One N Only Exclusive Cine Portal

ಅಸತೋಮಾ ಸದ್ಗಮಯ ಹಾಡುಗಳ ಅನಾವರಣ!

ರಾಜೇಶ್ ವೇಣೂರು ನಿರ್ದೇಶನದ ಅಸತೋಮ ಸದ್ಗಮಯ ಚಿತ್ರದ ಹಾಡುಗಳು ಲೋಕಾರ್ಪಣೆಗೊಂಡಿವೆ. ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆದ ಅಚ್ಚುಕಟ್ಟಾದ ಕಾರ್ಯಕ್ರಮದಲ್ಲಿ ಮಣಿಕಾಂತ್ ಕದ್ರಿ ಸಂಗೀತ ನೀಡಿರುವ ಚೆಂದದ ಹಾಡುಗಳು ಅನಾವರಣಗೊಂಡಿವೆ.

ಬಿಗ್‌ಬಾಸ್ ವಿನ್ನರ್ ಚಂದನ್ ಶೆಟ್ಟಿ ಮುಖ್ಯ ಅತಿಥಿಯಾಗಿದ್ದ, ಇಂಡಿಯನ್ ಎಕನಾಮಿಕ್ ಟ್ರೇಡ್ ಯೂನಿಯನ್ ಅಧ್ಯಕ್ಷರಾದ ಆಸಿಫ್ ಇಕ್ಬಾಲ್ ಮತ್ತು ಬಿ ಮಹದೇವ್ ಅತಿಥಿಗಳಾಗಿ ಉಪಸ್ಥಿತರಿದ್ದ ಸಮಾರಮಬದಲ್ಲಿ ಬಿಡುಗಡೆಯಾಗಿದ್ದ ಹಾಡುಗಳು ದಿನದೊಪ್ಪತ್ತಿನಲ್ಲಿಯೇ ಪ್ರೆಕ್ಷಕರನ್ನು ಸೆಳೆದುಕೊಂಡಿವೆ. ಈ ಮೂಲಕ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಅವರ ವಿನೂತನ ಸಂಗೀತ ಯಾನಕ್ಕೆ ಮತ್ತೊಂದು ಗರಿಯೂ ಸೇರ್ಪಡೆಯಾದಂತಾಗಿದೆ.

ಅಶ್ವಿನ್ ಪಿರೇರಾ ನಿರ್ಮಾಣದ ಈ ಚಿತ್ರದಲ್ಲಿ ರಂಗಿತರಂಗ ಖ್ಯಾತಿಯ ರಾಧಿಕಾ ಚೇತನ್ ಮುಖ್ಯವಾದೊಂದು ಪಾತ್ರದಲ್ಲಿ ನಟಿಸಿದ್ದಾರೆ. ಇದು ಮನಸುಗಳ ತುಮುಲಗಳ, ಭಾವನಾತ್ಮಕ ಸಂಘರ್ಷಗಳ ಸೂಕ್ಷ್ಮ ಕಥಾ ಹಂದರ ಹೊಂದಿರುವ ಚಿತ್ರ. ಇದರ ಒಟ್ಟಾರೆ ಆಂತರ್ಯಕ್ಕೆ ಕನ್ನಡಿ ಹಿಡಿದಂತಿರುವ ಕಾಡುವ ಸಾಲುಗಳ ಹಾಡುಗಳೂ ಕೂಡಾ ಚಿತ್ರದೆಡೆಗಿನ ನಿರಿಕ್ಷೆಗೆ ಮತ್ತಷ್ಟು ಹೊಳಪು ತುಂಬಿವೆ.

ಇಂಥಾ ಸುಕ್ಷ್ಮ ಕಥಾ ಹಂದರಗಳನ್ನು ಕಮರ್ಶಿಯಲ್ ಸೂತ್ರಗಳಿಗೆ ಒಗ್ಗಿಸಿಕೊಳ್ಳುವುದು ನಿದೇಶನಕ್ಕಿರುವ ಅಸಲೀ ಸವಾಲು. ರಾಜೇಶ್ ವೇಣೂರು ಅದನ್ನು ಸಮರ್ಥವಾಗಿ ನಿಭಾಯಿಸಿದ ಸಂತಸದಲ್ಲಿದ್ದಾರೆ. ಈ ಚಿತ್ರದ ಬಿಡುಗಡೆಯ ದಿನಾಂಕ ಇಷ್ಟರಲ್ಲೇ ಜಾಹೀರಾಗಲಿದೆ.

Leave a Reply

Your email address will not be published. Required fields are marked *


CAPTCHA Image
Reload Image