Connect with us

ಸೌತ್ ಬಜ್

ಹೆಬ್ಬುಲಿ ಹುಡುಗಿಯ ಹೊಸಾ ಚಿತ್ರ!

Published

on

ಕಿಚ್ಚಾ ಸುದೀಪ್ ಅಭಿನಯದ ಸೂಪರ್ ಹಿಟ್ ಚಿತ್ರ ಹೆಬ್ಬುಲಿಯ ನಾಯಕಿಯಾಗಿ ನಟಿಸಿದ್ದವಳು ಅಮಲಾ ಪೌಲ್. ತಮಿಳು ಸೇರಿದಂತೆ ಬಹು ಭಾಷೆಗಳ ನಟಿಯಾಗಿರುವ ಈಕೆ ಇದೀಗ ಸಮುದ್ರಕಣಿ ನಿರ್ದೇಶನದ ಚಿತ್ರವೊಂದಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ.


ಅಪ್ಪ, ಯಾರೇ ಕೂಗಾಡಲಿ ಮುಂತಾದ ಚಿತ್ರಗಳ ಖ್ಯಾತಿ ಹೊಂದಿರುವ ಸಮುದ್ರಕಣಿ ನಿರ್ದೇಶನದ ಮುಂದಿನ ಚಿತ್ರ ‘ವೇಲನ್’. ತಮಿಳು ಮಾತ್ರವಲ್ಲದೆ ಮಲೆಯಾಳಂ ಮತ್ತು ತೆಲುಗಿನಲ್ಲಿಯೂ ತಯಾರಾಗಲಿರುವ ಈ ಚಿತ್ರಕ್ಕೆ ತೆಲುಗು ನಟ ನಾನಿ ಹೀರೋ. ವೇಲನ್‌ಗೆ ನಾಯಕಿಗಾಗಿ ಸಮುದ್ರಕಣಿ ಒಂದು ರೇಂಜಿಗೆ ಮಂಥನವನ್ನೇ ನಡೆಸಿದ್ದರು. ಬೇರೆ ಬೇರೆ ಭಾಷೆಗಳ ನಾನಾ ನಟಿಯರು ನಾಯಕಿಯಾಗೋ ಅವಕಾಶಕ್ಕಾಗಿ ಸಾಲುಗಟ್ಟಿ ನಿಂತಿದ್ದರು. ಆದರೆ ಕಡೆಗೂ ಅಮಲಾ ಪೌಲ್ ವೇಲನ್ ಚಿತ್ರದ ನಾಯಕಿಯಾಗಿ ನಿಕ್ಕಿಯಾಗಿದ್ದಾಳೆ.


ಸದಾ ಡಿಫರೆಂಟಾದ ಕಥಾ ವಸ್ತುಗಳನ್ನು ಆಯ್ಕೆ ಮಾಡಿಕೊಂಡು ಚಿತ್ರಗಳನ್ನು ನಿರ್ದೇಶನ ಮಾಡುವ ಸಮುದ್ರಕಣಿ ನಟನಾಗಿಯೂ ಪ್ರಸಿದ್ಧಿ ಪಡೆದಿದ್ದಾರೆ. ಸದ್ಯ ವೇಲನ್ ಚಿತ್ರಕ್ಕಾಗಿಯೂ ಅವರು ಸಾಮಾಜಿಕ ಕಥಾ ಹಂದರ ಹೊಂದಿರುವ ಮಾಸ್ ಕಥೆಯೊಂದನ್ನು ರೆಡಿ ಮಾಡಿಕೊಂಡಿದ್ದಾರಂತೆ. ಈ ಚಿತ್ರದಲ್ಲಿ ಶರತ್ ಕುಮಾರ್, ಪಾರ್ವತಿ ಮೇನನ್ ಮುಖ್ಯವಾದ ಪಾತ್ರಗಳಲ್ಲಿ ನಟಿಸಲಿದ್ದಾರಂತೆ.


