One N Only Exclusive Cine Portal

3 ಘಂಟೆ 30 ದಿನ 30 ಸೆಕೆಂಡ್ ಮತ್ತು 4 ಹಾಡು!

ಶೀರ್ಷಿಕೆಯಲ್ಲಿಯೇ ಕೌತುಕ ಬಚ್ಚಿಟ್ಟುಕೊಂಡಿರೋ ಚಿತ್ರ ‘3 ಘಂಟೆ 30 ದಿನ 30 ಸೆಕೆಂಡ್. ಚಂದ್ರಶೇಖರ್ ಆರ್ ಪದ್ಮಶಾಲಿ ನಿರ್ಮಾಣದ ಮತ್ತು ಮಧುಸೂಧನ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಚಿತ್ರದ ಹಾಡುಗಳನ್ನು ಚಿತ್ರತಂಡ ಆಕರ್ಷಕವಾಗಿಯೇ ಅನಾವರಣಗೊಳಿಸಿದೆ.
ನಾಲ್ವರು ಮಹನೀಯರಿಂದ ಒಂದೊಂದು ಹಾಡುಗಳನ್ನು ಅನಾವರನಗೊಳಿಸಿದ್ದು ವಿಶೇಷ. ಮೊದಲ ಹಾಡನ್ನು ಅನಾವರಣಗೊಳಿಸಿದವರು ಆನಂದ ಗುರೂಜಿ. ಎರಡನೇ ಹಾಡು ನಾದಬ್ರಹ್ಮ ಹಂಸಲೇಖ ಅವರಿಂದ ಅನಾವರಣಗೊಂಡಿತು. ಹಂಸಲೇಖ ಈ ಚಿತ್ರದ ಶೀರ್ಷಿಕೆಯನ್ನು ಕೂಡಾ ಸಂಗೀತದ ಮಟ್ಟುಗಳ ಮೂಲಕ ವಿಶ್ಲೇಷಣೆ ಮಾಡಿ ಅಚ್ಚರಿಗೊಳಿಸಿದರು. ಚಿತ್ರತಂಡಕ್ಕೆ ಸ್ಫೂರ್ತಿ ನೀಡುವಂಥಾ ಮಾತುಗಳನ್ನಾಡಿದರು.
ಮೂರನೇ ಹಾಡನ್ನು ಹಿರಿಯ ನಿರ್ದೇಶಕ ಭಗವಾನ್ ಬಿಡುಗಡೆ ಮಾಡಿದರೆ, ನಾಲಕನೆಯದನ್ನು ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಬಿಡುಗಡೆ ಮಾಡಿದರು. ಶ್ರೀಧರ್ ಸಂಭ್ರಮ್ ಸಂಗೀತ ಸಂಯೋಜನೆಯ ಈ ಹಾಡುಗಳ ಬಗ್ಗೆ ಎಲ್ಲರಿಂದ ತುಂಬು ಮೆಚ್ಚುಗೆಯೂ ವ್ಯಕ್ತವಾಯಿತು.
ಕಾವ್ಯಾ ಶೆಟ್ಟಿ ನಾಯಕಿಯಾಗಿರೋ ಈ ಚಿತ್ರದಲ್ಲಿ ನಾಯಕ ಅರು ಗೌಡ ವಕೀಲನಾಗಿ ಮಜವಾದ ಪಾತ್ರದಲ್ಲಿ ಕಾಣಸಿಕೊಂಡಿದ್ದಾರಂತೆ. ಈ ಚಿತ್ರ ಆದಷ್ಟು ಬೇಗನೆ ಪ್ರೇಕ್ಷಕರ ಮುಂದೆ ಪ್ರತ್ಯಕ್ಷವಾಗಲಿದೆ.

Leave a Reply

Your email address will not be published. Required fields are marked *


CAPTCHA Image
Reload Image