One N Only Exclusive Cine Portal

ಮಂಡ್ಯದ ಗಂಡು ಚಿತ್ರದ ನಿರ್ದೇಶಕರೀಗ ಹೇಗಿದ್ದಾರೆ ಗೊತ್ತಾ?

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಇದಕ್ಕೂ ಮುನ್ನ ಅನಾರೋಗ್ಯದ ನೋವಿನ ಜೊತೆಗೆ ಆರ್ಥಿಕ ಸಂಕಷ್ಟದಿಂದಲೂ ಹೈರಾಣಾಗಿದ್ದ ರಘು ಅವರು ಇದೀಗ ಬದುಕೋ ಭರವಸೆಯಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೊನ್ನೆ ಡಯಾಲಿಸೀಸ್ ನಡೆಸುವಾಗ ಏಕಾಏಕಿ ಪಲ್ಸ್ ರೇಟ್ ಡೌನ್ ಆಗಿ ಪ್ರಜ್ಞೆ ತಪ್ಪಿದರೂ ಇದೀಗ ಚೇತರಿಸಿಕೊಂಡಿದ್ದಾರೆ.

ಹಿರಿಯ ನಿರ್ದೇಶಕ ಎ ಟಿ ರಘು ಕಿಡ್ನಿ ವೈಫಲ್ಯದಂದ ನರಳುತ್ತಿರೋ ವಿಚಾರದ ಕುರಿತಾಗಿ ಮೊದಲು ಬೆಳಕು ಚೆಲ್ಲಿದ್ದೇ ಸಿನಿಬಜ್. ರೆಬೆಲ್ ಸ್ಟಾರ್ ಅಂಬರೀಶ್ ಅವರಂಥಾ ನಟರನ್ನು ಸ್ಟಾರ್‌ಗಳನ್ನಾಗಿಸಿದ್ದ ರಘು ಹಾಸಿಗೆ ಹಿಡಿದು ಚಿಕಿತ್ಸೆಗೂ ಕಾಸಿಲ್ಲದೆ ಒದ್ದಾಡುತ್ತಿದ್ದ ರಘು ಅವರ ಸ್ಥಿತಿಯನ್ನು ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಅವರು ಸಿನಿಬಜ್ ಮೂಲಕ ಅನಾವರಣಗೊಳಿಸಿದ್ದರು.


ಇದೀಗ ನಾನಾ ದಿಕ್ಕುಗಳಿಂದ ಚಾಚಿಕೊಂಡ ಸಹಾಯಹಸ್ತದ ಬಲದಿಂದಲೇ ರಘು ಅವರು ಹೊಸಾ ವರ್ಷಕ್ಕೆ ಅಡಿಯಿರಿಸಿದ್ದಾರೆ. ಬದುಕೋ ಬಗ್ಗೆ ಎಲ್ಲ ಆಸೆಗಳನ್ನೂ ಕೈ ಬಿಟ್ಟಿದ್ದ ರಘು ಇದೀಗ ೨೦೧೮ನ್ನು ಸಾರ್ಥಕತೆಯಿಂದಲೇ ಕಣ್ತುಂಬಿಕೊಂಡಿದ್ದಾರೆ. ಸಂಕಟದ ನಡುವೆಯೂ ಯಾವುದೋ ಒಂದು ನಿರೀಕ್ಷೆಯಿಟ್ಟುಕೊಂಡು ಉಸಿರಾಡಲಾರಂಭಿಸಿದ್ದಾರೆ. ಹಿರಿಯ ನಿರ್ದೇಶಕ ರಘು ಅವರ ಬದುಕಲ್ಲಿ ಇಂಥಾದ್ದೊಂದು ಸಣ್ಣ ಸಹನೀಯ ವಾತಾವರಣ ಸೃಷ್ಟಿಸಿದ ದೊಡ್ಡ ಖುಷಿ ಸಿನಿಬಜ್‌ನದ್ದು.
ಸಿನಿಬಜ್ ವರದಿ ಬಂದಾದ ಬಳಿಕ ಆವತ್ತಿಗೆ ವಾರ್ತಾ ಇಲಾಖೆ ನಿರ್ದೇಶಕರಾಗಿದ್ದ ವಿಶು ಕುಮಾರ್ ರಘು ಅವರನ್ನು ಭೇಟಿ ಮಾಡಿ ಚಿಕಿತ್ಸೆಗೆ ನೆರವಾಗಿದ್ದರು. ಆ ನಂತರದಲ್ಲಿ ಅಂಬರೀಶ್, ಅರ್ಜುನ್ ಸರ್ಜಾ ಸೇರಿದಂತೆ ಅನೇಕರು ನೆರವು ನೀಡಿದ್ದರು. ತಿಂಗಳಿಗೆ ಸಾವಿರಾರು ರೂ ಖರ್ಚು ಮಾಡಿ ಡಯಾಲಿಸೀಸ್ ನಡೆಸಲು ಅಶಕ್ತರಾಗಿದ್ದ ರಘು ಇಂದು ನಿರಾಳವಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.


