One N Only Exclusive Cine Portal

3 ಘಂಟೆ 30 ದಿನ 30 ಸೆಕೆಂಡ್‌ನಲ್ಲಿ ಮಿಂಚಲಿರುವ ಅರು ಗೌಡ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ರಿಯಾಲಿಟಿ ಶೋಗಳಲ್ಲಿ ಮಿಂಚುತ್ತಾ, ಕಿರುತೆರೆಯ ಕಾರ್ಯಕ್ರಮಗಳ ನಿರೂಪಕರಾಗಿ ಗಮನ ಸೆಳೆದು ಮುದ್ದು ಮನಸೇ ಚಿತ್ರದ ಮೂಲಕ ನಾಯಕ ನಟನಾಗಿ ಪರಿಚಯವಾದ ಪ್ರತಿಭೆ ಅರು ಗೌಡ. ಹೀರೋಗಿರಬೇಕಾದ ಎಲ್ಲಾ ಅರ್ಹತೆಗಳಿದ್ದರೂ ಒಂದು ದೊಡ್ಡ ಬ್ರೇಕ್‌ಗಾಗಿ ಹಂಬಲಿಸುತ್ತಿರೋ ಅರು ಗೌಡರ ಮನದಿಂಗಿತ 3 ಘಂಟೆ 30 ದಿನ 30 ಸೆಕೆಂಡ್‌ ಚಿತ್ರದ ಮೂಲಕ ಈಡೇರುವ ಎಲ್ಲ ಲಕ್ಷಣಗಳೂ ಇವೆ.


ಜಿ.ಕೆ. ಮಧುಸೂಧನ್ ನಿರ್ದೇಶನದ ಈ  ಚಿತ್ರದಲ್ಲಿ ಅರು ಗೌಡ ಚಾಲೆಂಜಿಂಗ್ ಆದ ಪಾತ್ರವೊಂದನ್ನು ಲೀಲಾಜಾಲವಾಗಿ ನಿಭಾಯಿಸಿದ್ದಾರೆಂಬ ಮೆಚ್ಚುಗೆ ಈಗಾಗಲೇ ಎಲ್ಲೆಡೆ ಕೇಳಿ ಬರುತ್ತಿದೆ. ಈ ಚಿತ್ರದಲ್ಲಿ ಅವರದ್ದು ಪಾದರಸದಂತಿರೋ ಪ್ರಳಯಾಂತಕ ಯುವ ವಕೀಲನ ಪಾತ್ರ. ಒಂದು ಕೇಸಿನ ಮೇಲೆ ಕೈಯಿಟ್ಟರೆ ಗೆಲುವು ಗ್ಯಾರೆಂಟಿ ಎಂಬಂಥಾ ಚಾಣಾಕ್ಷ ವಕೀಲನ ಈ ಪಾತ್ರಕ್ಕೆ ಬಗೆಬಗೆಯ ಶೇಡ್‌ಗಳಿದ್ದರೂ ಅದೆಲ್ಲದರಲ್ಲೂ ಲೀಲಾಜಾಲವಾಗಿ ಅಭಿನಯಿಸಿರೋ ಖುಷಿ, ಈ ಪಾತ್ರ ಬೇಗನೆ ಪ್ರೇಕ್ಷಕರಿಗೆ ಕನೆಕ್ಟಾಗುತ್ತೆ ಎಂಬ ಭರವಸೆ ಅರು ಗೌಡರದ್ದು.


