Connect with us

ಕಲರ್ ಸ್ಟ್ರೀಟ್

ಅಂಬರೀಶ್ ಎಂಬ ಕನ್ವರ್ ಲಾಲ್

Published

on

ಅಂಬರೀಶ್ ಯಾಕೆ ಕನ್ನಡದ ಪ್ರಮುಖ ನಟ ಎಂಬ ಪ್ರಶ್ನೆಯ ಬೆನ್ನತ್ತಿ ಹೊರಟಾಗಅಂತ‘, ‘ಚಕ್ರವ್ಯೂಹ‘, ‘ಏಳುಸುತ್ತಿನ ಕೋಟೆ‘, ‘ಇಂದ್ರಜಿತ್‘, ‘ಮಸಣದ ಹೂವು‘, ‘ಒಲವಿನ ಉಡುಗೊರೆ‘, ‘ಹೃದಯ ಹಾಡಿತು‘, ‘ಮಣ್ಣಿನ ದೋಣಿ‘, ‘ಸೋಲಿಲ್ಲದ ಸರದಾರ‘, ‘ಸಪ್ತಪದಿ‘, ‘ಮಂಡ್ಯದ ಗಂಡುತರಹದ ಚಿತ್ರಗಳು ಉತ್ತರವಾಗಿ ಸಿಗುತ್ತವೆ. ಬಗೆಯ ಚಿತ್ರಗಳನ್ನು ಜ್ಞಾಪಿಸಿಕೊಂಡು ಅಂಬರೀಶ್ ಅವರ ಬಗ್ಗೆ ಆಲೋಚಿಸಿದಾಗ ಒಂದು ವಿಸ್ಮಯಕಾರಿ ಜಗತ್ತು ಕಣ್ಣೆದುರು ನಿಲ್ಲುವುದು ಸುಳ್ಳಲ್ಲ.

ನಟ ಕೇವಲ ಅರವತ್ತಾರು ವರ್ಷಕ್ಕೇ ಪರಿ ಕಳೆಗುಂದಿ ಹೋದದ್ದು ನೋವಿನ, ಬೇಜಾರಿನ ವಿಷಯ; ಅಂಬರೀಶ್ ಕುಡಿತ ಕಮ್ಮಿ ಮಾಡಿದ್ದರೆಸಿಗರೇಟು ಬಿಟ್ಟಿದ್ದರೆ ಇನ್ನೂ ಒಂದಷ್ಟು ಕಾಲ ಚುರುಕಿನಿಂದಿರಬಹುದಿತ್ತು. ಆದರೆ ಅಂಬರೀಶ್ ತರಹದ ಎಲ್ಲಾ ಸವಲತ್ತುಗಳಿರುವ ಮಂದಿ ಮುಪ್ಪು, ಅನಾರೋಗ್ಯ, ಅಸಹಾಯಕತೆಗಳನ್ನೆಲ್ಲ ಎದುರಿಸುತ್ತಾ ಬದುಕುವುದು ಭೀಕರವಾದದ್ದು.

