One N Only Exclusive Cine Portal

ಹೇ ಡಾರ್ಲಿಂಗ್…

ಅಕಿಯೋ ಪ್ರವೀಣ್‌ಕುಮಾರ್ ರಚಿಸಿ, ನಿರ್ದೇಶನ ಮಾಡಿರುವ ೩೦ ನಿಮಿಷಗಳ ಅವಧಿಯ ‘ಹೇ ಡಾರ್ಲಿಂಗ್’ ಎಂಬ ಕಿರುಚಿತ್ರದ ಪ್ರದರ್ಶನ ಇತ್ತೀಚೆಗೆ ಕಲಾವಿದರ ಸಂಘದ ಆವರಣದಲ್ಲಿ ನೆರವೇರಿತು. ಚಿತ್ರರಂಗದ ಹಲವಾರು ಸೆಲಬ್ರಟಿಗಳು ಈ ಚಿತ್ರವನ್ನು ನೋಡಿ ತಮ್ಮ ಅಭಿಪ್ರಾಯ ತಿಳಿಸಿದರು. ಎಲ್ಲಾ ಕ್ಷೇತ್ರದಲ್ಲಿ ಹೆಣ್ಣಿಗೆ ಸಮಾನ ಎಂದು ಹೇಳುತ್ತಿರುವ ಸಂದರ್ಭದಲ್ಲಿ, ಅದೇ ಹೆಣ್ಣಿನ ಮೇಲೆ ಶೋಷಣೆ ನಡೆಯುತ್ತಲೆ ಇದೆ. ಅತ್ಯಾಚಾರ ಎಂಬ ಪಿಡುಗು ಹೆತ್ತವರ ಹೃದಯವನ್ನು ಕಂಪಿಸುತ್ತಿದೆ. ಹೆಣ್ಣಿಗೆ ಹೆಣ್ಣೆ ವೈರಿ ಎಂಬ ಮಾತನ್ನು ಕೇಳಿದ್ದೇವೆ. ಆದೇ ಹೆಣ್ಣು ತನ್ನ ಬದುಕನ್ನು ಕತ್ತಲಾಗಿಸಿಕೊಂಡು ಬೆಳಕಿನಲ್ಲಿರುವ ಎಷ್ಟೋ ಹೆಣ್ಣು ಮಕ್ಕಳನ್ನು ತಮಗೆ ಅರಿವಿಲ್ಲದೆ ರಕ್ಷಿಸುತ್ತಿದ್ದಾರೆ. ಆಂತಹ ಹೆಣ್ಣುಮಕ್ಕಳಿಗೆ ಕೃತಜ್ಞತೆ ಸಲ್ಲಿಸುವ ಪ್ರಯತ್ನವಾಗಿ ಈ ಚಿತ್ರ ಮೂಡಿಬಂದಿದೆ. ಇಂದಿನ ಸಮಾಜದಲ್ಲಿ ಅತ್ಯಾಚಾರಗಳು ಕಡಿಮೆಯಾಗುತ್ತಿದೆ. ಅದಕ್ಕೆ ಕಾರಣ ವೇಶ್ಯೆಯರು. ಈ ಚಿತ್ರದ ಕ್ಲೈಮಾಕ್ಸ್‌ನಲ್ಲಿ ನಾಯಕ ಇವರೆಲ್ಲರಿಗೂ ಸೀರೆಯನ್ನು ಕೊಡುತ್ತಾನೆ. ಅವರು ಸೀರೆ ಸ್ವೀಕರಿಸುತ್ತಾ, ದಯವಿಟ್ಟು ಅತ್ಯಾಚಾರ ಮಾಡಬೇಡಿ, ನಿಮಗೆ ನಾವಿದ್ದೇವೆ ಎಂದು ಕಾಮುಕ ಗಂಡಸರಿಗೆ ಆಹ್ವಾನ ನೀಡುತ್ತಾರೆ

