Connect with us

ಫೋಕಸ್

ಅರನೇ ಮೈಲಿಯಲ್ಲಿದೆಯಾ ಪಶ್ಚಿಮಘಟ್ಟದ ನಿಗೂಢ?

Published

on

ಪಶ್ಚಿಮಘಟ್ಟವೆಂದರೆ ಚಾರಣಪ್ರಿಯರನ್ನು ಸದಾ ಸೆಳೆಯುವ ಪ್ರದೇಶ. ಆದರೆ ಕೊಂಚ ಎಚ್ಚರ ತಪ್ಪಿದರೂ ಇಲ್ಲಿನ ಕಾಡೊಳಗಿನ ನಿಗೂಢಗಳ ಚಕ್ರವ್ಯೂಹದಲ್ಲಿ ಕಳೆದು ಹೋಗೋ ಅಪಾಯಗಳೂ ಇವೆ. ಇದರ ಜಾಡು ಹಿಡಿದರೆ ಅನೇಕಾನೇಕ ರಿಯಲ್ ಸಸ್ಪೆನ್ಸ್ ಥ್ರಿಲ್ಲರ್ ಕಂ ಹಾರರ್ ಕಥೆಗಳೂ ಧಾರಾಳವಾಗಿ ಸಿಗುತ್ತವೆ. ಇಂಥಶಾ ಒಂದಷ್ಟು ರೋಚಕವಾದ ಸತ್ಯ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ತಯಾರಾಗಿರುವ ಚಿತ್ರ 6ನೇ ಮೈಲಿ!

ಸದಾ ಭಿನ್ನವಾದ ಪಾತ್ರಗಳ ಆವಿಷ್ಕಾರ ನಡೆಸುತ್ತಾ ಬಂದಿರುವ ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಈ ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕರ್ನಾಟಕದ ಪ್ರಮುಖ ಆಕರ್ಷಣೆಯಂತಿರೋ ಪಶ್ಚಿಮ ಘಟ್ಟದ ಒಡಲೊಳಗೆ ಟ್ರಕ್ಕಿಂಗಿಗೆ ತೆರಳೋ ಯುವಕನೋರ್ವನ ಸುತ್ತ ಹೆಣೆದಿರೋ ಆರನೇ ಮೈಲಿಯ ಕಥೆ ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯದ್ದು. ಸೀನಿ ನಿರ್ದೇಶನದ ಈ ಚಿತ್ರ ಇದೀಗ ಭಾರೀ ನಿರೀಕ್ಷೆಗಳ ಒಡ್ಡೋಲಗದೊಂದಿಗೆ ತೆರೆ ಕಾಣಲು ಸಜ್ಜುಗೊಂಡಿದೆ.

ಡಾ ಶೈಲೇಶ್ ಕುಮಾರ್ ನಿರ್ಮಾಣದ ಈ ಚಿತ್ರದ ಹಾಡುಗಳನ್ನು ಕಿಚ್ಚಾ ಸುದೀಪ್ ಸೇರಿದಂತೆ ಅನೇಕ ಸ್ಟಾರ್ ನಟರೇ ಮೆಚ್ಚಿಕೊಂಡಿದ್ದಾರೆ. ಸಾಯಿ ಕಿರಣ್ ಸಂಗೀತ ನೀಡಿರುವ ಹಾಡುಗಳೆಲ್ಲವೂ ಚಿತ್ರದೆಡೆಗಿನ ನಿರೀಕ್ಷೆಯ ಕಾವೇರಿಸುವಲ್ಲಿ ಸಫಲವಾಗಿವೆ. ಕಣ್ಣಿಗೆ ಹಬ್ಬದಂಥಾ ದೃಷ್ಯಾವಳಿಗಳನ್ನೂ ಹೊಂದಿರುವ ಈ ಚಿತ್ರವನ್ನು ತಾ ಂತ್ರಿಕವಾಗಿಯೂ ಗಮನ ಸೆಳೆಯುವಂತೆ ರೂಪಿಸುವಲ್ಲಿ ನಿರ್ದೇಶಕರು ಪ್ರಯತ್ನಿಸಿದ್ದಾರಂತೆ. ಸ್ಕ್ರಿಫ್ಟ್ ಹಂತದಲ್ಲಿಯೇ ಪ್ರತಿಯೊಂದು ಪಾತ್ರಗಳನ್ನೂ ಭಿನ್ನವಾಗಿ ರೂಪಿಸುವತ್ತ ಗಮನ ಹರಿಸಿದ್ದ ಸೀನಿ ರಿವರ್ಸ್ ಸ್ಕ್ರೀನ್ ಪ್ಲೇನಂಥಾ ರಿಸ್ಕೀ ಅಂಶಗಳಿಗೂ ಪ್ರಧಾನ್ಯತೆ ನೀಡಿದ್ದಾರಂತೆ.

