One N Only Exclusive Cine Portal

ಬಕಾಸುರನಿಗೆ ಸ್ಟಾರ್‌ಗಳ ಬೆಂಬಲ!

ನವನೀತ್ ನಿರ್ದೇಶನದ ‘ಬಕಾಸುರ’ ಚಿತ್ರ ಇನ್ನೇನು ತೆರೆಗಾಣಲು ರೆಡಿಯಾಗಿದೆ. ಇದೀಗ ಈ ಚಿತ್ರದ ಮತ್ತೊಂದು ಟೀಸರ್ ಅನಾವರಣಗೊಂಡಿದೆ. ಈ ಟೀಸರ್‌ಗೆ ರಾಕಿಂಗ್ ಸ್ಟಾರ್ ಯಶ್ ದನಿ ನೀದಿದ್ದಾರೆ.
ಈ ಹಿಂದೆ ಕರ್ವ ಸಿನಿಮಾದ ಮೂಲಕ ಗಮನ ಸೆಳೆದಿದ್ದ ನವನೀತ್ ನಿರ್ದೇಶನದ ಚಿತ್ರ ಬಕಾಸುರ. ರವಿಚಂದ್ರನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದರಿಂದ ಮೊದಲ್ಗೊಂಡು ಥರ ಥರದಲ್ಲಿ ಸದ್ದು ಮಾಡುತ್ತಾ ಸಾಗಿ ಬಂದಿರೋ ಈ ಚಿತ್ರದ ಟೀಸರ್ ಸದ್ದು ಮಾಡುತ್ತಿದೆ.

ನವನೀತ್ ಈ ಚಿತ್ರದ ಕಥೆಯನ್ನೂ ಕೂಡಾ ಈ ಹಿಂದಿನಂತೆಯೇ ವಿಶೇಷವಾಗಿ ರಚಿಸಿದ್ದಾರಂತೆ. ಕಥೆ ರೆಡಿ ಮಾಡಿಕೊಳ್ಳುವಾಗಲೇ ಮುಖ್ಯ ಪಾತ್ರವೊಂದನ್ನು ರೂಪಿಸಿದ್ದು ಕನಸುಗಾರ ರವಿಚಂದ್ರನ್ ಅವರನ್ನೇ ಮನಸಲ್ಲಿಟ್ಟುಕೊಂಡು. ಈ ಪಾತ್ರಕ್ಕೆ, ಒಂದಿಡೀ ಕಥೆಗೆ ಮನಸೋತ ರವಿಚಂದ್ರನ್ ಅವರು ಖುಷಿಪಟ್ಟುಕೊಂಡೇ ಆ ಪಾತ್ರಕ್ಕೆ ಜೀವ ತುಂಬಿದ್ದೂ ಆಗಿದೆ.
ಹಾಗಾದರೆ ಈ ಚಿತ್ರದಲ್ಲಿ ರವಿಚಂದ್ರನ್ ಅವರದ್ದೇನು ಪಾತ್ರ ಎಂಬ ಕುತೂಹಲ ಸಹಜವೇ. ಇಲ್ಲಿ ರವಿಚಂದ್ರನ್ ಬಹು ದೊಡ್ಡ ಬ್ಯುಸಿನೆಸ್ ಮನ್ ಆಗಿ ನಟಿಸಿದ್ದಾರೆ. ಆರ್‌ಜೆ ರೋಹಿತ್ ಲಾಯರ್ ಆಗಿ ನಟಿಸಿದ್ದಾರೆ. ಗಾಂಧಾರಿ ಎಂಬ ಧಾರಾವಾಹಿಯ ಮೂಲಕ ಈಗಾಗಲೇ ಮನೆ ಮಾತಾಗಿರುವ ಕಾವ್ಯಾ ಗೌಡ ನಾಯಕಿಯಾಗಿ ಬಕಾಸುರನ ಮೂಲಕ ಎಂಟ್ರಿ ಕೊಟ್ಟಿದ್ದಾರೆ.
“ಬಕಾಸುರ” ಚಿತ್ರದ ಟೀಸರ್‌ಗೆ ಯಶ್ ಹಿನ್ನೆಲೆಧ್ವನಿ ನೀಡಿದ್ದರೆ, ತಂಡಕ್ಕೆ ಶುಭ ಹಾರೈಸಲು ಶ್ರೀಮುರಳಿ ಆಗಮಿಸಿದ್ದರು. ನಾಯಕ ಆರ್‌ಜೆ.ರೋಹಿತ್ ನಿರೂಪಣೆ ಜವಬ್ದಾರಿಯನ್ನು ಹೊತ್ತುಕೊಂಡಿದ್ದರು. ಶ್ರೀಮರಳಿ ಮಾತನಾಡಿ ಯಾತಕ್ಕಾಗಿ ಬಂದಿದ್ದೇನೆ ಎಂಬುದಕ್ಕೆ ಉತ್ತರ ಸಿಗೋಲ್ಲ. ಹೇಳಲು ಹೋದರೆ ಬೇರೆ ಅರ್ಥ ಬರುತ್ತೆ, ಬೇರೆ ತರಹ ಕೇಳಿಸುತ್ತೆ. ಇಲ್ಲಿಗೆ ಬರಲು ಸಂಬಂಧ ಬೇಕಾಗಿಲ್ಲ,. ನಾವು ಬಹಳ ಜನರನ್ನು ಇಷ್ಟ ಪಡುತ್ತೇವೆ. ನಮ್ಮನ್ನು ಇಷ್ಟಪಡುವವರು ಕಡಿಮೆ ಇರುತ್ತಾರೆ. ನನಗೆ ಈ ಪಾಟಿ ಸ್ನೇಹಿತರು ಇರುವುದು ಸಂತಸ ತಂದಿದೆ. ವಿಜಯ್‌ಚೆಂಡೂರ್ ಚಿತ್ರಗಳನ್ನು ನೋಡುತ್ತಿದ್ದು, ಅವರ ಅಭಿಮಾನಿಯಾಗಿದ್ದೇನೆ. ಸ್ನೇಹಿತರಿಗಿಂತ ಹೆಚ್ಚಾಗಿ ಮಾಧಮದವರ ಪ್ರೋತ್ಸಾಹ ಇದ್ದಲ್ಲಿ ನಮ್ಮಂತವರು ಮೇಲೆ ಬರಲು ಸಾಧ್ಯವಾಗುತ್ತದೆಂದು ಅಭಿಪ್ರಾಯಪಟ್ಟರು.


