Connect with us

ಕಲರ್ ಸ್ಟ್ರೀಟ್

`ಮನೋರಥ’ವೇರಿ ಬಂದ ಅಂಜಲಿ!

Published

on

ಎಂ ಪ್ರಸನ್ನ ಕುಮಾರ್ ನಿರ್ಮಾಣ ಮಾಡಿ ನಿರ್ದೇಶನವನ್ನೂ ಮಾಡಿರುವ ಚಿತ್ರ ಮನೋರಥ. ನಾಳೆ ರಾಜ್ಯಾಧ್ಯಂತ ಬಿಡುಗಡೆಯಾಗಲಿರುವ ಈ ಚಿತ್ರ ಮೂಲಕ ಅಂಜಲಿ ಎಂಬ ಬಹುಮುಖ ಪ್ರತಿಭೆ ನಾಯಕಿಯಾಗಿ ಪಾದಾರ್ಪಣೆ ಮಾಡಲಿದ್ದಾರೆ. ಮಾಮೂಲಿಯಾದ ಪಾತ್ರಗಳಿಗಿಂತಲೂ ನಟಿಸಲು ಅವಕಾಶವಿರುವ ಭಿನ್ನ ಜಾಡಿನ ಪಾತ್ರಗಳನ್ನು ಬಯಸುತ್ತಾ ಬಂದಿರೋ ಅಂಜಲಿ ಮನೋರಥ ಚಿತ್ರದ ಒಟ್ಟಾರೆ ಕಥೆ ಮತ್ತು ತಮ್ಮ ಪಾತ್ರದ ಬಗ್ಗೆ ತುಂಬು ಅಭಿಮಾನ ಹೊಂದಿದ್ದಾರೆ. ತನ್ನ ಇಂಗಿತಕ್ಕೆ ತಕ್ಕುದಾಗಿಯೇ ಮನೋರಥ ಚಿತ್ರದ ಮೂಡಿ ಬಂದಿದೆ ಎಂಬ ಖುಷಿಯನ್ನೂ ಹೊಂದಿದ್ದಾರೆ.
ಅಂಜಲಿ ನಟನೆಯ ಗುಂಗಿನಿಂದ ತಪ್ಪಿಸಿಕೊಳ್ಳಲಾರದೆ ಇದ್ದ ಕೆಲಸವನ್ನೂ ಬಿಟ್ಟು ಹೊರ ಬಂದವರ ಸಾಲಿಗೆ ಸಲೀಸಾಗಿ ಸೇರಿಕೊಳ್ಳ್ಳುವವರು. ಅವರನ್ನು ಅಪ್ಪಟ ಬೆಂಗಳೂರಿನ ಹುಡುಗಿ ಅನ್ನಲು ಯಾವ ಅಡ್ಡಿಯೂ ಇಲ್ಲ. ಈ ನಗರದಲ್ಲಿಯೇ ಹುಟ್ಟಿ ಬೆಳೆದ ಅಂಜಲಿಗೆ ಆರಂಭದಿಂದಲೂ ಮನೆಯಿಂದಲೇ ಕಲಾಸಕ್ತಿಗೆ ಪ್ರೋತ್ಸಾಹ ಸಿಗಲಾರಂಭಿಸಿತ್ತು. ತಂದೆ ರಾಮಚಂದ್ರ ರಾವ್ ಅವರು ಬೆಮೆಲ್ ಉದ್ಯೋಗಿ. ತಾಯಿ ಗೃಹಿಣಿ. ತಮ್ಮ ಈಗ ಸಾಫ್ಟ್ ವೇರ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಮೂರ್ನಾಲಕ್ಕು ವರ್ಷದ ಹೊತ್ತಿಗೆಲ್ಲ ಅಂಜಲಿಯನ್ನು ನೃತ್ಯಾಭ್ಯಾಸಕ್ಕೆ ಸೇರಿಸುವ ಮೂಲಕ ಹೆತ್ತವರೇ ಕಲೆಯ ತೆಕ್ಕೆಗಿಟ್ಟಿದ್ದರು. ಹೀಗೆ ಬಾಲ್ಯದಿಂದಲೇ ಕಲೆಯ ಜಾಡಿನಲ್ಲಿ ಬೆಳೆದು ಬಂದಿದ್ದ ಅಂಜಲಿ ಓದಿದ್ದು ಅದಕ್ಕೆ ತದ್ವಿರುದ್ಧವಾದುದನ್ನೇ. ಸಪ್ತಗಿರಿ ಕಾಲೇಜಿನಲ್ಲಿ ಬಯೋಟೆಕ್ ಇಂಜಿನೀರಿಂಗ್ ಮುಗಿಸಿದ್ದ ಅಂಜಲಿಗೆ ಸಾಫ್ಟ್‌ವೇರ್ ಕಂಪೆನಿ ಒಂದರಲ್ಲಿ ಕೆಲಸವೂ ಸಿಕ್ಕಿತ್ತು.
ಸೆಟಲ್ ಆಗೋದು ಮಾತ್ರವೇ ಬದುಕಿನ ಪರಮ ಗುರಿ ಅಂದುಕೊಂಡವರಿಗೆ ಯಾವ ತೊಂದರೆಯೂ ಇಲ್ಲದ ಕೆಲಸವದು. ಕೈ ತುಂಬಾ ಸಂಬಳ, ಅದಕ್ಕೆ ಪೂರಕವಾದ ಕೆಲಸ… ಆದರೆ ಅಂಜಲಿಗೆ ಈ ಕೆಲಸದಲ್ಲಿ ಒಂದೂವರೆ ವರ್ಷ ಕಳೆಯುವ ಮುನ್ನವೇ ಆಸಕ್ತಿ ಹೋಗಲಾರಂಭಿಸಿತ್ತು. ತಾನು ಈ ವಲಯದಲ್ಲಿಯೇ ಎಲ್ಲಿ ಕಳೆದು ಹೋಗುತ್ತೀನೋ ಅಂತ ಕಸಿವಿಸಿಗೊಳಗಾದ ಅವರು ಕಡೆಗೂ ಒಂದು ಗಟ್ಟಿ ನಿರ್ಧಾರ ತೆಗೆದುಕೊಂಡು ನಟನೆಯೇ ತನ್ನ ಗುರಿ ಅಂದುಕೊಂಡ ಅಂಜಲಿ ಆ ಕೆಲಸ ಬಿಟ್ಟು ಬಂದಿದ್ದರಂತೆ!
