One N Only Exclusive Cine Portal

ತೆಲುಗಿಗೆ ರೀಮೇಕ್ ಆಗಲಿದ್ದಾನಾ ಬಕಾಸುರ?

ಆರ್‌ಜೆ ರೋಹಿತ್ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ಮುಖ್ಯಭೂಮಿಕೆಯಲ್ಲಿರುವ ಬಕಾಸುರ ಚಿತ್ರ ತೆರೆಗಾಣಲು ಸಜ್ಜಾಗಿದೆ. ಈಗಾಗಲೇ ಪ್ರೇಕ್ಷಕರ ನಡುವಲ್ಲೊಂದು ಭರವಸೆ ಹುಟ್ಟಿಸಿರೋ ಈ ಚಿತ್ರ ಬಿಡುಗಡೆಗೂ ಮುನ್ನವೇ ಒಂದಷ್ಟು ಸಿಹಿಸುದ್ದಿಗಳ ರೂವಾರಿಯಾಗಿದೆ. ಅಪ್ಪಟ ಕನ್ನಡ ಚಿತ್ರವೊಂದು ಪರಭಾಷೆಗೆ ರೀಮೇಕ್ ಆಗುತ್ತಿರೋ ಹೆಮ್ಮೆಯನ್ನೂ ತನ್ನದಾಗಿಸಿಕೊಂಡಿದೆ!

ಬಕಾಸುರ ಚಿತ್ರದ ಡಬ್ಬಿಂಗ್ ಹಕ್ಕುಗಳು ಈಗಾಗಲೇ ಹಿಂದಿಗೆ ಮಾರಾಟವಾಗಿವೆ. ಬಾಲಿವುಡ್‌ನ ಖ್ಯಾತ ಪ್ರೊಡಕ್ಷನ್ ಸಂಸ್ಥೆಯಾದ ಫ್ಯಾಂಥಮ್ ಫಿಲಮ್ಸ್ ಬಕಾಸುರ ಚಿತ್ರದ ಡಬ್ಬಿಂಗ್ ಹಕ್ಕನ್ನು ದಾಖಲೆ ಮೊತ್ತಕ್ಕೆ ಖರೀದಿಸಿದೆ.

ಇನ್ನೂ ಖುಷಿಯ ವಿಚಾರವೆಂದರೆ ಬಕಾಸುರ ಚಿತ್ರವನ್ನು ತೆಲುಗಿಗೆ ರೀಮೇಕ್ ಮಾಡುವ ಬಗ್ಗೆ ಮಾತುಕತೆ ಜಾರಿಯಲ್ಲಿದೆ. ಹೆಚ್ಚೂಕಮ್ಮಿ ಬಕಾಸುರ ತೆಲುಗಿಗೆ ರೀಮೇಕಾಗೋದು ಪಕ್ಕಾ. ಎಲ್ಲವೂ ಅಂದುಕೊಂಡಂತೆ ನಡೆದರೆ ರವಿಚಂದ್ರನ್ ನಿರ್ವಹಿಸಿರೋ ಪಾತ್ರವನ್ನು ನಾಗಾರ್ಜುನ್ ನಿರ್ವಹಿಸಲಿದ್ದಾರೆ. ಆರ್‌ಜೆ ರೋಹಿತ್ ಪಾತ್ರವನ್ನು ನಾಗಾರ್ಜುನ್ ಪುತ್ರ ಅಖಿಲ್ ಮಾಡಲಿದ್ದಾರೆ. ಇದಲ್ಲದೆ ತಮಿಳು ಭಾಷೆಯಲ್ಲು ರೀಮೇಕ್ ಹಕ್ಕುಗಳಿಗಾಗಿನ ಬೇಡಿಕೆಗಳಿವೆ. ಆ ಬಗೆಗಿನ ಮಾತುಕತೆಗಳೂ ನಡೆಯುತ್ತಿವೆಯಂತೆ.

ಈ ಹಿಂದೆ ಕರ್ವ ಚಿತ್ರದ ಮೂಲಕ ಗಮನ ಸೆಳೆದಿದ್ದ ನವನೀತ್ ನಿರ್ದೇಶನದ ಮತ್ತೊಂದು ಚಿತ್ರ ಬಕಾಸುರ. ರವಿಚಂದ್ರನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬುದರಿಂದ ಮೊದಲ್ಗೊಂಡು ಥರ ಥರದಲ್ಲಿ ಸದ್ದು ಮಾಡುತ್ತಾ ಸಾಗಿ ಬಂದಿರೋ ಈ ಚಿತ್ರವೀಗ ಬೇರೆ ಭಾಷೆಗಳಿಗೂ ರೀಮೇಕ್ ಆಗೋ ಮೂಲಕ ಎಲ್ಲರ ಗಮನ ಸೆಳೆದಿದೆ. ರವಿಚಂದ್ರನ್ ಇಲ್ಲಿ ಬಹು ದೊಡ್ಡ ಬ್ಯುಸಿನೆಸ್ ಮನ್ ಆಗಿ ನಟಿಸಿದ್ದಾರೆ. ಆರ್‌ಜೆ ರೋಹಿತ್ ಲಾಯರ್ ಆಗಿ ಕಾಣಿಸಿಕೊಂಡಿದ್ದಾರೆ. ಗಾಂಧಾರಿ ಎಂಬ ಧಾರಾವಾಹಿಯ ಮೂಲಕ ಈಗಾಗಲೇ ಮನೆ ಮಾತಾಗಿರುವ ಕಾವ್ಯಾ ಗೌಡ ನಾಯಕಿಯಾಗಿ ಬಕಾಸುರನ ಮೂಲಕ ಎಂಟ್ರಿ ಕೊಟ್ಟಿದ್ದಾರೆ.

Leave a Reply

Your email address will not be published. Required fields are marked *


CAPTCHA Image
Reload Image