ಎಂಥವರನ್ನೂ ಸೆಳೆಯುವ ಪಶ್ಚಿಮಘಟ್ಟದ ಸೌಂದರ್ಯದೊಳಗಿನ ನಿಗೂಢವನ್ನು ತೆರೆದಿಡುವ ಈ ಚಿತ್ರಕ್ಕಾಗಿ ಪ್ರೇಕ್ಷಕರಲ್ಲೊಂದು ಕಾತರ ಮೂಡಿಕೊಂಡಿದೆ. ಅದಕ್ಕೆ ಪೂರಕವಾಗಿಯೇ ಚಿತ್ರ ಮೂಡಿ ಬಂದಿದೆ ಎಂಬುದು ಚಿತ್ರ ತಂಡದ ಭರವಸೆ.

Continue Reading
Advertisement
Click to comment

Leave a Reply

Your email address will not be published. Required fields are marked *

ಫೋಕಸ್

ದಂಡುಪಾಳ್ಯ 4 ಪರಭಾಷಾ ಚಿತ್ರರಂಗದಲ್ಲಿಯೂ ಸದ್ದು ಮಾಡಿದ ಲಿರಿಕಲ್ ವೀಡಿಯೋ!

Published

on

ವೆಂಕಟ್ ಮೂವೀಸ್ ಲಾಂಛನದಡಿ ನಿರ್ಮಾಣಗೊಂಡಿರೋ ದಂಡುಪಾಳ್ಯ 4 ಚಿತ್ರದ ಐಟಂ ಸಾಂಗೊಂದು ಬಿಡುಗಡೆಯಾಗಿದೆ. ಮುಮೈತ್ ಖಾನ್ ಮಾದಕವಾಗಿ ಕುಣಿದಿರೋ, ಅದಕ್ಕೆ ತಕ್ಕುದಾದ ಸಂಗೀತ ಮತ್ತು ಸಾಹಿತ್ಯವಿರೋ ಈ ಹಾಡು ಪಡ್ಡೆಗಳನ್ನು ಹುಚ್ಚೆಬ್ಬಿಸುವಂತೆಯೂ ಮೂಡಿ ಬಂದಿದೆ. ಇದೀಗ ಕನ್ನಡವೂ ಸೇರಿದಂತೆ ನಾಲಕ್ಕು ಭಾಷೆಗಳಲ್ಲಿ ಈ ಹಾಡಿನ ಲಿರಿಕಲ್ ವೀಡಿಯೋ ಬಿಡುಗಡೆಯಾಗಿದೆ. ಈ ಮೂಲಕ ದಂಡುಪಾಳ್ಯಂ ಚಿತ್ರ ಪರಭಾಷೆಗಳಲ್ಲಿಯೂ ಅಲೆಯೆಬ್ಬಿಸಿದೆ.