ಮುಖ್ಯ ಪಾತ್ರದಲ್ಲಿ ರವಿಚಂದ್ರನ್-ರೋಹಿತ್ ಅಭಿನಯಿಸಿದ್ದಾರೆ. ಇವರೊಂದಿಗೆ ಸಾಧುಕೋಕಿಲ, ಶಶಿಕುಮಾರ್, ಮಕರಂದ್ ದೇಶ್‌ಪಾಂಡೆ, ಸಿತಾರ ಮುಂತಾದವರು ಇದ್ದಾರೆ. ಆಂಗ್ಲ ಭಾಷೆಯಲ್ಲಿ ಬಕ್ ಅಂದರೆ ದುಡ್ಡು ಅರ್ಥ ಕೊಡುತ್ತದೆ. ಸುರ ಎಂದರೆ ಮನುಷ್ಯ. ಒಳ್ಳೆ ವ್ಯಕ್ತಿ ದುಡ್ಡಿನ ಹಿಂದೆ ಹೋದಾಗ ಹೇಗೆ ಬಕಾಸುರ ಆಗುತ್ತಾನೆ ಎಂಬುದು ಒಂದು ಎಳೆಯ ಕತೆಯಾಗಿದೆ. ಹಾಗಂತ ಬಕಾಸುರ ಯಾರು ಅಂತ ತಿಳಿಯಲು ಸಿನಿಮಾ ನೋಡಬೇಕು. ಬೆಂಗಳೂರು, ವೈಸೂರು, ಗೋವಾ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸ್ವಲ್ಪ ಮಟ್ಟಿಗೆ ಹಾರರ್ ಲೇಪನವಿದೆ ಎಂಬುದರ ಮಾಹಿತಿಯನ್ನು ಬಿಚ್ಚಿಟ್ಟರು ನಿರ್ದೇಶಕ ನವನೀತ್.
ವಿಜಯ್‌ಚೆಂಡೂರ್, ರಾಘವೇಂದ್ರಭಟ್ ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡರು. ಸಾಹಿತಿ ಮನ್ವರೀಷ್‌ಗೆ ಎಲ್ಲಾ ಸ್ಟಾರ್ ಕಲಾವಿದರ ಚಿತ್ರಗಳಿಗೆ ಹಾಡನ್ನು ಬರೆಯುವ ಬಯಕೆ ಇತ್ತು. ಅದು ಈ ಸಿನಿಮಾದ ಮೂಲಕ ಎಲ್ಲರನ್ನು ಸೇರಿಸಿಕೊಂಡು ಗೀತೆ ರಚಿಸುವ ಅವಕಾಶ ಸಿಕ್ಕಿದ್ದು ಸುಕೃತ ಎಂದು ಹೇಳಿದರು.. ಅವಿನಾಶ್ ಮೂರು ಗೀತೆಗಳಿಗೆ ಸಂಗೀತ ಸಂಯೋಜಿಸಿದ್ದು ಕೆಲಸದ ಸಮಯದಲ್ಲಿ ಕಿತ್ತಾಡಿದ್ದು ಒಳ್ಳೆ ಪ್ರಾಡಕ್ಟ್‌ಗೋಸ್ಕರ ಎಂದರು. ಹಿತೈಷಿಗಳಾಗಿ ಮಲೆಯಾಳಂ ನಿರ್ಮಾಪಕ ಮೋಹನ್‌ಮೆನನ್, ಕರ್ವ ನಿರ್ಮಾಣ ಮಾಡಿರುವ ಕೃಷ್ಣಚೈತನ್ಯ ಆಗಮಿಸಿದ್ದರು. ರವಿಚಂದ್ರನ್ ಪೋಸ್ಟರ್‌ನಲ್ಲಿ ಕಾಣಿಸಿಕೊಂಡರು. ಚಿತ್ರವು ಇದೇ ತಿಂಗಳು ಕೊನೆ ವಾರದಂದು ಬಿಡುಗಡೆಯಾಗುವ ಸಾಧತೆ ಇದೆ.

Leave a Reply

Your email address will not be published. Required fields are marked *


CAPTCHA Image
Reload Image