ಈ ಚಿತ್ರದ ನಾಯಕಿಯಾದ ಅಮಲಾ ಪೌಲ್ ಮಲೆಯಾಳ ಚಿತ್ರರಂಗದಲ್ಲಿಯೂ ಈಗಾಗಲೇ ಛಾಪು ಮೂಡಿಸಿದ್ದಾಳೆ. ಆಕೆ ಈಗಾಗಲೇ ಆದು ಜೀವಿತಂ, ಭಾಸ್ಕರ್ ಒರು ರಾಸ್ಕಲ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾಳೆ. ಇದೀಗ ಈಕೆ ಬಹುಭಾಷೆಗಳಲ್ಲಿ ತಯಾರಾಗಿರುವ ವೇಲನ್ ಚಿತ್ರದ ಮೂಲಕ ಮತ್ತೆ ಮಿಂಚಲು ರೆಡಿಯಾಗಿದ್ದಾಳೆ.

ಕಲರ್ ಸ್ಟ್ರೀಟ್

ತಮಿಳು ಚಿತ್ರಕ್ಕೆ ಹೀರೋ ಆದ್ರು ನೀನಾಸಂ ಸತೀಶ್!

Published

on


ಅಯೋಗ್ಯ ಚಿತ್ರದ ಯಶಸ್ಸಿನ ನಂತರ ನೀನಾಸಂ ಸತೀಶ್ ಬೇಡಿಕೆ ಹೆಚ್ಚಿಕೊಂಡಿದ್ದು, ಸಂಭಾವನೆ ಏರಿಕೊಂಡಿದ್ದೆಲ್ಲ ಗೊತ್ತೇ ಇದೆ. ಕನ್ನಡದಲ್ಲಿ ತುಂಬಾ ಅವಕಾಶಗಳು ಸರದಿಯಲ್ಲಿ ನಿಂತಿರುವಾಗಲೇ ಸತೀಶ್ ಏಕಾಏಕಿ ತಮಿಳಿಗೆ ಹಾರಿದ್ದಾರೆ. ಈ ಮೂಲಕ ಅವರು ದಕ್ಷಣ ಭಾರತೀಯ ಚಿತ್ರರಂಗದಲ್ಲಿ ಛಾಪು ಮೂಡಿಸಲು ಮುಂದಾಗಿದ್ದಾರೆ.

ನೀನಾಸಂ ಸತೀಶ ನಟಿಸಲಿರುವ ತಮಿಳು ಚಿತ್ರಕ್ಕೆ ಸಂಪೂರ್ಣ ತಯಾರಿ ಮುಗಿದಿದೆ. ತಮಿಳು ಚಿತ್ರರಂಗದಲ್ಲಿ ಕ್ರಿಯೇಟಿವ್ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಅನೀಶ್ ನಿರ್ದೇಸನ ಮಾಡಲಿದ್ದಾರೆ. ಇದಕ್ಕೆ ಈಗಾಗಲೇ ಪಗೈನಾನುಕು ಅರುಲ್ವೈ ಎಂಬ ಶೀರ್ಷಿಕೆಯನ್ನೂ ನಿಗಧಿ ಮಾಡಲಾಗಿದೆ. ಇಷ್ಟರಲ್ಲಿಯೇ ಸ್ವಿಜರ್‌ಲೆಂಡಿನಲ್ಲಿ ಅದ್ದೂರಿಯಾಗಿಯೇ ಟೈಟಲ್ ಲಾಂಚ್ ಮಾಡಲೂ ನಿರ್ಧರಿಸಲಾಗಿದೆ.

