಾರ್ವತಿ ಅಸಲೀ ಜೀವನದಲ್ಲಿ ಹಣವಂತ ಪಡ್ಡೆ ಹುಡುಗರ ಪಾಲಿಗೆ ಅಕ್ಷರಶಃ ಪೂತನಿಯಾಗಿದ್ದದ್ದು ಮಾತ್ರ ನಿಜವಾದ ದುರಂತ. ಗುಲ್ಬರ್ಗಾದಲ್ಲಿದ್ದಷ್ಟೂ ದಿನ ತೀರಾ ಅಲ್ಲದಿದ್ದರೂ ಒಂದಷ್ಟು ಕಷ್ಟಗಳನ್ನು ಕಂಡಿದ್ದವಳು ಪ್ರಿಯಾಂಕಾ. ಬೆಂಗಳೂರಿಗೆ ಬರುವಾಗ ಈಕೆಗೆ ಝಾಂಝೂಂ ಅಂತ ಬದುಕಬೇಕೆಂಬ ಕನಸಿತ್ತು. ಬೆಂಗಳೂರಿಗೆ ಬಂದ ಮೇಲಂತೂ ಆಕೆ ಪೂರ್ತಿಯಾಗಿ ಹೈಫೈ ಬದುಕಿಗೆ ಒಗ್ಗಿಕೊಂಡಿದ್ದಳು. ಅದಕ್ಕಾಗಿ ಆಕೆ ಆರಿಸಿಕೊಂಡಿದ್ದು ಹಣವಂತ ಹುಡುಗರ ಬೇಟೆಯನ್ನು. ಉದ್ಯಮಿಗಳೂ ಸೇರಿದಂತೆ ಹಣವಂತ ಯುವಕರೊಂದಿಗೆ ಬೋಲ್ಡ್ ಆಗಿ ಮೂವ್ ಮಾಡುತ್ತಾ, ಪ್ರೀತಿಯ ನಾಟಕವಾಡುತ್ತಾ ಇದುವರೆಗೂ ಹಲವಾರು ವಂಚನೆಗಳನ್ನು ನಡೆಸಿರೋ ಆರೋಪ ಪ್ರಿಯಾಂಕಾ ಚಿಂಚೊಳ್ಳಿ ವಿರುದ್ಧ ಕೇಳಿ ಬರುತ್ತಿದೆ.

ಆದರೆ ಇದನ್ನೇ ಪ್ರೀತಿ ಅಂದುಕೊಂಡು ಮದುವೆಗೂ ಸಜ್ಜಾಗಿದ್ದವನು ಸಾಯಿರಾಂ. ಇದೀಗ ಕಿರುತೆರೆ ನಟ ಶಿಶಿರ್ ಜೊತೆ ಪ್ರೇಮ ಸಲ್ಲಾಪ ನಡೆಸುತ್ತಿರೋ ಪ್ರಿಯಾಂಕಾ ನೀಟಾಗಿಯೇ ಕೈ ಎತ್ತಿದ್ದಾಳೆ. ಜೆಪಿ ನಗರದ ಸಾಯಿರಾಂ ಎದೆ ಒಡೆದುಕೊಂಡು ಲಬೋ ಅಂದಿದ್ದಾನೆ. ಈ ಮೂಲಕ ಧಾರಾವಾಹಿಯಲ್ಲಿ ದೇವಿ ಪಾರ್ವತಿಯಾಗಿ ಮಿಂಚಿದ್ದ ಪ್ರಿಯಾಂಕಾ ಚಿಂಚೋಳ್ಳಿಯ ಅಸಲೀ ರೂಪವಂತೂ ಬಯಲಾಗಿದೆ! ಇಷ್ಟಕ್ಕೂ ಶಿಶಿರ್ ಚರಿತ್ರೆ ತುಂಬಾ ಕ್ಲೀನಾಗೇನೂ ಇಲ್ಲ. ಈತ ರಿಯಾಲಿಟಿ ಶೋನಲ್ಲಿ ಹೆಸರು ಮಾಡಿದ್ದ ಕೋಳಿ ರಮ್ಯಾ ಎಂಬಾಕೆಯನ್ನು ಮದುವೆಯಾಗಿ ನಂತರ ತಲಾಕ್ ನೀಡಿದ್ದ.

