ತೆಲುಗಿನ ‘ವೇದಂ’, ‘ರಾಜಪಟ್ಟೈ’, ‘ಮಿರಾಪಕಾಯಿ’, ‘ವಾಂಟೆಡ್’, ‘ನಿಪ್ಪು’, ‘ಊ ಕೊಡ್ತಾರಾ? ಉಲಿಕ್ಕಿ ಪಡ್ತಾರಾ?’, ‘ರೆಬೆಲ್’, ಹಾಗೂ ಹಿಂದಿಯ ‘ಲೇಕರ್ ಹಮ್ ದಿವಾನಾ ದಿಲ್’ ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿ ಒಂದು ಮಟ್ಟದ ಹವಾ ಕ್ರಿಯೇಟ್ ಮಾಡಿದ್ದ ಹುಡುಗಿ ದೀಕ್ಷಾ ಸೇಠ್..
ಈಕೆಯನ್ನು ‘ಜಗ್ಗು ದಾದಾ’ ಸಿನಿಮಾಗೆ ಕರೆತಂದು ಕನ್ನಡಕ್ಕೆ ಪರಿಚಯಿಸಲಾಗಿತ್ತು. ಇನ್ನೂ ಜಗ್ಗೂದಾದ ಚಿತ್ರೀಕರಣದ ಹಂತದಲ್ಲಿರುವಾಗಲೇ ಈಕೆ ಕನ್ನಡದ ಮತ್ತೊಬ್ಬ ಸ್ಟಾರ್ ಜೊತೆಗೆ ತೆರೆ ಹಂಚಿಕೊಳ್ಳುವ ಸಾಧ್ಯತೆ ಇದೆ.
ಹೌದು…. ದೀಕ್ಷಾ ಸೇಠ್ ಳನ್ನು ‘ಹೆಬ್ಬುಲಿ’ಗೆ ನಾಯಕಿಯಾಗಿ ಕರೆತರುವ ಪ್ರಯತ್ನಗಳು ನಡೆದಿವೆ.
ಈ ಹಿಂದೆ ಕೂಡಾ ದರ್ಶನ್ ಮತ್ತು ಸುದೀಪ್ ಸಿನಿಮಾಗಳಲ್ಲಿ ನಟಿಸಿದ ನಾಯಕಿಯರನ್ನು ಪರಸ್ಪರರ ಸಿನಿಮಾಗಳಲ್ಲಿ ಎಕ್ಸ್ ಚೇಂಜ್ ಮಾಡಿಕೊಳ್ಳಲಾಗಿತ್ತು. ರಕ್ಷಿತಾ, ರಮ್ಯಾ ಕಾಲದಿಂದ ಹಿಡಿದು, ಪ್ರಿಯಾಮಣಿ, ರಚಿತಾರಾಮ್ ತನಕ ಬಹಳಷ್ಟು ಹೀರೋಯಿನ್ನುಗಳು ಕಿಚ್ಚ-ದಚ್ಚು ಸಿನಿಮಾಗಳಲ್ಲಿ ಒಬ್ಬರ ನಂತರ ಒಬ್ಬರೊಂದಿಗೆ ನಟಿಸಿದ್ದಾರೆ.
ಈಗ ದೀಕ್ಷಾ ಸೇಠ್ ಕೂಡಾ ಅದೇ ಲಿಸ್ಟಿಗೆ ಸೇರ್ತಾಳಾ ನೋಡೋಣ….