ಹಾಗೆ ನೋಡಿದರೆ ಈಗೊಂದಷ್ಟು ವರ್ಷಘಗಳ ಹಿಂದೆಯೇ ನೀನಾಸಂ ಸತೀಶ್ ತಮಿಳು ಚಿತ್ರದಲ್ಲಿ ನಟಿಸ ಬೇಕಿತ್ತು. ಲೂಸಿಯಾ ಚಿತ್ರ ತೆರೆ ಕಂಡ ತಿಂಗಳೊಪ್ಪತ್ತಿನಲ್ಲಿಯೇ ಅಂಥಾದ್ದೊಂದು ಸೂಚನೆ ಸಿಕ್ಕಿತ್ತು. ಲೂಸಿಯಾ ಚಿತ್ರವನ್ನು ವೀಕ್ಷಿಸಿದ್ದ ಅನೀಶ್ ನೀನಾಸಂ ನಟನೆಯನ್ನು ಮೆಚ್ಚಿಕೊಂಡಿದ್ದರು. ಬಳಿಕ ಸತೀಶ್‌ರನ್ನು ಸಂಪರ್ಕಿಸಿ ಮೆಚ್ಚುಗೆ ಸೂಚಿಸಿದ್ದರು. ಆ ಬಳಿಕ ಇವರ ನಡುವಲ್ಲೊಂದು ಸ್ನೇಹ ಮೂಡಿಕೊಂಡಿತ್ತು.
ಹೀಗೆ ಸತೀಶ್‌ಗೆ ಗೆಳೆಯನಾಗಿದ್ದ ಅನೀಶ್ ಈಗ್ಗೆ ಮೂರು ವರ್ಷಗಳಿಂದಲೂ ಈ ಚಿತ್ರಕ್ಕಾಗಿ ಪ್ರಯತ್ನಿಸುತ್ತಲೇ ಇದ್ದರು. ಕಡೆಗೂ ಅದೀಗ ಸಾಕಾರಗೊಂಡಿದೆ. ಈ ಚಿತ್ರದ ಬಗ್ಗೆ ಅನೀಶ್ ಅವರೇ ಅಧಿಕೃತವಾಗಿ ಘೋಷಣೆಯನ್ನೂ ಮಾಡಿದ್ದಾರೆ. ಟೈಟಲ್ ಲಾಂಚ್ ಆದ ತಕ್ಷಣವೇ ಚಿತ್ರೀಕರಣಕ್ಕೂ ಚಾಲನೆ ಸಿಗಲಿದೆ.

Continue Reading

ಸೌತ್ ಬಜ್

ಅಂತರ್ಮುಖಿ ಅಜಿತ್ ಹೊಸಾ ಬಂಗಲೆಯಲ್ಲಿ ಏನೇನಿದೆ ಗೊತ್ತಾ?

Published

on

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಅಜಿತ್ ವಿಕ್ಷಿಪ್ತ ಮನಸಿನ ನಟ. ತಮಿಳು ನಾಡಿನಲ್ಲಿ ರಜನೀಕಾಂತ್ ಹಾಗೂ ಕಮಲಹಾಸನ್ ಅವರಿಗೆ ತಮ್ಮದೇ ಆದ ಸ್ಥಾನ ಮಾನ ಹಾಗೂ ಬೃಹತ್ ಅಭಿಮಾನಿ ಬಳಗವಿದೆ. ಆದರೆ ಅಜಿತ್ ಚಿತ್ರಗಳು ಪಡೆಯುವ ಅದ್ದೂರಿ ಆರಂಭವನ್ನು ಕಮಲ ಹಾಸನ್ ಅವರ ಚಿತ್ರಗಳೂ ಪಡೆಯುವುದಿಲ್ಲ. ಅವರಷ್ಟು ಸಂಭಾವನೆಯನ್ನು ತಮಿಳಿನ ಇತರ ಸ್ಟಾರ್‌ಗಳು ಪಡೆಯುವುದಿಲ್ಲ!