ಒಟ್ಟಿನಲ್ಲಿ ಕಿರುತೆರೆ ರಾಢಿಯೆದ್ದುಕೂತಿದೆ. ಅದ್ಯಾವ ಕಾಲಕ್ಕೆ ಶುದ್ಧವಾಗುತ್ತದೋ ಗೊತ್ತಿಲ್ಲ!

Continue Reading
Advertisement
Click to comment

Leave a Reply

Your email address will not be published. Required fields are marked *

ಪೆಟ್ಟಿ ಅಂಗಡಿ

ಬಿಗ್‌ಬಾಸ್ ಮನೆ ತಲುಪಿದ ಸೂತಕದ ಸುದ್ದಿ!

Published

on

ಪ್ರಯಾಸ ಪಡುತ್ತಿದ್ದಾರೆ. ಎಲ್ಲರ ಮನಸಲ್ಲಿಯೂ ಹಿರಿಯಣ್ಣನನ್ನು ಕಳೆದುಕೊಂಡ ಖಾಲಿತನವೊಂದು ಆವರಿಸಿಕೊಂಡು ಬಿಟ್ಟಿದೆ. ಆದರೆ ಬಿಗ್‌ಬಾಸ್ ಮನೆಯೊಳಗೆ ಬಂಧಿಯಾಗಿ ತಮ್ಮದೇ ಕಿತ್ತಾಟ, ಕೊಸರಾಟಗಳಲ್ಲಿ ಕಳೆದು ಹೋಗಿರೋ ಸ್ಪರ್ಧಿಗಳ ಪಾಲಿಗೆ ಮಾತ್ರ ಹೊರ ಜಗತ್ತಿನ ಪರಿವೆಯೇ ಇಲ್ಲ. ಈ ಶನಿವಾರದ ಕಡೆಯ ಕ್ಷಣದ ವರೆಗೂ ಅವರ್‍ಯಾರಿಗೂ ಅಂಬಿ ಇನ್ನಿಲ್ಲವೆಂಬ ಸಣ್ಣ ಸುಳಿವೂ ಇರಲಿಲ್ಲ.

ಆದರೆ ಈ ಶನಿವಾರ ಎಲಿಮಿನೇಷನ್ ಜೊತೆಗೇ ಎಲ್ಲ ಸ್ಪರ್ಧಿಗಳಿಗೂ ಮತ್ತೊಂದು ಅನಿರೀಕ್ಷಿತ ಆಘಾತ ಕಾದಿತ್ತು. ಆನಂದ್ ಮನೆಯಿಂದ ಹೊರ ಬಿದ್ದ ಬಳಿಕ ಏಕಾಏಕಿ ಸ್ಕ್ರೀನಿನ ಮೇಲೆ ಅಂಬಿ ಅಂತಿಮ ದರ್ಶನದ ದೃಷ್ಯಾವಳಿಗಳು ತೆರೆದುಕೊಳ್ಳುತ್ತಲೇ ಸ್ತಬ್ಧರಾದ ಸ್ಪರ್ಧಿಗಳೆಲ್ಲ ಭೋರಿಟ್ಟು ಅತ್ತಿದ್ದಾರೆ.