ಅಂಬರೀಶ್ ಯಾರಿಗೆ ತಾನೇ ಗೊತ್ತಿಲ್ಲ? ಇವರದೇ ಒಂದು ಇಮೇಜ್. ನಿರ್ದೇಶಕ ರೂಪಿಸಿದ ಪಾತ್ರವೇ ತಾವಾಗಿ ಜನರೆದುರು ತಮ್ಮೊಳಗಿನ ಕಲಾವಿದನನ್ನು ತೆರೆದುಕೊಳ್ಳುವುದು ಇವರ ಗುರಿಯಾಗಿತ್ತು; ಎಲ್ಲಾ ಬಗೆಯ ಪಾತ್ರಗಳಿಗೂ ಒಗ್ಗಿಕೊಳ್ಳಬಲ್ಲ ಸಾಮರ್ಥ್ಯ ಹೊಂದಿದ್ದ ಅಂಬರೀಶ್ ಸ್ವೀಕರಿಸಿದ ಚಾಲೆಂಜ್ ಯಾವುದೆಂದರೆ, ಸಾಧ್ಯವಾದಷ್ಟು ಆಕ್ಷನ್ ಚಿತ್ರಗಳಲ್ಲಿ ಮಿಂಚುತ್ತಾ ಅಭಿಮಾನಿವಲಯದಲ್ಲಿ ತಮ್ಮ ಇಮೇಜನ್ನೂ ಕಾಪಾಡಿಕೊಳ್ಳುತ್ತಾ ಸಂಸಾರಿಕ ಕತೆ, ಪ್ರೇಮಕತೆಗಳಲ್ಲೂ ನಟಿಸಿ ಸೈ ಎನ್ನಿಸಿಕೊಂಡು ವರ್ಸಟೈಲ್ ನಟ ಎನ್ನಿಸಿಕೊಳ್ಳುವುದು. ಅವರುಒಲವಿನ ಉಡುಗೊರೆಮಾಡುವ ಮೊದಲು ಆಕ್ಷನ್ ಹೀರೋ ಎಂದೇ ಬಿಂಬಿತರಾಗಿದ್ದವರು; ಡಿ.ರಾಜೇಂದ್ರಬಾಬು ನಿರ್ದೇಶನದಒಲವಿನ ಉಡುಗೊರೆಚಿತ್ರದಲ್ಲಿ ಫೈಟಿಂಗ್ ದೃಶ್ಯಗಳಿಗಿಂತಲೂ ಭಾವನಾತ್ಮಕ ದೃಶ್ಯಗಳಿಗೆ ಹೆಚ್ಚು ಮಹತ್ವವಿತ್ತು. ನೆಪದಲ್ಲಿ ಹೊಸ ಅಂಬರೀಶ್ ನಮಗೆ ಸಿಕ್ಕಿದರು. ಆಮೇಲೆಬಜಾರ್ ಭೀಮ‘, ‘ನ್ಯೂ ಡೆಲ್ಲಿ‘, ‘ಇನ್ಸ್ ಪೆಕ್ಟರ್ ಕ್ರಾಂತಿಕುಮಾರ್‘,’ಅಜಿತ್ತರಹದ ಚಿತ್ರಗಳ ನಡುವೆಯೇ ಅಂಬರೀಶ್ಪೂರ್ಣಚಂದ್ರಚಿತ್ರದಲ್ಲಿ ನಟಿಸಿ ಬೆರಗು ಮೂಡಿಸಿದರು. ಪ್ರೇಕ್ಷಕರನ್ನು ಒಮ್ಮೆಲೇ ತಮ್ಮ ಹೊಡೆದಾಟದ ದೃಶ್ಯಗಳ ಮೂಲಕ, ಪಂಚಿಂಗ್ ಡೈಲಾಗ್ಸ್ ಮೂಲಕ ರಂಜಿಸುತ್ತಿದ್ದ ಅಂಬರೀಶ್, ಮರುಕ್ಷಣವೇ ಭಾವನಾತ್ಮಕವಾಗಿ ಪರಿಣಮಿಸಿ ಅದೇ ಪ್ರೇಕ್ಷಕರ ಕಣ್ಣಲ್ಲಿ ನೀರು ತರಿಸುತಿದ್ದರಲ್ಲದೆ, ಹೃದಯವನ್ನು ಮೆತ್ತಗೆ ಮಾಡಿಬಿಡುತ್ತಿದ್ದರು. ‘ಒಡಹುಟ್ಟಿದವರುಚಿತ್ರದ ತುಂಬಿದ ಕುಟುಂಬದಲ್ಲಿನ ಆದರ್ಶ ತಮ್ಮನಾಗಿ ಕಾಣುವುದು, ‘ಪುಕ್ಸಟ್ಟೆ ಗಂಡ ಹೊಟ್ಟೆ ತುಂಬ ಉಂಡಚಿತ್ರದಲ್ಲಿ ನಕ್ಕು ನಲಿಸುವುದು, ‘ಚಕ್ರವ್ಯೂಹ ನಾಯಕನ ಕೆಚ್ಚೆದೆಯ, ಬಂಡಾಯದ ಗುಣವನ್ನು ಸಮರ್ಥವಾಗಿ ನಿಭಾಯಿಸುವುದು, ‘ಶ್ರೀ ಮಂಜುನಾಥ ದೊರೆಯ ಗಾಂಭೀರ್ಯತೆ, ‘ದಿಗ್ಗಜರುಚಿತ್ರದಲ್ಲಿನ ಸ್ನೇಹಮಯಿ ವ್ಯಕ್ತಿತ್ವಇವು ಒಂದಿಷ್ಟು ಮೆಲುಕು.