ಹಾಗಂತ ಇದ್ದ ಕೆಲಸ ಬಿಟ್ಟು ಬಂದ ಅಂಜಲಿ ಏಕಾಏಕಿ ನಾಯಕಿಯಾಗಲು ಪ್ರಯತ್ನಿಸಲಿಲ್ಲ. ಬದಲಾಗಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸಲಾರಂಭಿಸಿದ್ದರು. ಏರೋ ಇಂಡಿಯಾ ಇಂಟರ್ ನ್ಯಾಷನಲ್ ಸೆಮಿನಾರ್ ಜೊತೆಗೆ ದೊಡ್ಡ ದೊಡ್ಡ ಈವೆಂಟುಗಳಿಗೂ ಆಂಕರಿಂಗ್ ಮಾಡೋ ಮೂಲಕ ಎಲ್ಲರನ್ನೂ ಸೆಳೆದುಕೊಂಡಿದ್ದರು.
ಅಂಜಲಿ ಮೂಲತಃ ಭರತನಾಟ್ಯ ಕಲಾವಿದೆ. ಭರತನಾಟ್ಯದಲ್ಲಿ ವಿದ್ವತ್ತನ್ನೂ ಪಡೆದುಕೊಂಡಿದ್ದಾರೆ. ವಿಧುಶಿ ಭಾನುಮತಿ, ಶೋಭಾ ಧನಂಜಯ್ ಮುಂತಾದವರಿಂದ ಭರತನಾಟ್ಯ ಕಲಿತಿದ್ದ ಅಂಜಲಿ ಪಾಲಿಗೆ ಮಯೂರಿ ಉಪಾಧ್ಯಾಯ ಕೂಡಾ ಗುರು. ದೇಶಾದಂತ ಸಾಕಷ್ಟು ನೃತ್ಯ ಪ್ರದರ್ಶನಗಳನ್ನು ನೀಡಿರುವ ಅಂಜಲಿ `ಅಂಜಲಿ ಸ್ಕೂಲ್ ಆಫ್ ಡ್ಯಾನ್ಸ್’ ಮೂಲಕ ನೃತ್ಯ ತರಬೇತಿಯನ್ನೂ ನೀಡುತ್ತಿದ್ದಾರೆ.
ಇದರ ನಡುವೆಯೇ ನಟನೆಯ ಅವಕಾಶಗಳತ್ತಲೂ ಗಮನ ಹರಿಸಿದ್ದ ಅಂಜಲಿಗೆ ಮೊದಲು ಅವಕಾಶ ಸಿಕ್ಕಿದ್ದ ವಿನಯ್ ರಾಜ್ ಕುಮಾರ್ ಅಭಿನಯದ ರನ್ ಆಂಟನಿ ಚಿತ್ರದಲ್ಲಿ. ಅದರಲ್ಲವರು ನಾಯಕನ ಸ್ನೇಹಿತೆಯ ಪಾತ್ರವನ್ನು ನಿರ್ವಹಿಸಿದ್ದರು. ಆ ನಂತರ್ ಕಿರಗೂರಿನ ಗಯ್ಯಾಳಿಗಳು ಚಿತ್ರದಲ್ಲಿಯೂ ಸಣ್ಣದೊಂದು ಪಾತ್ರ ಅವರಿಗೆ ಸಿಕ್ಕಿತ್ತು. ತಾನು ನಾಯಕಿಯಾಗೋದಾದರೆ ಭಿನ್ನ ಪಾತ್ರದಿಂದಲೇ ಲಂಚ್ ಆಗಬೇಕೆಂದು ಅಂದುಕೊಂಡಿದ್ದ ಅವರಿಗೆ ಸಿಕ್ಕಿದ್ದು ಮನೋರಥ ಚಿತ್ರದಲ್ಲಿ ನಾಯಕಿಯಾಗೋ ಅವಕಾಶ.
ಸೈಕಾಲಾಜಿಕಲ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ, ರಾಜ್ ಚರಣ್ ಹೀರೋ ಆಗಿರುವ ಮನೋರಥ ಚಿತ್ರ ಮನುಷ್ಯನ ಮನೋ ಲೋಕದ ಸುತ್ತಾ ಹೆಣೆದಿರೋ ಕಥೆ ಹೊಂದಿದೆಯಂತೆ. ಈ ಕಥೆ ಮತ್ತು ತನ್ನ ಪಾತ್ರ ಇಷ್ಟವಾದ ಕಾರಣದಿಂದಲೇ ಅಂಜಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಈಗಾಗಲೇ ಒಂದಷ್ಟು ಅವಕಾಶಗಳನ್ನು ಹೊಂದಿರೋ ಅಂಜಲಿ ಮನೋರಥ ಚಿತ್ರ ತನಗೆ ದಿಕ್ಕು ತೋರುತ್ತದೆ ಎಂಬ ನಂಬಿಕೆ ಹೊಂದಿದ್ದಾರೆ.