ಸ್ಟೆಪ್ಪು ಹೊಡಿ ಸ್ಟೆಪ್ಪು ಹೊಡಿ ಟಪ್ಪಾಂಗುಚ್ಚಿ ಸ್ಟೆಪ್ಪು ಹೊಡಿ ಎಂಬ ಇಡೀ ಹಾಡನ್ನು ಮಾದಕವಾಗಿಯೇ ಅಣಿಗೊಳಿಸಿರೋ ಚಿತ್ರತಂಡ, ಈ ಮೂಲಕವೇ ಮತ್ತಷ್ಟು ಪ್ರೇಕ್ಷಕರನ್ನು ಸೆಳೆದುಕೊಳ್ಳೋದರಲ್ಲಿ ಗೆದ್ದಿದೆ. ಮುಮೈತ್ ಖಾನ್ ಮಾದಕವಾಗಿ ಕುಣಿದಿರೋ ಈ ಹಾಡಿನ ಲಿರಿಕಲ್ ವೀಡಿಯೋ ಕನ್ನಡ, ತೆಲುಗು, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿಯೂ ಬಿಡುಗಡೆಯಾಗಿದೆ. ಅಷ್ಟೂ ಭಾಷೆಗಳಲ್ಲಿ ಬಹುಬೇಗನೆ ಅತಿ ಹೆಚ್ಚು ವೀಕ್ಷಕರನ್ನು ಪಡೆಯುವ ಮೂಲಕ ಟ್ರೆಂಡಿಂಗ್‌ನಲ್ಲಿದೆ.

ಈ ಹಾಡನ್ನು ನಿರ್ಮಾಪಕರಾದ ವೆಂಕಟ್ ಅವರೇ ಬರೆದಿದ್ದಾರೆ. ಆನಂದ್ ರಾಜ್ ವಿಕ್ರಂ ಸಂಗೀತ ನೀಡಿದ್ದಾರೆ. ಕೆ ಟಿ ನಾಯಕ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ವರೆಗೆ ಮೂರು ಸರಣಿಯ ಡಂಡುಪಾಳ್ಯ ಚಿತ್ರಣ ಮೂಡಿ ಬಂದಿದೆ. ಆದರೆ ದಂಡುಪಾಳ್ಯಂ ಚಿತ್ರದಲ್ಲಿ ತಾರಾಗಣವೂ ಸೇರಿದಂತೆ ಎಲ್ಲವೂ ಬದಲಾಗಿದೆ. ಒಟಾರೆ ಚಿತ್ರದ ನಿಜವಾದ ಕಸುವೇನೆಂಬುದು ಈ ರಿರಿಕಲ್ ವೀಡಿಯೋ ಸೃಷ್ಟಿಸಿರೋ ಕ್ರೇಜ್‌ನ ಮೂಲಕವೇ ಅನಾವರಣಗೊಂಡಿದೆ.

ಈ ಬಾರಿ ದಂಡುಪಾಳ್ಯಂ 4  ಚಿತ್ರದ ಪ್ರಮುಖ ಆಕರ್ಷಣೆ ಸುಮನ್ ರಂಗನಾಥ್. ಅವರಿಲ್ಲಿ ಇಮೇಜಿನ ಹಂಗಿಲ್ಲದೆ ಡಿಫರೆಂಟಾದ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ಇದುವರೆಗೂ ಗ್ಲಾಮರ್ ಪಾತ್ರಗಳಲ್ಲಿಯೇ ಮಿಂಚುತ್ತಾ ಬಂದಿರೋ ಅವರು ದಂಡುಪಾಳ್ಯ ಗ್ಯಾಂಗಿನ ಮಹಿಳೆಯಾಗಿ ನಟಿಸಿದ್ದಾರೆ. ಈ ಕಾರಣದಿಂದಲೂ ದಂಡುಪಾಳ್ಯಂ ೪ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ನಿರೀಕ್ಷೆ ಮೊಳೆತುಕೊಂಡಿದೆ.