ಆದರೇ ಈ ಪರಿ ಹೆಸರಾಗಿರುವ ಅಜಿತ್ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲದಿರುವ ಹಲವಾರು ಇಂಟರೆಸ್ಟಿಂಗ್ ಸಂಗತಿಗಳಿವೆ. ತಮಿಳು ಚಿತ್ರರಂಗದ ಅಭಿಮಾನಿಗಳಿಂದ ತಲಾ ಮತ್ತು ತಲೈ ಎಂದು ಕರೆಸಿಕೊಳ್ಳುವ ಈ ಸ್ಟಾರ್ ಒಂದು ಚಿತ್ರಕ್ಕೆ ಪಡೆಯುವ ಸಂಭಾವನೆ 25 ಕೋಟಿ ರೂಗಳು. ಈ ಸಂಭಾವನೆಯನ್ನು ಪೂರ್ತಿ ಪಾವತಿಸಿದ ನಂತರವೇ ಅಜಿತ್ ಈ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸುವುದು. ಯಾವುದೇ ಚಿತ್ರದ ಚಿತ್ರೀಕರಣ ಹಾಗೂ ಡಬ್ಬಿಂಗ್ ಕಾರ್ಯಕ್ರಮ ಮುಗಿಸಿದ ನಂತರ ಚಿತ್ರಕ್ಕೆ ಸಂಬಂಧಪಟ್ಟವರು ಯಾರೂ ಈ ಸ್ಟಾರ್‌ನನ್ನು ಸಂಪರ್ಕಿಸುವುದಕ್ಕಾಗುವುದಿಲ್ಲ. ಆತ ಯಾರ ಫೊನ್ ಕರೆಯನ್ನು ಸ್ವೀಕರಿಸುವುದಿಲ್ಲ. ಚಿತ್ರದ ಕೆಲಸ ಮುಗಿಸಿ ಆತ ಯಾವುದೋ ವಿದೇಶಕ್ಕೆ ಹೋಗಿ ಕಾರಿನ ರೇಸ್‌ನಲ್ಲಿ ಭಾಗವಹಿಸಿಬಿಡುತ್ತಾನೆ. ಆದರಾತ ಯಾವ ದೇಶದಲ್ಲಿದ್ದಾನೆನ್ನುವ ವಿಚಾರ ಯಾರಿಗೂ ಗೊತ್ತಾಗುವುದಿಲ್ಲ. ಆತನ ಪತ್ನಿ ಶಾಲಿನಿ ಈ ಹಿಂದೆ ಮಲೆಯಾಳಂ ಹಾಗೂ ತಮಿಳು ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರೂ ಆತನ ಬಗ್ಗೆ ಯಾವುದೇ ಮಾಹಿತಿ, ಸೂಚನೆಯನ್ನು ಕೊಡುವ ಹಾಗಿಲ್ಲ!

ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸುವುದನ್ನು ಬಿಟ್ಟರೆ ಈ ನಟ ಬೇರೆ ಯಾವುದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವುದಿಲ್ಲ್ಲ. ತನ್ನ ಚಿತ್ರದ ಬಗ್ಗೆ ಯಾರಲ್ಲೂ ಒಂದು ಮಾತನ್ನೂ ಆಡುವುದಿಲ್ಲ್ಲ. ಚಿತ್ರದ ಆಡಿಯೋ ಕ್ಯಾಸೆಟ್ ಸಮಾರಂಭದಲ್ಲಾಗಲೀ ಅಥವ ಪತ್ರಿಕಾ ಗೋಷ್ಟಿಯಲ್ಲಾಗಲೀ ಆತ ಭಾಗವಹಿಸುವುದಿಲ್ಲ. ನಿರ್ಮಾಪಕರು ಚಿತ್ರದ ಪ್ರಚಾರಕ್ಕಾಗಿ ನಡೆಸುವ ಯಾವುದೇ ಗಿಮಿಕ್‌ಗಳಲ್ಲೂ ಆತ ಭಾಗಿಯಾಗುವುದಿಲ್ಲ. ತಾನು ಅಭಿನಯಿಸಿದ ಮೇಲೆ ಚಿತ್ರದ ಬಗ್ಗೆ ಮಾತನಾಡುವುದು, ಪ್ರಚಾರ ನೀಡುವುದು ಏನಿದೆ ಎಂದು ಈತ ತನ್ನ ಅಭಿನಯದ ಚಿತ್ರಗಳ ಅನೇಕ ಯುವ ನಿರ್ದೇಶಕರನ್ನೇ ಕೇಳಿದ್ದಾನಂತೆ. ಇಷ್ಟಾದರೂ ಆತನಿಗಿರುವ ಅಭಿಮಾನಿಗಳ ಸಂಖ್ಯೆ ದಿನ ದಿನಕ್ಕೆ ಏರುತ್ತಲೇ ಇದೆ.

