One N Only Exclusive Cine Portal

ಅಯ್ಯೋ ರಾಮಾ ಹಾಡು ಬಂತು!

ಇತ್ತೀಚೆಗೆ ಶೀರ್ಷಿಕೆಗಳ ಮೂಲಕವೇ ಗಮನ ಸೆಳೆಯುವ ಟ್ರೆಂಡ್ ವ್ಯಾಪಕವಾಗಿ ಬೆಳೆಯುತ್ತಿದೆ. ಅದರಲ್ಲಿಯೂ ಆಡುಭಾಷೆಯ ಪದಗಳನ್ನೇ ಶೀರ್ಷಿಕೆಯಾಗಿಟ್ಟು ಬೇಗ ಕನೆಕ್ಟಾಗೋ ಹೊಸಾ ಆಲೋಚನೆಗಳೂ ಚಾಲ್ತಿಯಲ್ಲಿವೆ. ಆ ಸಾಲಿನಲ್ಲಿ ತಯಾರಾಗಿರೋ ಚಿತ್ರ `ಅಯ್ಯೋ ರಾಮ’!


ಒಳಿತು ಕೆಡುಕೆಂಬುದರ ಸುತ್ತಲಿನ ಸೂಕ್ಷ್ಮ ವಿಚಾರಗಳನ್ನೇ ಅಡಿಪಾಯವಾಗಿಟ್ಟುಕೊಂಡಿರೋ ಕಥೆ ಅಯ್ಯೋರಾಮ ಚಿತ್ರದ್ದು. ಇದೀಗ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿಕೊಂಡಿರುವ ಚಿತ್ರತಂಡ ಹಾಡುಗಳನ್ನು ಅನಾವರಣಗೊಳಿಸಿದೆ.


ಈ ಚಿತ್ರವನ್ನು ಕಥೆ, ಸಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿರುವವರು ಆರ್ ವಿನೋದ್ ಕುಮಾರ್. ಇದು ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮೊದಲ ಚಿತ್ರ. ಕೆಟ್ಟದ್ದು ಮಾಡಿದವರೇ ಮೆರೆದಾಡುತ್ತಾರೆ, ಒಳ್ಳೆತನಕ್ಕಿಲ್ಲಿ ಬೆಲೆ ಇಲ್ಲ ಎಂಬುದೆಲ್ಲ ಮಾಮೂಲಿ ಹಳಹಳಿಕೆ. ಆದರೆ ಕೆಟ್ಟ ಕೆಲಸಗಳಿಗೆ ಅದ್ದೂರಿ ಆರಂಭ ಸಿಕ್ಕಿ ಕೆಟ್ಟ ಅಂತ್ಯವೇ ಗಟ್ಟಿಯಾಗುತ್ತೆ. ಒಳ್ಳೆ ಕೆಲಸಗಳಿಗೆ ಸ್ಟಾರ್ಟಿಂಗ್ ಟ್ರಬಲ್ ಇದ್ದರೂ ಒಂದೊಳ್ಳೆ ಅಂತ್ಯವೇ ಖಾಯಂ ಎಂಬ ವಿಚಾರವನ್ನು ರೋಚಕವಾದೊಂದು ಕಥೆಯ ಮೂಲಕ ವಿನೋದ್ ಕುಮಾರ್ ಹೇಳ ಹೊರಟಿದ್ದಾರಂತೆ.
ಈ ಚಿತ್ರದಲ್ಲಿ ಕಥೆಯೇ ನಾಯಕ. ಒಂದಕ್ಕೊಂದು ಲಿಂಕ್ ಆಗೋ ಪ್ರತೀ ಪಾತ್ರಗಳೂ ಕೂಡಾ ಪ್ರೇಕ್ಷಕರಲ್ಲಿ ಹೊಸಾ ಫೀಲ್ ಹುಟ್ಟಿಸುತ್ತವೆಂಬುದು ನಿರ್ದೇಶಕರ ಭರವಸೆ. ಈ ಚಿತ್ರದ ಮೂಲಕ ಶೇಷನ್, ಪ್ರದೀಪ್‌ಪಾಜಾರಿ, ಸೂರ್ಯ, ಪ್ರಿಯಾಂಕ ಸುರೇಶ್ ಮುಂತಾದವರು ಹೊಸದಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಹಿರಿಯ ಕಲಾವಿದರಾದ ಪ್ರಣವಮೂರ್ತಿ, ರಾಕ್‌ಲೈನ್ ಸುಧಾಕರ್, ಬಸುಕುಮಾರ್ ಮುಂತಾದವರು ಅಭಿನಯಿಸಿದ್ದಾರೆ. ವಿವೇಕ್‌ಚಕ್ರವರ್ತಿ ಸಂಗೀತ, ಮಹೇಶ್.ಎಸ್. ಸಂಕಲನ, ಶ್ಯಾಮ್‌ಸಿಂಧನೂರು ಛಾಯಗ್ರಹಣ, ರಘುವಂಶಿ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಮಂಡ್ಯಾದ ತ್ರಿವಿಕ್ರಮ್ ರಘು ನಿರ್ಮಾಣದ ಈ ಚಿತ್ರ ಬಹು ಬೇಗನೆ ತೆರೆಗೆ ಬರಲು ಸಿದ್ಧತೆ ಆರಂಭಿಸಿದೆ.

Leave a Reply

Your email address will not be published. Required fields are marked *


CAPTCHA Image
Reload Image