ಕನ್ನಡ ಚಿತ್ರಗಳನ್ನು ಪರಭಾಷಾ ನೆಲದಲ್ಲಿಯೂ ಮಿಂಚುವಂತೆ ಮಾಡಬೇಕೆಂಬ ಕನಸು ಹೊಂದಿರುವವರು ನಿರ್ಮಾಪಕ ವೆಂಕಟ್. ಅದರಲ್ಲಿ ಅವರು ಈ ಹಿಂದೆಯೂ ಯಶ ಕಂಡಿದ್ದಾರೆ. ಅದರ ಭಾಗವಾಗಿಯೇ ಇದೀಗ ಈ ಚಿತ್ರದ ಲಿರಿಕಲ್ ವೀಡಿಯೋ ಪರಭಾಷೆಗಳಲ್ಲಿಯೂ ಸದ್ದು ಮಾಡುತ್ತಿದೆ.

ಕೆ.ಟಿ. ನಾಯಕ್ ನಿರ್ದೇಶನ ಮಾಡಿರೋ ಈ ಚಿತ್ರಕ್ಕೆ ಆರ್. ಗಿರಿ ಕ್ಯಾಮರಾ, ಬಾಬು ಎ ಶ್ರೀವತ್ಸ, ಪ್ರೀತಿ ಮೋಹನ್ ಸಂಕಲನವಿದೆ. ಸುಮನ್ ರಂಗನಾಥ್, ಮುಮೈತ್ ಖಾನ್, ಬ್ಯಾನರ್ಜಿ, ರಾಕ್ ಲೈನ್ ಸುಧಾಕರ್, ಸಂಜೀವ್ ಕುಮಾರ್, ಅರುಣ್ ಬಚ್ಚನ್, ಬುಲೆಟ್ ಸೋಮು, ವಿಠ್ಠಲ್ ರಂಗಾಯಣ, ಜೀವಾ ಸೈಮನ್, ರಿಚ್ಚಾ ಶಾಸ್ತ್ರಿ, ಸ್ನೇಹಾ ಮುಂತಾದವರ ತಾರಾಗಣವಿದೆ. ನಿರ್ಮಾಪಕ ವೆಂಕಟ್ ಅವರು ಕೂಡಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರೋದು ವಿಶೇಷ.

Continue Reading

ಫೋಕಸ್

ತಾಯಿಗೆ ತಕ್ಕ ಮಗ ಕರಾಟೆ ಪಟು ಅಜೇಯ್ ರಾವ್‌ಗಿದು ಮಹತ್ವದ ಚಿತ್ರ!

Published

on


ಶಶಾಂಕ್ ನಿರ್ಮಾಣ ಮಾಡಿ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿರೋ ತಾಯಿಗೆ ತಕ್ಕ ಮಗ ಚಿತ್ರ ಈ ವಾರ ತೆರೆ ಕಾಣುತ್ತಿದೆ. ಇದು ಶಶಾಂಕ್ ಮತ್ತು ಅಜೇಯ್ ಕಾಂಬಿನೇಷನ್ನಿನ ಮೂರನೇ ಚಿತ್ರ. ಅಜೇಯ್ ವೃತ್ತಿ ಜೀವನದಲ್ಲಿ ಇಪ್ಪತೈದನೇ ಚಿತ್ರವೂ ಹೌದು.