ಬಿಂದಾಸ್ ಮನುಷ್ಯ ಅಂಬರೀಶ್, ಸ್ನೇಹಕ್ಕೆ, ಸಹಾಯಹಸ್ತಕ್ಕೆ ಹೆಸರಾದ ಅಂಬರೀಶ್ ಕರ್ನಾಟಕ ಕಂಡ ಅಪರೂಪದ ನಟ; ಚಲನಚಿತ್ರ ಮೊದಲು ಹೀರೋಗಳ ಮಾಧ್ಯಮವಾಗಿತ್ತು. ಅಂಬರೀಶ್ ಅವರ ಮೈಕಟ್ಟು, ಧ್ವನಿ, ನೇರವಂತಿಕೆ, ಮುಕ್ತ ಮನಸ್ಸೇ ಅವರ ವ್ಯಕ್ತಿತ್ವ, ಅವರು ನಿರ್ವಹಿಸುತ್ತಿದ್ದ ಪಾತ್ರಗಳ ನಡುವೆ ಸಂಬಂಧ ಬೆಸೆದು ಯಾವುದೇ ನಾಟಕೀಯತೆಗೆ ದಾರಿ ಮಾಡಿಕೊಡದೆ ಸಹಜ ಕಲಾವಿದರನ್ನಾಗಿ ರೂಪಿಸಿದ್ದು ಸುಳ್ಳಲ್ಲ.

ದಿನಗಳೆದಂತೆ ಅಂಬರೀಶ್ ಅವರನ್ನು ಸಪ್ಪೆ ಮಾಡತೊಡಗಿದ್ದು ಅವರ ರಾಜಕೀಯದ ಸೆಳೆತ ಮತ್ತು ಲಿಮಿಟ್ಟಿಲ್ಲದ ಕುಡಿತ ಎಂಬುದು ಕೂಡ ಕೌತುಕಮಯವಾದದ್ದು. ‘ಮುಂಜಾನೆಯ ಮಂಜು‘, ‘ಮಿಡಿದ ಹೃದಯಗಳು‘, ‘ಎಂಟೆದೆ ಭಂಟ‘, ‘ಸಪ್ತಪದಿ‘, ‘ಒಂಟಿ ಸಲಗದಂತಹ ಚಿತ್ರಗಳ ಮೇರುತನ, ಪಕ್ವತೆ, ಮತ್ತು ಲವಲವಿಕೆಗಳ ಜಾಗವನ್ನುಅಣ್ಣಾವ್ರು‘, ‘ವೀರ ಪರಂಪರೆ‘, ‘ಕಠಾರಿವೀರ ಸುರಸುಂದರಾಂಗಿ‘, ‘ವಾಯುಪುತ್ರ‘, ‘ರಣತರಹದ ಚಿತ್ರಗಳಲ್ಲಿನ ಖಾಲಿತನ, ಅಪೂರ್ಣತೆ, ಅಸಂಬದ್ದತೆ, ಮಂದಮಯ ವಾತಾವರಣ ಇವೆಲ್ಲಾ ಕವಿದುಕೊಂಡಿದ್ದವು. ಯಾರ ಕಾಂಬಿನೇಶನ್ನಿನಲ್ಲಿ ಬೇಕಾದರೂ ಸಮರ್ಥವಾಗಿ ನಟಿಸಬಲ್ಲೆ ಎಂಬ ಉತ್ಸಾಹದಿಂದಾಗಿತಂದೆಗೆ ತಕ್ಕ ಮಗದಲ್ಲಿನ ಉಪೇಂದ್ರರ ಜೊತೆ ನಟಿಸಿ ತಾವೂ ಜಡ್ಜ್ ಮೆಂಟಿಗೆ ಸಿಗದಂತಾದರು; ತಮಿಳಿನ ಸೂಪರ್ ಹಿಟ್ ಸಿನಿಮಾದೇವರ್ ಮಗನ್ಕನ್ನಡದಲ್ಲಿ ಸೋಲುವಂತಾಯಿತಲ್ಲದೆ ಶಿವಾಜಿ ಗಣೇಶನ್ ಮಾಡಿದ್ದ ಅದ್ಭುತ ಪಾತ್ರ ಪ್ರಶ್ನೆಯಾಗಿ ಕಾಡಿತ್ತು. ಇದರೊಂದಿಗೆ ಯಾವ್ಯಾವ ಪಾತ್ರಗಳನ್ನು ಮಾಡಬೇಕು? ಮಾಡಿದರೂ ಜಮಾನದಲ್ಲಿ ಯಾರ್ಯಾರ ಕಾಂಬಿನೇಶನ್ ತಮಗೆ ಸರಿಹೊಂದುತ್ತದೆ ಎಂಬುದರ ಬಗ್ಗೆ ಅಂಬರೀಶ್ ಆಳದಲ್ಲಿ ಧ್ಯಾನಿಸದ ಹಾಗೆ ಮಾಡಿತ್ತು.