ಅಂಬರೀಶ್ ಅಂತಿಮ ದರ್ಶನದ ವೇಳೆಯಲ್ಲಿ ಸುದೀಪ್ ಕೂಡಾ ಕಣ್ಣೀರಾಗಿದ್ದರು. ಹಾಗೆ ನೋಡಿದರೆ ಬಿಗ್‌ಬಾಸ್ ಮನೆ ಮಂದಿಗೆ ಇಂಥಾ ಹೊರ ಜಗತ್ತಿನ ಯಾವ ವಿದ್ಯಮಾನಗಳನ್ನೂ ತಿಳಿಸುವಂತಿಲ್ಲ. ಆದರೆ ಅದನ್ನು ಮೀರಿ ಅಂಬಿ ಇನ್ನಿಲ್ಲವೆಂಬ ವಿಚಾರವನ್ನು ಸುದೀಪ್ ಬಿಗ್‌ಬಾಸ್ ಸ್ಪರ್ಧಿಗಳಿಗೆ ತಿಳಿಸಿದ್ದಾರೆ.
ವಾರದ ಪಂಚಾಯ್ತಿಯೆಲ್ಲ ಮುಗಿದ ನಂತರ ಅಂಬರೀಶ್ ಅಂತಿಮ ದರ್ಶನದ ವೀಡಿಯೋವನ್ನು ಮನೆಯೊಳಗೆ ಭಿತ್ತವಾಗುವಂತೆ ಮಾಡೋ ಮೂಲಕ ಬಿಗ್‌ಬಾಸ್ ಸ್ಪರ್ಧಿಗಳೆಲ್ಲ ಕಂಗಾಲಾಗುವಂಥಾ ವಿಚಾರವೊಂದನ್ನು ಅವರ ಮುಂದೆ ತೆರೆದಿಟ್ಟಿದ್ದಾರೆ.

Continue Reading

ಪೆಟ್ಟಿ ಅಂಗಡಿ

ಬಿಗ್‌ಬಾಸ್ ಆಂಡಿ ಅಂದ್ರೆ ಪರಮ ಕ್ರೂರಿ ಅಂದೋರ್‍ಯಾರು?

Published

on


ಬಿಗ್‌ಬಾಸ್ ಶೋ ಎಂಬುದೇ ಹುಚ್ಚರ ಸಂತೆ. ಹುಚ್ಚಾ ವೆಂಕಟನಂಥವರನ್ನೇ ಜುಟ್ಟು ಕೆದರಿಕೊಂಡು ಬೀದಿಗೆ ಬಿಟ್ಟ ಖ್ಯಾತಿಯೂ ಈ ಶೋಗೇ ಸಲ್ಲುತ್ತೆ. ಮತ್ತೊಬ್ಬರ ಖಾಸಗೀ ಬದುಕಿನ ಮೇಲಿರೋ ಮನುಷ್ಯ ಸಹಜ ಕ್ಯೂರಿಯಾಸಿಟಿಯನ್ನೇ ಬಂಡವಾಳ ಮಾಡಿಕೊಂಡ ಈ ಶೋವನ್ನು ಜನ ಬೈದುಕೊಂಡೂ ನೋಡುತ್ತಾರೆ. ನೋಡುತ್ತಲೇ ಬೈಯುತ್ತಾರೆ!

ಇಂಥಾ ಶೋನಲ್ಲಿ ಪ್ರತೀ ಸೀಜನ್ನಿನಲ್ಲಿಯೂ ಚಿತ್ರ ವಿಚಿತ್ರ ವ್ಯಕ್ತಿತ್ವಗಳನ್ನು ಹುಡುಕಾಡಿ ತುಂಬಿಕೊಳ್ಳೋದು ವಾಡಿಕೆ. ಈ ಬಾರಿಯೂ ಅಂಥಾದ್ದೇ ಒಂದು ಅಸಡ್ಡಾಳ ದೈತ್ಯಾಕೃತಿಯನ್ನು ಮನೊಯೊಳಗೆ ಬಿಟ್ಟುಕೊಳ್ಳಲಾಗಿದೆ. ಆತ ಆಂಡ್ರೀವ್ ಅಲಿಯಾಸ್ ಆಂಡಿ!

