One N Only Exclusive Cine Portal

ಹೊರಬಂದವರೆದುರು ಕಾದಿತ್ತು ಶಾಕಿಂಗ್ ನ್ಯೂಸ್!

ಒಂದು ವೇಳೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನೂರು ದಿನ ಇದ್ದರೂ ದುಡ್ಡು ಕೊಡೋದಿಲ್ಲ ಅಂತೇನಾದ್ರೂ ಇದ್ದಿದ್ರೆ ಈ ಸೆಲೆಬ್ರೆಟಿಗಳೆಲ್ಲಾ ಅಲ್ಲಿಗೆ ಹೋಗ್ತಾ ಇದ್ರಾ? ‘ಸಾಧನೆ’ಯ ಹೆಸರಲ್ಲಿ ದುಡ್ಡು ಮಾಡೋಕೆ ಹೋದರೆ ಯಡವಟ್ಟುಗಳಾಗದೇ ಇರುತ್ತದಾ?
ನೂರು ದಿನ ಮನೆ ಬಿಟ್ಟು ಹೋಗಿ ಟಾಸ್ಕು, ಪಾಸ್ಕು, ನಾಮಿನೇಷನ್ನು, ಎಲಿಮಿನೇಷನ್ನು, ಸೇಫು, ಚಾಡಿ, ಮುನಿಸು, ಕಣ್ಣೀರು, ಕಿತ್ತಾಟಗಳಲ್ಲಿ ಮುಳುಗಿದ್ದರೆ, ಇಲ್ಲಿ ಮನೇಕಡೆ ಏನೇನೆಲ್ಲ ನಡೆದುಹೋಗಿರುತ್ತದೆ ನೋಡಿ!
ಮಾಸ್ಟರ್ ಆನಂದ್ ತಮ್ಮ ಅರುಣ್ ಅಣ್ಣ ಬಿಗ್ ಬಾಸ್ ಮನೆಯೊಳಕ್ಕೆ ನುಗ್ಗುವುದನ್ನೇ ಕಾದಿದ್ದರೋ ಏನೋ? ಹೇಗೂ ಅಣ್ಣ ಒಳ್ಳೇ ಮನರಂಜನೆ ಕೊಡೋ ವ್ಯಕ್ತಿ. ಹೇಗಿದ್ದರೂ ಗ್ರಾಂಡ್ ಫಿನಾಲೆ ತನಕ ಅವನನ್ನು ಹೊರಕ್ಕೆ ಬಿಡೋದಿಲ್ಲ ಅನ್ನೋದನ್ನು ಲೆಕ್ಕಾ ಹಾಕಿಕೊಂಡಿದ್ದನೋ ಏನೋ? ಜನವರಿ ಇಪ್ಪತ್ತಾರನೇ ತಾರೀಖು ತಮಿಳುನಾಡಿನ ದೇವಸ್ಥಾನಕ್ಕೆ ಹೋದವನೇ, ತನ್ನ ಬಹುಕಾಲದ ಗೆಳತಿಯನ್ನು ವಿವಾಹವಾಗಿದ್ದಾನೆ! ಆನಂದ್ ಪತ್ನಿ ಬಿಗ್ ಬಾಸ್ ಮನೆಗೆ ಸರ್‌ಪ್ರೈಸ್ ವಿಸಿಟ್ ಕೊಡೋ ಹೊತ್ತಿಗೆ ಈ ವಿಚಾರ ಆಕೆಗೆ ಗೊತ್ತಿತ್ತಾದರೂ ‘ಗಂಡನಿಗೆ ಹೇಳಿದರೆ ಎಲ್ಲಿ ಗೇಮಲ್ಲಿ ಸೋತುಬಿಡ್ತಾರೋ’ ಅಂತಾ ವಿಷಯವನ್ನು ಮುಚ್ಚಿಟ್ಟುಬಿಟ್ಟಿದ್ದಾರೆ.
ಇನ್ನು ರೆಹಮಾನ್ ಮಾವ ಕೊನೆಯುಸಿರೆಳೆದು, ಅವರ ಪತ್ನಿ ವಿದೇಶಕ್ಕೆ ಹೋಗಿ ಅಂತ್ಯಸ್ಕಾರದಲ್ಲಿ ಪಾಲ್ಗೊಂಡು ಬಂದ ವಿಚಾರವನ್ನೂ ಹೀಗೇ ಸೀಕ್ರೇಟಾಗಿಟ್ಟುಬಿಟ್ಟಿದ್ದಾರೆ. ಫಿನಾಲೆ ಸ್ಟೇಜ್ ಮೇಲಿದ್ದಾಗ ವಿಚಾರ ತಿಳಿದು ‘ಐ ಮಿಸ್ ಯೂ ಅಂಕಲ್’ ಎಂದು ಗೋಳಾಡಿ, ಕೆಳಕ್ಕೆ ಕುಸಿದು ಒದ್ದಾಡಿದ್ದಾರೆ.
ನೂರು ದಿನ ಮನೆಬಿಟ್ಟು ಹೋದವರಿಗೆ ಹೊರಬರುತ್ತಿದ್ದಂತೇ ಶಾಕ್ ಮೇಲೆ ಶಾಕ್ ಎದುರಾಗಿವೆ. ಅತ್ತ ಬಿಗ್ ಬಾಸ್ ಟ್ರೋಫಿಯೂ ಇಲ್ಲ, ಐವತ್ತು ಲಕ್ಷ ಅಮೌಂಟೂ ಇಲ್ಲ. ಇದ್ದಷ್ಟು ದಿನದ ಪೇಮೆಂಟ್ ತಗೊಂಡು ಬಂದು ಈಗ ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ!
ಅಂದಹಾಗೆ ಆನಂದ್ ತಮ್ಮ ಅರುಣ್ ಹೀರೋ ಆಗಿ ನಟಿಸಿರುವ ಗಜಪಡೆ ಈ ವಾರ ತೆರೆಗೆ ಬರುತ್ತಿದೆ. ಹೊಸ ಬಾಳ ಹೊಸ್ತಿಲಲ್ಲಿ ನಿಂತಿರುವ ಅರುಣ್ ನಟಿಸಿರುವ ಚಿತ್ರವೂ ಯಶಸ್ವಿಯಾಗಲಿ ಎಂದು ಹಾರೈಸೋಣ.

Leave a Reply

Your email address will not be published. Required fields are marked *


CAPTCHA Image
Reload Image