ಈ ಚಿತ್ರ ನೋಡಿದ ಹಿರಿಯ ನಿರ್ದೇಶಕ ಕೂಡ್ಲು ರಾಮಕೃಷ್ಣ ಮಾತನಾಡುತ್ತಾ ನಮ್ಮ ಕಾಲದಲ್ಲಿ ಕಿರುಚಿತ್ರದ ಪರಿಕಲ್ಪನೆಯೇ ಇರಲಿಲ್ಲ. ಏನಿದ್ದರೂ ಎರಡೂವರೆ ಗಂಟೆಯಲ್ಲಿ ಎಲ್ಲವನ್ನು ಹೇಳಬೇಕಿತ್ತು. ಇಷ್ಟೊಂದು ವಿಷಯವನ್ನು ಕೇವಲ ಅರ್ಧ ಗಂಟೆಯಲ್ಲಿ ತೋರಿಸುವುದು ಸ್ವಲ್ಪ ಕಷ್ಟವೇ. ಆದರೂ ನಿರ್ದೇಶಕರ ಶ್ರಮದಿಂದ ಎಲ್ಲವು ಸಾರ್ಥಕವಾಗಿದೆ. ಅತ್ಯಾಚಾರಿಗಳಿಗೆ ಶಿಕ್ಷೆಯಾಗುವ ಬದಲು ಗಲ್ಲು ಶಿಕ್ಷೆಯಾದಲ್ಲಿ ಇತರರು ಹೆದರಿ ಇಂತಹ ಕೃತ್ಯಕ್ಕೆ ಕೈಹಾಕುವುದಿಲ್ಲ. ಸಂವಿಧಾನದಲ್ಲಿ ಈ ಬಗ್ಗೆ ತಿದ್ದಪಡಿ ಮಾಡಿದರೆ, ಇದೆಲ್ಲಕ್ಕೂ ಒಂದು ಕೊನೆಯಾಗುತ್ತದೆಂದು ಅಭಿಪ್ರಾಯಪಟ್ಟರು. ವಿಧಾನ ಪರಿಷತ್ ಸದಸ್ಯ ಶರವಣ, ಸೂಪರ್ ಸ್ಟಾರ್ ರಜನಿಕಾಂತ್ ಅವರ ಗೆಳಯ ರಾಜ್ ಬಹದ್ದೂರ್, ರಾಜಕೀಯ ಧುರೀಣ ಅಲ್ಪಾಫ್ ಖಾನ್ ಉಪಸ್ತಿತರಿದ್ದು ಚಿತ್ರದ ಕುರಿತು ಮೆಚ್ಚುಗೆಯ ಮಾತನಾಡಿದರು.

ನಿರ್ಮಾಪಕಿ ಭಾರ್ಗವಿ ಮಾತನಾಡಿ ಗಾಂಧಿನಗರದಲ್ಲಿ ಹೊಸಬರು ಚಿತ್ರರಂಗಕ್ಕೆ ಬಂದಲ್ಲಿ ನಷ್ಟ ಅನುಭವಿಸುವುದು ಖಚಿತ. ಹಾಗೆಯೇ ಒನ್ ವೇ ಎಂಬ ಚಿತ್ರ ನಿರ್ಮಾಣ ಮಾಡಿ ೪೦ ಲಕ್ಷ ರೂ. ಹಣ ಲಾಸಾಯಿತು. ಒಂದು ಚಿತ್ರ ಗೆದ್ದಲ್ಲಿ ತಂತ್ರಜ್ಞರು, ಕಲಾವಿದರಿಗೆ ಉತ್ತಮ ಅವಕಾಶಗಳು ಸಿಗುತ್ತದೆ. ನಿರ್ದೇಶಕರು ಹೇಳಿದ ಕತೆ ಚೆನ್ನಾಗಿದ್ದರಿಂದ ಹಿಂದಿನ ಕಹಿ ಘಟನೆ ಮರೆತು ಬಂಡವಾಳ ಹಾಕಿದ್ದೇನೆ ಎಂದು ಹೇಳಿದರು. ಒನ್‌ವೇ ಚಿತ್ರದಲ್ಲಿ ನಟಿಸಿದ್ದ ಕಿರಣ್‌ರಾಜ್ ಈ ಚಿತ್ರದ ನಾಯಕನಾಗಿ ಕಾಣಿಸಿಕೊಂಡಿದ್ದು, ಉಳಿದಂತೆ ಶೃತಿರಾವ್, ರಾಣಿರಾವ್, ಶ್ರೀನಿವಾಸ್, ಪಲ್ಲವಿ, ಪುಷ್ಟ ರಂಗಾಯಣ, ಬೇಬಿ ಅವುಕ್ತ ಅಭಿನಯಿಸಿದ್ದಾರೆ.

Leave a Reply

Your email address will not be published. Required fields are marked *


CAPTCHA Image
Reload Image