ಯಾವುದೇ ಮನುಷ್ಯ ಸಹ್ಯವಾಗೋದು, ಅಸಹ್ಯ ಅನ್ನಿಸೋದು ಅಂದ, ಚೆಂದ, ಆಕೃತಿಗಳಿಂದಲ್ಲ. ಆತನ ವರ್ತನೆಗಳಿಂದ. ಇಂಥಾ ಕಾಮನ್‌ಸೆನ್ಸ್ ಕೂಡಾ ಇಲ್ಲದ ಆಂಡಿಯೆಂಬಾತ ಕೇಲವ ಬಿಗ್‌ಬಾಸ್ ಸ್ಪರ್ಧಿಗಳಿಗೆ ಮಾತ್ರವಲ್ಲದೇ ಪ್ರೇಕ್ಷಕರಿಗೂ ಕಿರಿಕಿರಿಯುಂಟು ಮಾಡುತ್ತಿದ್ದಾನೆ. ಎಂಥಾ ಸಹನೆಯಿರುವವರೂ ಕೂಡಾ ಕಪಾಳ ಚೆದುರಿ ಹೋಗುವಂತೆ ಬಾರಿಸುವಂತೆ ಕಿರಿಕಿರಿ ಉಂಟು ಮಾಡುವ ಈತ ಅದನ್ನೇ ಗೇಮ್ ಪ್ಲ್ಯಾನ್ ಅಂದುಕೊಂಡಿದ್ದಾನೆ. ಉಕ್ಕಿನಂಥಾ ದೇಹ ಹೊಂದಿದ್ದರೂ ಮಗುವಿನಂಥಾ ಮನಸು ಹೊಂದಿರುವ, ಅದನ್ನೇ ಉಳಿಸಿಕೊಂಡು ಹೊರ ಬಂದಿರುವ ಜಿಮ್ ರವಿಯಂಥಾ ರವಿಯೇ ಆಂಡಿಯೊಬ್ಬ ಪರಮ ಕ್ರೂರಿ ಎಂಬರ್ಥದಲ್ಲಿ ಮಾತಾಡುತ್ತಾರೆಂದರೆ ಈತನ ವ್ಯಕ್ತಿತ್ವ ಎಂಥಾದ್ದೆಂಬುದು ಬಿಗ್‌ಬಾಸ್ ಶೋ ನೋಡದವರಿಗೂ ಗೊತ್ತಾಗಿ ಬಿಡುತ್ತೆ!

ಕಿಚ್ಚಾ ಕೇಳಿದೊಂದು ಪ್ರಶ್ನೆಗೆ ಉತ್ತರಿಸಿದ ಜಿಮ್ ರವಿ ಆಂಡಿ ಒಬ್ಬ ಕ್ರೂರಿ, ಕಿರಿಕಿರಿಯ ಆಸಾಮಿ ಅಂತ ನೇರವಾಗಿಯೇ ಹೇಳಿದ್ದಾರೆ. ಅದು ಪ್ರತಿಯೊಬ್ಬ ಪ್ರೇಕ್ಷಕನಿಗೂ ನೂರಕ್ಕೆ ನೂರರಷ್ಟು ಸತ್ಯವೇ ಅನ್ನಿಸಿದೆ. ಆರಂಭದಲ್ಲಿ ಕವಿತಾ ಗೌಡಳನ್ನು ಪುಟ್ಟ ತಂಗಿ ಅಂತ ಪುಂಗಿದ್ದ ಆಂಡಿ ನಂತರ ಅವಳ ಮೇಲೆಯೇ ಲವ್ವಾದಂಥಾ ಡ್ರಾಮಾ ಶುರು ಮಾಡಿದ್ದ. ಈ ಹಿಂದಿನ ಸೀಜನ್ನುಗಳಲ್ಲಿ ಇಂಥಾ ಲವ್ ಸ್ಟೋರಿಗಳ ರೂವಾರಿಗಳನ್ನು ಬರಖತ್ತು ಮಾಡಲಾಗಿತ್ತಲ್ಲಾ? ಅಂಥಾದ್ದೊಂದು ಪ್ಲಾನು ಮಾಡಿಯೇ ಈತ ಕವಿತಾ ಮೇಲೆ ಕ್ಷಶ್ ಆದಂತೆ ನಾಟಕ ಶುರುವಿಟ್ಟಿದ್ದಾನೆಂಬುದು ಯಾರಿಗಾದರೂ ಅರ್ಥವಾಗುವಂತಿದೆ.