ಸಿನಿಮಾ ಜಗತ್ತಿನಾಚೆಗೆ ರಾಜಕೀಯವಾಗಿ ತಮ್ಮನ್ನು ತೊಡಗಿಸಿಕೊಂಡ ಅಂಬರೀಶ್ ಲೋಕಸಭಾ ಸದಸ್ಯರಾಗಿ, ವಿಧಾನಸಭಾ ಸದಸ್ಯರಾಗಿ, ಸಚಿವರಾಗಿ ಕೆಲಸ ಮಾಡಿದವರು. ಆಳದಲ್ಲಿ ಸಮಾಜಕ್ಕೆ ಏನಾದರು ಸೇವೆ ಸಲ್ಲಿಸಬೇಕೆಂಬ ತುಡಿತ ಹೊಂದಿದ್ದರೂ ಪ್ರಾಕ್ಟಿಕಲ್ಲಾಗಿ, ಅಧಿಕಾರಯುತವಾಗಿ ಜನಸೇವೆ ಮಾಡುವಲ್ಲಿ ಅಂಬರೀಶ್ ಅಷ್ಟು ಪಳಗಿದವರು ಎನ್ನಿಸಲೇ ಇಲ್ಲ; ಕಾಂಗ್ರೆಸ್ ಹಾಗೂ ಜನತಾ ದಳ ಪಾರ್ಟಿಗಳಲ್ಲಿ ಗುರ್ತಿಸಿಕೊಂಡು ಕರ್ನಾಟಕ ರಾಜಕಾರಣದ ದ್ವಂದ್ವಕ್ಕೆ ಸಾಕ್ಷಿಯಾದರಲ್ಲದೇ ಮಂಡ್ಯ ಜನತೆ ತಮ್ಮ ಸಿನಿಮಾಗಳ ದೆಸೆಯಿಂದ, ತಮ್ಮ ತವರಿನ ಕಾರಣದಿಂದ, ತಾವೊಬ್ಬ ಒಕ್ಕಲಿಗ ಎಂಬ ಸೆಂಟಿಮೆಂಟಿನಿಂದ ತಮ್ಮ ಮೇಲಿಟ್ಟಿದ್ದ ಅಭಿಮಾನವನ್ನು ಓಟುಗಳನ್ನಾಗಿ ಪರಿವರ್ತಿಸುವಲ್ಲಿ ಅಂಬರೀಶ್ ಯಶಸ್ವಿಯಾದರು; ಬೆಳವಣಿಗೆಯಿಂದ ಸ್ವತಃ ಅಂಬರೀಶ್ ಅವರಿಗೆ ಅಥವಾ ಮಂಡ್ಯ ಜನತೆಗೆ ಉಪಯೋಗವಾಯಿತೋ ಇಲ್ಲವೋ ಗೊತ್ತಿಲ್ಲ, ಆದರೆ ರಾಜಕೀಯ ಪಕ್ಷಗಳಿಗಂತೂ ಖಂಡಿತ ವರ್ಕ್ ಔಟ್ ಆಯಿತು.

ಕಲರ್ ಸ್ಟ್ರೀಟ್

ಇದೇ ಶನಿವಾರ ಬರಲಿದೆ ಸುವರ್ಣ ಸುಂದರಿ ಟ್ರೈಲರ್!