ಇಷ್ಟುದಿನ ಚೆನ್ನೈನ ತಿರುವಾನ್ಮಿಯೂರಿನಲ್ಲಿದ್ದ ಅಜಿತ್ ಈಗ ಈಸ್ಟ್ ಕೋಸ್ಟ್ ರಸ್ತೆಯಲ್ಲಿ ಹೊಸದೊಂದು ಬಂಗಲೆ ನಿರ್ಮಿಸಿದ್ದಾರೆ. ಎಲ್ಲ ಸ್ಟಾರ್‌ಗಳ ಮನೆಯಲ್ಲಿರುವಂತೆಯೇ ಈ ಬಂಗಲೆಯಲ್ಲಿಯೂ ಜಿಮ್, ಸ್ಮಿಮಿಂಗ್ ಪೂಲುಗಳೆಲ್ಲವೂ ಇದ್ದು ಅದರೊಟ್ಟಿಗೆ ಅತ್ಯಾಧುನಿಕ ತಂತ್ರಜ್ಞಾನದ ಥಿಯೇಟರ್ ಕೂಡಾ ಹೊಂದಿದೆಯಂತೆ. ಅಷ್ಟೇ ಅಲ್ಲದೆ, ತನ್ನ ಮನೆಯಲ್ಲಿಯೇ ಡಬ್ಬಿಂಗ್ ಸ್ಟುಡಿಯೋ ಕೂಡಾ ನಿರ್ಮಿಸಿಕೊಂಡಿದ್ದಾರಂತೆ. ಚಿತ್ರೀಕರಣ ಮುಗಿಸಿ ಬಂದರೆಂದರೆ, ತನ್ನ ಮನೆಯೊಳಗೇ ಡಬ್ಬಿಂಗ್ ಕೂಡಾ ಮುಗಿಸಬೇಕು ಅನ್ನೋದು ಅಜಿತ್ ಪ್ಲಾನು. ಅಂತರ್ಮುಖಿ ವ್ಯಕ್ತಿತ್ವದ ಅಜಿತ್ ಕೆಲಸದ ನೆಪದಲ್ಲಾದರೂ ಹೊರಗೆ ಓಡಾಡುತ್ತಿದ್ದರು. ಈಗ ಹೊಸಾ ಬಂಗಲೆಯ ಕೃಪೆಯಿಂದ ಮನೆಯಲ್ಲಿಯೇ ಎಲ್ಲವೂ ನಡೆದುಹೋಗಲಿದೆ. ಇಂಥಾ ವಿಕ್ಷಿಪ್ತ ವರ್ತನೆಗಳ ಜೊತೆಗೇ ಭಾರೀ ಕ್ರಿಯೇಟೀವ್ ಆಗಿರುವ ಅಜಿತ್ ನಟನೆಯ ವಿಶ್ವಾಸಂ ಚಿತ್ರ ಇನ್ನೇನು ತೆರೆಗೆ ಬರಲು ಸಜ್ಜಾಗುತ್ತಿದೆ.

Continue Reading

ಸೌತ್ ಬಜ್

ರಜನಿ ಸಿನಿಮಾವನ್ನು ಕಾಡಿದ ಪಕ್ಷಿ ದೆವ್ವ!

