One N Only Exclusive Cine Portal

ACTION ಹೀರೋ ಆಗಿ ಗಣೇಶ್ ಗೆಲುವು

‘ಅನುಭವೀ ನಟನೊಬ್ಬ ಮನಸ್ಸು ಮಾಡಿದರೆ ಯಾವ ಬಗೆಯ ಪಾತ್ರಕ್ಕೂ ತನ್ನನ್ನು ತಾನು ಒಗ್ಗಿಸಿಕೊಳ್ಳಬಹುದು ಅನ್ನೋದಕ್ಕೆ ಬಹುಶಃ ಸ್ಪಷ್ಟ ನಿದರ್ಶನ ಗೋಲ್ಡನ್ ಸ್ಟಾರ್ ಗಣೇಶ್.

ಗಣೇಶ್ ಅವರ ಆರಂಭದ ಸಿನಿಮಾಗಳಲ್ಲಿ ಲವರ್ ಬಾಯ್ ಪಾತ್ರಗಳೇ ಹೆಚ್ಚಾಗಿದ್ದವು. ಮುಂಗಾರು ಮಳೆ, ಚೆಲುವಿನ ಚಿತ್ತಾರ ಮುಂತಾದ ಸಿನಿಮಾಗಳು ಹಿಟ್ ಆದ ಮೇಲಂತೂ ನೋಡುಗರು ತಮ್ಮ ಮನಸ್ಸಿನಲ್ಲಿ ಗಣೇಶ್ ಅವರನ್ನು ಪರ್ಮನೆಂಟು ಲವರ್ ಬಾಯ್ ಆಗಿ ಫಿಕ್ಸ್ ಮಾಡಿಕೊಂಡುಬಿಟ್ಟಿದ್ದರು. ಒಬ್ಬ ಹೀರೋ ಎಷ್ಟು ದಿನಾ ತಾನೇ ಒಂದೇ ರೀತಿಯ ಪಾತ್ರಗಳನ್ನು ಮಾಡಲು ಸಾಧ್ಯ? ಹೀಗಾಗಿ ಗಣೇಶ್ ಕೂಡಾ ಇತ್ತೀಚೆಗೆ ತಮಗೆ ಅಂಟಿರುವ ಇಮೇಜ್ ನಿಂದ ಹೊರಬರುವಲ್ಲಿ ಸಾಕಷ್ಟು ಪ್ರಯತ್ನ ಮಾಡಿದ್ದರು. ಬೇರೆ ಬೇರೆ ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದರು. ‘ಪಟಾಕಿ ಸಿನಿಮಾ ಶುರುವಾದಾಗ ‘ಗಣೇಶ್ ಅವರಿಗೆ ಪೊಲೀಸ್ ಅಧಿಕಾರಿಯ ಪಾತ್ರ ಹೊಂದುತ್ತದಾ ಅಂತಾ ಗಾಂಧೀನಗರದವರೇ ಮಾತಾಡಿಕೊಂಡಿದ್ದರು. ಆದರೆ, ಈಗ ಬಿಡುಗಡೆಯಾಗಿರುವ ಪಟಾಕಿ ಎಲ್ಲರ ಪ್ರಶ್ನೆಗೆ ಉತ್ತರ ನೀಡುವಂತಿದೆ. ಗಣೇಶ್ ಪಟಾಕಿಯಲ್ಲಿ ಬರೀ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿಲ್ಲ. ಆರಂಭದಲ್ಲಿ ಭ್ರಷ್ಟ ಪೊಲೀಸ್ ಆಗಿ, ನಂತರ ಖಡಕ್ಕು ಅಧಿಕಾರಿಯಾಗಿ ರೂಪಾಂತರಗೊಳ್ಳುತ್ತಾರೆ. ನಟನೆಯಲ್ಲಿ ಕೂಡಾ ಎರಡು ಶೇಡ್‌ಗಳಿವೆ. ಪೊಲೀಸ್ ಅಧಿಕಾರಿಯಾಗಿ ಅವತಾರವೆತ್ತಿರುವ ಗಣೇಶ್ ಅವರ ಮುಖದಲ್ಲಿ ‘ಹುಡುಗಾಟದ ಹುಡುಗನ ಕಳೆ ಮರೆಯಾಗಿ ಒಬ್ಬ ಪೊಲೀಸ್ ಅಧಿಕಾರಿಗೆ ಬೇಕಾದ ಖದರ್ರು ಎದ್ದುಕಂಡಿರೋದು ‘ಪಟಾಕಿಯ ಪವರ್ರು! ಹೀಗಾಗಿ ಜನ ಗಣೇಶ್ ಅವರನ್ನು ಆಕ್ಷನ್ ಹೀರೋ ಆಗಿ ಕೂಡಾ ಮುಕ್ತ ಮನಸ್ಸಿನಿಂದ ಸ್ವೀಕರಿಸಿದ್ದಾರೆ.
ಒಟ್ಟಾರೆಯಾಗಿ ಒಂದಂತೂ ನಿಜ. ಗಣೇಶ್ ತಮಗೆ ಯಾವ ಪಾತ್ರವನ್ನು ಕೊಟ್ಟರೂ ಅದಕ್ಕೆ ಬೇಕಿರುವ ಸಿದ್ದತೆ ಮಾಡಿಕೊಂಡು ನಟಿಸಿ ತೋರುವ ಕಲಾವಿದ ಅನ್ನೋದು ಮತ್ತೊಮ್ಮೆ ಜಾಹೀರಾಗಿದೆ.

Leave a Reply

Your email address will not be published. Required fields are marked *


CAPTCHA Image
Reload Image