One N Only Exclusive Cine Portal

ಅಪ್ಪ ಬರೆಯಲಿರುವ ಹಣೆಬರಹ!

Aishwarya-Arjun-Photoshoot-1Aishwaryaನಟ ಶಕ್ತಿಪ್ರಸಾದ್ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ ನಟ. ಅವರ ಮಗ ಅರ್ಜುನ್ ಸರ್ಜಾ ನಟ, ನಿರ್ದೇಶಕ, ನಿರ್ಮಾಪಕರಾಗಿ ಇಡೀ ಭಾರತೀಯ ಚಿತ್ರರಂಗದಲ್ಲಿ ಮಿಂಚಿದವರು.ಅರ್ಜುನ್ ಸರ್ಜಾ ಅವರ ಪತ್ನಿ ಆಶಾರಾಣಿ ನಟಿಸಿದ್ದು ಒಂದೇ ಒಂದು ಸಿನಿಮಾದಲ್ಲಾದರೂ ಆ ಪಾತ್ರವಿನ್ನೂ ನೆನಪಿನಲ್ಲುಳಿಯುವಂಥದ್ದು. ಆಶಾರಾಣಿ ಅವರ ತಂದೆ ನಟ ರಾಜೇಶ್ ಬಗ್ಗೆ ಎಲ್ಲರಿಗೂ ಗೊತ್ತಿರುವ ವಿಚಾರ. ನಾಯಕನಟನಾಗಿ ಚಿತ್ರರಂಗಕ್ಕೆ ಪರಿಚಯಗೊಂಡು, ಇವತ್ತಿಗೂ ಪೋಷಕ ಕಲಾವಿದರಾಗಿ ಬಣ್ಣ ಹಚ್ಚುತ್ತಾ ಬಂದಿರುವವರು. ಅರ್ಜುನ್ ಸರ್ಜಾ ಅವರ ಸಹೋದರ ದಿವಂಗತ ಕಿಶೋರ್ ಸರ್ಜಾ ನಿರ್ದೇಶಕರಾಗಿ ‘ತುತ್ತಾ ಮುತ್ತ’ ದಂಥ ಜನಪ್ರಿಯ ಸಿನಿಮಾಗಳನ್ನು ಕೊಟ್ಟವರು. ಸರ್ಜಾ ಕುಟುಂಬದ ಚಿರಂಜೀವಿ ಮತ್ತು ಧೃವಾ ಸರ್ಜಾ ಸದ್ಯದ ಮಟ್ಟಿಗೆ ಕನ್ನಡ ಚಿತ್ರರಂಗದಲ್ಲಿ ಹೀರೋಗಳಾಗಿ ಹೊರಹೊಮ್ಮಿದ್ದಾರೆ.
ಇದ್ದಕ್ಕಿದ್ದಂತೆ ಸರ್ಜಾ ಫ್ಯಾಮಿಲಿಯ ಬಗ್ಗೆ ಇಷ್ಟೆಲ್ಲಾ ಹೇಳಿದ್ದಕ್ಕೂ ಕಾರಣವಿದೆ. ಅದೇನೆಂದರೆ, ಅರ್ಜುನ್ ಸರ್ಜಾ ತಮ್ಮ ಪುತ್ರಿ ಐಶ್ವರ್ಯ ಅವರನ್ನು ಕನ್ನಡ ಚಿತ್ರದಕ್ಕೆ ನಾಯಕಿಯಾಗಿ ಪರಿಚಯಿಸುತ್ತಿದ್ದಾರೆ. ಕಲೆಯೆಂಬುದು ರಕ್ತಗತವಾಗೇ ಬಂದ ಕಾರಣ ಐಶ್ವರ್ಯಾ ಪ್ರತಿಭಾವಂತೆಯಾಗಿರುತ್ತಾರೆ ಅನ್ನೋದರಲ್ಲಿ ಡೌಟಿಲ್ಲ. ಐಶ್ವರ್ಯಾ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿರುವ ಉದ್ದೇಶ ಏನು? ಐಶ್ವರ್ಯಾ ನಟಿಯಾಗಬಯಸಿದ್ದು ಯಾಕೆ? ಅವರ ಮಾತುಗಳಲ್ಲೇ ಕೇಳಿ….