ಅರುಗೌಡ ಮೂಲತಃ ಹಾಸನ ಜಿಲ್ಲೆಯ ಬೂದನೂರಿನವರು. ಅಲ್ಲಿನ ಚಂದ್ರಶೇಖರ್ ಮತ್ತು ರತ್ನಮ್ಮ ದಂಪತಿಯ ಮಗನಾದ ಅವರು ಬಾಲ್ಯ ಕಳೆದದ್ದೆಲ್ಲ ಕೊಡಗಿನಲ್ಲಿ. ಅಲ್ಲಿಯೇ ಆರಂಭಿಕ ವಿದ್ಯಾಭ್ಯಾಸ ಮುಗಿಸಿ ಬೆಂಗಳೂರಿಗೆ ಬಂದು ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಪದವಿ ಪೂರೈಸಿದ ಅರು ಬೇರೆಲ್ಲೋ ಕೆಲಸ ಹುಡುಕಿಕೊಂಡು ಸೆಟಲ್ ಆಗೋ ಕಾಲದಲ್ಲಿಯೇ ಬಣ್ಣದ ಲೋಕದಲ್ಲಿ ಅದೃಷ್ಟ ಅರಸೋ ಮನಸು ಮಾಡಿದ್ದರು. ಆದರೆ ನಟನಾಗೋ ಹಂಬಲ ಅವರೊಳಗೆ ಏಕಾಏಕಿ ಉದ್ಭವಿಸಿದ್ದೇನಲ್ಲ. ಆರಂಭ ಕಾಲದಿಂದಲೂ ಅವಕಾಶ ಸಿಕ್ಕಾಗೆಲ್ಲಾ ಬಣ್ಣ ಹಚ್ಚಿ ನಾಟಕಗಳಲ್ಲಿ ನಟಿಸುತ್ತಾ ಬಂದಿದ್ದ ಅರು ಪದವಿ ಮುಗಿಸಿಕೊಂಡು ಬದುಕಿನ ನಿರ್ಣಾಯಕ ಘಟ್ಟ ತಲುಪಿದಾಗ ನಟನೆಯೇ ತಮ್ಮ ಪ್ರಧಾನ ಗುರಿ ಎಂಬುದನ್ನು ಬಲವಾಗಿ ನಿರ್ಧರಿಸಿಕೊಂಡಿದ್ದರು!


ಇಂಥಾ ಅರು ಗೌಡ ಕರ್ನಾಟಕಕ್ಕೆ ಪರಿಚಯವಾದದ್ದು ಪ್ಯಾಟೆ ಮಂದಿ ಕಾಡಿಗ್ ಬಂದ್ರು ಎಂಬ ರಿಯಾಲಿಟಿ ಶೋ ಮೂಲಕ. ಆ ಶೋನಲ್ಲಿ ಅವರು ಫೈನಲಿಸ್ಟ್ ಆಗಿದ್ದರು. ಆ ನಂತರ ಒಗ್ಗರಣೆ ಡಬ್ಬಿ ಎಂಬ ಕಾರ್ಯಕ್ರಮದ ಮೂಲಕ ಮತ್ತಷ್ಟು ಪರಿಚಿತರಾದ ಅರು ಗೌಡ ಅದರ ನಡುವೆಯೇ ಸಿಕ್ಕ ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತಿದ್ದರು. ಅವರು ನಾಯಕ ನಟನಾಗಿ ಮೊದಲ ಸಲ ಹೊರ ಹೊಮ್ಮಿದ್ದು ಮುದ್ದು ಮನಸೇ ಚಿತ್ರದ ಮೂಲಕ. ಆ ಚಿತ್ರದ ಸೋಲು ಗೆಲುವಿನ ಲೆಕ್ಕಾಚಾರ ಏನೇ ಇದ್ದರೂ ಅರು ನಾಯಕನಾಗಿ ನೆಲೆ ನಿಲ್ಲುತ್ತಾರೆಂಬ ಭರವಸೆ ಹುಟ್ಟಿಸಿದ್ದಂತೂ ನಿಜ.


ಆ ಚಿತ್ರದಲ್ಲಿ ಅರು ಗೌಡರ ಮನಮೋಹಕ ಅಭಿನಯ ಕಂಡ ಬ್ರೈನ್ ಶೇರ್ ತಂಡ ಮತ್ತು ನಿರ್ಮಾಪಕ ಚಂದ್ರಶೇಖರ್ ಪದ್ಮಶಾಲಿ ಅವರು ಸದರಿ ಚಿತ್ರದಲ್ಲಿ ನಟಿಸೋ ಅವಕಾಶ ಕೊಟ್ಟಿತ್ತು. ಆರಂಭದಿಂದಲೂ ಅತ್ಯಂತ ಉತ್ಸಾಹದಿಂದ ಈ ಚಿತ್ರದ ಭಾಗವಾಗಿದ್ದ ಅರು ಗೌಡ ಈ ಮೂಲಕ ತಮ್ಮ ಗೆಲುವಿನ ಶಕೆ ಶುರುವಾಗುತ್ತದೆ ಎಂಬ ನಂಬಿಕೆಯಿಂದಿದ್ದಾರೆ. ಅದು ನಿಜವಾಗಲೆಂದು ಹಾರೈಸೋಣ.

copying or reproducing the above content in any format without approval is criminal offence and will be prosecuted in Bengaluru court © CINIBUZZ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Leave a Reply

Your email address will not be published. Required fields are marked *


CAPTCHA Image
Reload Image