Connect with us

cbn

ಕಾಲ ಕೊಟ್ಟ ಏಟು ಮತ್ತು ಕನಸಿನ ಸಾರೋಟು!

Published

on

ಶ್ರದ್ಧೆ, ಕನಸು, ಕಸುಬುದಾರಿಕೆ, ಶ್ರಮ… ಇವೆಲ್ಲ ಇದ್ದಾಗಲೂ ಆವರಿಸಿಕೊಳ್ಳುವ ಸೋಲುಗಳಿವೆಯಲ್ಲಾ? ಅವು ಎಂಥಾ ಗಟ್ಟಿಗರನ್ನಾದರೂ ಅದುರಿಸಿ ಹಾಕಿ ಬಿಡುತ್ತವೆ. ಅಂಥಾದ್ದರಲ್ಲಿ ಜೀವದಂತೆ ಹಚ್ಚಿಕೊಂಡು ಮಾಡಿದ ಸಿನಿಮಾಗಳು ಭೀಕರ ಸೋಲು ಕಂಡಾಗಲೂ ರವಿಚಂದ್ರನ್ ಧಕ್ಕಿಸಿಕೊಂಡ ರೀತಿ ಸಾಹಸಿಗಳಿಗೆಲ್ಲ ಸಾರ್ವಕಾಲಿಕ ಸ್ಫೂರ್ತಿ.

