Connect with us

ಪ್ರಚಲಿತ ವಿದ್ಯಮಾನ

ಕಿಸ್ಸಿಂಗ್ ಪುರಾಣದ ಅಸಲೀ ಸೀಕ್ರೆಟ್!

Published

on

ಚಿತ್ರೀಕರಣ ಆರಂಭವಾದಾಗಿನಿಂದಲೂ ಆಗಾಗ ಒಂದಷ್ಟು ಸುದ್ದಿಗೆ ಗ್ರಾಸವಾಗುತ್ತಾ ಬಂದಿದ್ದ ಚಿತ್ರ ಆದಿಪುರಾಣ. ಸದ್ಯಕ್ಕೆ ಈ ಚಿತ್ರ ಪ್ರೇಕ್ಷರನ್ನು ಆಕರ್ಷಿಸಿರೋದು ಒಂದು ಪೋಸ್ಟರ್‌ನಿಂದಾಗಿ. ನಾಯಕ ನಾಯಕಿಯ ಚುಂಬನ ದೃಷ್ಯದ ಈ ಪೋಸ್ಟರ್ ಮೂಲಕ ಆದಿ ಪುರಾಣದ ಅಸಲೀ ಕಥೆಯೇನೆಂಬುದರ ಬಗ್ಗೆ ಜನ ಯೋಚಿಸಲಾರಂಭಿಸಿದ್ದಾರೆ. ಈ ಹೊತ್ತಿನಲ್ಲಿಯೇ ಈ ಚಿತ್ರದ ಬಿಡುಗಡೆ ದಿನಾಂಕವೂ ನಿಗಧಿಯಾಗಿದೆ!

ಅಕ್ಟೋಬರ್ 5ರಂದು ಆದಿಪುರಾಣ ಬಿಡುಗಡೆಯಾಗೋದನ್ನು ಚಿತ್ರ ತಂಡವೇ ಅಧಿಕೃತವಾಗಿ ಘೋಶಿಸಿದೆ. ಇದಲ್ಲದೇ ಸಂಚಲನ ಸೃಷ್ಟಿಸಿರುವ ಕಿಸ್ಸಿಂಗ್ ಪೋಸ್ಟರ್ ಬಗೆಗಿನ ಅಸಲೀ ವಿಚಾರವನ್ನೂ ಹೊರ ಹಾಕಿದೆ!

ಶಮಂತ್ ನಿರ್ಮಾಣದ ಈ ಚಿತ್ರವನ್ನು ಮೋಹನ್ ಕಾಮಾಕ್ಷಿ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ನಾಯಕ ನಾಯಕಿಗೆ ಕಿಸ್ಸು ಕೊಡುತ್ತಿರೋ ಪೋಸ್ಟರ್ ಒಂದು ಇತ್ತೀಚೆಗೆ ಬಿಡುಗಡೆಯಾಗಿತ್ತು. ಅದು ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿದಾಡಿತ್ತು. ಆದರೆ ಈ ಪೋಸ್ಟರನ್ನು ಸುದ್ದಿಗಾಗಿ ಹರಿದಾಡಲು ಬಿಟ್ಟಿಲ್ಲ, ಬದಲಾಗಿ ಅದು ಕಥೆಗೆ ಪೂರಕವಾದ ಸೀನಷ್ಟೇ ಎಂಬ ವಿಚಾರವನ್ನೂ ನಿರ್ದೇಶಕರ ಸ್ಪಷ್ಟಪಡಿಸಿದ್ದಾರೆ. ಅದು ಚಿತ್ರ ಆರಂಭಕ್ಕೂ ಮುಂಚೆ ಮಾಡಿದ್ದ ಫೋಟೋಶೂಟ್ ಚಿತ್ರವಂತೆ. ಅದು ಖಮಡಿತಾ ಚಿತ್ರಕ್ಕೆ ಪೂರಕವಾಗಿದೆಯೇ ಹೊರತು ವಲ್ಗರ್ ಅನ್ನಿಸುವಂಥಾ ಯಾವ ಸನ್ನಿವೇಶಗಳೂ ಆದಿಪುರಾಣ ದಲ್ಲಿಲ್ಲ ಎಂಬುದು ಚಿತ್ರತಂಡದ ಸ್ಪಷ್ಟನೆ!

