One N Only Exclusive Cine Portal

ರಾಮ್‌ಚರಣ್ ಹೆಂಡತಿಯ ನಿದ್ದೆ ಕೆಡಿಸಿದಳೇ ಅನುಷ್ಕಾ?

ಅನುಷ್ಕಾ ನಟನೆಯ ತೆಲುಗು ಹಾಗೂ ತಮಿಳಿನಲ್ಲಿ ರಿಲೀಸ್ ಆಗಿರುವ ಭಾಗಮತಿ ಚಿತ್ರ ಯಶಸ್ವಿಯಾಗಿದೆ. ಬಾಹುಬಲಿ ಚಿತ್ರದ ಭರ್ಜರಿ ಯಶದ ನಂತರ ಅನುಷ್ಕಾ ನಟಿಸಿದ ಮೊದಲ ಚಿತ್ರ ಎಂಬೂದೂ ಸೇರಿದಂತೆ ನಾನಾ ಕಾರಣಗಳಿಂದ ಟಾಕ್ ಕ್ರಿಯೇಟ್ ಮಾಡಿದ್ದ ಈ ಚಿತ್ರ ದೇಶಾಧ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ನಾನಾ ಭಾಷೆಗಳ ಅತಿರಥ ಮಹಾರಥರೇ ಭಾಗಮತಿ ಚಿತ್ರದಲ್ಲಿ ಅನುಷ್ಕಾಳ ಅಭಿನಯವನ್ನು ಮೆಚ್ಚಿ ಕೊಂಡಾಡುತ್ತಿದ್ದಾರೆ.
ಈ ಚಿತ್ರವನ್ನು ನೋಡಿದ ರಜಿನೀಕಾಂತ್ ಕೂಡಾ ಖುಷಿಗೊಂಡಿದ್ದಾರೆ. ಅವರೂ ಇದರಲ್ಲಿನ ಕಥೆ ಮತ್ತು ಅನುಷ್ಕಾ ಅಭಿನಯಕ್ಕೆ ಫಿದಾ ಆಗಿದ್ದಾರೆ. ಹೀಗೆ ಇಷ್ಟವಾದರೆ ಯಾವ ಹಮ್ಮು ಬಿಮ್ಮೂ ಇಲ್ಲದೆ ಸಂಬಂಧಿಸಿದವರಿಗೆ ಫೋನಾಯಿಸಿ ಮಾತಾಡಿ ಮೆಚ್ಚುಗೆ ಸೂಚಿಸೋದು ತಲೈವಾ ದೊಡ್ಡ ಗುಣ. ಅದರಂತೆ ಅನುಷ್ಕಾಗೆ ಸ್ವತಃ ಫೋನ್ ಮಾಡಿ ಚಿತ್ರದ ನಟನೆಯ ಬಗ್ಗೆ ಹೊಗಳಿದ್ದಾರೆ. ಇದು ನನ್ನ ಜೀವನದಲ್ಲಿ ಮರೆಯದ ಸಂಗತಿ ಎಂದು ಅನುಷ್ಕಾ ಹೇಳಿಕೊಂಡಿದ್ದಾರೆ.

ಕೇವಲ ರಜನೀಕಾಂತ್ ಮಾತ್ರವಲ್ಲದೇ ಬೇರೆ ಬೇರೆ ಭಾಷೆಗಳ ನಟ ನಟಿಯರೂ ಕೂಡಾ ಅನುಷ್ಕಾಳ ಅಬ್ಬರದ ನಟನೆ ಕಂಡು ಬೆರಗಾಗಿದ್ದಾರಂತೆ. ನಟ ಚಿರಂಜೀವಿ ಪುತ್ರ ರಾಮ್‌ಚರಣ್ ತಮ್ಮ ಹೆಂಡತಿಯೊಂದಿಗೆ ಈ ಚಿತ್ರವನ್ನು ನೋಡಿದ್ದಾರೆ. ಅನುಷ್ಕಾ ಈ ಚಿತ್ರದಲ್ಲಿ ಬಹಳ ಚೆನ್ನಾಗಿ ನಟಿಸಿದ್ದಾರೆ. ’ಭಾಗಮತಿ’ ಚಿತ್ರತಂಡಕ್ಕೆ ನನ್ನ ವಂದನೆಗಳು. ಚಿತ್ರವನ್ನು ನೋಡಿದ ನನ್ನ ಹೆಂಡತಿ ರಾತ್ರಿ ಇಡೀ ನಿದ್ರೆ ಮಾಡಿಲ್ಲ ಎಂದು ತಮ್ಮ ಫೇಸ್‌ಬುಕ್‌ನಲ್ಲಿ ಹೇಳಿಕೊಂಡಿದ್ದಾರೆ.
‘ಭಾಗಮತಿ’ ಯಶಸ್ಸಿನಲ್ಲಿ ಅನುಷ್ಕಾ ಶೆಟ್ಟಿ ಸಂತಸದಲ್ಲಿದ್ದಾರೆ. ಹೀಗೇ ಯಶಸ್ವಿ ಚಿತ್ರಗಳನ್ನು ನೀಡಲೆಂದು ನಮ್ಮ ಹಾರೈಕೆ.
ಸುಮ ಜಿ

 

Leave a Reply

Your email address will not be published. Required fields are marked *


CAPTCHA Image
Reload Image