ಇದಕ್ಕೂ ಮುನ್ನ ಅನಾರೋಗ್ಯದ ನೋವಿನ ಜೊತೆಗೆ ಆರ್ಥಿಕ ಸಂಕಷ್ಟದಿಂದಲೂ ಹೈರಾಣಾಗಿದ್ದ ರಘು ಅವರು ಇದೀಗ ಬದುಕೋ ಭರವಸೆಯಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೊನ್ನೆ ಡಯಾಲಿಸೀಸ್ ನಡೆಸುವಾಗ ಏಕಾಏಕಿ ಪಲ್ಸ್ ರೇಟ್ ಡೌನ್ ಆಗಿ ಪ್ರಜ್ಞೆ ತಪ್ಪಿದರೂ ಇದೀಗ ಚೇತರಿಸಿಕೊಂಡಿದ್ದಾರೆ.
ಮಂಡ್ಯದ ಗಂಡು, ಅಂತಿಮ ತೀರ್ಪು, ಆಶಾ, ಮೈಸೂರು ಜಾಣ, ಮಿಡಿದ ಹೃದಯ, ಶ್ರಾವಣ ಸಂತೆ, ಕಾಡಿನ ರಾಜ, ಶಂಕರ್-ಸುಂದರ್, ನ್ಯಾಯ ನೀತಿ ಧರ್ಮ, ಗೂಂಡಾಗುರು, ಧರ್ಮಯುದ್ಧ, ಅರ್ಜುನ್, ಪ್ರೀತಿ, ನ್ಯಾಯಕ್ಕಾಗಿ ನಾನು, ಪದ್ಮವ್ಯೂಹ, ದೇವರ ಮನೆ, ಬೇಟೆಗಾರ, ರ್‍ಯಾಂಬೋರಾಜ, ಕೃಷ್ಣ ಮೆಚ್ಚಿದ ರಾಧೆ, ಇನ್ಸ್‌ಪೆಕ್ಟರ್ ಕ್ರಾಂತಿ ಕುಮಾರ್, ಮೇರಿ ಅದಾಲತ್ (ಹಿಂದಿ) ಸೇರಿದಂತೆ ಅನೇಕ ಚಿತ್ರಗಳನ್ನು ನಿರ್ದೇಸನ ಮಾಡಿ ದೊಡ್ಡ ಹೆಸರು ಮಾಡಿದ್ದ ಎ ಟಿ ರಘು ಅವರು ಚೇತರಿಸಿಕೊಳ್ಳುತ್ತಿರೋದು ನಿಜಕ್ಕೂ ಖುಷಿಯ ಸಂಗತಿ.