Advertisement
Click to comment

Leave a Reply

Your email address will not be published. Required fields are marked *

ಕಲರ್ ಸ್ಟ್ರೀಟ್

ಪ್ರೇಮಿಗಳಿಗೆಂದೇ ಬಂತು ಪಡ್ಡೆಹುಲಿಯ ಭಾವನಾತ್ಮಕ ಹಾಡು!

Published

on


ಪ್ರೇಮಕವಿ ಬಿ.ಆರ್ ಲಕ್ಷ್ಮಣರಾಯರು ಬರೆದ ಹೇಳಿ ಹೋಗು ಕಾರಣ ಎಂಬ ಭಾವಗೀತೆ ಒಂದು ತಲೆಮಾರಿನ ಪ್ರೇಮ ಯಾತನೆಗೆ ಮದ್ದಾಗಿದೆ. ಸಿ ಅಶ್ವತ್ಥ್ ಅವರ ಕಂಠದಲ್ಲಿ ಪ್ರಸಿದ್ಧಿ ಪಡೆದಿದ್ದ ಈ ಹಾಡು ಪ್ರೇಮದ ಎಲ್ಲ ಭಾವಗಳನ್ನೂ ಉದ್ದೀಪಿಸಿದೆ, ನೋವುಗಳನ್ನ ಹಿವಾಗಿ ಸವರಿ ಸಂತೈಸಿದೆ. ಇದೇ ಭಾವಗೀತೆಯೀಗ ಅಜನೀಶ್ ಲೋಕನಾಥ್ ಮಾಂತ್ರಿಕ ಸಂಗೀತ ಸ್ಪರ್ಶದೊಂದಿಗೆ ಹೊಸ ತಲೆಮಾರನ್ನೂ ತಲುಪಿಕೊಂಡಿದೆ!