Published

on


ಬರೋಬ್ಬರಿ ನಾಲಕ್ಕು ವರ್ಷಗಳ ದೀರ್ಘ ಅವಧಿಯನ್ನು ತೆಗೆದುಕೊಂಡು ನಿರ್ದೇಶಕ ಶಂಕರ್ ತಯಾರಿಸಿರುವ ಸಿನಿಮಾ ೨.೦ ಮೊಬೈಲ್ ತರಂಗಗಳು ಮತ್ತದರಿಂದಾಗುತ್ತಿರುವ ಎಡವಟ್ಟುಗಳು ಒಂದೆರಡಲ್ಲ. ಬೇರ‍್ಯಾವ ದೇಶದಲ್ಲೂ ಇಲ್ಲದಷ್ಟು ಮೊಬೈಲ್ ನೆಟ್‌ವರ್ಕ್‌ಗಳು ಇಂಡಿಯಾದಲ್ಲಿವೆ. ಮೊಬೈಲ್ ಕಂಪೆನಿಗಳು ತಮ್ಮ ಮಾರುಕಟ್ಟೆಯನ್ನು ವೃದ್ಧಿಸಿಕೊಳ್ಳುವ ಕಾರಣಕ್ಕಾಗಿ ನಿಯಮವನ್ನು ಮೀರಿ ಹೆಚ್ಚಿಗೆ ರೇಡಿಯೇಷನ್ ಗಳನ್ನು ಬಳಸುತ್ತಿರುವುದರಿಂದ ಬಹುಮುಖ್ಯವಾಗಿ ಬಾಧೆಗೊಳಗಾಗಿರುವುದು ಪಕ್ಷಿ ಸಂಕುಲ. ಮೊಬೈಲ್ ತರಂಗಾಂತರಗಳಿಂದ ಗುಬ್ಬಚ್ಚಿಯಂತಾ ಪುಟ್ಟ ಗಾತ್ರದ ಪಕ್ಷಿಗಳು ಎದೆ ಸಿಡಿದು ಸಾಯುತ್ತಿವೆ. ಜೀವಪರ ಕಾಳಜಿಯುಳ್ಳ ಸಂಘಟನೆಗಳು, ಪಕ್ಷಿಶಾಸ್ತ್ರಜ್ಞರು ಅದೆಷ್ಟೇ ಕೂಗಾಡಿದರೂ, ಎಲ್ಲ ವಿರೋಧಗಳ ನಡುವೆಯೂ ಮೊಬೈಲ್ ಗ್ರಾಹಕರು ಹೆಚ್ಚುತ್ತಲೇ ಇದ್ದಾರೆ. ಅವರ ಆತ್ಮಸಂತೃಪ್ತಿಗೊಳಿಸಲು ಕಂಪೆನಿಗಳು ತಮ್ಮಿಷ್ಟ ಬಂದಷ್ಟು ರೇಡಿಯೇಷನ್ನುಗಳನ್ನು ಹರಿಯಬಿಟ್ಟು ಪಕ್ಷಿಗಳ ಜೀವಕ್ಕೆ ಕಂಟಕ ತರುತ್ತಿದ್ದಾರೆ.

