One N Only Exclusive Cine Portal

ಅಂಬರೀಶ್ ಜೊತೆ ಸುಹಾಸಿನಿ ಬಂದಿದ್ದು ಯಾಕೆ?

ರೆಬೆಲ್‌ಸ್ಟಾರ್ ಅಂಬರೀಶ್, ಕಿಚ್ಚ ಸುದೀಪ್ ಒಟ್ಟಾಗಿ ಅಭಿನಯಿಸುತ್ತಿರುವ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾದ ಚಿತ್ರೀಕರಣ ಇದೀಗ ಭರದಿಂದ ಸಾಗಿದೆ. ಈಗಾಗಲೇ ಕಿಚ್ಚ ಸುದೀಪ್ ಹಾಗೂ ಶೃತಿ ಹರಿಹರನ್ ಅಭಿನಯದ ದೃಷ್ಯಗಳ ಚಿತ್ರೀಕರಣ ನಡೆಯುತ್ತಿದೆ. ಇನ್ನು ಈ ಚಿತ್ರದಲ್ಲಿ ಅಂಬಿ ಜೊತೆ ಯಾವ ನಾಯಕಿ ಅಭಿನಯಿಸುತ್ತಾರೆ ಎಂಬ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳಾಗಿದ್ದವು. ಆರಂಭದಲ್ಲಿ ಸುಹಾಸಿನಿ ಅವರ ಹೆಸರು ಕೇಳಿ ಬಂದಿದ್ದರೂ, ನಂತರದಲ್ಲಿ ತಮಿಳಿನ ಖುಷ್ಬು ಅಥವಾ ರಮ್ಯಾಕೃಷ್ಣ ಈ ಸಿನಿಮಾದಲ್ಲಿ ಅಭಿನಯಿಸುತ್ತಾರೆ ಎಂಬ ಮಾತು ಕೇಳಿಬಂತು.

ಸುಹಾಸಿನಿ ಅವರು ಸಿಗದ ಕಾರಣ ಚಿತ್ರತಂಡ ಬೇರೆ ನಾಯಕಿಯರನ್ನು ಕರೆತರುವ ಪ್ರಯತ್ನ ಕೂಡ ಮಾಡಿತ್ತು. ಆದರೆ ಕೊನೆಯದಾಗಿ ಈಗ ನಟಿ ಸುಹಾಸಿನಿ ಅವರೇ ಈ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ಈಗಾಗಲೇ ಅವರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ನಟ ಅಂಬರೀಶ್ ಹಾಗೂ ಸುಹಾಸಿನಿ ಅವರ ಮಧ್ಯೆ ನಡೆವ ಸೀನ್‌ಗಳ ಚಿತ್ರೀಕರಣ ಮಾಡುವಲ್ಲಿ ನಿರ್ದೇಶಕ ಗುರುದತ್ ಗಾಣಿಗ ಬ್ಯುಸಿ ಆಗಿದ್ದಾರೆ.

ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರವನ್ನು ವಿತರಕ ಹಾಗೂ ನಿರ್ಮಾಪಕ ಜಾಕ್ ಮಂಜು ಅವರು ನಿರ್ಮಾಣ ಮಾಡುತ್ತಿದ್ದು ಅರ್ಜುನ್ ಜನ್ಯ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿzರೆ. ಸದ್ಯ ಚಿತ್ರದ ಶೇಕಡ ೮೦ ರಷ್ಟು ಚಿತ್ರೀಕರಣವನ್ನು ಮುಗಿಸಿರುವ ಚಿತ್ರತಂಡ ಐದು ದಿನಗಳ ಕಾಲ ಸುಹಾಸಿನಿ ಮತ್ತು ಅಂಬರೀಶ್ ಅವರ ನಡುವಿನ ಟಾಕಿ ಪೋಷನ್ ಶೂಟಿಂಗ್ ಮಾಡಲಿದೆ. ಅಂಬರೀಶ್ ಹಾಗೂ ಸುಹಾಸಿನಿ ಅವರ ನಡುವೆ ಒಂದು ಹಾಡು ಕೂಡ ಇದ್ದು ಅದರ ಚಿತ್ರೀಕರಣವನ್ನು ಕೇರಳದ ಸುತ್ತ ಮುತ್ತ ನಡೆಸಲಾಗುವುದು. ಆರಂಭದಿಂದಲೂ ಸಾಕಷ್ಟು ವಿಶೇಷತೆಗಳನ್ನು ಹೊತ್ತು ತರುತ್ತಿರುವ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರವು ಆದಷ್ಟು ಬೇಗನೇ ಪ್ರೇಕ್ಷಕರ ಮುಂದೆ ಬರಲು ಸಿದ್ದವಾಗುತ್ತಿದೆ.

Leave a Reply

Your email address will not be published. Required fields are marked *


CAPTCHA Image
Reload Image