Continue Reading
Advertisement
Click to comment

Leave a Reply

Your email address will not be published. Required fields are marked *

ಪ್ರಚಲಿತ ವಿದ್ಯಮಾನ

ಆಕ್ಷನ್ ಪ್ರಿನ್ಸ್ ವಿರುದ್ಧ ದಾಖಲಾಯ್ತು ಕೇಸ್!

Published

on

ಬೆಂಗಳೂರಿನಲ್ಲಿ ಫ್ಲೆಕ್ಸ್ ಹಾಗೂ ಬ್ಯಾನರ್ ಹಾಕುವಂತಿಲ್ಲ ಎಂಬ ಬಗ್ಗೆ ಹೈಕೋರ್ಟ್ ತಪರಾಕಿ ನೀಡಿದ್ದರಿಂದ ಬಿಬಿಎಂಪಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಈ ಸಂಬಂಧವಾಗಿ ಕಟೌಟ್, ಫ್ಲೆಕ್ಸ್‌ಗಳನ್ನು ಕೂಡಾ ಬಿಬಿಎಂಪಿ ಬೆಂಗಳೂರು ವ್ಯಾಪ್ತಿಯಲ್ಲಿ ಬ್ಯಾನ್ ಮಾಡಿದೆ. ಆದರೆ ಹುಟ್ಟುಹಬ್ಬದ ಸಂದರ್ಭದಲ್ಲಿ ಇದನ್ನು ಉಲ್ಲಂಘಿಸಿದ ಆರೋಪದಡಿಯಲ್ಲಿ ದ್ರುವ ಸರ್ಜಾ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ!

ಬೆಂಗಳೂರು ಮಹಾನಗರ ಪಾಲಿಕೆಯ ಬನಶಂಕರಿ ಉಪ ವಿಭಾಗದಲ್ಲಿ ಎಆರ್‌ಓ ಆಗಿರುವ ತಾರಕಾನಾಥ್ ಧ್ರುವ ವಿರುದ್ಧ ದೂರು ದಾಖಲಿಸಿದ್ದಾರೆ. ಇತ್ತೀಚೆಗೆ ಮೂವತ್ತನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರಲ್ಲಾ ಧ್ರುವ? ಆ ಸಂದರ್ಭದಲ್ಲಿ ಕೆಆರ್ ರಸ್ತೆಯ ಶಾಸ್ತ್ರಿ ನಗರ ಸುತ್ತಮುತ್ತ ಅಭಿಮಾನಿಗಳು ಆಳೆತ್ತರದ ಕಟೌಟ್ ಹಾಕಿದ್ದರು. ಈ ರಸ್ತೆಯ ತುಂಬಾ ಧ್ರುವ ಸರ್ಜಾರ ಕಟೌಟ್, ಬ್ಯಾನರ್ ಹಾಕಿ ಶುಭ ಕೋರಿದ್ದರು. ಇದು ಕಾನೂನು ಉಲ್ಲಂಘನೆ ಅಂತ ಆರೋಪಿಸಿ ತಾರಕಾನಾಥ್ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧವಾಗಿ ದ್ರುವ ವಿರುದ್ಧ ಎಫ್‌ಐಆರ್ ಕೂಡಾ ದಾಖಲಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಯಾವುದೇ ಅನಧಿಕೃತ ಜಾಹೀರಾತು, ಹೋರ್ಡಿಂಗ್ಸ್ ಮತ್ತು ಬ್ಯಾನರ್ ಅಳವಡಿಸದಂತೆ ಆಗಸ್ಟ್ ೧೨ರಂದೇ ಕಟ್ಟುನಿಟ್ಟಿನ ಆದೇಶ ರವಾನೆ ಮಾಡಲಾಗಿತ್ತು. ಇದರ ಅರಿವಿದ್ದೋ ಇಲ್ಲದೆಯೋ ಧ್ರುವ ಅಭಿಮಾನಿಗಳು ಈ ಕಾನೂನು ಉಲ್ಲಂಘಿಸಿದ್ದಾರೆ. ಇದರ ಪರಿಣಾಮವಾಗಿ ಇದೀಗ ಧ್ರವಾ ಸರ್ಜಾಜೆ ಹೊಸಾ ತಲೆನೋವು ಶುರುವಾಗಿದೆ. ದ್ರುವ ಇದೀಗ ತಮ್ಮ ಮೇಲೆ ಕಾನೂನು ಕ್ರಮ ಜರುಗುವ ಭೀತಿ ಎದುರಿಸುತ್ತಿದ್ದಾರೆ.