ಇದನ್ನೇ ಕಥಾವಸ್ತುವನ್ನಾಗಿಸಿದ್ದಾರೆ ನಿರ್ದೇಶಕ ಶಂಕರ್. ವಯೋವೃದ್ಧ ಪಕ್ಷಿ ಸಂಶೋಧಕನಾಗಿ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಎಲ್ಲೆಂದರಲ್ಲಿ ಮೊಬೈಲ್ ಟವರ್ ಗಳನ್ನು ನಿರ್ಮಿಸಿ, ಮೊಬೈಲ್ ರೇಡಿಯೇಷನ್ನುಗನ್ನು ಬಳಸೋದರಿಂದ ಪಕ್ಷಿಗಳು ಸಾಯುತ್ತಿವೆ. ರೈತರು ಬೆಳೆಯೋ ಬೆಳೆಗೆ ಕೀಟಗಳು ಹಾವಳಿ ಹೆಚ್ಚುವುದಕ್ಕೂ ಪಕ್ಷಿಗಳ ಮಾರಣಹೋಮಕ್ಕೂ ಸಂಬಂಧವಿದೆ. ಕೀಟಗಳನ್ನು ತಿಂದು ಬದುಕುವ ಪಕ್ಷಿಗಳೇ ಇಲ್ಲವಾದಮೇಲೆ ಬೆಳೆಹಾನಿಯಾಗೋದು ಗ್ಯಾರೆಂಟಿ. ಇದರಿಂದ ಆಹಾರ ಸರಪಳಿಯಲ್ಲಿ ಏರುಪೇರಾಗುತ್ತಿದೆ ಎಂದು ಸಿಕ್ಕಸಿಕ್ಕ ಅಧಿಕಾರಿಗಳಿಗೆ ದೂರು ಕೊಟ್ಟರೂ, ಮಂತ್ರಿಯ ಬಳಿ ಕೂತು ಅಲವತ್ತುಕೊಂಡರೂ ಯಾವ ಪ್ರಯೋಜನವೂ ಆಗುವುದಿಲ್ಲ. ಪಕ್ಷಿಗಳ ಸಾವನ್ನು ಕಂಡು ದಿಕ್ಕು ತೋಚದಂತಾದ ಆತ ಮೊಬೈಲ್ ಟವರ್ರಿಗೇ ಹಗ್ಗ ಬಿಗಿದು ಉರುಳು ಹಾಕಿಕೊಳ್ಳುತ್ತಾನೆ. ನಂತರ ಅದೇ ವ್ಯಕ್ತಿ ಆತ್ಮವಾಗಿ ಮಾರ್ಪಾಟು ಹೊಂದಿ ಸತ್ತ ಪಕ್ಷಿಗಳ ಆತ್ಮಗಳ ಜೊತೆ ಸೇರಿ ಮೊಬೈಲ್ ಗ್ರಾಹಕರನ್ನು ಮತ್ತು ಕಂಪೆನಿಗಳನ್ನು ಇಕ್ಕಟ್ಟಿಗೆ ಸಿಲುಕಿಸುತ್ತಾನೆ. ಇಂಥಾ ಪರಿಸರಪ್ರೇಮಿ ಆತ್ಮ ಸೃಷ್ಟಿಸುವ ಅನಾಹುತಗಳನ್ನು ಮಾನವ ನಿರ್ಮಿತ ಚಿಟ್ಟಿ ರೋಬೋ ಹೇಗೆ ತಡೆಯುತ್ತದೆ ಅನ್ನೋದು ಶಂಕರ್ ಸಿನಿಮಾದ ಒಟ್ಟೂ ಸಾರಾಂಶ.

ವಿಜ್ಞಾನಿಯ ಜೊತೆಗೆ ರೋಬೋ ಆಗಿಯೂ ನಟಿಸಿರುವ ರಜನಿ ಎಂದಿನಂತೆ ಎಲ್ಲರನ್ನೂ ಅಚ್ಚರಿಗೊಳಿಸುತ್ತಾರೆ. ನಾಯಕಿ ಆಮಿ ಜಾಕ್ಸನ್ ಕ್ಯೂಟ್ ರೋಬೋ ಆಗಿ ಮನಸೆಳೆಯುತ್ತಾರೆ. ತಾಂತ್ರಿಕವಾಗಿ ತೀರಾ ಶ್ರೀಮಂತಿಕೆಯಿಂದ ಕೂಡಿದ್ದರೂ ಕಥೆಯನ್ನು ವಿಸ್ತರಿಸುವಲ್ಲಿ ಶಂಕರ್ ಎಡವಿದಂತೆ ಕಾಣುತ್ತದೆ. ಎ.ಆರ್. ರೆಹಮಾನ್ ಎರಡು ಹಾಡುಗಳ ಜೊತೆಗೆ ಹಿನ್ನೆಲೆ ಸಂಗೀತದಲ್ಲೂ ಹೊಸತೇನೋ ಸೃಷ್ಟಿಸುವಲ್ಲಿ ಒಂದು ಮಟ್ಟಿಗೆ ಗೆದ್ದಿದ್ದಾರೆ. ಎಲ್ಲ ಬಗೆಯ ಪ್ರೇಕ್ಷಕರನ್ನೂ ಗೆಲ್ಲುವಲ್ಲಿ ಸೋತಿರುವ ರೋಬೋ ನಿರೀಕ್ಷೆಯ ಮಟ್ಟ ತಲುಪಿಲ್ಲ ಅನ್ನೋದೇ ಬೇಸರದ ವಿಚಾರ.

Continue Reading
Advertisement
Chitralahari 400 x 600
DJ ENTERTAINMENTS 300 x 600

Trending

Copyright © 2018 Cinibuzz