One N Only Exclusive Cine Portal

ನೋಡೋಕೇನೋ ಬಲು ಸಿಂಪಲ್ಲು ಇವನ ಗುಂಡ್ಗೆ ಡಬ್ಬಲ್ಲು…

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆


ದುನಿಯಾ ಸೂರಿ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಕಾಂಬಿನೇಷನ್ನಿನ ಬಹು ನಿರೀಕ್ಷಿತ ಚಿತ್ರ ಟಗರು. ಗೆಲುವಿನ ಖದರ್ ಎದ್ದು ಕಾಣಿಸುತ್ತಿರೋ ಈ ಚಿತ್ರದ ಹಾಡುಗಳೂ ಇದೀಗ ಥರ ಥರದಲ್ಲಿ ಸದ್ದು ಮಾಡುತ್ತಿವೆ. ಅದರಲ್ಲಿಯೂ ತಮಿಳಿನ ಖ್ಯಾತ ಹಿನ್ನೆಲೆ ಗಾಯಕ ಅಂಥೋಣಿ ದಾಸನ್ ಹಾಡಿರೋ ‘ಟಗರು ಬಂತು ಟಗರು ಇದು ಈ ಊರ ಟಗರು ಟೈಟಲ್ ಸಾಂಗಂತೂ ವಿಭಿನ್ನ ಸೌಂಡಿಂಗ್ ಮೂಲಕ ಹುಟ್ಟು ಹಾಕಿರೋ ಕ್ರೇಜ್ ಸಣ್ಣದೇನಲ್ಲ!


ಟಗರು ಚಿತ್ರದ ಸಂಗೀತ ನಿರ್ದೇಶಕ ಚರಣ್ ರಾಜ್ ಈ ಮೂಲಕ ವಿಶಿಷ್ಟವಾದ ದೇಸೀ ಧ್ವನಿಯೊಂದನ್ನು ಕನ್ನಡಕ್ಕೆ ಪರಿಚಯಿಸಿದ್ದಾರೆ. ಹೀಗೆ ಟಗರು ಟೈಟಲ್ ಸಾಂಗ್ ಮೂಲಕ ಕನ್ನಡದಲ್ಲೂ ಹೊಸಾ ತರಂಗಗಳನ್ನೆಬ್ಬಿಸಿರೋ ಅಂಥೋಣಿ ದಾಸನ್ ಸದ್ಯ ತಮಿಳಿನಲ್ಲಿ ಭಾರೀ ಪ್ರಸಿದ್ಧಿ ಪಡೆದಿರೋ ಹಿನ್ನೆಲೆ ಗಾಯಕ.
ಅಪ್ಪಟ ದೇಸೀ ಪ್ರತಿಭೆಯಾದ ಅಂತೋಣಿ ದಾಸನ್ ಮೂಲತಃ ತಮಿಳಿನ ಜಾನಪದ ಗಾಯಕ. ತನ್ನ ವಿಶಿಷ್ಟವಾದ ಕಂಠ ಸಿರಿಯ ಮೂಲಕ ಪ್ರಸಿದ್ಧಿ ಪಡೆದ ಅವರು ತಮಿಳು ಚಿತ್ರರಂಗಕ್ಕೆ ಅಡಿಯಿರಿಸಿದ್ದು ೨೦೧೩ರಲ್ಲಿ. ಆ ನಂತರ ಹಲವಾರು ಚಿತ್ರಗಳಿಗೆ ಹಿನ್ನೆಲೆ ಗಾಯಕರಾಗಿ ಹಾಡಿದ ಅಂತೋಣಿ ದಾಸನ್ ತಮಿಳಿಗಳ ಹಾಟ್ ಫೇವರಿಟ್ ಗಾಯಕ. ಜೊತೆಗೆ ಲಾವಣಿ ಹಾಡುಗಳನ್ನು ಬರೆದು ತಾವೇ ಹಾಡುತ್ತಾರೆ.