ಎಲ್ಲರನ್ನೂ ಇರಿಟೇಟ್ ಮಾಡುತ್ತಾ, ಪಕ್ಕಾ ನರಿ ಬುದ್ಧಿ ಪ್ರದರ್ಶಿಸೋ ಆಂಡಿಗೆ ಇದೀಗ ಸಣ್ಣಗಾಗಿರೋ ಬುಲೆಟ್ ಪ್ರಕಾಶ್ ಜಾಗದಲ್ಲಿ ತನ್ನ ಅಗಾಧ ದೇಹವನ್ನು ಪ್ರತಿಷ್ಠಾಪಿಸೋ ಬಯಕೆ. ಥೇಟು ಬುಲೆಟ್ ಪ್ರಕಾಶನ ಸೋದರ ಸಂಬಂಧಿಯಂತೆ ದೇಹ ಕುಲುಕಿಸಿ ನಗುವ ಆಂಡಿ ಪಾಲಿಗೆ ಬಿಗ್‌ಬಾಸ್ ಶೋನಿಂದಲೇ ಹಾಸ್ಯ ಕಲಾವಿದನಾಗಿ ನೆಲೆಗೊಳ್ಳೋ ತಲುಬು. ಇದರಿಂದಾಗಿಯೇ ಪಚಪಚನೆ ಮಾತಾಡುತ್ತಾ, ಇರಿಟೇಟ್ ಮಾಡೋದನ್ನೇ ಹಾಸ್ಯ ಅಂದುಕೊಂಡಿರೋ ಪರಮ ಮುಠ್ಠಾಳ ಆಂಡಿ!

ಹಾಸ್ಯ ಹುಟ್ಟೋದಕ್ಕೆ ಸೆನ್ಸ್ ಆಫ್ ಹ್ಯೂಮರ್ ಅತ್ಯಗತ್ಯ. ಆದರೆ ಈ ಆಂಡಿಗೆ ಕಾಮನ್ ಸೆನ್ಸೇ ಕಡಿಮೆ ಪ್ರಮಾಣದಲ್ಲಿದೆ. ಅಸಹ್ಯವನ್ನೇ ಹಾಸ್ಯ ಅಂದುಕೊಂಡಿರೋ ಈ ಆಸಾಮಿಯನ್ನು ಹಾಸ್ಯ ನಟನಾಗಿ ನೋಡುವಂತಾದರೆ ಆ ಅಪಹಾಸ್ಯದ ಫಾಯಿದೆ ಬಿಗ್‌ಬಾಸ್ ಮಂದಿಗಲ್ಲದೆ ಬೇರ್‍ಯಾರಿಗೂ ಸಿಕ್ಕಲು ಸಾಧ್ಯವಿಲ್ಲ!

Continue Reading

ಪೆಟ್ಟಿ ಅಂಗಡಿ

ಬಿಗ್‌ಬಾಸ್: ಮಾಡರ್ನ್ ರೈತ ಶಶಿಯ ಒರಿಜಿನಲ್ ಹಿಸ್ಟರಿ!