ಏಕಾಂಗಿ ಆದ ನಂತರ ಕೋದಂಡ ರಾಮ, ಒಂದಾಗೋಣ ಬಾ, ಸಾಹುಕಾರ, ರಾಮಕೃಷ್ಣ, ಪಾಂಡುರಂಗ ವಿಠಲ ಮುಂತಾದ ಕಮರ್ಷಿಯಲ್ ಸಿನಿಮಾಗಳಲ್ಲಿ ರವಿ ಕಾಣಿಸಿಕೊಂಡರು. ಆದರೆ ಈ ಎಲ್ಲ ಚಿತ್ರಗಳು ಬಾಕ್ಸಾಫೀಸಲ್ಲಿ ಅಷ್ಟಕ್ಕಷ್ಟೇ ಎನ್ನುವಂತಾಗಿದ್ದರಿಂದ ‘ರವಿ ಜಮಾನಾ ಮುಗಿದೇ ಹೋಯ್ತು’ ಎಂಬಂತಾಗಿತ್ತು. ಆದರೆ ರವಿ ಚಂದ್ರನ್ ಅಷ್ಟು ಸುಲಭಕ್ಕೆ ಸೋಲುವ ವ್ಯಕ್ತಿಯೇ? ಹೀಗೇ ಬಿಟ್ಟರೆ ಜನ ತನ್ನನ್ನು ಮರೆತೇಬಿಡುತ್ತಾರೆ ಎಂಬ ನಿಜವನ್ನು ಅರಿತ ರವಿ ‘ಮಲ್ಲ’ ಎಂಬ ಪಕ್ಕಾ ಮಸಾಲೆ ಚಿತ್ರವನ್ನು ನಿರ್ದೇಶಿಸಿ ನಟಿಸಿದರು. ಉಪೇಂದ್ರ ಪತ್ನಿ ಪ್ರಿಯಾಂಕ ಈ ಚಿತ್ರದ ಹೀರೋಯಿನ್ನು. ರವಿ ಹೊಕ್ಕಳ ಮೇಲೆ ದ್ರಾಕ್ಷಿ, ನವಿಲುಗರಿ, ಪಾರಿವಾಳ ಎಲ್ಲವನ್ನೂ ಒಟ್ಟೊಟ್ಟಿಗೇ ಸೇರಿಸಿ ಹೊಸ ಮ್ಯಾಜಿಕ್ಕು ಮಾಡಿಬಿಟ್ಟರು. ಯಾರೂ ನಿರೀಕ್ಷಿಸದ ರೀತಿಯಲ್ಲಿ ‘ಮಲ್ಲ’ ಹಿಟ್ ಆಯಿತು.1280x720-1ol
ಚಿತ್ರರಂಗದಲ್ಲಿ ಹೊಸಬರ ಅಲೆ ಎಂಥದ್ದೇ ಇದ್ದರೂ ಅದನ್ನು ಮೀರಿ ಲೈಮ್‌ಲೈಟಿಗೆ ಬಂದೇ ಬರುತ್ತೇನೆ ಎನ್ನುತ್ತಿರುವ ರವಿಚಂದ್ರನ್ ಹೊಸ ಹುರುಪಿನೊಂದಿಗೆ ಮತ್ತೆ ಮೈಕೊಡವಿ ನಿಂತು ‘ಮಂಜಿನ ಹನಿ’ ಚಿತ್ರವನ್ನು ಆರಂಭಿಸಿದರು. ಸಂದೇಶ್ ನಾಗರಾಜ್ ಆರಂಭಿಸಿದ್ದ ಈ ಚಿತ್ರದ ಖರ್ಚು ಯಾವಾಗ ಕೈ ಮೀರುತ್ತಾ ಹೋಯಿತೋ ಆಗ ರವಿಚಂದ್ರನ್ ಅದನ್ನು ಮೂರು ಕೋಟಿಗೆ ಸ್ವತಃ ತಾವೇ ಖರೀದಿಸಿಬಿಟ್ಟರು. ನಂತರ ಆ ಚಿತ್ರ ಮುಂದುವರೆಯಿತು. ಸುಮಾರು ಎರಡು ವರ್ಷಗಳ ಕಾಲ ಚಿತ್ರೀಕರಣಗೊಂಡಿದ್ದ ‘ಮಂಜಿನ ಹನಿ’ಗಾಗಿ ಸುಮಾರು ಎಂಬತ್ತು ಪರ್ಸೆಂಟ್ ಶೂಟಿಂಗ್ ಮುಗಿಸಲಾಗಿತ್ತು. ಆದರೆ ರವಿಚಂದ್ರನ್‌ಗೆ ಚಿತ್ರೀಕರಣಗೊಂಡಿದ್ದ ಆ ಸಿನೆಮಾದ ಕಡೆ ಅದೇನು ಅತೃಪ್ತಿ ಉಂಟಾಯಿತೋ ಏನೋ? ಅಷ್ಟೂ ಭಾಗವನ್ನು ಸಾರಾಸಗಟಾಗಿ ತಿಪ್ಪೆಗೆ ಬಿಸಾಡಿ ಮತ್ತೆ ಹೊಸದಾಗಿ ಚಿತ್ರೀಕರಿಸಲು ನಿರ್ಧರಿಸಿದರು.
ಇಂಥ ಹುಚ್ಚು ಸಾಹಸಗಳನ್ನು, ಹುಂಬ ಕೆಲಸಗಳನ್ನು ಕನ್ನಡ ಚಿತ್ರರಂಗದಲ್ಲಿ ರವಿಚಂದ್ರನ್ ಅಲ್ಲದೇ ಮತ್ಯಾರು ಮಾಡಲು ಸಾಧ್ಯ?
57ಕ್ಕೆ ಕಾಲಿರಿಸಿರುವ ಈ ‘ರಸಿಕ’ ರವಿ ಹೊಸತೇನನ್ನೋ ಮಾಡಬೇಕೆಂಬ ತುಡಿತಕ್ಕೆ, ಹೊಸಾ ಸಾಹಸಗಳಿಗೆ ಕೈ ಹಚ್ಚುವಚಿತೆ ಮಾಡಬಲ್ಲ ಹುರುಪಿಗೆ ಸ್ಫೂರ್ತಿಯಂಥವರು. ಮುಂಬರುವ ಸಿನಿಮಾಗಳ ಮೂಲಕ ಅವರು ಚಿತ್ರರಂಗದಲ್ಲಿ ಮತ್ತೆ ‘ಸಿಪಾಯಿ’ಯಂತೆ ಎದ್ದುಬರುವಂತಾಗಲಿ…

ಅರುಣ್ ಕುಮಾರ್ ಜಿ.