Continue Reading

ಪ್ರಚಲಿತ ವಿದ್ಯಮಾನ

ಮೀಟೂ ಅಭಿಯಾನಕ್ಕೆ ರಘು ದೀಕ್ಷಿತ್ ಮಡದಿಯ ಬೆಂಬಲ!

Published

on

ಬಾಲಿವುಡ್ ನಟಿ ತನುಶ್ರೀ ದತ್ತ ನಾನಾ ಪಾಟೇಕರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದೇ ಮೀ ಟೂ ಎಂಬ ಅಭಿಯಾನವೊಂದಕ್ಕೆ ಚಾಲನೆ ನೀಡಿದೆ. ಇದರ ಮೂಲಕ ಚಿತ್ರರಂಗದ ನಟಿಯರು ತಾವು ಅನುಭವಿಸಿದ್ದ ಯಾತನೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಜಾಹೀರು ಮಾಡಲಾರಂಭಿಸಿದ್ದಾರೆ. ಈ ಮೂಲಕ ಹಲವಾರು ನಟರು ಬೆತ್ತಲಾಗುತ್ತಿದ್ದಾರೆ. ಇದೇ ಅಭಿಯಾನ ಕನ್ನಡದ ಖ್ಯಾತ ಹಾಡುಗಾರ ರಘು ದೀಕ್ಷಿತ್ ಅವರನ್ನೂ ಲುಂಗಿ ಕಳಚಿ ನಿಲ್ಲಿಸಿ ಬಿಟ್ಟಿದೆ.

ಆದರೆ, ತಮ್ಮ ಮೇಲೆ ತೆಲುಗು ಸಿಂಗರ್ ಚಿನ್ಮಯಿ ಶ್ರೀಪಾದ್ ಮಾಡಿದ್ದ ಲೈಂಗಿಕ ಕಿರುಕುಳದ ಆರೋಪವನ್ನು ರಘು ದೀಕ್ಷಿತ್ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ನೇರಾ ನೇರ ಅಭಿಪ್ರಾಯವನ್ನೂ ಹಂಚಿಕೊಂಡಿದ್ದಾರೆ. ಇದಾಗುತ್ತಲೇ ಈ ಬಗ್ಗೆ ರಘು ದೀಕ್ಷಿತ್ ಅವರ ಮಡದಿ ಮಯೂರಿ ಉಪಾಧ್ಯಾಯರ ಅಭಿಪ್ರಾಯವೇನಿರ ಬಹುದೆಂಬ ಬಗ್ಗೆ ಎಲ್ಲರಲ್ಲಿಯೂ ಕುತೂಹಲವಿತ್ತು. ಇದೀಗ ಮೀ ಟೂ ಅಭಿಯಾನದ ಮಯೂರಿ ನೇರವಾಗಿಯೇ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದುವೇ ತಮ್ಮ ಪತಿಯ ಕಿತಾಪತಿಯ ಬಗೆಗಿನ ತಮ್ಮ ಅಭಿಪ್ರಾಯ ಎಂಬುದನ್ನೂ ಕೂಡಾ ಮಯೂರಿ ಪರೋಕ್ಷವಾಗಿ ಹೇಳಿದಂತಿದೆ!