– ನಿಮ್ಮ ವಿದ್ಯಾಭ್ಯಾಸದ ಕುರಿತು ಹೇಳಿ…
ಚೆನ್ನೈನ ಸೀಕ್ರೆಡ್ ಹಾರ್ಟ್ ಸ್ಕೂಲಿನಲ್ಲಿ ಓದಿದ್ದು. ನಂತರ ಸ್ಟೆಲ್ಲಾ ಮೇರಿಸ್ ಕಾಲೇಜು ಸೇರಿದ್ದೆ. ಕಾಲೇಜು ಮುಗಿದ ಮೇಲೆ ಲಂಡನ್ ಗೆ ತೆರಳಿ ಅಲ್ಲಿ ಫ್ಯಾಷನ್ ಡಿಸೈನಿಂಗ್ ಕುರಿತು ಒಂದು ಕೋರ್ಸ್ ಮಾಡಿಬಂದೆ.

ಮೊದಲು ನಿಮಗೆ ನಟಿಸಬೇಕು ಅನಿಸಿದ್ದು ಯಾವಾಗ?Aishwarya-Arjun8832
ತೀರಾ ಸಣ್ಣ ವಯಸ್ಸಿನಿಂದಲೂ ಸಿನಿಮಾ ಮತ್ತು ಸಿನಿಮಾರಂಗವನ್ನ ಹತ್ತಿರದಿಂದ ನೋಡಿಬೆಳೆದವಳು ನಾನು. ನನ್ನ ಇಡೀ ಕುಟುಂಬದ ಸದಸ್ಯರೆಲ್ಲಾ ಸಿನಿಮಾ ಮೂಲದವರು. ಹೀಗಾಗಿ ನಟಿಸಬೇಕು ಅನ್ನೋ ಆಸೆ ನಾನು ಬೆಳೆದಂತೆಲ್ಲಾ ನನ್ನ ಜೊತೇನೆ ಬೆಳೆಯುತ್ತಾ ಬಂತು.

ಮೊದಲ ಅವಕಾಶ ಬಂದಾಗಿನ ಅನುಭವ?
ನಾನು ಸಿಂಗಪೂರ್ ನಲ್ಲಿ ಇದ್ದಾಗ ನನ್ನ ಮೊದಲ ಸಿನಿಮಾದ ಅವಕಾಶ ಬಂತು. ‘ಪಟ್ಟತ್ತ ಆನೈ’ (ಪಟ್ಟದ ಆನೆ) ಸಿನಿಮಾದ್ದು. ವಿಶಾಲ್ ಜೊತೆ ನಟಿಸಿದ್ದೆ. ಮೊದಲು ಆ ಅವಕಾಶ ಬಂದಾಗ ನಾನು ಅಷ್ಟೇನು ಸೀರಿಯಸ್ಸಾಗಿ ಪರಿಗಣಿಸಿರಲಿಲ್ಲ. ಆ ಸಿನಿಮಾದ ಕಥೆ ಕೇಳಿದ ನಂತರ ತುಂಬಾನೇ ಇಷ್ಟ ಆಯ್ತು. ಒಪ್ಪಿದ್ದೆ.

Aishwarya Arjun New Hot Photo Shoot HD Photos

ನೀವು ಸಿನಿಮಾಗೆ ಬರುವುದರ ಕುರಿತು ನಿಮ್ಮ ತಂದೆ ಮತ್ತು ಮನೆಯವರ ಅಭಿಪ್ರಾಯ ಏನಿತ್ತು?
ನಾವಿಬ್ಬರು ಮಕ್ಕಳು. ಇಬ್ಬರೂ ಮಕ್ಕಳಿಗೂ ನಮ್ಮ ತಂದೆ ಹೇಳಿರೋದೇನೆಂದರೆ, ನೀವು ಸಿನಿಮಾಗೆ ಬರುವುದು ಬಿಡುವುದರ ಆಯ್ಕೆ ನಿಮ್ಮದು. ಆದರೆ ಒಳ್ಳೆ ತೀರ್ಮಾನ್ ತೆಗೆದುಕೊಳ್ಳಿ ಅನ್ನೋದಷ್ಟೇ ಅವರ ಅಭಿಪ್ರಾಯ. ನನ್ನ ತಾಯಿ ಆಶಾರಾಣಿ ಕೂಡಾ ಕನ್ನಡ ಚಿತ್ರರಂಗದಲ್ಲಿ ನಟಿಯಾಗಿದ್ದವರು. ಆಕೆ ನನ್ನ ಪಾಲಿನ ದೇವತೆ. ಅವರು ಕೊಡುವ ಸಹಕಾರ ಸಲಹೆಗಳಿದೆಯಲ್ಲಾ? ಅದನ್ನು ವಿವರಿಸಲು ಸಾಧ್ಯವಿಲ್ಲ. ನನ್ನ ತಂದೆ ತಾಯಿ ಇಬ್ಬರೂ ನನ್ನ ಬೆನ್ನೆಲುಬಾಗಿದ್ದಾರೆ.