Published

on


ಅದ್ದೂರಿ ವೆಚ್ಚದಲ್ಲಿ ತಯಾರಾಗಿರುವ ಸುವಣ್ ಸುಂದರಿ ಸಿನಿಮಾ ಆರಂಭದಿಂದಲೂ ಸುದ್ದಿಯಾಗುತ್ತಲೇ ಬಂದಿದೆ. ಇದೀಗ ಚಿತ್ರತಂಡ ಈ ಸಿನಿಮಾದ ಟ್ರೈಲರ್ ಲಾಂಚ್ ಮಾಡಲು ತಯಾರಾಗಿದೆ. ಇದೇ ೧೯ನೇ ತಾರೀಕಿನ ಶನಿವಾರದಂದು ಸುವರ್ಣ ಸುಂದರಿ ಟ್ರೈಲರ್ ಬಿಡುಗಡೆಯಾಗಲಿದೆ.

ಎಸ್ ಟೀಮ್ ಪಿಕ್ಚರ್‍ಸ್ ಲಾಂಛನದಡಿಯಲ್ಲಿ ತಯಾರಾಗಿರುವ `ಸುವರ್ಣ ಸುಂದರಿ’ ಚಿತ್ರ ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಂಡಿದೆ. ತೆಲುಗಿನಲ್ಲಿ ಈಗಾಗಲೇ ಒಂದಷ್ಟು ಚಿತ್ರಗಳನ್ನು ನಿರ್ದೇಶನ ಮಾಡಿರುವ ಸೂರ್ಯ ನಿರ್ದೇಶನದ ಈ ಚಿತ್ರ ನಾಲಕ್ಕು ಕಾಲಮಾನಗಳ ವಿಶಿಷ್ಟವಾದ ಕಥಾ ಹಂದರ ಹೊಂದಿದೆ.
ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕ ಕಾಲದಲ್ಲಿ ತಯಾರಾಗಿರೋ ಈ ಚಿತ್ರಕ್ಕೆ ರಾಂಗೋಪಾಲ್ ವರ್ಮಾ ಅವರ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿರುವ ಸಾಯಿ ಕಾರ್ತಿಕ್ ಅವರೇ ರಾಗ ಸಂಯೋಜನೆ ಮಾಡಿರೋದು ವಿಶೇಷ. ಬೆಂಗಳೂರು, ಅನಂತಪುರಂ, ಹೈದರಾಬಾದ್, ಬೀದರ್, ಕೇರಳ ಮುಂತಾದೆಡೆಗಳಲ್ಲಿ ಚಿತ್ರೀಕರಣ ಮುಗಿಸಿಕೊಂಡಿರೋ ಈ ಚಿತ್ರವೀಗ ಅಂತಿಮ ಹಂತಕ್ಕೆ ತಲುಪಿಕೊಂಡಿದೆ. ಇದರ ಜೊತೆಗೇ ಒಂದು ಸುಂದರವಾದ ಟ್ರೈಲರ್ ಕೂಡಾ ಇಗಾಗಲೆ ಬಿಡುಗಡೆಗೊಂಡಿದೆ. ಇದೀಗ ವಿಶಿಷ್ಟವಾದ ಎರಡನೇ ಟ್ರೈಲರ್ ನೋಡೋ ಕಾಲ ಹತ್ತಿರಾಗಿದೆ.

ಬಾಹುಬಲಿ ಚಿತ್ರಕ್ಕೆ ಸಿಜಿ ವರ್ಕ್ ಮಾಡಿದ್ದ ತಂತ್ರಜ್ಞರೇ ಈ ಚಿತ್ರಕ್ಕೆ ನಲವತೈದು ನಿಮಿಷಗಳ ಸಿಜಿ ವರ್ಕ್ ಮಾಡಿದ್ದಾರಂತೆ. ಪೂರ್ಣ, ಸಾಕ್ಷಿ, ತಿಲಕ್, ಸಾಯಿ ಕುಮಾರ್, ಜೈ ಜಗಧೀಶ್, ರಾಮ್, ಅವಿನಾಶ್, ಇಂದಿರಾ, ಸತ್ಯಪ್ರಕಾಶ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಎಲ್ಲಾ ಕೆಲಸ ಕಾರ್ಯಗಳನ್ನೂ ಸಂಪೂರ್ಣವಾಗಿ ಮಗಿಸಿಕೊಂಡಿರುವ ಚಿತ್ರತಂಡ ಇದೀಗ ಟ್ರೈಲರ್ ತೋರಿಸಲು ಮುಂದಾಗಿದೆ.