ನಿರ್ದೇಶಕನಾಗಿ ರಘು ಕಂಡಿರುವ ಯಶಸ್ಸನ್ನು ಕನ್ನಡದ ಬೇರೆ ಯಾವ ನಿರ್ದೇಶಕನೂ ಕಂಡಿರಲಾರ. ಖ್ಯಾತಿ, ದುಡ್ಡು, ಮನೆ, ಮಠ, ಕಾರು, ಸುಖ ಸಂಸಾರ ಯಾವುದಕ್ಕೂ ಕೊರತೆಯಿರಲಿಲ್ಲ. ಆದರೆ ಇದು ಹೆಚ್ಚು ಕಾಲ ಉಳಿಯಲಿಲ್ಲ. ಅದ್ಯಾವ ದುಸಾರೆ ಬಂತೋ ಕೈಲಿದ್ದ ದುಡ್ಡನ್ನು ಸುರಿದು ರ್‍ಯಾಂಬೋರಾಜ ಎಂಬ ಚಿತ್ರವನ್ನು ನಿರ್ಮಿಸಿದರು. ಅದೂ ತೋಪಾಯಿತು. ಆಗಲೇ ಅವರು ಅರ್ಧ ಸತ್ತಂತಾಗಿದ್ದರು. ನಂತರ ಕಾಳಿ ಚಿತ್ರವನ್ನು ಮಾಡಿದರು. ಅದರಲ್ಲೂ ಸೋಲಾಯಿತು. ಸಾಲಸೋಲ ಮಾಡಿ ನಿರ್ಮಿಸಿದ ಚಿತ್ರಗಳು ಕೈ ಕೊಟ್ಟಾಗ ಸಾಲಗಾರರು ಮನೆ ಮುಂದೆ ಕ್ಯೂ ನಿಂತರು. ರಘು ಹೆಂಡತಿಯ ಒಡವೆಯನ್ನು ಮಾರಿದರು. ಭೀಮನ ಹೊಟ್ಟೆಗೆ ಕಾಸಿನ ಮಜ್ಜಿಗೆ. ಎಲ್ಲಿ ಸಾಕು? ಬಸವೇಶ್ವರ ನಗರದಲ್ಲಿ ಆಸೆಯಿಂದ ಕಟ್ಟಿಸಿದ ಮಹಡಿ ಮನೆಯನ್ನು ಮಾರಲೇಬೇಕಾಯಿತು. ಅರ್ಜುನ್ ಸರ್ಜಾನನ್ನು ನಾಯಕನನ್ನಾಗಿ ಮಾಡಿ ಚಿತ್ರಿಸಿದ ಆಶಾ ಚಿತ್ರದ ಭರ್ಜರಿ ಯಶಸ್ಸಿನ ನೆನಪಿಗಾಗಿ ಕಟ್ಟಿಸಿದ ದೊಡ್ಡ ಬಂಗಲೆಯದು. ಮನೆಗೆ ಆಶಾ ಎಂದೇ ಹೆಸರಿಟ್ಟಿದ್ದರು. ಆದರೆ ಕಾಳಿ ಚಿತ್ರದಿಂದಾಗಿ ಅವರ ಬದುಕಿನ ಆಶಾಸೌಧವೇ ಕುಸಿದುಹೋಯಿತು. ರಿಂಥಾ ಸಂಕಟಕ್ಕೆ ಬಳುವಳಿ ಎಂಬಂತೆ ಬಂದು ಅಮರಿಕೊಂಡಿದ್ದು ಕಿಡ್ನಿ ವೈಫಲ್ಯ. ಅದಾಗಲೇ ಲಕ್ಷಗಟ್ಟಲೆ ಸಾಲ ಮಾಡಿಕೊಂಡಿದ್ದ ರಘು ಡಯಾಲಿಸೀಸ್‌ಗೆ ಕೂಡಾ ಕಾಸಿಲ್ಲದೆ ಒದ್ದಾಡುವಂತಾಗಿತ್ತು. ಸದ್ಯ ಸಿನಿಬಜ್ ಕಾಳಜಿಯ ವರದಿಯಿಂದ ಅವರು ಚೇತರಿಸಿಕೊಳ್ಳುವಂತಾಗಿದೆ ಎಂಬುದೇ ಸಮಾಧಾನ.

  • ಅರುಣ್

A.T. RAGHU 9900643345

copying or reproducing the above content in any format without approval is criminal offence and will be prosecuted in Bengaluru court © CINIBUZZ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Leave a Reply

Your email address will not be published. Required fields are marked *


CAPTCHA Image
Reload Image