Continue Reading
Advertisement
Click to comment

Leave a Reply

Your email address will not be published. Required fields are marked *

cbn

ದರ್ಶನ್ ಮ್ಯಾನೇಜರ್ ಮಹಾದ್ರೋಹಿ ಮಲ್ಲಿ ಎಲ್ಲಿದ್ದಾನೆ ಗೊತ್ತಾ?

Published

on


ನಂಬಿದರೆ ಸರ್ವಸ್ವವನ್ನೂ ಧಾರೆಯೆರೆದುಬಿಡುವ ‘ಯಜಮಾನ’, ತಮ್ಮ ಕೈಕೆಳಗೆ ಕೆಲಸ ಮಾಡುವವರನ್ನೂ ಸ್ನೇಹಿತರಂತೆ ಪೊರೆಯುವ ‘ಒಡೆಯ’ ದರ್ಶನ್ ಅವರಿಗೆ ಮಲ್ಲಿಕಾರ್ಜುನ ಎನ್ನುವ ಮ್ಯಾನೇಜರ್ ಮಹಾದ್ರೋಹವೆಸಗಿ ಗಾಯಬ್ ಆದನಲ್ಲಾ? ಆತ ಎಲ್ಲಿದ್ದಾನೆ ಅನ್ನೋದರ ಸಣ್ಣ ಸುಳಿವೊಂದು ಸಿಕ್ಕಿದೆ!
ಮ್ಯಾನೇಜರ್ ಮಲ್ಲಿ ಅನ್ನೋ ಮಹಾನುಭಾವ ದರ್ಶನ್ ಮತ್ತವರ ತಂಡಕ್ಕೆ ಕೈಕೊಟ್ಟು ಊರುಬಿಟ್ಟಿದ್ದಾನೆ ಅನ್ನೋ ಸುದ್ದಿಯನ್ನು ಮೊಟ್ಟ ಮೊದಲ ಬಾರಿಗೆ ಸ್ಫೋಟಿಸಿದ್ದು ಸಿನಿಬಜ್. ನಾವು ಸುದ್ದಿ ನೀಡಿದ ಮೇಲೂ ಎಷ್ಟೋ ಜನ ‘ಹೌದಾ? ನಿಜಾನಾ? ಅದು ಹೇಗೆ ಸಾಧ್ಯ?’ ಅಂತೆಲ್ಲಾ ಪ್ರಶ್ನಿಸಿದ್ದರು. ಯಾರೆಂದರೆ ಯಾರೂ ನಂಬಲೂ ಸಾಧ್ಯವಾಗದ ನಿಜಾಂಶವನ್ನು ಸಿನಿಬಜ಼್ ಬಯಲಿಗೆಳೆದಿತ್ತು. ನಂತರ ನಮ್ಮ ವರದಿಯ ಸತ್ಯಾಸತ್ಯತೆ ಜಗತ್ತಿಗೂ ಗೊತ್ತಾಯಿತು. ಇರಲಿ, ವಿಷಯ ಅದಲ್ಲ!