Continue Reading

ಕಲರ್ ಸ್ಟ್ರೀಟ್

ಯಜಮಾನನ ಅಬ್ಬರದ ಮುಂದೆ ತಮಿಳು ಚಿತ್ರಗಳೂ ಥಂಡ! ಯೂಟ್ಯೂಬಿನಲ್ಲಿ ಶಿವನಂದಿಗೆ ಎದುರು ನಿಲ್ಲೋರಿಲ್ಲ!

Published

on


ಸಂಕ್ರಾಂತಿಯ ಶುಭ ಘಳಿಗೆಯಲ್ಲಿ ದರ್ಶನ್ ಅಭಿಮಾನಿಗಳ ಪಾಲಿಗೆ ಭರ್ಜರಿ ಸಂಭ್ರಮವೇ ಸಿಕ್ಕಿ ಬಿಟ್ಟಿದೆ. ಅದಕ್ಕೆ ಕಾರಣವಾಗಿರೋದು ಯಜಮಾನ ಚಿತ್ರದ ಶಿವನಂದಿ ಹಾಡಿನ ನಾಗಾಲೋಟ. ಯೂಟ್ಯೂಬ್‌ನಲ್ಲಿ ಈ ಹಾಡಿನ ಹವಾ ಅದ್ಯಾವ ಥರ ಇದೆಯೆಂದರೆ, ಅದರ ಮುಂದೆ ತಮಿಳು ಚಿತ್ರಗಳೂ ಥಂಡಾ ಹೊಡೆದು ಬಿಟ್ಟಿವೆ.

ಸಂಕ್ರಾಂತಿಯಂದು ಬಿಡುಗಡೆಯಾಗಿದ್ದ ಶಿವನಂದಿ ಆ ದಿನವೇ ಬಹುತೇಕ ದಾಖಲೆಗಳನ್ನು ಬ್ರೇಕ್ ಮಾಡಿತ್ತು. ಅದಾಗಿ ಮಾರನೇ ದಿನ, ಅಂದರೆ ಈ ಕ್ಷಣದ ವರೆಗೇ ಶಿವನಂದಿ ಹಾಡು ಯೂಟ್ಯೂಬ್ ಟ್ರೆಂಡಿಂಗ್‌ನಲ್ಲಿದೆ. ಇದರ ಅಬ್ಬರದ ಮುಂದೆ ತಮಿಳಿನ ಚಿಯಾನ್ ವಿಕ್ರಂ ಚಿತ್ರವೇ ಮಂಕಾಗಿ ಬಿಟ್ಟಿದೆ!

ಇದೇ ದಿನ ಚಿಯಾನ್ ವಿಕ್ರಂ ಅಭಿಯದ ಕೊಡರಂ ಕೊಂಡನ್ ಟೀಸರ್ ಮತ್ತು ಪ್ರಭುದೇವ ನಟನೆಯ ಚಾರ್ಲಿ ಚಾಪ್ಲಿನ್ ೨ ಚಿತ್ರದ ಟ್ರೈಲರ್ ಬಿಡುಗಡೆಯಾಗಿತ್ತು. ಈ ಎರಡಕ್ಕೂ ವೀಕ್ಷಣೆ ಸಿಕ್ಕಿದೆಯಾದರೂ ಯೂಟ್ಯೂಬ್ ಟ್ರೆಂಡಿಂಗ್‌ನಲ್ಲಿ ಯಜಮಾನನ ಶಿವನಂದಿಯನ್ನು ಹಿಂದಿಕ್ಕಲು ಸಾಧ್ಯವಾಗಿಲ್ಲ. ಈಗಿರೋ ಹವಾ ನೋಡಿದರೆ ಅದು ಅಷ್ಟು ಸಲೀಸಾಗಿ ಸಾಧ್ಯವಾಗೋದೂ ಇಲ್ಲ.
ಇದು ಯಜಮಾನ ಚಿತ್ರದ ಆರಂಭಿಕ ಯಶಸ್ಸು ಎಂಬುದರಲ್ಲಿ ಎರಡು ಮಾತಿಲ್ಲ. ಈ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊ ಬೇರೆಯದ್ದೇ ರೀತಿಯಲ್ಲಿ ಅಭಿಮಾನಿಗಳ ಮುಂದೆ ಬರಲು ಅಣಿಯಾಗಿದ್ದಾರೆ. ಒಟ್ಟಾರೆ ಕಥೆ ಭಿನ್ನವಾಗಿದೆ ಎಂಬುದೂ ಸೇರಿದಂತೆ ಈಗಾಗಲೇ ಯಜಮಾನನ ಬಗ್ಗೆ ಅಭಿಮಾನದಾಚೆಯೂ ಪ್ರೇಕ್ಷಕರು ಆಕರ್ಷಿತರಾಗಿದ್ದಾರೆ.