Published

on


ನಿಜವಾದ ರೈತರು ನಾನಾ ಸಂಕಷ್ಟಗ ಸುಳಿಯಲ್ಲಿ ಸಿಕ್ಕಿ ಏದುಸಿರು ಬಿಡುತ್ತಾ ತಮ್ಮ ಪಾಡಿಗೆ ತಾವು ದುಡಿಯುತ್ತಿದ್ದಾರೆ. ಆದರೆ ಅಂಥಾ ರೈತರ ಹೆಸರು ಹೇಳಿಕೊಂಡು ನಾನಾ ಥರದ ಫಾಯಿದೆ ಗಿಟ್ಟಿಸಿಕೊಳ್ಳುವವರು ಮಾತ್ರ ಎಲ್ಲೆಲ್ಲಿಯೂ ಆರಾಮಾಗಿ ಅಡ್ಡಾಡಿಕೊಂಡಿದ್ದಾರೆ. ಹೀಗೆ ರೈತರ ಹೆಸರಿನಲ್ಲಿ ಲಾಭ ಗುಂಜಿಕೊಳ್ಳೋ ಬುದ್ಧಿ ರಾಜಕಾರಣ, ಸಂಘಟನೆಗಳಲ್ಲಿ ಮಾಮೂಲು. ಇದೀಗ ಅದು ಜನಪ್ರಿಯ ಶೋ ಬಿಗ್‌ಬಾಸ್‌ಗೂ ಅಂಟಿಕೊಂಡಿತಾ ಅಂತೊಂದು ಪ್ರಶ್ನೆ ಹುಟ್ಟಲು ಕಾರಣ ಈ ಸಲದ ಸ್ಪರ್ಧಿಯಾಗಿರೋ ಶಶಿ ಅಲಿಯಾಸ್ ಶಶಿಕುಮಾರ್!

ನೋಡಲು ಹ್ಯಾಂಡ್ಸಮ್ ಆಗೇ ಇರೋ ಶಶಿ ಎಂಬ ಹುಡುಗ ಈಗ ಬಿಗ್ ಬಾಸ್ ಸ್ಪರ್ಧಿ. ಆತ ಈ ಶೋಗೆ ಪ್ರವೇಶ ಪಡೆದುಕೊಂಡಿದ್ದೇ ತಾನೊಬ್ಬ ಮಾಡರ್ನ್ ರೈತ ಎಂಬ ಟ್ರಂಪ್ ಕಾರ್ಡ್ ಮೂಲಕ. ಕೃಷಿಯ ವಿಚಾರದಲ್ಲಿಯೇ ಪದವಿ ಪಡೆದು ಆಧುನಿಕ ಪದ್ಧತಿಗಳ ಮೂಲಕ ಕೃಷಿ ಮಾಡುತ್ತಿರೋದಾಗಿ ಈತ ಬೊಂಬಡಾ ಬಜಾಯಿಸಿದ್ದ. ಇಡೀ ರೈತ ಸಂಕುಲಕ್ಕೇ ಮಾಡರ್ನ್ ಕೃಷಿ ಪದ್ಧತಿಯ ಕ್ರಾಂತಿ ಹರಡಲೆಂದೇ ತಾನು ಬಿಗ್ ಬಾಸ್ ಶೋಗೆ ಬಂದಿರೋದು ಎಂಬರ್ಥದಲ್ಲಿಯೂ ಮಾತಾಡಿದ್ದ. ಆದರೀಗ ಈ ಮಾಡರ್ನ್ ರೈತ ಒರಿಜಿನಲ್ ರೈತನಲ್ಲ ಎಂಬಂಥಾ ಗುಮಾನಿಯೊಂದು ವ್ಯಾಪಕವಾಗಿಯೇ ಹರಿದಾಡುತ್ತಿದೆ!

ಕೃಷಿ ವಿಚಾರದಲ್ಲಿ ಎಂಎಸ್‌ಸಿ ಪದವಿ ಪಡೆದುಕೊಂಡಿರೋ ಶಶಿ ತಾನು ಅಪ್ಪಟ ರೈತ ಅಂತ ಹೇಳಿಕೊಂಡು ಈ ಕ್ಷಣಕ್ಕೂ ಅದನ್ನೇ ನಿರೂಪಿಸಲು ಪ್ರಯತ್ನಿಸುತ್ತಿದ್ದಾನೆ. ಆದರೆ ಈತ ಬಿಗ್‌ಬಾಸ್‌ಗೆ ಬರೋದಕ್ಕೂ ಮುನ್ನ ಕೆಲ ಧಾರಾವಾಹಿಗಳಲ್ಲೂ ನಟಿಸಿದ್ದಾನೆಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗಳೂ ಆರಂಭವಾಗಿದೆ. ಕೆಲ ಮಂದಿ ರೈತನೇನು ಧಾರಾವಾಹಿನಗಳಲ್ಲಿ ನಟಿಸ ಬಾರದಾ ಎಂಬಂಥಾ ಸಿನಿಕ ಪ್ರಶ್ನೆಗಳನ್ನೂ ಕೇಳುತ್ತಿದ್ದಾರೆ.

