One N Only Exclusive Cine Portal

275ರ ಗಡಿ ದಾಟಿದ ಗಾಂಧಾರಿ!

ಕಲರ‍್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಧಾರಾವಾಹಿಗಳೆಲ್ಲವೂ ಪ್ರೇಕ್ಷಕರಿಗೆ ಮೋಡಿ ಮಾಡುವಲ್ಲಿ ಯಶ ಕಂಡಿವೆ. ಅದರಲ್ಲಿಯೂ ವಿಶೇಷವಾಗಿ ‘ಗಾಂಧಾರಿ ಧಾರಾವಾಹಿ ತನ್ನದೇ ಆದ ಅಗಾಧ ಪ್ರೇಕ್ಷಕರನ್ನು ಸೃಷ್ಟಿಸಿಕೊಂಡಿದೆ. ದಿನದಿಂದ ದಿನಕ್ಕೆ ಕುತೂಹಲ ಕಾಯ್ದಿಟ್ಟುಕೊಂಡೇ ಸಾಗಿರೋ ಈ ಧಾರಾವಾಹಿ ಇದೀಗ ೩೭೫ ಕಂತುಗಳನ್ನು ಪೂರೈಸಿಕೊಂಡಿದೆ.
ಈಗಿರುವ ಸ್ಪರ್ಧೆಯ ನಡುವೆ ಧಾರಾವಾಹಿಯೊಂದು ಇಷ್ಟು ಕಂತುಗಳನ್ನು ಯಶಸ್ವಿಯಾಗಿ ದಾಟಿಕೊಳ್ಳುವುದು ಸವಾಲಿನ ವಿಚಾರವೇ. ಇಡೀ ತಂಡದ ನಿರಂತರ ಪರಿಶ್ರಮದಿಂದ ಗಾಂಧಾರಿ ಧಾರಾವಾಹಿ ಪ್ರೇಕ್ಷಕರ ಮನಸಿಗೆ ಹತ್ತಿರಾಗಿದೆ.
ಕೋಮಲ್ ಎಂಟರ್ ಪ್ರೈಸಸ್ ಅಡಿಯಲ್ಲಿ ಆನಂದ್ ಆಡಿಯೋ ಕಂಪೆನಿ ಬ್ಯಾನರ್‌ನಲ್ಲಿ ಮೂಡಿ ಬರುತ್ತಿರುವ ಈ ಧಾರಾವಾಹಿಯನ್ನು ನಿರ್ದೇಶನ ಮಾಡುತ್ತಿರುವವರು ಲೋಕೇಶ್ ಕೃಷ್ಣ. ಒಂದು ಧಾರಾವಾಹಿಯನ್ನು ಈ ರೀತಿ ನೂರಾರು ಕಂತುಗಳನ್ನು ದಾಟಿಸೋದೆಂದರೆ ತಮಾಷೆಯ ಮಾತಲ್ಲ. ಅಲ್ಲಿ ಪ್ರತೀ ದಿನದ ಎಪಿಸೋಡೂ ಕೌಂಟ್ ಆಗುತ್ತದೆ. ಪ್ರತೀ ದಿನವೂ ಕೌತುಕ ಕಾಯ್ದಿಟ್ಟುಕೊಳ್ಳುವಂತೆ ಮಾಡಿದರೆ ಮಾತ್ರ ಇಲ್ಲಿ ಜೈಸಿಕೊಳ್ಳಬಹುದಷ್ಟೇ. ಇಲ್ಲಿ ಒಂದು ದಿನದ ಗೆಲುವನ್ನು ಮಾರನೇ ದಿನದ ತುಸು ಸಪ್ಪೆ ವಾತಾವರಣ ನುಂಗಿ ಹಾಕುತ್ತದೆ.
ಇಂಥಾದ್ದರ ನಡುವೆಯೂ ತಮ್ಮ ನಿರ್ದೇಶನದ ಧಾರಾವಾಹಿ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಾ ಮುನ್ನುಗ್ಗುತ್ತಿದೆ ಎಂಬ ಖುಷಿ ಲೋಕೇಶ್ ಕೃಷ್ಣ ಅವರದ್ದು. ಈ ಧಾರಾವಾಹಿಯ ಮುಖ್ಯ ಭೂಮಿಕೆಯಲ್ಲಿರುವ ಜಗನ್ ಮತ್ತು ಕಾವ್ಯಾ ಗೌಡ ಕೂಡಾ ತಮ್ಮ ನಟನೆಯಿಂದಲೇ ಕಿರುತೆರೆ ಪ್ರೇಕ್ಷಕರನ್ನು ಆವರಿಸಿಕೊಂಡಿದ್ದಾರೆ. ಈಗಾಗಲೇ ಆನಂದ್ ಆಡಿಯೋ ಬ್ಯಾನರ್ ಮೂಲಕ ನಾಲಕ್ಕು ಚಿತ್ರಗಳನ್ನು ಮಾಡಿರೋ ಆನಂದ್ ಗಾಂಧಾರಿ ಧಾರಾವಾಹಿಯನ್ನು ೬೦೦ ಕಂತುಗಳ ಗಡಿ ದಾಟಿಸುವ ಉತ್ಸಾಹದಲ್ಲಿದ್ದಾರೆ.

Leave a Reply

Your email address will not be published. Required fields are marked *


CAPTCHA Image
Reload Image