Continue Reading

ಕಲರ್ ಸ್ಟ್ರೀಟ್

ಕನ್ನಡದ ಹೆಮ್ಮೆಯ ಕಥೆಗಾರ ಟಿ.ಕೆ. ದಯಾನಂದ ಅವರ ಬೆಲ್ ಬಾಟಮ್

Published

on

ಟಿ.ಕೆ. ದಯಾನಂದ ಅನ್ನೋ ಹೆಸರು ಕನ್ನಡ ಚಿತ್ರರಂಗಕ್ಕೆ ತೀರಾ ಹೊಸದೇನಲ್ಲ. ಈ ಹಿಂದೆ ‘ಬೆಂಕಿ ಪಟ್ಣ’ ಅನ್ನೋ ಸಿನಿಮಾ ತೆರೆಗೆ ಬಂದಿತ್ತಲ್ಲಾ? ನಿರೂಪಕಿ ಅನುಶ್ರೀ ನಾಯಕಿಯಾಗಿ ನಟಿಸಿದ ಸಿನಿಮಾ… ಅದನ್ನು ನಿರ್ದೇಶನ ಮಾಡಿದ್ದವರು ಇದೇ ದಯಾನಂದ್. ಕಥೆ ಬರೆಯೋನಿಗೆ ಜೀವನದ ಕಷ್ಟ ಸುಖಗಳ ಬಗ್ಗೆ ಇಂಚಿಂಚೂ ಅನುಭವವಿರಬೇಕು. ಸಮಾಜಜ್ಞಾನ ಕೂಡಾ ಇರಬೇಕು. ದಯಾನಂದ್ ವಿಚಾರದಲ್ಲಿ ಇವೆಲ್ಲವೂ ಒಂಚೂರು ಹೆಚ್ಚೇ ಇದೆ. ಕಡು ಕಷ್ಟದ ಹಿನ್ನೆಲೆಯಿಂದ ಬಂದ ದಯಾನಂದ್ ಓದು ಮುಗಿಸಿ ಟೀವಿ ನೈನ್ ಚಾನೆಲ್ಲಿನಲ್ಲಿ ಡೆಸ್ಕ್ ಎಡಿಟರ್ ಆಗಿದ್ದವರು. ಅದರ ಜೊತೆಗೆ ಅಗ್ನಿ, ಲಂಕೇಶ್ ಸೇರಿದಂತೆ ಸಾಕಷ್ಟು ಪತ್ರಿಕೆಗಳಿಗೆ ಬರೆಯುತ್ತಿದ್ದವರು. ಜಗತ್ತಿನ ಎಲ್ಲ ಭಾಷೆಗಳ ಸಿನಿಮಾಗಳನ್ನು ನೋಡಿ ಅದರ ಕುರಿತು ಬರೆಯುತ್ತಿದ್ದ ದಯಾನಂದ್ ತಳಸಮುದಾಯಗಳ ಅಧ್ಯಯನಗಳನ್ನು ಕುರಿತ ಸಾಕಷ್ಟು ಡಾಕ್ಯುಮೆಂಟರಿಗಳನ್ನೂ ತಯಾರಿಸಿದ್ದಾರೆ. ಜೀವವನ್ನು ಪಣಕ್ಕಿಟ್ಟು ಮ್ಯಾನ್ ಹೋಲ್ ಗಳಲ್ಲಿ ಇಳಿಯುವ ಸಫಾಯಿಕರ್ಮಚಾರಿಗಳ ಕುರಿತಾಗಿ ದಯಾನಂದ ಮಾಡಿರುವ ಸಂಶೋಧನೆಗಳು ಸಾಕಷ್ಟು. ಇವತ್ತೇನಾದರೂ ಸಫಾಯಿಕರ್ಮಚಾರಿಗಳ ಬದುಕಲ್ಲಿ ಬೆಳಕು ಕಾಣಿಸೋ ಸೂಚನೆ ಕಂಡಿದೆಯೆಂದರೆ ಅದಕ್ಕೆ ದಯಾನಂದ್ ಮಾಡಿರುವ ಆಧ್ಯಯನ ವರದಿಗಳ ಪಾತ್ರ ದೊಡ್ಡದು.