ತಮಿಳುನಾಡಿನಲ್ಲಿ ನಮ್ಮ ಕೀಲುಕುದುರೆಯನ್ನು ಹೋಲುವ ಕರಗಾಟ್ಟ ಎನ್ನುವ ಗ್ರಾಮೀಣ ಕಲೆಯಿದೆ. ಅಂತೋಣಿ ದಾಸನ್ ಅವರ ತಂದೆ ಕರಗಾಟ್ಟ ತಂಡದಲ್ಲಿ ನಾದಸ್ವರ ಕಲಾವಿದರಾಗಿದ್ದವರು. ಕಿತ್ತು ತಿನ್ನೋ ಬಡತನದಿಂದ ಆರನೇ ಕ್ಲಾಸಿಗೇ ಸ್ಕೂಲಿಗೆ ಗುಡ್ ಬೈ ಹೇಳಿದ ಅಂಥೋಣಿ ಕರಗಾಟ್ಟಗಳಲ್ಲಿ ಜನರನ್ನು ರಂಜಿಸುವ ಬಫೂನ್ ವೇಷ ಹಾಕಿ ಬದುಕು ಸಾಗಿಸುತ್ತಿದ್ದ. ಹಾಗೇ ರೋಡ್‌ರೋಡಲ್ಲಿ ಕುಣಿದುಕೊಂಡಿದ್ದಾತ ಇವತ್ತು ತನ್ನದೇ ಬ್ಯಾಂಡ್ ತಂಡವನ್ನು ಹೊಂದಿದ್ದಾನೆ. ಜಗತ್ತಿನ ಎಲ್ಲ ಮೂಲೆಗಳಲ್ಲೂ ಕಾರ್ಯಕ್ರಮ ನೀಡುತ್ತಾನೆ. ತಮಿಳಿನ ಸ್ಟಾರ್ ನಟರ ಸಿನಿಮಾಗಳಲ್ಲಿ ಈತನದ್ದೊಂದು ಹಾಡಿರುತ್ತದೆ. ಬಣ್ಣ ಬಟ್ಟೆಗಳನ್ನು ನೋಡಿ ಅವಕಾಶ ಕೊಡೋ ಮಂದಿಯ ನಡುವೆ ಬೀದಿಗಳಲ್ಲಿ ಕುಣಿಯುತ್ತಿದ್ದ ಪ್ರತಿಭಾವಂತನನ್ನು ಕರೆತಂದು ಸಿನಿಮಾಗಳಲ್ಲಿ ಹಾಡುವ ಅವಕಾಶ ಕೊಟ್ಟ ತಮಿಳಿಗರನ್ನು ಭೇಷ್ ಅನ್ನಲೇಬೇಕು.


ಇಂಥಾ ಜನಪದ ಕಲಾವಿದ ಅಂತೋಣಿ ದಾಸನ್ ಇದೀಗ ಟಗರು ಚಿತ್ರದ ಮೂಲಕ ಕನ್ನಡಕ್ಕೂ ಅಡಿಯಿರಿಸಿದ್ದಾರೆ. ಇವರು ಹಾಡಿರೋ ಟೈಟಲ್ ಸಾಂಗ್ ಕೂಡಾ ಟಗರು ಚಿತ್ರದ ಪ್ರಮುಖ ಮೈಲಿಗಲ್ಲಾಗೋ ಮೂಲಕ ಅಂತೋಣಿ ದಾಸನ್ ಆರಂಭಿಕವಾಗಿಯೇ ಗೆಲುವು ಸಾಧಿಸಿದ್ದಾರೆ. ಅಂದಹಾಗೆ ಈ ಟೈಟಲ್ ಸಾಂಗ್ ಬರೆದಿರೋದು ಕನ್ನಡ ಚಿತ್ರರಸಿಕರ ನೆಚ್ಚಿನ ಕವಿ ಡಾ. ವಿ. ನಾಗೇಂದ್ರ ಪ್ರಸಾದ್..!

 

copying or reproducing the above content in any format without approval is criminal offence and will be prosecuted in Bengaluru court © CINIBUZZ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Leave a Reply

Your email address will not be published. Required fields are marked *


CAPTCHA Image
Reload Image