ಅಜನೀಶ್ ಲೋಕನಾಥ್ ಪಡ್ಡೆಹುಲಿ ಚಿತ್ರಕ್ಕಾಗಿ ಹೇಳಿ ಹೋಗು ಕಾರಣ ಗೀತೆಗೆ ಹೊಸಾ ಹುಟ್ಟು ನೀಡಿದ್ದಾರೆ. ಈ ವರೆಗೂ ಪಡ್ಡೆಹುಲಿಯ ಒಂದಷ್ಟು ಹಾಡುಗಳು ಹೊರ ಬಂದಿವೆ. ಅವೆಲ್ಲವೂ ಹಿಟ್ ಕೂಡಾ ಆಗಿವೆ. ಪ್ರತಿಯೊಂದು ಹಾಡಿನಲ್ಲಿಯೂ ಒಂದೊಂದು ವಿಶೇಷತೆಗಳೊಂದಿಗೇ ಪ್ರೇಕ್ಷಕರನ್ನ ತಲುಪಬೇಕೆಂಬುದು ಗುರುದೇಶಪಾಂಡೆ ಅವರ ಅಭಿಲಾಶೆ. ಅದರನ್ವಯವೇ ಈ ಹಾಡೀಗ ಹೊರ ಬಂದು ಎಲ್ಲೆಡೆ ಹರಿದಾಡುತ್ತಿದೆ.

ಈ ಹಾಡನ್ನು ಸಿದ್ಧಾರ್ಥ್ ಮಹಾದೇವನ್ ಮತ್ತು ಗುಬ್ಬಿ ಹಾಡಿದ್ದಾರೆ. ಬಿ ಆರ್ ಲಕ್ಷ್ಮಣರಾಯರು ಬರೆದ ಈ ಹಾಡು ಸಿ ಅಶ್ವತ್ಥ್ ಧ್ವನಿಯಲ್ಲಿ ಮಂದ್ರ ಸಂಗೀತದೊಂದಿಗೆ ಜನರನ್ನ ಆವರೆಇಸಿಕೊಂಡಿತ್ತು. ಅದಕ್ಕೀಗ ಇಂದಿನ ತಲೆಮಾರಿನ ಆವೇಗಗಳನ್ನ ಹೊಂದಿರುವ ರ‍್ಯಾಪ್ ಶೈಲಿಯನ್ನು ಹದವಾಗಿ ಬೆರೆಸಿ ಅಜನೀಶ್ ಹೊಸಾ ಟ್ರೆಂಡ್ ಹುಟ್ಟು ಹಾಕಿದ್ದಾರೆ.

ಈ ಹಾಡಿನ ಮೂಲಕವೇ ಶ್ರೇಯಸ್ ಅಭಿನಯದ ಪಡ್ಡೆಹುಲಿ ಚಿರತ್ರ ಮತ್ತಷ್ಟು ನಿರೀಕ್ಷೆ ಮೂಡಿಸಿದೆ

Continue Reading

ಕಲರ್ ಸ್ಟ್ರೀಟ್

ಭರ್ಜರಿಯಾಗಿ ನಗಿಸ್ತಾನೆ ಕೆಮಿಸ್ಟ್ರಿ ಕರಿಯಪ್ಪ!

Published

on

ತನ್ನ ವಿಶಿಷ್ಟವಾದ ಶೀರ್ಷಿಕೆ, ಬಾಲಿವುಡ್ ಮಟ್ಟದಲ್ಲಿಯೂ ಟಾಕ್ ಕ್ರಿಯೇಟ್ ಮಾಡಿದ್ದ ಸಿನಿಮಾ ಕೆಮಿಸ್ಟ್ರಿ ಆಫ್ ಕರಿಯಪ್ಪ. ಇದು ಯಾವ ಜಾನರಿನ ಸಿನಿಮಾ, ಕಥೆ ಎಂಥಾದ್ದೆಂಬುದೂ ಸೇರಿದಂತೆ ಕರಿಯಪ್ಪನ ಕೆಮಿಸ್ಟ್ರಿ ಹೇಗಿದ್ದಿರ ಬಹುದೆಂಬ ಕುತೂಹಲ ಎಲ್ಲೆಡೆ ಮಿರುಗುಟ್ಟಿತ್ತು. ಇಂಥಾದ್ದರಿಂದ ಅಪಾರ ನಿರೀಕ್ಷಿಯಿಟ್ಟುಕೊಂಡು ಥೇಟರಿಗೆ ಬಂದವರು ಮನಸಾರೆ ನಕ್ಕು, ಒಂದರೆಕ್ಷಣ ಭಾವುಕರಾಗಿ, ಕೆಲ ತಿರುವುಗಳಲ್ಲಿ ಬೆರಗಾಗುತ್ತಲೇ ವಿಶಿಷ್ಟವಾದೊಂದು ಸಿನಿಮಾ ನೋಡಿದ ಖುಷಿಯ ಕೈ ಹಿಡಿದೇ ಮನೆ ಸೇರಿಕೊಳ್ಳೋದು ಗ್ಯಾರೆಂಟಿ. ಇದು ಕರಿಯಪ್ಪನ ಕೆಮಿಸ್ಟ್ರಿಯ ನಿಜವಾದ ವಿಶೇಷತೆ ಅನ್ನಲಡ್ಡಿಯಿಲ್ಲ.