ಚಾಕು ಸಾಣೆ ಹಿಡಿಯೋರು, ಹಾವಾಡಿಗರು, ಕರಡಿ ಕುಣಿಸೋರು… ಹೀಗೆ ಬದುಕಿಗಾಗಿ ನಾನಾ ಕಸುಬುಗಳನ್ನು ಮಾಡುವ ಜನರ ಕುರಿತು ದಯಾನಂದ್ ಬರೆದ ‘ರಸ್ತೆನಕ್ಷತ್ರಗಳು’ ಪುಸ್ತಕ ಹೊಸ ಸಾಮಾನ್ಯ ಜನರಿಗೆ ಗೊತ್ತಿಲ್ಲದ ಹೊಸ ಲೋಕವನ್ನು ಪರಿಚಯಿಸುತ್ತದೆ. ಇವರ ನಾಯಿಬೇಟೆ ಕಥೆಗಾಗಿ ಪ್ರಜಾವಾಣಿಯ ಪ್ರತಿಷ್ಟಿತ ದೀಪಾವಳಿ ಕಥಾಸ್ಪರ್ಧೆಯಲ್ಲಿ ಮೊದಲ ಬಹುಮಾನ ಬಂದಿತ್ತು. ವಿಜಯ ನೆಕ್ಸ್ಟ್ ಪತ್ರಿಕೆಯ ಕಥಾಸ್ಪರ್ಧೆಯಲ್ಲಿ ಇವರ ಒಂದಾನೊಂದು ಊರಿನಲ್ಲಿ ಕಥೆ ಕೂಡಾ ಮೊದಲ ಕಥೆಯಾಗಿ ಆಯ್ಕೆಯಾಗಿತ್ತು. ಕಣ್ಣೆದುರೇ ನಡೆಯುತ್ತಿದ್ದರೂ ಯಾರೂ ಕಣ್ಣೆತ್ತಿನೋಡದ ವಿಚಾರಗಳನ್ನೇ ಕಥೆಗಳನ್ನಾಗಿಸಿ, ರೋಚಕವೆನ್ನುವಂತೆ ಬರೆಯೋದು ದಯಾನಂದ್ ಅವರಿಗೆ ಸಿದ್ದಿಸಿದೆ.

ಕನ್ನಡದ ಹೆಮ್ಮೆಯ ಕಥೆಗಾರ ದಯಾನಂದ್ ‘ಬೆಲ್‌ಬಾಟಮ್’ ಸಿನಿಮಾಗೆ ಕಥೆ ಒದಗಿಸಿದ್ದಾರೆ. ಇಂಥ ಸಿನಿಮಾಗಳು ಗೆದ್ದರೆ ಕನ್ನಡದಲ್ಲೂ ಸಾಕಷ್ಟು ಹೊಸ ಕಂಟೆಂಟುಗಳ ಸಿನಿಮಾ ಬರೋದು ಗ್ಯಾರೆಂಟಿ. ಈ ಕಾರಣಕ್ಕಾದರೂ ನಾವು ಬೆಲ್ ಬಾಟಮ್ ಸಿನಿಮಾವನ್ನೊಮ್ಮೆ ನೋಡಲೇಬೇಕು.

Continue Reading

Trending

Copyright © 2018 Cinibuzz