ಲವರ್ ಬಾಯ್ ಗೆಟಪ್ಪಿನಲ್ಲಿಯೇ ಹದಿನೈದು ವರ್ಷದಿಂದೀಚೆಗೆ ಪ್ರೇಕ್ಷಕರನ್ನು ಸೆಳೆದುಕೊಂಡಿದ್ದವರು ಅಜೇಯ್ ರಾವ್. ಇಪ್ಪತೈದನೇ ಚಿತ್ರವಾದ ತಾಯಿಗೆ ತಕ್ಕ ಮಗದಲ್ಲಿ ಅವರು ಈವರೆಗಿನ ಎಲ್ಲ ಚಿತ್ರಗಳಿಗಿಂತಲೂ ಬೇರೆಯದ್ದೇ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೈಲರಿನಲ್ಲಿಯೂ ಮಾಸ್ ಲುಕ್ಕಿನಲ್ಲಿಯೇ ಮಿಂಚಿದ್ದಾರೆ. ಈಗಾಗಲೇ ಹಾಡುಗಳು ಸೇರಿದಂತೆ ನಾನಾ ರೀತಿಯಲ್ಲಿ ಪ್ರೇಕ್ಷಕರನ್ನು ಸೆಳೆದುಕೊಂಡಿರೋ ಈ ಚಿತ್ರ ಈ ವಾರ ರಾಜ್ಯಾಧ್ಯಂತ ತೆರೆ ಕಾಣುತ್ತಿದೆ.

ಅಜೇಯ್ ರಾವ್ ಪಾಲಿಗೆ ಆಕ್ಷನ್ ಚಿತ್ರಗಳೆಂದರೆ ಆರಂಭದಿಂದಲೂ ಆಸಕ್ತಿ ಹೆಚ್ಚಾಗಿತ್ತು. ಆದರೆ ಚಿತ್ರರಂಗದಲ್ಲಿ ಅವರು ನೆಲೆ ಕಂಡುಕೊಂಡಿದ್ದು ಮಾತ್ರ ಅದಕ್ಕೆ ತದ್ವಿರುದ್ಧವಾದ ಪಾತ್ರಗಳಲ್ಲಿಯೇ. ಅಜೇಯ್ ಶಾಲಾ ದಿನಗಳಲ್ಲಿಯೇ ಕರಾಟೆ ಪಟುವಾಗಿದ್ದವರು. ಆದರೆ ಅದರ ಪ್ರದರ್ಶನಕ್ಕೆ ಚಿತ್ರಗಳಲ್ಲಿ ಅವಕಾಶ ಸಿಕ್ಕಿದ್ದಿಲ್ಲ. ತಾಯಿಗೆ ತಕ್ಕ ಮಗ ಚಿತ್ರದಲ್ಲಿ ತಮ್ಮೊಳಗಿನ ಕಲೆಗೆ ತಕ್ಕ ಅವಕಾಶ ಸಿಕ್ಕಿದೆ ಎಂಬುದು ಅಜೇಯ್ ಖುಷಿಗೆ ಕಾರಣ.

ಇನ್ನುಳಿದಂತೆ ನಿಜ ಜೀವನದಲ್ಲಿಯೂ ಅಜೇಯ್ ರಾವ್ ತಾಯಿಯ ಪ್ರೀತಿಯ ಮಗ. ಅಮ್ಮ ಅಂದರೆ ಅವರ ಜಗತ್ತು. ಈ ಬಗ್ಗೆ ಅತೀವವಾದ ಭಾವುಕತೆ ಇಟ್ಟುಕೊಂಡಿರೋ ಅವರಿಗೆ ತಮ್ಮ ಇಪ್ಪತೈದನೇ ಚಿತ್ರಕ್ಕೆ ತಾಯಿಗೆ ತಕ್ಕ ಮಗನೆಂಬ ಶೀರ್ಷಿಕೆ ಸಿಕ್ಕಿದ್ದೇ ಮಹಾ ಸಂತಸ. ಈ ಚಿತ್ರಕ್ಕಾಗಿ ತಾನು ಪಟ್ಟಿರೋ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಮತ್ತು ಈ ಹದಿನೈದು ವರ್ಷಗಳ ಹಾದಿ ಸಾರ್ಥಕವಾಗುತ್ತದೆ ಎಂಬ ಭರವಸೆ ಅವರಲ್ಲಿದೆ.

Continue Reading

ಫೋಕಸ್

ಕೆಜಿಎಫ್ ದಾಖಲೆ ಮುರಿಯಲಿದ್ದಾನಾ ಪೈಲ್ವಾನ್?