 

ರೈತನಾದವನು ಧಾರಾವಾಹಿಗಲ್ಲಿ ನಟಿಸಿದರೂ ತಪ್ಪಿಲ್ಲ. ಸಿನಿಮಾ ಹೀರೋ ಆಗಿ ಅವತರಿಸಿದರೂ ಖಂಡಿತೂ ಅದು ತಪ್ಪಲ್ಲ. ಆದರೆ ಬಿಗ್‌ಬಾಸ್ ಸ್ಪರ್ಧಿ ಶಶಿ ವಿಚಾರದಲ್ಲಿ ಇಂಥಾದ್ದೊಂದು ಪ್ರಶ್ನೆ ಎದ್ದಿರೋದೇ ಬೇರೆ ಕಾರಣಗಳಿಂದ. ಶಶಿ ತಾನು ಮಾಡರ್ನ್ ರೈತ ಅಂತ ಹೇಳಿಕೊಂಡಿದ್ದರ ಜೊತೆಗೇ ತಾನು ಜಾನಪದ ಕಲಾವಿದ ಅಂತೊಂದು ವಿಚಾರವನ್ನು ಜಾಹೀರು ಮಾಡಿದ್ದ. ಆದರೆ ಅದೇ ಹೊತ್ತಿನಲ್ಲಿ ತಾನು ಒಂದಷ್ಟು ಧಾರಾವಾಹಿಗಳಲ್ಲಿಯೂ ನಟಿಸಿದ್ದೇನೆ, ತಾನು ನಟನೂ ಹೌದು ಅಂತ ಯಾಕೆ ಹೇಳಿಕೊಂಡಿಲ್ಲ? ಇದು ತಾನು ರೈತ ಅಂತ ಗಿಟ್ಟಿಸಿಕೊಳ್ಳಲು ನೋಡುತ್ತಿರೋ ಫಾಯಿದೆ ಅಸ್ತವ್ಯಸ್ತವಾದೀತೆಂಬ ಭಯದ ಸೂಚನೆಯಲ್ಲವೇ?
ಬಿಗ್‌ಬಾಸ್ ಮನೆಯೊಳಗೂ ಕೂಡಾ ಶಶಿ ತಾನು ಆಧುನಿಕ ರೈತ ಅಂತ ಬಿಂಬಿಸಿಕೊಳ್ಳೋದಕ್ಕಾಗಿಯೇ ಲಾಗಾ ಹಾಕುತ್ತಿದ್ದಾನೆ. ಇತ್ತೀಚೆಗೊಂದು ದಿನ ನವರಸ ನಾಯಕ ಜಗ್ಗೇಶ್ ಬಿಗ್‌ಬಾಸ್ ಮನೆಯೊಳಗೆ ಪ್ರವೇಶ ಮಾಡಿದ್ದರಲ್ಲಾ? ಆ ಸಂದರ್ಭದಲ್ಲಿ ಜಗ್ಗೇಶ್ ಅವರೇ ನಟನಂತೆ ಕಾಣ್ತೀಯಲ್ಲಪ್ಪಾ? ಅಂದಾಗಲೂ ಶಶಿ ನಾನು ಮಾಡರ್ನ್ ರೈತ ಅಂದಿದ್ದ. ಕಳೆದ ವಾರ ನಟಿ ಆಶಿಕಾ ರಂಗನಾಥ್ ನೀವು ಆಕ್ಟರ್ರಾ ಅಂತ ಕೇಳಿದಾಗಲೂ ಈತ ಇಲ್ಲ ನಾನು ಮಾಡರ್ನ್ ಫಾರ್ಮರ್ ಅಂತಲೇ ಹೇಳಿಕೊಂಡಿದ್ದ. ಈತನಿಗೆ ತಾನು ರೈತ ಅಂತ ಭೆನಿಫಿಟ್ ಗಿಟ್ಟಿಸಿಕೊಳ್ಳೋ ಇರಾದೆ ಇಲ್ಲದೇ ಹೋಗಿದ್ದರೆ `ನಾನೂ ಒಂದಷ್ಟು ಸೀರಿಯಲ್ ಗಳಲ್ಲಿ ನಟಿಸಿದ್ದೇನೆ’ ಅಂತ ಹೇಳಿಕೊಳ್ಳಬಹುದಿತ್ತಲ್ಲಾ?