ಮೀಟೂ ಅಭಿಯಾನದ ಮೂಲಕ ಲೈಂಗಿಕ ದೌರ್ಜನ್ಯಕ್ಕೀಡಾಗಿ ನೊಂದ ಮಹಿಳೆಯರೆಲ್ಲ ಧ್ವನಿಯೆತ್ತುತ್ತಿರೋದು ಸಕಾರಾತ್ಮಕ ಬೆಳವಣಿಗೆ. ಈ ಮೂಲಕ ಎಲ್ಲರ ಮುಖವಾಡ ಕಳಚಿಕೊಳ್ಳುತ್ತಿದೆ. ಅಂಥವರಿಗೆಲ್ಲ ಶಿಕ್ಷಿಯಾಗುವಂತಾಗಲಿ. ಈ ಅಭಿಯಾನಕ್ಕೆ ನನ್ನ ಬೆಂಬಲವಿದೆ ಅಂತ ಮಯೂರಿ ಹೇಳಿಕೊಂಡಿದ್ದಾರೆ. ಅವರು ನೇರವಾಗಿ ತನ್ನ ಪತಿ ರಘು ದೀಕ್ಷಿತ್ ಬಗ್ಗೆ ಏನನ್ನೂ ಹೇಳಿಲ್ಲವಾದರೂ ತನ್ನ ಪತಿಯ ವಿರುದ್ಧ ಆರೋಪ ಮಾಡಿರೋ ಅಭಿಯಾನಕ್ಕೆ ಬೆಂಬಲ ಸೂಚಿಸುವ ಮೂಲಕ ಮಯೂರಿ ಎಲ್ಲವನ್ನೂ ಹೇಳಿಕೊಂಡಂತಾಗಿದೆ.

ರಘು ದೀಕ್ಷಿತ್ ಮತ್ತು ಮಯೂರಿ ವಿವಾಹ ವಿಚ್ಚೇದನದ ಹಂತ ತಲುಪಿಕೊಂಡಿದ್ದಾರೆ. ಒಂದು ಮೂಲದ ಪ್ರಕಾರ, ಇವರಿಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿಕೊಂಡು ವರ್ಷಗಳೇ ಕಳೆದಿವೆ. ಇನ್ನು ಒಟ್ಟಿಗಿರೋದರಲ್ಲಿ ಅರ್ಥವಿಲ್ಲ ಅನ್ನಿಸಿ ಈ ಹಿಂದೆಯೇ ಇಬ್ಬರೂ ಸಮ್ಮತಿಸಿ ವಿವಾಹ ವಿಚ್ಚೇದನದ ಮೊರೆ ಹೋಗಿದ್ದರು. ಆದರೆ ಅದು ಇತ್ಯರ್ಥವಾಗೋ ಕಡೇ ಘಳಿಗೆಯಲ್ಲಿ ರಘು ದೀಕ್ಷಿತ್ ಅವರ ಮತ್ತೊಂದು ಮುಖದ ಅನಾವರಣವಾಗಿದೆ. ಇಂಥಾ ಹೊತ್ತಿನಲ್ಲಿಯೂ ಗಂಡನ ಬಗ್ಗೆ ಯಾವ ಆರೋಪವನ್ನೂ ಮಾಡದ ಮಯೂರಿ ಮೀ ಟೂ ಅಭಿಯಾನಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ.

Continue Reading

ಕಲರ್ ಸ್ಟ್ರೀಟ್

ಮೈತ್ರಿಯಾಳ ಪಾಪ ಹೋಗ್ಬಿಡ್ತು

Published

on

ಈ ಸಿನಿಮಾ ನಟಿಯರಿಗೂ ಶ್ವಾನಪ್ರೇಮಕ್ಕೂ ಎಲ್ಲಿಲ್ಲದ ನಂಟು. ತಮ್ಮ ಭಯಾನಕ ಒತ್ತಡಗಳನ್ನೆಲ್ಲ ಮುದ್ದಿನ ನಾಯಿಗಳ ಜೊತೆ ಒಂದಷ್ಟು ಸಮಯ ಕಳೆಯೋ ಮೂಲಕ ನೀಗಿಕೊಳ್ಳುವ ನಟಿಯರನೇಕರು ತಮ್ಮಿಷ್ಟದ ನಾಯಿ ಮರಣ ಹೊಂದಿದಾಗ ಡಿಪ್ರೆಸ್ ಮೂಡಿಗೆ ಹೋಗೋದಿದೆ. ಇದೀಗ ನಟಿ ಮೈತ್ರಿಯಾ ಗೌಡ ಅಂಥಾದ್ದೇ ಮೂಡಿನಲ್ಲಿದ್ದಾರೆ!

ಮೈತ್ರಿಯಾಳ ಮುದ್ದಿನ ನಾಯಿ ನಿನ್ನೆ ಜೀವ ತೊರೆದಿದೆ.