ಡಾ. ಡಿ.ಎಸ್ ಮಂಜುನಾಥ್ ನಿರ್ಮಾಣ ಮಾಡಿರುವ ಕೆಮಿಸ್ಟ್ರಿ ಆಫ್ ಕರಿಯಪ್ಪ ಭಿನ್ನ ಬಗೆಯ ಕಾಮಿಡಿ ಜಾನರಿನ ಚಿತ್ರ. ಇಡೀ ಹೂರಣವನ್ನ ನೋಡಿದರೆ ಇದನ್ನು ಬರೀ ಕಾಮಿಡಿಗೆ ಕಟ್ಟು ಹಾಕಲು ಖಂಡಿತಾ ಸಾಧ್ಯವಾಗೋದಿಲ್ಲ. ಒಂದು ಸರಳವಾದ ಕಥೆಯನ್ನು ಸಣ್ಣಪುಟ್ಟ ವಿಚಾರಗಳಲ್ಲಿಯೂ ಗಮನವಿಟ್ಟು ಶೃಂಗರಿಸಿರುವ ನಿರ್ದೇಶಕ ಕುಮಾರ್ ಅವರ ಕಸುಬುದಾರಿಕೆ ಬೆರಗಾಗಿಸುವಂತಿದೆ. ಮಧ್ಯಮ ವರ್ಗದ ಕಥೆಯಾದರೂ ಎಲ್ಲರಿಗೂ ಕನೆಕ್ಟ್ ಆಗುವಂಥಾ ಕಥೆ, ಕಾಮಿಡಿ ಮತ್ತು ಗಾಢವಾದ ಭಾವುಕ ಸನ್ನಿವೇಶಗಳೊಂದಿಗೆ ಕರಿಯಪ್ಪನ ಕೆಮಿಸ್ಟ್ರಿ ಮೋಡಿ ಮಾಡಿದೆ.

ಅದು ಅಪ್ಪ ಅಮ್ಮ ಮತ್ತು ಮಗನ ಪುಟ್ಟ ಸಂಸಾರ. ಕರಿಯಪ್ಪ ಆ ಸಂಸಾರದ ಯಜಮಾನ. ಈತನ ಮಗ ಉತ್ತರ ಕುಮಾರ. ತನ್ನ ಮಗನಿಗೊಂದು ಮದುವೆ ಮಾಡಿ ಆತ ನೆಲೆ ಕಂಡುಕೊಳ್ಳಬೇಕೆಂಬುದೇ ಕರಿಯಪ್ಪನ ಆಸೆ ಮತ್ತು ಉದ್ದೇಶ. ಆದರೆ ನೂರಾರು ಹುಡುಗೀರನ್ನು ನೋಡಿದರೂ ಒಂದೇ ಒಂದು ಸಂಬಂಧವೂ ಉತ್ತರ ಕುಮಾರನಿಗೆ ಕೂಡಿ ಬರೋದಿಲ್ಲ. ಈ ಬಗ್ಗೆ ಕರಿಯಪ್ಪ ಮಂಡೆಬಿಸಿ ಮಾಡಿಕೊಂಡು ಕೂತಿರುವಾಗಲೇ ಪುತ್ರ ಉತ್ತರ ಕುಮಾರ ಚೆಲುವೆಯೊಬ್ಬಳಿಗೆ ಬಲೆ ಬೀಸಿ ಬಿಟ್ಟಿರುತ್ತಾನೆ. ಆಮೇಲೆ ಮದುವೆ. ಆದರೆ ಉತ್ತರ ಕುಮಾರನಿಗೆ ಫಸ್ಟ್ ನೈಟಲ್ಲಿಯೇ ಘೋರ ಆಘಾತವೊಂದು ಎದುರಾಗುತ್ತೆ. ಅದಕ್ಕೆ ಕಾರಣವೇನು. ಅಂಥಾದ್ದೇನಾಗುತ್ತೆ ಅನ್ನೋ ಕುತೂಹಲದ ಸುತ್ತಾ ಎಲ್ಲಿಯೂ ಬೋರು ಹೊಡೆಸದಂತೆ ಈ ಚಿತ್ರ ಮುಂದುವರೆಯುತ್ತದೆ.