Published

on


ಯಶ್ ಅಭಿನಯದ ಕೆಜಿಎಫ್ ಟ್ರೈಲರ್ ಮೂಲಕ ದಾಖಲೆಯನ್ನೇ ಮಾಡಿದೆ. ಬಾಲಿವುಡ್ ಚಿತ್ರಗಳೇ ಥಂಡಾ ಹೊಡೆಯುವಂತೆ ಅಬ್ಬರಿಸುತ್ತಿರೋ ಈ ಚಿತ್ರವನ್ನು ಸದ್ಯಕ್ಕೆ ಯಾವ ಕನ್ನಡ ಚಿತ್ರಗಳೂ ಹಿಂದಿಕ್ಕೋದು ಸಾಧ್ಯವಿಲ್ಲವೆಂಬ ವಾತಾವರಣವಿದೆ. ಆದರೆ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ಮಾತ್ರ ಕೆಜಿಎಫ್ ದಾಖಲೆಯನ್ನು ಬ್ರೇಕ್ ಮಾಡೋ ಸೂಚನೆಗಳಿವೆ!

ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲೆಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಆದರೆ ಪೈಲ್ವಾನ್ ಚಿತ್ರ ಒಂಬತ್ತು ಭಾಷೆಗಳಲ್ಲಿ ಬಿಡುಗಡೆಯಾಗಲಿದೆಯಂತೆ. ಈ ಚಿತ್ರವನ್ನು ಕನ್ನಡ, ಹಿಂದಿ, ತಮಿಳು, ತೆಲುಗು, ಮಲೆಯಾಳಂ ಮಾತ್ರವಲ್ಲದೇ ಮರಾಠಿ, ಪಂಜಾಬಿ, ಭೋಜ್‌ಪುರಿ, ಬೆಂಗಾಲಿ ಭಾಷೆಗಳಲ್ಲಿಯೂ ತೆರೆಗಾಣಿಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ಸುದೀಪ್ ಅವರಿಗೆ ಭಾರತ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಮಾರ್ಕೆಟ್ಟಿದೆ. ಬಾಹುಬಲಿ ಚಿತ್ರದ ಮೂಲಕ ಎಲ್ಲ ಭಾಷೆಗಳಲ್ಲಿಯೂ ಅವರಿಗೆ ಪ್ರೇಕ್ಷಕರಿದ್ದಾರೆ. ಅದನ್ನು ಸಂಪೂರ್ಣವಾಗಿ ಬಳಸಿಕೊಂಡು ಹೊಸಾ ದಾಖಲೆ ಸೃಷ್ಟಿಸಲು ಪೈಲ್ವಾನ್ ಚಿತ್ರತಂಡ ಮುಂದಾಗಿದೆ. ಈ ಚಿತ್ರ ಕೂಡಾ ವಿಶೇಷವಾದೊಂದು ಕಥೆ ಹೊಂದಿದೆ ಎಂಬ ಸುಳಿವು ಈಗಾಗಲೇ ಸಿಕ್ಕಿದೆ. ಸುದೀಪ್ ಈವರೆಗಿನ ಗೆಟಪ್ಪುಗಳಿಗಿಂತಲೂ ಭಿನ್ನ ಅವತಾರಗಳಲ್ಲಿ ಕಾಣಿಸಿಕೊಂಡಿರೋ ಪೋಸ್ಟರುಗಳೇ ಎಲ್ಲವನ್ನೂ ಹೇಳುತ್ತಿವೆ. ಬಹುಶಃ ಕೆಜಿಎಫ್ ಚಿತ್ರದ ಹಿಂದೆಯೇ ಪೈಲ್ವಾನ್ ಚಿತ್ರದ ಅಬ್ಬರವೂ ಶುರುವಾಗಲಿದೆ.

Continue Reading
Advertisement
Chitralahari 400 x 600
DJ ENTERTAINMENTS 300 x 600

Trending

Copyright © 2018 Cinibuzz