ಅಲ್ಲೊಂದು ಇಲ್ಲೊಂದು ಸಿನಿಮಾಗಳು, ಬಗೆ ಬಗೆಯ ಕಾರ್ಯಕ್ರಮಗಳಲ್ಲಿ ಸದಾ ಬ್ಯುಸಿಯಾಗಿರೋ ಮೈತ್ರಿಯಾಗೆ ಇದ್ದ ಏಕೈಕ ರಿಲೀಫೆಂದರೆ ಅವರ ಮುದ್ದಿನ ನಾಯಿ ಕಾಲಬೈರವಿ ಅಲಿಯಾಸ್ ಪಾಪ. ಅವರ ಮನೆ ತುಂಬಾ ಮುದ್ದಾಗಿ ಓಡಾಡಿಕೊಂಡಿದ್ದ ಈ ನಾಯಿಗೆ ಸಾಯುವಂಥಾ ವಯಸೇನೂ ಆಗಿರಲಿಲ್ಲ. ಅದಕ್ಕಿನ್ನೂ ಎಂಟು ವರ್ಷವಷ್ಟೇ. ಆದರೆ ಕಳೆದ ಕೆಲ ದಿನಗಳ ಹಿಂದೆ ಅದು ತುಸು ಮಂಕಾದಂತೆ ಕಂಡು ಬಂದಿತ್ತು. ಸೂಕ್ತ ಔಷದೋಪಚಾರ ಕೊಡಿಸಿದರೂ ಎರಡು ದಿನಗಳಿಂದ ಅಗೋಚರ ಕಾಯಿಲೆಗೆ ಸಿಕ್ಕು ನರಳಿದ ನಾಯಿ ಕಡೆಗೂ ನೆನ್ನೆ ಸಂಜೆ ಹೊತ್ತಿಗೆಲ್ಲಾ ಉಸಿರು ನಿಲ್ಲಿಸಿದೆ.

ಮೈತ್ರಿಯಾ ಖಾಸಗಿಯಾದ ಸುತ್ತಾಟದ ಸಂದರ್ಭದಲ್ಲೆಲ್ಲಾ ತಮ್ಮ ಮುದ್ದಿನ ನಾಯಿಯನ್ನು ತಮ್ಮ ಜೊತೆಗೇ ಕರೆದೊಯ್ಯುತ್ತಿದ್ದರು. ದಿನದ ಶೂಟಿಂಗ್ ಕಾರ್ಯಗಳನ್ನು ಮುಗಿಸಿಕೊಂಡು ವಾಪಾಸಾದ ಮೈತ್ರಿಯಾಳನ್ನು ಮತ್ತೆ ಉಲ್ಲಾಸದಿಂದಿರುವಂತೆ ಮಾಡುತ್ತಿದ್ದದ್ದೂ ಇದೇ ನಾಯಿ. ಅದೇನೇ ಒತ್ತಡಗಳಿದ್ದರೂ ತಮ್ಮ ಮುದ್ದಿನ ನಾಯಿಯೊಂದಿಗೆ ಬಹಳಷ್ಟು ಹೊತ್ತು ಕಳೆಯುತ್ತಿದ್ದ ಮೈತ್ರಿಯಾ ಇದೀಗ ಅದನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ.

ಅನಾರೋಗ್ಯ ಪೀಡಿತವಾದ ನಾಯಿಯನ್ನು ಬದುಕಿಸಿಕೊಳ್ಳಲು ಹರಸಾಹಸ ಪಟ್ಟು ಕಡೆಗೂ ಉಳಿಸಿಕೊಳ್ಳಲಾರದ ಮೈತ್ರಿಯಾ ತನ್ನ ಮನೆಯ ಸದಸ್ಯರೊಬ್ಬರು ಇನ್ನಿಲ್ಲವೆಂಬಂಥಾ ದುರ್ವಾರ್ತೆಯನ್ನು ಹತ್ತಿರದವರ ಬಳಿಯೆಲ್ಲ ಹಂಚಿಕೊಳ್ಳುವ ಮೂಲಕ ದುಃಖ ತೋಡಿಕೊಂಡಿದ್ದಾರೆ.

Continue Reading

Trending

Copyright © 2018 Cinibuzz