ಊರುಬಿಡುವ ಮುಂಚೆ ಪಕ್ಕಾ ಪ್ಲಾನು ಮಾಡಿಕೊಂಡು, ಬೆಂಗಳೂರಿನಲ್ಲಿದ್ದ ಮನೆಯನ್ನು ಖಾಲಿ ಮಾಡಿ ಹೆಂಡತಿ ಮಕ್ಕಳನ್ನೆಲ್ಲಾ ತನ್ನ ಹುಟ್ಟೂರಿಗೆ ಬಿಟ್ಟುಬಂದಿದ್ದ ಈತ ಒಮ್ಮೆಲೇ ಗಾಯಬ್ ಆಗಿದ್ದ. ಮಲ್ಲಿ ಓಡಿಹೋದ, ದರ್ಶನ್ ಮತ್ತವರ ಸುತ್ತಲಿನವರಿಗೆ ವಂಚಿಸಿ ಕಾಲುಕಿತ್ತಿದ್ದಾನೆ ಅನ್ನೋದು ಬಿಟ್ಟರೆ ಬೇರಾವ ಸುಳಿವೂ ಈವರೆಗೆ ಸಿಕ್ಕಿರಲಿಲ್ಲ.

ಏಕಾಏಕಿ ಯಾವ ಸೂಚನೆಯನ್ನೂ ನೀಡದೆ ಊರುಬಿಟ್ಟು ಎಸ್ಕೇಪ್ ಆದ ಮಲ್ಲಿ ಈಗೆಲ್ಲಿದ್ದಾನೆ? ಅನ್ನೋದರ ಸಣ್ಣ ಸುಳಿವೊಂದು ನಮಗೆ ದೊರೆತಿದೆ.  ಅದರ ಪ್ರಕಾರ ಹೇಳೋದಾದರೆ ಮಲ್ಲಿ ಈಗ ಕೆನಡಾದಲ್ಲಿ ಸೆಟಲ್ ಆಗಿ ಅಲ್ಲೊಂದು ಫ್ಲಾಟು ಖರೀದಿಸಿ ಕೂಲಾಗಿ ಜೀವನ ನಡೆಸುತ್ತಿದ್ದಾನಂತೆ. ಅದು ಎಷ್ಟರ ಮಟ್ಟಿಗೆ ನಿಜ ಅನ್ನೋದು ಆಧಾರ ಸಮೇತ ಸಿಕ್ಕನಂತರವಷ್ಟೇ ಪಕ್ಕಾ ಆಗಲಿದೆ. ಇಷ್ಟಕ್ಕೂ ಮಲ್ಲಿ ಯಾಮಾರಿಸಿ ತೆಗೆದುಕೊಂಡು ಹೋದ ಹಣವನ್ನು ಏನು ಮಾಡಿದ್ದಾನೆ? ನಂಬಿದವರನ್ನು ವಂಚಿಸುವ ದರ್ದಾದರೂ ಈತನಿಗೇನಿತ್ತು? ಇವೆಲ್ಲ ವಿವರಗಳು ಇಷ್ಟರಲ್ಲೇ ಬಯಲಾಗಲಿದೆ… ಕಾದು ನೋಡಿ!

 

Continue Reading

cbn

ಇದು ಅಣ್ಣಾವ್ರ ಕಡೆಯ ಸಿನಿಮಾ ಆಗಬೇಕಿತ್ತು!

Published

on

`ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ…’ ಹಾಡಿನ ಮೊದಲ ಸಾಲು ಈಗ ಸಿನಿಮಾ ಆಗಿ ಬಿಡುಗಡೆಗೊಂಡಿದೆ. ಕಾಂತ ಕನ್ನಲ್ಲಿ ನಿರ್ದೇಶನದಲ್ಲಿ ಮೂಡಿಬಂದಿರುವ ಸಿನಿಮಾ ನೋಡಿದ ಎಲ್ಲರನ್ನೂ ಸೆಳೆಯುತ್ತಿದೆ. ಸಿನಿಮಾ ನೋಡಿ ಹೊರಬಂದ ಪ್ರತಿಯೊಬ್ಬರ ಮುಖದಲ್ಲೂ ಮಂದಹಾಸ ಮೂಡಿಸುವ ಸಿನಿಮಾ ಇದು.