ನೀವು ಮೊದಲ ಬಾರಿಗೆ ಕ್ಯಾಮೆರಾ ಮುಂದೆ ನಿಂತಾಗ ಹೇಗಿತ್ತು?
ರಕ್ತಗತವಾಗೇ ಸಿನಿಮಾ ಕಲೆ ಅನ್ನೋದು ಬಂದಿದ್ದರೂ ಮೊದಲ ಬಾರಿಗೆ ಕ್ಯಾಮೆರಾ ನಿಭಾಯಿಸಿದಾಗ ಒಂಚೂರ್ ನರ್ವಸ್ ಆಗಿದ್ದೆ. ಅದು ಪಟ್ಟದ ಆನೆ ಸಿನಿಮಾದ ಚಿತ್ರೀಕರಣ. ವಿಶಾಲ್ ಅವರೊಂದಿಗೆ ಹಾಡಿಗಾಗ ಒಂದು ಮಾಂಟೇಜಸ್ ದೃಶ್ಯದಲ್ಲಿ ಪಾಲ್ಗೊಂಡಿದ್ದೆ. ಒಂದೇ ಒಂದು ಟೇಕ್ ಮುಗಿಯುವ ಹೊತ್ತಿಗೆ ನನ್ನ ಭಯ ದೂರವಾಗಿತ್ತು.

ಕನ್ನಡದಲ್ಲಿ ಪ್ರಥಮವಾಗಿ ನಟಿಸುತ್ತಿದ್ದೀರಿ ಏನನ್ನಿಸುತ್ತಿದೆ?
ಅಪಾರವಾದ ಸಂಭ್ರಮ ಮತ್ತು ಖುಷಿಯಲ್ಲಿದ್ದೀನಿ. ನಾನು ಓದಿದ್ದು ಬೆಳೆದದ್ದೆಲ್ಲಾ ತಮಿಳುನಾಡಿನಲ್ಲಾದರೂ ಕನ್ನಡ ನನ್ನ ತಾಯಿ ಭಾಷೆ. ನಾವು ಮನೆಯಲ್ಲಿ ಕೂಡಾ ಕನ್ನಡದಲ್ಲೇ ಮಾತಾಡಿಕೊಳ್ಳೋದು. ಈ ಕಾರಣದಿಂದಲೇ ನಿಮ್ಮೊಟ್ಟಿಗೆಲ್ಲಾ ಇಷ್ಟು ಸರಾಗವಾಗಿ ನಾನು ಕನ್ನಡದಲ್ಲಿ ಮಾತಾಡೋಕೆ ಸಾಧ್ಯ. ಹೀಗಿರುವಾಗ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ನಟಿ ತ್ತಿದ್ದೇನೆ ಅನ್ನೋ ಹೆಮ್ಮೆ ನನಗೆ.

ನಿಮ್ಮ ತಂದೆ ನಿಮ್ಮ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ ಇದರ ಬಗ್ಗೆ ಏನನ್ನಿಸುತ್ತೆ?
ಕನ್ನಡಿಯ ಮುಂದೆ ನಟಿಸುತ್ತಿದ್ದವಳನ್ನು ಕರೆತಂದು ಕಡೆಗೂ ಕ್ಯಾಮೆರಾಮುಂದೆ ನಿಲ್ಲಿಸುತ್ತಿದ್ದಾರೆ. ಅವರಿಗೆ ನಾನು ಚಿರರುಣಿಯಾಗಿದ್ದಾಳೆ. ನನ್ನ ತಂದೆ ಒಟ್ಟು ಹದಿನೈದು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಕನ್ನಡದಲ್ಲಿ ಇದು ಎರಡನೇ ಸಿನಿಮಾ. ಆ ಸಿನಿಮಾವನ್ನು ನನಗಾಗಿ ನಿರ್ಮಿಸುತ್ತಿರೋದು ಮಾತ್ರವಲ್ಲದೆ, ನಿರ್ದೇಶನವನ್ನೂ ಅವರೇ ಮಾಡುತ್ತಿರೋದು ನನಗೆ ಸಮಾಧಾನ ಮತ್ತು ಖುಷಿ ಎರಡನ್ನೂ ಕೊಟ್ಟಿದೆ.

1 thought on “ಅಪ್ಪ ಬರೆಯಲಿರುವ ಹಣೆಬರಹ!

  1. They are super cute! Just a thought: Bakerella (the cake pop goddess) dips the stick into the chhdolate/cancymelts/woatever and then sticks it into the cakeball, lets it harden a bit and then dips the cake pop.

Leave a Reply

Your email address will not be published. Required fields are marked *


CAPTCHA Image
Reload Image