ಮಗನ ಜೀವನದಲ್ಲಾಗೋ ಯಡವಟ್ಟುಗಳನ್ನು ಸರಿಪಡಿಸಲು ಪಡಿ ಪಾಟಲು ಪಡೋ ತಂದೆಯಾಗಿ ಕರಿಯಪ್ಪನ ಪಾತ್ರಕ್ಕೆ ತಬಲಾ ನಾಣಿ ಜೀವ ತುಂಬಿದ್ದಾರೆ. ಇದರಲ್ಲವರು ಈ ವರೆಗಿನ ಪಾತ್ರಗಳಿಗಿಂತಲೂ ಭಿನ್ನವಾಗಿ ಕಾಣಿಸುತ್ತಾರೆ. ನಾಯಕ ಚಂಣದನ್ ಆಚಾರ್ಯ ಮತ್ತು ನಾಯಕಿ ಸಂಜನಾ ಆನಂದ್ ಕೂಡಾ ಮುದ್ದಾಗಿ ನಟಿಸಿದ್ದಾರೆ. ಎಲ್ಲ ಪಾತ್ರ ವರ್ಗವೂ ಪ್ರೇಕ್ಷಕರನ್ನು ನೇರವಾಗಿ ತಟ್ಟುವಂತಿದೆ. ಖುದ್ದು ನಿರ್ಮಾಪಕ ಮಂಜುನಾಥ್ ಅವರೇ ಪಾತ್ರವೊಂದರ ಮೂಲಕ ಪ್ರೇಕ್ಷಕರಿಗೆ ಆಪ್ತವಾಗುತ್ತಾರೆ.

ಒಟ್ಟಾರೆ ಚಿತ್ರದಲ್ಲಿ ಗಂಭೀರವಾದ ಅಂಶಗಳಿವೆ, ಭಾವನಾತ್ಮಕ ಸನ್ನಿವೇಶಗಳಿವೆ. ಆದರೆ ಅದರ ಬೆನ್ನಿಗೇ ನಗು ಅರಳಿಕೊಳ್ಳುತ್ತೆ. ಕೆಮಿಸ್ಟ್ರಿ ಆಫ್ ಕರಿಯಪ್ಪ ಸ್ಪೆಷಲ್ಲು ಅನ್ನಿಸೋದೇ ಈ ಕಾರಣದಿಂದ. ನೀವೂ ಒಮ್ಮೆ ನೋಡಿ. ಕರಿಯಪ್ಪನ ಕೆಮಿಸ್ಟ್ರಿ ಖಂಡಿತಾ ಇಷ್ಟವಾಗುತ್ತೆ!

cinibuzz ರೇಟಿಂಗ್ : ****/*****

Continue Reading

ಕಲರ್ ಸ್ಟ್ರೀಟ್

ಬೆಲ್ ಬಾಟಮ್: ರೆಟ್ರೋ ಲೋಕದೊಳಗೆ ಎಣಿಸಲಾರದ ಅದ್ಭುತಗಳಿದ್ದಾವೆ!

Published

on

ಜಯತೀರ್ಥ ನಿರ್ದೇಶನದ ಬೆಲ್ ಬಾಟಮ್ ರೆಟ್ರೋ ಜಮಾನವನ್ನ ಕ್ರಿಯೇಟಿವ್ ಆಗಿ ಪರಿಚಯಿಸುತ್ತಲೇ ಕ್ರೇಜ್ ಸೃಷ್ಟಿಸಿದ್ದ ಚಿತ್ರ. ಪ್ರತಿಯೊಂದರಲ್ಲಿಯೂ ಹಳತಿಗೆ ಹೊಸಾ ಹೊಳಪು ನೀಡೋ ಪ್ರಯತ್ನದಿಂದಲೇ ಎಲ್ಲಾ ವರ್ಗದ ಪ್ರೇಕ್ಷಕರನ್ನೂ ಆವರಿಸಿಕೊಂಡಿದ್ದ ಈ ಸಿನಿಮಾವೀಗ ಥೇಟರುಗಳಿಗೆ ಅಡಿಯಿರಿಸಿದೆ. ಈ ಕಾಲಮಾನಕ್ಕೆ ಹೊಸತೆನ್ನಿಸುವಂಥಾ ಅಪ್ಪಟ ಪತ್ತೇದಾರಿ ಕಥನವೊಂದು ಭರ್ಜರಿ ಕಾಮಿಡಿ ಝಲಕ್ಕುಗಳ ಜೊತೆಗೆ ನೋಡುಗರನ್ನು ಮುದಗೊಳಿಸಿದೆ.