ಇದೆಲ್ಲವೂ ಕೂಡಾ ಶಶಿಯ ಗೇಮ್‌ಪ್ಲಾನನ್ನು ಜಾಹೀರು ಮಾಡುತ್ತವೆ. ಅಷ್ಟಕ್ಕೂ ಈತ ತನ್ನೂರಲ್ಲಿ ಅದೇನು ಕೃಷಿ ಮಾಡಿದ್ದಾನೋ, ಅದ್ಯಾವ ಥರದಲ್ಲಿ ಉಳುಮೆ ಮಾಡಿದ್ದಾನೋ ಎಂಬುದು ಬಿಗ್‌ಬಾಸ್ ಆಯೋಜಕರಿಗೂ ಗೊತ್ತಿದೆ ಅನ್ನಲಾಗೋದಿಲ್ಲ. ಕೃಷಿಯಲ್ಲಿ ಎಂಎಸ್‌ದಸಿ ಮಾಡಿಕೊಂಡ ಮಾತ್ರಕ್ಕೆ, ಊರಲ್ಲಿ ಒಂದಷ್ಟು ಜಮೀನಿಟ್ಟುಕೊಂಡು ಎತ್ತು ಕಟ್ಟೋ ಜಾಗದಲ್ಲಿ ಟ್ರ್ಯಾಕ್ಟರು ನಿಂತೇಟಿಗೆ ಅಂಥವರನ್ನು ಮಾಡರ್ನ್ ರೈತ ಅನ್ನಲಾಗೋದಿಲ್ಲ. ರೈತರ ಶ್ರಮವನ್ನು ಗಿಮಿಕ್ಕುಗಳ ಮೂಲಕ ಯಾರು ಏನಕ್ಕೆ ಬಳಸಿಕೊಂಡರೂ ಅದು ಕ್ಷಮಾರ್ಹವಲ್ಲ. ಒಟ್ಟಾರೆಯಾಗಿ ಬಿಗ್‌ಬಾಸ್ ಪ್ರೇಕ್ಷಕರಿಗೂ ಕೂಡಾ ಶಶಿಯ ಮೇಲೊಂದು ಬಲವಾದ ಗುಮಾನಿ ಇದ್ದೇ ಇದೆ.

ಪರ ವಿರೋಧದ ಚರ್ಚೆಗಳೇನೇ ಇದ್ದರೂ ಶಶಿ ನಿಖರವಾಗಿಯೇ ತಾನೊಬ್ಬ ನಟ ಎಂಬ ವಿಚಾರವನ್ನು ಮುಚ್ಚಿಟ್ಟು ರೈತನ ಅವತಾರವೆತ್ತಿದ್ದಾನೆ. ಇಂಥಾ ಆತ್ಮವಂಚನೆಯ ಜೊತೆಗೇ ಬಿಗ್‌ಬಾಸ್ ಹೊಸ್ತಿಲು ದಾಟಿದವ ರಿಂದ ಅದೆಂಥಾ ಪ್ರಾಮಾಣಿಕ ಸ್ಪರ್ಧೆ ನಿರೀಕ್ಷಿಸಲಾದೀತು?

Continue Reading
Advertisement
Chitralahari 400 x 600
DJ ENTERTAINMENTS 300 x 600

Trending

Copyright © 2018 Cinibuzz