ಅಂದಹಾಗೆ ಇದೇ `ಇರುವುದೆಲ್ಲವ ಬಿಟ್ಟು’ ಶೀರ್ಷಿಕೆ ವರನಟ ಡಾ. ರಾಜ್ ಕುಮಾರ್ ಅವರ ನಟನೆಯ ಕೊನೆಯ ಸಿನಿಮಾ ಆಗಬೇಕಿತ್ತು ಅನ್ನೋ ವಿಚಾರವೊಂದು ಹೊರಬಿದ್ದಿದೆ. ಮೊನ್ನೆದಿನ ಈ ಸಿನಿಮಾವನ್ನು ನೋಡಿದ ಕೆ.ಎಂ.ಎಫ್‌ನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಎ.ಎಸ್. ಪ್ರೇಮನಾಥ್ ಖುದ್ದು ನಿರ್ದೇಶಕರ ಬಳಿ ಈ ವಿಷಯವನ್ನು ಹೇಳಿದರಂತೆ. ಪ್ರೇಮ್‌ನಾಥ್ ಡಾ.ರಾಜ್ ಕುಟುಂಬದ ಜೊತೆ ತೀರಾ ನಿಕಟ ಸಂಪರ್ಕ ಹೊಂದಿರುವವರು. ಹೀಗಾಗಿ ಅಣ್ಣಾವ್ರ ಕುರಿತ ಸಾಕಷ್ಟು ಇಂಟರೆಸ್ಟಿಂಗ್ ವಿಚಾರಗಳು ಪ್ರೇಮನಾಥ್ ಅವರಿಗೆ ಸಹಜವಾಗೇ ಗೊತ್ತಿರುತ್ತದೆ.

ಡಾ. ರಾಜ್‌ಕುಮಾರ್ ನಟಿಸಬೇಕಿದ್ದ ಆ ಸಿನಿಮಾಗೆ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಕಥೆಯನ್ನೂ ಹೇಳಿದ್ದರಂತೆ. `ಇರುವುದೆಲ್ಲವ ಬಿಟ್ಟು’ ಅನ್ನೋ ಶೀರ್ಷಿಕೆಯನ್ನು ರಾಜಣ್ಣ ಬಹುವಾಗಿ ಇಷ್ಟಪಟ್ಟಿದ್ದರಂತೆ. ಅವರ ಅನಾರೋಗ್ಯ ಮತ್ತಿತರ ಕಾರಣಗಳಿಗೆ ಆ ಸಿನಿಮಾ ಸೆಟ್ಟೇರಿರಲಿಲ್ಲ. ಒಂದು ವೇಳೆ ಅಣ್ಣಾವ್ರು ಈಗಲೂ ಇರುವಂತಾಗಿ, ಅದೇ ಶೀರ್ಷಿಕೆಯೊಂದಿಗೆ ಇಷ್ಟು ಮುದ್ದಾದ ಸಿನಿಮಾ ಮೂಡಿಬಂದಿರೋದನ್ನು ನೋಡಿದ್ದಿದ್ದರೆ ಅದೆಷ್ಟು ಖುಷಿಪಡುತ್ತದ್ದರೋ…?

Continue Reading

cbn

ಶಿವಣ್ಣನಿಗೆ ನಾಯಕಿಯಾದಳು ತೆಲುಗು ಹುಡುಗಿ ಇಶಾ!

Published

on

ಶಿವರಾಜ್ ಕುಮಾರ್ ನಟಿಸುತ್ತಿರೋ ಸಾಲು ಸಾಲು ಚಿತ್ರಗಳ ಗದ್ದಲದ ನಡುವೆ ‘ಎಸ್‌ಆರ್‌ಕೆ’ ಚಿತ್ರ ಅದೇಕೋ ಮರೆಯಾದಂತಿತ್ತು. ಯಾಕೆಂದರೆ, ಇದು ಕಳೆದ ವರ್ಷವೇ ಶಿವಣ್ಣ ಒಪ್ಪಿಕೊಂಡು ಸೆಟ್ಟೇರಿದ್ದ ಚಿತ್ರ. ಇದೀಗ ಆ ಚಿತ್ರಕ್ಕೆ ಹೊಸಾ ವೇಗ ಸಿಕ್ಕಿದೆ. ಈ ಚಿತ್ರಕ್ಕೆ ಶಿವಣ್ಣನ ನಾಯಕಿಯ ಆಯ್ಕೆಯೂ ನಡೆದಿದೆ.