ಟಿ.ಕೆ ದಯಾನಂದ್ ಬರೆದಿರೋ ಥ್ರಿಲ್ಲಿಂಗ್ ಕಥೆಗೆ ಜಯತೀರ್ಥ ಚಿತ್ರಕಥೆ ಮತ್ತು ರಘು ನಿಡುವಳ್ಳಿ ಸಂಭಾಷಣೆ ಬರೆದಿರೋ ಸಿನಿಮಾ ಬೆಲ್ ಬಾಟಮ್. ವರ್ಷಾಂತರಗಳ ಹಿಂದೆ ಕೋಲಾರ ಸೀಮೆಯಲ್ಲಿ ನಡೆದಿದ್ದ ಸತ್ಯ ಘಟನೆಯೊಂದರ ಎಳೆಯೊಂದಿಗೇ ಹೊಸೆದಿರೋ ರೋಚಕ ಕಥನವನ್ನ ಈ ಚಿತ್ರ ಒಳಗೊಂಡಿದೆ. ಬೆಲ್ ಬಾಟಮ್ ಅನ್ನು ಜನ ಯಾವ ನಿರೀಕ್ಷೆಯಿಟ್ಟುಕೊಂಡು ನೋಡಿದರೂ ಅದನ್ನು ತಣಿಸಿ ಬೇರೆಯದ್ದೇ ಜಗತ್ತಿನೊಂದಿಗೆ ವಿಹರಿಸುವಂತೆ ಮಾಡುವಲ್ಲಿ ಬೆಲ್ ಬಾಟಮ್ ಗೆದ್ದಿದೆ.

ರಿಷಬ್ ಶೆಟ್ಟಿ ಡಿಟಕ್ಟಿವ್ ದಿವಾಕರನಾಯಿ ತಮ್ಮ ಪ್ರತಿಭೆಯ ಮತ್ತೊಂದು ಮಜಲನ್ನು ಸಮರ್ಥವಾಗಿಯೇ ಅನಾವರಣಗೊಳಿಸಿದ್ದಾರೆ. ಈ ದಿವಾಕರನಿಗೆ ಸಣ್ಣ ವಯಸಿನಿಂದಲೇ ಪತ್ತೇದಾರಿ ಕಥೆಗಳನ್ನು ಓದೋ ಹವ್ಯಾಸ. ಆ ಸ್ಫೂರ್ತಿಯಿಂದ ತಾನು ಡಿಟೆಕ್ಟಿವ್ ಆಗಬೇಕೆಂಬ ಏಕ ಮಾತ್ರ ಉದ್ದೇಶದೊಂದಿಗೆ ಮುಂದುವರೆದ ಆತನನ್ನು ಬದುಕು ಪೊಲೀಸ್ ಕಾನ್ಸ್‌ಟೇಬಲ್ ವೃತ್ತಿಗೆ ಕಟ್ಟಿ ನಿಲ್ಲಿಸುತ್ತದೆ. ಹೀಗೆ ಅನಿವಾರ್ಯವಾಗಿ ಪೊಲೀಸು ವೃತ್ತಿಗಿಳಿದರೂ ದಿವಾಕರನೊಳಗಿನ ಪತ್ತೇದಾರಿಕೆಯ ಬುದ್ಧಿ ಮಾತ್ರ ಮರೆಯಾಗಿರೋದಿಲ್ಲ. ಹೀಗಿರುವಾಗಲೇ ಪೊಲೀಸಲ್ ಇಲಾಖೆಯನ್ನೇ ಮುಜುಗರಕ್ಕೆ ತಳ್ಳುವಂಥಾ ವಿದ್ಯಮಾನವೊಂದು ಘಟಿಸುತ್ತೆ. ಅದರ ಸುತ್ತಾ ಇಡೀ ಕಥೆ ಮಜವಾಗಿ ತೆರೆದುಕೊಳ್ಳುತ್ತಾ ಸಾಗುತ್ತದೆ.

