ಕಳೆದ ವರ್ಷ ರಿಲೀಸ್ ಆಗಿ ಬ್ಲಾಕ್ ಬಸ್ಟರ್ ಹಿಟ್ ಕಂಡ ಸಿನಿಮಾ ಅಯೋಗ್ಯ. ಮಹೇಶ್ ಹಾಗೂ ನೀನಾಸಂ ಸತೀಶ್ ಕಾಂಬಿನೇಷನ್ನಿನಲ್ಲಿ ಈ ಚಿತ್ರವು ಮೂಡಿ ಬಂದಿದ್ದು, ಟಿ.ಆರ್. ಚಂದ್ರಶೇಖರ್ ಬಂಡವಾಳವನ್ನು ಹೂಡಿದ್ದರು. ಗ್ರಾಮೀಣ ಸೊಗಡಿನ ಸಿನಿಮಾ ಇದಾಗಿದ್ದು, ಮಂಡ್ಯದಲ್ಲಿಯೇ ಬಹುತೇಕ ಚಿತ್ರೀಕರಣ ನಡೆದಿತ್ತು. ನೀನಾಸಂ ಸತೀಶ್ ಗೆ ಜೋಡಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಹೆಜ್ಜೆ ಹಾಕಿದ್ದರು. ಇನ್ನುಳಿದಂತೆ ಆರ್ಮುಗಂ ರವಿಶಂಕರ್, ಚಿಕ್ಕಣ್ಣ, ಸಾಧುಕೋಕಿಲಾ ಪ್ರಮುಖ ಪಾತ್ರಗಳಲ್ಲಿದ್ದರು. ಸಿನಿಮಾ ವಿಮರ್ಶಕರಿಂದ ಉತ್ತಮ ವಿಮರ್ಶೆಯನ್ನು ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಗಳಿಕೆಯನ್ನು ಪಡೆದಿತ್ತು. ಅಲ್ಲದೇ ಇದು ನಿರ್ದೇಶಕ ಮಹೇಶ್ ಹಾಗೂ ನಿನಾಸಂ ಸತೀಶ್ ಗೆ ಕಮ್ ಬ್ಯಾಕ್ ಸಿನಿಮಾ ಕೂಡ ಆಗಿತ್ತು.

ಇನ್ನು ಆಡಿಯೋ ವಿಚಾರಕ್ಕೆ ಬಂದರೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯಾ ಅಯೋಗ್ಯ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು, ಎಲ್ಲ ಹಾಡುಗಳು ಸಹ ಅತ್ಯದ್ಬುತವಾಗಿ ಮೂಡಿಬಂದಿದ್ದವು. ವಿಶೇಷವೆಂದರೆ ಆ ಚಿತ್ರದ ಬಹು ಮೆಚ್ಚುಗೆಯ ಹಾಡಾಗಿ ಏನಮ್ಮಿ.. ಏನಮ್ಮಿ… ಸಾಂಗು ಫುಲ್ ಫೇಮಸ್ಸಾಗಿತ್ತು. ಹಾಗೆಯೇ ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿತ್ತು.  ಸದ್ಯದ ವಿಶೇಷ ಸುದ್ದಿ ಏನಂದ್ರೆ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ 100 ಮಿಲಿಯನ್ ವೀಕ್ಷಣೆ ಕಂಡಿರುವ ಮೊದಲ ಯುಗಳ ಗೀತೆ ಎಂಬ ಹೆಗ್ಗಳಿಕೆಗೆ ಏನಮ್ಮಿ ಏನಮ್ಮಿ ಸಾಂಗು ಪಾತ್ರವಾಗಿದೆ. ಇನ್ನು ಅಯೋಗ್ಯ ನಿರ್ದೇಶಕರು ಪ್ರಸ್ತುತ ಮುರಳಿ ನಾಯಕತ್ವದ ಮದಗಜ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ನೀನಾಸಂ ಸತೀಶ್ ಬ್ರಹ್ಮಚಾರಿ ಚಿತ್ರದಲ್ಲಿ ನಟಿಸುತ್ತಿದ್ದಾರೆ.

Arun Kumar

ವಿಕ್ರಂ ರವಿಚಂದ್ರನ್ ಚಿತ್ರಕ್ಕೆ ನಾಯಕಿ ಹುಡುಕಾಟ!

Previous article

ಸೂರ್ಯವಂಶ ಚಿತ್ರಕ್ಕೀಗ 20 ವರ್ಷದ ಹರೆಯ!

Next article

You may also like

Comments

Leave a reply

Your email address will not be published. Required fields are marked *