ಲಕ್ಕಿ ಗೋಪಾಲ್ ನಿರ್ದೇಶನ ಮಾಡಲಿರೋ ಈ ಚಿತ್ರ ಇದೇ ಡಿಸೆಂಬರಿನಿಂದ ಚಿತ್ರೀಕರಣ ಆರಂಭಿಸಲಿದೆ. ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಡ್ಯಾನ್ಸ್ ಮಾಸ್ಟರ್ ಪಾತ್ರದಲ್ಲಿ ನಟಿಸಲಿದ್ದಾರೆ. ನಾಯಕಿಯದ್ದು ಉಪನ್ಯಾಸಕಿಯ ಪಾತ್ರ. ಆ ಪಾತ್ರಕ್ಕೆ ತೆಲುಗಿನ ನಟಿ ಇಶಾ ರಬ್ಬಾ ಆಯ್ಕೆಯಾಗಿದ್ದಾರೆ. ಈಗಾಗಲೇ ತೆಲುಗಿನಲ್ಲಿ ಶೈನಪ್ ಆಗಿರೋ ಇಶಾ ಈ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಜ್ಯೂನಿಯರ್ ಎನ್‌ಟಿಆರ್ ರಂಥಾ ಸ್ಟಾರ್ ನಟರ ಜೊತೆ ಹಿಟ್ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿರುವಾಕೆ ಇಶಾ. ಈಕೆ ಈಗಾಗಲೇ ಆರೇಳು ತೆಲುಗು ಚಿತ್ರಗಳಲ್ಲಿ ನಟಿಸಿದ್ದಾಳೆ. ನಟನೆ, ಸೌಂದರ್ಯಾ ಎಲ್ಲವನ್ನೂ ಹೊಂದಿರುವ ಇಶಾ ಇಷ್ಟರಲ್ಲಿಯೇ ಬಾಲಿವುಡ್‌ಗೆ ಹಾರಲಿದ್ದಾಳೆಂಬ ಸುದ್ದಿ ತೆಲುಗು ಚಿತ್ರರಂಗದ ತುಂಬಾ ತುಂಬಿಕೊಂಡಿತ್ತು. ಆದರೆ ಆಕೆ ಕನ್ನಡ ಚಿತ್ರರಂಗದತ್ತ ಬಂದಿದ್ದಾಳೆ.

ಈಗಾಗಲೇ ಒಂದಷ್ಟು ಚಿತ್ರಗಳಿಗೆ ಕೆಲಸ ಮಾಡಿ ಪಳಗಿಕೊಂಡಿರುವ ಲಕ್ಕಿ ಗೋಪಾಲ್ ಎಸ್‌ಆರ್‌ಕೆ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಆರಂಭದಿಂದಲೂ ತಾನು ನಿರ್ದೇಶಕನಾದರೆ ಶಿವಣ್ಣನ ಚಿತ್ರ ಮಾಡಬೇಕೆಂಬ ಕನಸು ಹೊಂದಿದ್ದವರು ಗೋಪಾಲ್. ಮೊದಲ ಚಿತ್ರದಲ್ಲಿಯೇ ಅವರು ಆ ಕನಸನ್ನು ನನಸು ಮಾಡಿಕೊಂಡಿದ್ದಾರೆ.

Continue Reading
Advertisement
Chitralahari 400 x 600
DJ ENTERTAINMENTS 300 x 600

Trending

Copyright © 2018 Cinibuzz