ಬೆಲ್ ಬಾಟಮ್ ಚಿತ್ರದಲ್ಲೊಂದು ರೆಟ್ರೋ ಜಗತ್ತನ್ನೇ ಸೃಷ್ಟಿಸಿರೋ ನಿರ್ದೇಶಕ ಜಯತೀರ್ಥ ಇಡೀ ಕ್ಯಾನ್ವಾಸಿನ ಬಣ್ಣಗಳನ್ನು ಎಲ್ಲಿಯೂ ಚೆದುರದಂತೆ, ಎಲ್ಲರಿಗೂ ಆಪ್ತವಾಗುವಂತೆ ಕಟ್ಟಿ ಕೊಟ್ಟಿದ್ದಾರೆ. ಇಡೀ ಚಿತ್ರದ ಅಸಲೀ ಶಕ್ತಿಯೇ ಇದುವರೆಗೆ ಕಂಡು ಕೇಳರಿಯದಂಥಾ ವಿಚಿತ್ರ, ವಿಲಕ್ಷಣ ಪಾತ್ರಗಳು. ಸೆಗಣಿ ಪಿಂಟೋ, ಮರಕುಟುಕ ಎಂಬ ಸ್ಯಾಂಪಲ್ಲು ಕೇಳಿದರೇನೇ ಇದರ ವಿಶೇಷತೆ ಏನೆಂದು ಎಲ್ಲರಿಗೂ ಅರ್ಥವಾಗುತ್ತದೆ. ಹೀಗೆ ಪ್ರತಿಯೊಂದು ಪಾತ್ರಗಳನ್ನೂ ಕೂಡಾ ಕಾಡುವಂತೆ ಸೃಷ್ಟಿಸಲಾಗಿದೆ. ಮರಕುಟುಕನ ಪಾತ್ರಧಾರಿ ಯೋಗರಾಜ ಭಟ್ ಸೇರಿದಂತೆ ಸಮಸ್ತರೂ ಆಯಾ ಪಾತ್ರಗಳಿಗೆ ನ್ಯಾಯ ಸಲ್ಲಿಸಿ ಪ್ರೇಕ್ಷಕರ ಮನಸಿನಾಳಕ್ಕಿಳಿದಿದ್ದಾರೆ. ಅಷ್ಟಕ್ಕೂ ಟಿ ಕೆ ದಯಾನಂದ್ ಅವರ ಕಥೆಯ ಸೊಗಸೇ ಅಂಥಾದ್ದಿದೆ!

ಜಯತೀರ್ಥ ಚಿತ್ರಗಳೆಂದ ಮೇಲೆ ಹೊಸತನ ಖಾಯಂ. ಅದು ಬೆಲ್ ಬಾಟಮ್ ಮೂಲಕವೂ ಮುಂದುವರೆದಿದೆ. ಹರಿಪ್ರಿಯಾ ಮತ್ತು ರಿಷಬ್ ಸೇರಿದಂತೆ ಎಲ್ಲರೂ ಸ್ಪರ್ಧೆಗೆ ಬಿದ್ದವರಂತೆ ನಟಿಸಿದ್ದಾರೆ. ಒಟ್ಟಾರೆಯಾಗಿ ಎಂಭತ್ತರ ದಶಕದ ಪತ್ತೇದಾರಿ ಚಿತ್ರಗಳ ಜಗತ್ತಿಗೆ ಬೆಲ್ ಬಾಟಮ್ ಮೂಲಕ ಎಲ್ಲರಿಗೂ ಪ್ರವೇಶ ಸಿಗುತ್ತದೆ. ಅಲ್ಲಿ ಭರ್ಜರಿ ಮನೋರಂಜನೆ, ಅದ್ಭುತ ಪತ್ತೇದಾರಿಕೆಯ ಗಮ್ಮತ್ತು… ಹೀಗೆ ಎಲ್ಲವೂ ಸಿಗುತ್ತದೆ. ಕೊನೇಯದಾಗಿ ಎಲ್ಲ ವರ್ಗದ ಪ್ರೇಕ್ಷಕರೂ ಮಿಸ್ ಮಾಡಿಕೊಳ್ಳದೆ ನೋಡಲೇ ಬೇಕಾದ ಚಿತ್ರ ಬೆಲ್ ಬಾಟಮ್!

cinibuzz ರೇಟಿಂಗ್ ****/*****

Continue Reading
Advertisement
f2f 300 x 600
drive 300 x 600

Trending

Copyright © 2018 Cinibuzz